For Quick Alerts
ALLOW NOTIFICATIONS  
For Daily Alerts

ಹೃದಯಕ್ಕೆ ಆರೋಗ್ಯಕರ ತಿಂಡಿಗಳು

By Hemanth P
|

ಹೃದಯ ನಮ್ಮನ್ನು ಜೀವಂತ ಹಾಗೂ ಧ್ವನಿಯಾಗಿರಿಸುವಂತಹ ದೇಹದ ಒಂದು ಅಂಗ. ಇಲ್ಲಿಂದಲೇ ನಮ್ಮ ದೇಹದ ಎಲ್ಲಾ ಭಾಗಗಳಿಗೆ ರಕ್ತ ಪರಿಚಲನೆಯಾಗುತ್ತದೆ. ಹೃದಯಬಡಿತದಿಂದ ಮನುಷ್ಯ ಜೀವಂತವಾಗಿದ್ದಾನೆಂದು ತಿಳಿಯಬಹುದು. ನಮ್ಮ ಹೃದಯದ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಅದು ನಮ್ಮ ದೇಹದ ಮೇಲೆ ಸಂಪೂರ್ಣ ಪರಿಣಾಮ ಬೀರುತ್ತದೆ. ಆರೋಗ್ಯಕರ ಹೃದಯವು ನಮ್ಮ ಆರೋಗ್ಯ ಮತ್ತು ದೀರ್ಫಜೀವನಕ್ಕೆ ಕಾರಣವಾಗುತ್ತದೆ.

ಹೃದಯ ಕಾಯಿಲೆ ಅಥವಾ ಸಮಸ್ಯೆಯು ಒಂದಾ ವಂಶಪಾರಂಪರ್ಯ, ವಂಶವಾಹಿ ಅಥವಾ ಕಮೇಣ ಅಭಿವೃದ್ಧಿ ಹೊಂದಿದ್ದಾಗಿರಬಹುದು. ಮೊದಲ ಎರಡು ವಿಧದ ಹೃದಯಕಾಯಿಲೆಗೆ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳಿಲ್ಲ. ಕಾಯಿಲೆಯನ್ನು ಕೆಲವೊಂದು ತಡೆಗಟ್ಟುವ ಕ್ರಮಗಳಿಂದ ತಡೆಗಟ್ಟಬಹುದಾಗಿದೆ. ಕ್ರಮೇಣ ಅಭಿವೃದ್ಧಿ ಹೊಂದುವಂತಹ ಕೆಲವೊಂದು ಹೃದಯ ಸಂಬಂಧಿ ಕಾಯಿಲೆಗಳಿಗೆ ಅನಾರೋಗ್ಯಕರ ಆಹಾರಕ್ರಮ, ಕೆಟ್ಟದಾಗಿ ತಿನ್ನುವುದು ಮತ್ತು ಕೆಲವೊಂದು ಚಟಗಳು ಕಾರಣವಾಗಿದೆ. ಇವುಗಳು ಹೃದಯಾಘಾತ ಮತ್ತು ಗರಿಷ್ಠ ಮಟ್ಟದ ಕೊಲೆಸ್ಟ್ರಾಲ್ ಸಮಸ್ಯೆಗೆ ಕಾರಣವಾಗುತ್ತದೆ.

ಹೃದಯ ಸಮಸ್ಯೆಗಳನ್ನು ತಡೆಗಟ್ಟಲು ಕೆಲವೊಂದು ಆರೋಗ್ಯಕರ ಅಭ್ಯಾಸಗಳಾದ ನಿಯಮಿತ ವ್ಯಾಯಾಮ, ಆರೋಗ್ಯಕರ ಹವ್ಯಾಸ ಮತ್ತು ಸರಿಯಾಗಿ ತಿನ್ನುವುದನ್ನು ಪಾಲಿಸಬೇಕು. ಹೃದಯ ಸಮಸ್ಯೆಯ ವಿಷಯಕ್ಕೆ ಬಂದರೆ ತಿನ್ನುವ ಅಭ್ಯಾಸವು ತುಂಬಾ ಮುಖ್ಯವೆನಿಸುತ್ತದೆ. ಆರೋಗ್ಯಕರ ತಿಂಡಿಗಳು ಮತ್ತು ಆಹಾರ ಕ್ರಮ ನಿಮ್ಮ ಹೃದಯವನ್ನು ಒಳ್ಳೆಯ ಮತ್ತು ಆರೋಗ್ಯದಿಂದ ಇಡಬಲ್ಲದು. ಹೃದಯದ ಆರೋಗ್ಯವನ್ನು ಕಾಪಾಡಲು ಕೆಲವೊಂದು ತಿಂಡಿಗಳನ್ನು ನಿಯಮಿತವಾಗಿ ತಿನ್ನಬೇಕು. ಕೆಲವೊಂದು ರೀತಿಯ ತಿಂಡಿಗಳು ಹೃದಯದ ಚಟುವಟಿಕೆ ವೃದ್ಧಿಸಲು ಮತ್ತು ಉತ್ತೇಜಿಸಲು ನೆರವಾಗುತ್ತದೆ.

ಹೃದಯದ ಆರೋಗ್ಯಕ್ಕೆ ತಿನ್ನಬೇಕಾದ ಕೆಲವೊಂದು ತಿಂಡಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಓಟ್ಸ್

1. ಓಟ್ಸ್

ಓಟ್ಸ್ ಹೃದಯಕ್ಕೆ ತುಂಬಾ ಆರೋಗ್ಯಕರ ತಿಂಡಿ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯ ಸುಧಾರಿಸುತ್ತದೆ. ಓಟ್ಸ್ ನಲ್ಲಿ ಆರೋಗ್ಯಕರ ಕೊಬ್ಬು ಮತ್ತು ಒಮೆಗಾ ಆಮ್ಲವಿದ್ದು, ಇದು ದೇಹದಲ್ಲಿನ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ಹೃದಯಕ್ಕೆ ಓಟ್ಸ್ ನ್ನು ಒಳ್ಳೆಯ ಉಪಹಾರವೆಂದು ಪರಿಗಣಿಸಲಾಗಿದೆ. ಹೃದಯದ ಆರೋಗ್ಯಕ್ಕೆ ನಿಯಮಿತವಾಗಿ ಓಟ್ಸ್ ತಿನ್ನಿ.

2. ಬ್ರೌನ್ ಬ್ರೆಡ್ ನ ಸ್ಯಾಂಡ್ ವಿಚ್

2. ಬ್ರೌನ್ ಬ್ರೆಡ್ ನ ಸ್ಯಾಂಡ್ ವಿಚ್

ಧಾನ್ಯಗಳಲ್ಲಿರುವ ಕೆಲವೊಂದು ಪೋಷಕಾಂಶಗಳು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬ್ರೌನ ಬ್ರೆಡ್ ನ್ನು ಧಾನ್ಯದಿಂದ ಮಾಡಲಾಗುತ್ತದೆ. ಸಾಮಾನ್ಯವಾಗಿ ತರಕಾರಿಯಲ್ಲಿರುವ ವಿಟಮಿನ್, ಮಿನರಲ್ಸ್ ಮತ್ತು ಪೋಷಕಾಂಶಗಳು ಆರೋಗ್ಯಕ್ಕೆ ಒಳ್ಳೆಯದು. ಇವೆಲ್ಲವುಗಳನ್ನು ಮಿಶ್ರಣ ಮಾಡಿ ಉಪಹಾರದಲ್ಲಿ ಬಳಸಿದರೆ ಅದು ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬ್ರೌನ್ ಬ್ರೆಡ್ ಜತೆಗೆ ಸ್ಪೆನಿಚ್ ಎಲೆ, ಟೊಮೆಟೊ, ಸೌತೆಕಾಯಿ ಮತ್ತು ಈರುಳ್ಳಿಯನ್ನು ಇಟ್ಟು ಸ್ಯಾಂಡ್ ವಿಚ್ ನ್ನು ಸುಲಭವಾಗಿ ಮಾಡಬಹುದು ಮತ್ತು ಇದು ಹೃದಯಕ್ಕೆ ತುಂಬಾ ಆರೋಗ್ಯಕಾರಿ. ಹೃದಯಕ್ಕೆ ಸಮಸ್ಯೆಗಳನ್ನು ಉಂಟುಮಾಡುವ ಜಂಕ್ ಫುಡ್ ಗಿಂತ ಈ ಸ್ಯಾಂಡ್ ವಿಚ್ ಖಂಡಿತವಾಗಿಯೂ ಅತ್ಯುತ್ತಮ ಆಯ್ಕೆ.

3. ಸೂಪ್

3. ಸೂಪ್

ತುಂಬಾ ವೇಗವಾಗಿ ಮಾಡುವಂತಹ ಸೂಪ್ ಗಳು ನಮ್ಮ ಹೊಟ್ಟೆ, ಅದೇ ರೀತಿ ಆರೋಗ್ಯಕ್ಕೆ ತುಂಬಾ ಒಳ್ಳೆಯುದು. ವಿವಿಧ ರೀತಿಯ ತರಕಾರಿಗಳು ಮತ್ತು ಬೇಳೆಕಾಳುಗಳಿಂದ ಸೂಪ್ ಮಾಡಬಹುದು. ಸ್ಪೆನಿಚ್ ಮತ್ತು ಟೊಮೆಟೊ ಸೂಪ್ ನಲ್ಲಿ ಹೆಚ್ಚಿನ ಪೋಷಕಾಂಶ ಮತ್ತು ಆ್ಯಂಟಿ ಆಕ್ಸಿಡೆಂಟ್ ಇರುವುದರಿಂದ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ತರಕಾರಿ ಸಾರು ನಮ್ಮ ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಆಯ್ಕೆಯ ತಿಂಡಿ. ಸೂಪ್ ನ್ನು ರಾತ್ರಿ ಡಿನ್ನರ್ ಅಥವಾ ಸಂಜೆಯ ತಿಂಡಿಗೆ ಬಳಸಬಹುದು.

4. ಮೊಳಕೆಯ ಚಾಟ್

4. ಮೊಳಕೆಯ ಚಾಟ್

ಮೊಳಕೆಕಾಳುಗಳಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್ ನ್ನು ಸಮತೋಲನದಲ್ಲಿಡುವ ಮತ್ತು ಹೃದಯದ ಆರೋಗ್ಯ ಕಾಪಾಡುವ ಗುಣಲಕ್ಷಣ ಹೊಂದಿದೆ. ಮೊಳಕೆಕಾಳುಗಳಿಗೆ ಈರುಳ್ಳಿ, ಟೊಮೆಟೊ ಮತ್ತು ಮೆಣಸು ಹಾಕಿ ಮಿಶ್ರಣ ಮಾಡಿ ತಿಂದರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಮೊಳಕೆಕಾಳು ಚಾಟ್ಸ್ ಗೆ ನಿಂಬೆ ಮತ್ತು ಕಾಳುಮೆಣಸಿನ ಹುಡಿ ಹಾಕಿ ಮತ್ತಷ್ಟು ರುಚಿಕರವಾಗಿ ಮಾಡಬಹುದು. ಮೊಳಕೆಕಾಳುಗಳ ಚಾಟ್ಸ್ ನಮ್ಮ ಹೃದಯಕ್ಕೆ ಬೇಕಾಗಿರುವ ಆರೋಗ್ಯಕರ ತಿಂಡಿ. ಇದನ್ನು ಮಿಸ್ ಮಾಡಬಾರದು.

5. ಮೊಸರು ಮತ್ತು ಹಣ್ಣುಗಳು

5. ಮೊಸರು ಮತ್ತು ಹಣ್ಣುಗಳು

ಮೊಸರು ಮತ್ತು ಹಣ್ಣುಗಳ ಮಿಶ್ರಣವು ಹೊಟ್ಟೆ ತುಂಬುವುದು ಮಾತ್ರವಲ್ಲದೆ ಇದು ತುಂಬಾ ಆರೋಗ್ಯಕಾರಿ ಮತ್ತು ನಿಮ್ಮ ಹೃದಯಕ್ಕೆ ಶಕ್ತಿ ನೀಡುತ್ತದೆ. ಇದರಲ್ಲಿ ಕೊಬ್ಬು ಕಡಿಮೆಯಿರುತ್ತದೆ ಮತ್ತು ಆ್ಯಂಟಿ ಆಕ್ಸಿಡೆಂಟ್ ಹೆಚ್ಚಾಗುತ್ತದೆ. ಇದರಿಂದ ಮೊಸರು ಮತ್ತು ಹಣ್ಣುಗಳ ಮಿಶ್ರಣ ಅತ್ಯುತ್ತಮ ತಿಂಡಿ. ಈ ಮಿಶ್ರಣದಲ್ಲಿ ಯಾವುದೇ ರೀತಿಯ ಕೊಬ್ಬು ಮತ್ತು ಸಂಸ್ಕರಿತ ಕೊಬ್ಬು ಇರದ ಕಾರಣ ಇದು ಹೃದಯಕ್ಕೆ ತುಂಬಾ ಲಾಭಕಾರಿ.

Read more about: health ಆರೋಗ್ಯ
English summary

Healthy snacks for heart

Our heart is the organ which keeps us alive and sound. It is the source of the blood that runs all around our body. The heart beat is the first vital parameters of human existence.
Story first published: Thursday, January 9, 2014, 10:33 [IST]
X
Desktop Bottom Promotion