For Quick Alerts
ALLOW NOTIFICATIONS  
For Daily Alerts

ಬೆಳಗ್ಗಿನ ವ್ಯಾಯಾಮದ ಚಮತ್ಕಾರೀ ಪ್ರಯೋಜನಗಳು

|

ನೀವು ಬೆಳಗ್ಗೆದ್ದು ಮಾಡುವ ಪ್ರತಿಯೊಂದು ವ್ಯಾಯಾಮ ಕೂಡ ಚೈತನ್ಯಪೂರ್ಣ ದಿನಕ್ಕೆ ಆಹ್ವಾನ ಮಾಡಿದಂತೆ ಎಂಬ ಮಾತನ್ನು ನೀವು ಕೇಳಿರಬಹುದು. ಬೆಳಗ್ಗೆ ಮಾಡುವ ವ್ಯಾಯಾಮ ಎಷ್ಟು ಪರಿಣಾಮಕಾರಿ ಎಂಬುದು ನಿಮಗೆ ತಿಳಿದಿದೇಯೇ?

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕುರ್ಚಿಗೆ ಅಂಟಿಕೊಂಡಿರುವುದು ಆನಾರೋಗ್ಯಕ್ಕೆ ದಾರಿ

ಬೆಳಗ್ಗೆ ಬೇಗನೆದ್ದು ವ್ಯಾಯಾಮದಿಂದ ನಿಮ್ಮ ದಿನವನ್ನು ಪ್ರಾರಂಭಿಸಿದರೆ ನಿಮ್ಮ ದೇಹ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಆಯಾಸ, ದಣಿವು ನಿಮಗುಂಟಾಗುವುದಿಲ್ಲ. ಚಟುವಟಿಕೆಯ ಬುಗ್ಗೆಯಂತೆ ನೀವು ಕಾರ್ಯನಿರ್ವಹಿಸುತ್ತೀರಿ. ಕೆಲವು ಬೆಳಗ್ಗೆಗಳು ಹೀಗೆ ಕಳೆದವೆಂದರೆ ಅದು ನಿಮಗೊಂದು ಹವ್ಯಾಸವಾಗಿಬಿಡುತ್ತದೆ.

ಬೆಳಗ್ಗಿನ ವ್ಯಾಯಾಮದ ಪರಿಣಾಮಕಾರಿ ಅಂಶಗಳತ್ತ ಈಗ ಗಮನ ನೀಡೋಣ. ಚಯಾಪಚಯ ಕ್ರಿಯೆಯನ್ನು ವರ್ಧಿಸುವ ಶಕ್ತಿ ಬೆಳಗ್ಗಿನ ವ್ಯಾಯಮಕ್ಕಿದೆ. ನೀವು ದಿನಪೂರ್ತಿ ಉತ್ಸಾಹದಿಂದಿದ್ದು ಕ್ಯಾಲೋರಿಗಳನ್ನು ಕರಗಿಸಲು ಇದು ನೆರವಾಗುತ್ತದೆ.

ನೀವು ತುಂಬಾ ಆಯಾಸಗೊಂಡಿದ್ದರೆ ಮತ್ತು ಒತ್ತಡ ನಿಮ್ಮನ್ನು ಬಾಧಿಸುತ್ತಿದ್ದರೆ ನೀವು ನಿಯಮಿತವಾಗಿ ಪ್ರಾತಃ ಕಾಲದ ವ್ಯಾಯಾಮವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕು.

ನಿಮ್ಮ ಒತ್ತಡವನ್ನು ನೀಗಿಸಿ ನಿಮ್ಮಲ್ಲಿ ಕಿರಿಕಿರಿಯನ್ನುಂಟು ಮಾಡುವ ಅಂಶಗಳನ್ನು ಮನಸ್ಸಿನಿಂದ ಹೊರಹಾಕುವ ಚಮತ್ಕಾರೀ ವಿದ್ಯೆ ಬೆಳಗ್ಗಿನ ವ್ಯಾಯಾಮಕ್ಕಿದೆ. ಉದಾಹರಣೆಗೆ ಬೆಳಗ್ಗೆ ಬೇಗನೇ ಎದ್ದು ನಡಿಗೆ ಅಥವಾ ಓಡುವುದು ನಿಮ್ಮ ಮನಸ್ಸು ಮತ್ತು ದೇಹವನ್ನು ಉತ್ಸಾಹದಿಂದ ಇರಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮುಂಜಾವಿನ ನಡಿಗೆಯಿಂದ ನಿಮಗುಂಟಾಗುವ ಪ್ರಯೋಜನಗಳು

ಹಸಿವನ್ನು ಹೆಚ್ಚಿಸುತ್ತದೆ:

ಹಸಿವನ್ನು ಹೆಚ್ಚಿಸುತ್ತದೆ:

ಬೆಳಗ್ಗಿನ ವ್ಯಾಯಾಮದ ಆರೋಗ್ಯ ಪ್ರಯೋಜನ ಇದಾಗಿದೆ. ವ್ಯಾಯಾಮದ ನಂತರ ನಿಮಗೆ ಹಸಿವಾಗುತ್ತದೆ. ವ್ಯಾಯಾಮ ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸಿ ನಿಮ್ಮ ಕರುಳ ಚಲನೆಗಳನ್ನು ನಿಯಮಿತವಾಗಿಸುತ್ತದೆ.

ಶಕ್ತಿ ವರ್ಧಕ:

ಶಕ್ತಿ ವರ್ಧಕ:

ವ್ಯಾಯಾಮವು ನಿಮಗೆ ಶಕ್ತಿಯನ್ನು ನೀಡುತ್ತದೆ. ಬೆಳಗ್ಗಿನ ವ್ಯಾಯಾಮವು ನಿಮ್ಮನ್ನು ದಿನಪೂರ್ತಿ ಚಟುವಟಿಕೆಯಿಂದ ಮತ್ತು ಆರೋಗ್ಯದಿಂದಿರಿಸಲು ಸಹಕಾರಿಯಾಗಿದೆ.

ಮಾನಸಿಕ ಅರಿವು:

ಮಾನಸಿಕ ಅರಿವು:

ಬೆಳಗ್ಗಿನ ವ್ಯಾಯಾಮವು ಜ್ಞಾನಗ್ರಹಣ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ನಮ್ಮ ಮೆದುಳನ್ನು ಚುರುಕಾಗಿಸಿ ಹೆಚ್ಚು ಲಕ್ಷ್ಯವಿರಿಸುವಂತೆ ನಮಗೆ ನೆರವಾಗುತ್ತದೆ.

ಒತ್ತಡದ ವಿರುದ್ಧ ಹೋರಾಡುತ್ತದೆ:

ಒತ್ತಡದ ವಿರುದ್ಧ ಹೋರಾಡುತ್ತದೆ:

ಖಿನ್ನತೆ ಮತ್ತು ಒತ್ತಡವನ್ನು ದೂರಮಾಡುವಲ್ಲಿ ಬೆಳಗ್ಗಿನ ವ್ಯಾಯಾಮ ಗಮನಾರ್ಹ ಪರಿಣಾಮವನ್ನುಂಟು ಮಾಡುತ್ತದೆ. ನಿಮ್ಮಲ್ಲಿ ಶಕ್ತಿ ಕಡಿಮೆ ಇದ್ದಂತೆ ತೋರುತ್ತಿದ್ದಲ್ಲಿ, ಬೆಳಗ್ಗಿನ ನಡಿಗೆಯನ್ನು ನಿಮ್ಮದಾಗಿಸಿ. ಶುದ್ಧವಾದ ಗಾಳಿ ನಿಮ್ಮನ್ನು ಉತ್ತಮಗೊಳಿಸುತ್ತದೆ.

ತೂಕ ಇಳಿಕೆ:

ತೂಕ ಇಳಿಕೆ:

ವ್ಯಾಯಾಮವು ನಿಮ್ಮಲ್ಲಿ ತೂಕ ಇಳಿಯುವಂತೆ ಮಾಡುತ್ತದೆ. ಇದು ದೇಹದ ಚಯಾಪಚಯ ವ್ಯವಸ್ಥೆಯನ್ನು ಏರಿಸಿ, ದಿನಪೂರ್ತಿ ಕ್ಯಾಲೋರಿ ಕರಗುವಂತೆ ಮಾಡುತ್ತದೆ.

ಉತ್ತಮ ನಿದ್ರೆ:

ಉತ್ತಮ ನಿದ್ರೆ:

ಬೆಳಗ್ಗೆದ್ದು ವ್ಯಾಯಾಮ ಮಾಡುವ ಗಂಡಸರು ಅಥವಾ ಹೆಂಗಸರು ಚೆನ್ನಾಗಿ ನಿದ್ರೆ ಮಾಡುತ್ತಾರೆ ಅದೇ ರೀತಿ ಸಾಯಂಕಾಲ ವ್ಯಾಯಾಮ ಮಾಡುವವರಲ್ಲಿ ಈ ಅಂಶ ಕಡಿಮೆಯಾಗಿದೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಏಕೆಂದರೆ ಸ್ನಾಯುಗಳು ವಿಶ್ರಾಮಗೊಳ್ಳಲು ಮತ್ತು ಸ್ವಾಭಾವಿಕ ಸ್ಥಿತಿಗೆ ಬರಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದ ಸಂಜೆಯ ನಡಿಗೆಯು ನಿಮ್ಮ ನಿದ್ದೆಗೆ ಭಂಗವನ್ನುಂಟು ಮಾಡಬಹುದು.

ಸಂಪೂರ್ಣ ಆರೋಗ್ಯ:

ಸಂಪೂರ್ಣ ಆರೋಗ್ಯ:

ದೇಹದ ಚಯಾಪಚಯ ವ್ಯವಸ್ಥೆಯನ್ನು ಏರಿಸುವುದನ್ನು ಹೊರತುಪಡಿಸಿ, ರಕ್ತದೊತ್ತಡವನ್ನು ಬೆಳಗ್ಗಿನ ನಡಿಗೆ ನಿಯಂತ್ರಿಸುತ್ತದೆ. ಅದೇ ರೀತಿ ಹೃದಯ ಬಡಿತ ಮತ್ತು ಸ್ನಾಯುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.

Read more about: health ಆರೋಗ್ಯ
English summary

Benefits Of Morning Exercise On Health

It is always said that you should workout in the morning. Well, there are many reasons behind saying this. It would be interesting to know that there are many health benefits of exercising in the morning.
Story first published: Saturday, February 22, 2014, 16:21 [IST]
X
Desktop Bottom Promotion