For Quick Alerts
ALLOW NOTIFICATIONS  
For Daily Alerts

ನೀವು ಗಮನಿಸಲೇಬೇಕಾದ ಶೀತದ 6 ಲಕ್ಷಣಗಳು

|

ಕಿರಿಕಿರಿಯುಂಟುಮಾಡುತ್ತಿರುವ ಮೂಗು, ಗಂಟಲು, ಸೀನು, ಸುರಿಯುತ್ತಿರುವ ಮೂಗು, ಭಯಂಕರ! ನಿಮಗೆ ಇದೆಲ್ಲದರ ಅನುಭವ ಖಂಡಿತ ಆಗಿರುತ್ತದೆ. ಶೀತದ ಅಟ್ಟಹಾಸಕ್ಕೆ ಬಲಿಯಾಗದವರು ಯಾರಿದ್ದಾರೆ ಹೇಳಿ? ನಮ್ಮ ಜೀವನದ ಕೆಲವು ಸಮಯದಲ್ಲಿ ಶೀತದೊಂದಿಗೆ ಮೇಲೆ ತಿಳಿಸಿದ ಎಲ್ಲಾ ಸಮಸ್ಯೆಗಳನ್ನು ನಾವು ಖಂಡಿತ ಅನುಭವಿಸಿರುತ್ತೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಊಟದ ನಂತರ ತಂಪು ನೀರು ಕುಡಿಯುವುದು ಎಷ್ಟು ಸರಿ?

ನೀವು ಈ ಸಮಸ್ಯೆಗೆ ಎಷ್ಟೇ ಪರಿಹಾರ ಹುಡುಕಿದರೂ ಅದನ್ನು ಅನುಭವಿಸುವುದನ್ನು ಮಾತ್ರ ತಪ್ಪಿಸಲಾಗದು. ನಿಮ್ಮಲ್ಲಿ ಹೊರಗಿನ ಅಂಶಗಳಿಗೆ ಪ್ರತಿಸ್ಪಂದಿಸುವ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಮೊದಲು ತನ್ನ ಪ್ರಭಾವ ಬೀರುವುದೇ ಶೀತ.

ಶೀತವೆಂದು ನಾವು ಕಡೆಗಣಿದಷ್ಟೂ ಅದರಿಂದ ಉಂಟಾಗುವ ಕಿರಿಕಿರಿ ಅಪರಿಮಿತ ಕೆಲವೊಮ್ಮೆ ಇದು ಗಂಭೀರ ಸಮಸ್ಯೆಗಳನ್ನು ತಂದೊಡ್ಡಬಹುದು. ಶೀತವು ನಿಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುವುದರಿಂದ ಇತರ ಸೋಂಕುಗಳು ನಿಮ್ಮನ್ನು ಶೀಘ್ರವೇ ಆವರಿಸಬಹುದು.

ಶೀತವನ್ನು ಮೊದಲೇ ಅರಿಯುವ ಲಕ್ಷಣಗಳು ನಿಮಗೆ ಗೊತ್ತಿದ್ದರೆ ಪರಿಸ್ಥಿತಿಯನ್ನು ನಿಮಗೆ ನಿಭಾಯಿಸಿಕೊಳ್ಳಬಹುದು. ಸಾಮಾನ್ಯವಾಗಿ ಶೀತದ ಸಮಸ್ಯೆಗಳು ಒಂದು ವಾರದೊಳಗೆ ಮಾಯವಾಗುತ್ತವೆ, ಒಂದು ವಾರಕ್ಕಿಂತ ಹೆಚ್ಚು ಸಮಯ ಇಲ್ಲವೇ ಆಗಾಗ್ಗೆ ಶೀತ ನಿಮಗೆ ತೊಂದರೆಯುಂಟು ಮಾಡುತ್ತಿದ್ದರೆ ಮೊದಲೇ ವೈದ್ಯಕೀಯ ಸಹಾಯವನ್ನು ಪಡೆದುಕೊಳ್ಳಿ. ನಿಮ್ಮ ಶೀತದ ಪ್ರಾಥಮಿಕ ಸ್ಥಿತಿ ಹೇಗಿದೆ ಎಂಬುದರ ಮೇಲೂ ಗಮನ ನೀಡಿ ಅದಕ್ಕೆ ತಕ್ಕಂತೆ ಔಷಧ ಪ್ರಾರಂಭಿಸಿ.

ಶೀತದ ಲಕ್ಷಣಗಳನ್ನು ಮೊದಲೇ ಅರಿತುಕೊಳ್ಳುವುದು ನಿಮಗೆ ಸಹಕಾರಿಯಾಗಿದೆ. ಉಪಶಮನಕ್ಕಿಂತ ತಡೆಗಟ್ಟುವಿಕೆ ಉತ್ತಮವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಶೀತದ ಕೆಲವೊಂದು ಲಕ್ಷಣಗಳನ್ನು ಅರಿತುಕೊಂಡು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎದೆಯುರಿಗೆ ತಂಪು ನೀರು ನೈಸರ್ಗಿಕ ಪರಿಹಾರ ಹೇಗೆ?

ನೋಯುತ್ತಿರುವ ಗಂಟಲು:

ನೋಯುತ್ತಿರುವ ಗಂಟಲು:

ನೋಯುತ್ತಿರುವ ಗಂಟಲು ಶೀತದಲ್ಲಿ ಉಂಟಾಗುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಕನಿಷ್ಟ ಪಕ್ಷ 3 ರಿಂದ 4 ದಿನಗಳವರೆಗೆ ಸಾಮಾನ್ಯವಾಗಿರುತ್ತದೆ. ನೀವು ಇದಕ್ಕೆ ಬೇಕಾದ ಗಮನವನ್ನು ನೀಡದಿದ್ದರೆ, ನಿಮ್ಮ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ಕಿರಿಕಿರಿ ಉಂಡುಮಾಡುವ ಮೂಗು:

ಕಿರಿಕಿರಿ ಉಂಡುಮಾಡುವ ಮೂಗು:

ಸಾಮಾನ್ಯ ಶೀತದಲ್ಲಿ ಹೆಚ್ಚು ಸಮಸ್ಯೆಯನ್ನು ತಂದೊಡ್ಡುವುದು ಸುರಿಯುತ್ತಿರುವ ಮೂಗಾಗಿದೆ. 2 - 3 ದಿನಗಳಲ್ಲಿ ಇದು ವಾಸಿಯಾಗುತ್ತದೆ. ಕೆಲವೊಮ್ಮೆ ನೆಗಡಿ ಗಟ್ಟಿಯಾಗಿ ಮೂಗಿನಲ್ಲಿ ಕಟ್ಟಿದ ಅನುಭವವಾಗುತ್ತದೆ. ಇದು ತೀರಾ ಕಿರಿಕಿರಿಯ ಪರಿಸ್ಥತಿಯಾಗಿದ್ದು ಮೂಗಿನಲ್ಲಿ ಉಸಿರಾಟಕ್ಕೆ ತೊಂದರೆಯೊಡ್ಡುತ್ತದೆ.

ಕೆಮ್ಮು:

ಕೆಮ್ಮು:

ಶೀತದ ಇನ್ನೊಂದು ಸಾಮಾನ್ಯ ಸಮಸ್ಯೆಯಾಗಿದೆ ಕೆಮ್ಮು. ವೈರಲ್ ಸೋಂಕಿನಿಂದ ಕೆಮ್ಮು ಉಂಟಾಗುತ್ತದೆ. ಆಂಟಿಬಯೋಟಿಕ್‌ಗಳಿಗೆ ಇವುಗಳು ಜವಬ್ದಾರರಾಗಿರುವುದಿಲ್ಲ. ಶೀತದ ಸಮಯದಲ್ಲಿ ಕೆಮ್ಮು ಉಲ್ಬಣಗೊಳ್ಳುತ್ತದೆ. ಒಂದು ವಾರಕ್ಕಿಂತ ಹೆಚ್ಚು ಸಮಯ ಕೆಮ್ಮು ಕಂಡುಬಂದಲ್ಲಿ ವೈದ್ಯರ ಸಲಹೆ ಅತ್ಯಗತ್ಯ.

ಸೀನು:

ಸೀನು:

ಶೀತದ ಲಕ್ಷಣವನ್ನುಂಟು ಮಾಡುವ ಸೀನು ಮುಂಚಿತವಾಗಿ ಶೀತಕ್ಕೆ ಬೇಕಾದ ಕಾಳಜಿಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯಕ. ಸೀನಿನೊಂದಿಗೆ ಶೀತದ ಇತರ ಲಕ್ಷಣಗಳಾದ ಕೆಮ್ಮು, ಗಂಟಲಿನ ಕಿರಿಕಿರಿ ಮತ್ತು ಸುರಿಯುತ್ತಿರುವ ಮೂಗು ನಿಮ್ಮನ್ನು ಶೀತದ ತೀವ್ರತೆಯಿಂದ ರಕ್ಷಿಸಲು ವೈದ್ಯರ ಬಳಿ ಕರೆದೊಯ್ಯುವ ಲಕ್ಷಣಗಳಾಗಿವೆ.

ಮೂಗು ಕಟ್ಟುವಿಕೆ:

ಮೂಗು ಕಟ್ಟುವಿಕೆ:

ಪ್ರಾಥಮಿಕವಾಗಿ ರಕ್ತನಾಳಗಳ ಊತದಿಂದಾಗಿ ಸಂಭವಿಸುವ ಮೂಗಿನ ಒಳಗೋಡೆಗಳ ಸುರಿಯುವಿಕೆಯಿಂದ ಮೂಗಿನ ದ್ವಾರಗಳು ಅಡಚಣೆಗೊಳಪಡುತ್ತವೆ ಇದುವೇ ಮೂಗು ಕಟ್ಟುವಿಕೆಯಾಗಿದೆ. ಒಂದು ವಾರದಲ್ಲಿ ನಿಮ್ಮ ಪರಿಸ್ಥಿತಿ ಉತ್ತಮವಾದರೆ, ಅಲರ್ಜಿ ಅವಕಾಶಗಳನ್ನು ನಿಮಗೆ ತಳ್ಳಿ ಹಾಕಲು ಸಾಧ್ಯವಿಲ್ಲ.

ಲಘು ತಲೆನೋವು:

ಲಘು ತಲೆನೋವು:

ಸಾಮಾನ್ಯ ಶೀತದ ಪ್ರಾರಂಭ ಹಂತದಲ್ಲಿ ನೀವೀದ್ದೀರಿ ಎಂದರೆ ಲಘು ತಲೆನೋವು ನಿಮ್ಮನ್ನು ಕಾಡಬಹುದು. ಇದಕ್ಕೆ ಮನೆಮದ್ದುಗಳು ಸೂಕ್ತ ಪರಿಹಾರವನ್ನು ಒದಗಿಸಬಹುದು. ಶೀತದ ಕಾರಣದಿಂದಾಗಿ ಈ ತಲೆನೋವು ತೀವ್ರಗೊಂಡು ಸೈನಸ್ ಉಂಟಾಗಬಹುದು.

Read more about: health ಆರೋಗ್ಯ
English summary

6 Early Signs Of Cold

Irritating nose or throat, sneezing, runny nose, fatigue! You might have already got what we are talking about! Yes, it’s the common cold. We all experience a common cold at some point of our life, at least once.
X
Desktop Bottom Promotion