For Quick Alerts
ALLOW NOTIFICATIONS  
For Daily Alerts

ಮಧ್ಯರಾತ್ರಿ ಜಿಮ್ ಮಾಸ್ಟರನ್ನ ಕರೆಸಿಕೊಂಡ ಕತ್ರಿನಾ

|
Katrina Kaif
ಬಾಲಿವುಡ್ ಬೆಡಗಿನ ಸುಂದರಿ ಕತ್ರಿನಾ ಕೈಫ್ ಸೌಂದರ್ಯದ ಗುಟ್ಟು ರಟ್ಟಾಗಿದೆ. ತನ್ನ ಫಿಗರ್ ಮೆಂಟೇನ್ ಮಾಡೋಕ್ಕೆ ಆಕೆ ಸಾಕಷ್ಟು ಕಸರತ್ತು ಮಾಡುತ್ತಾಳೆ. ಪಥ್ಯ, ಯೋಗ, ವ್ಯಾಯಾಮ, ವಾಕಿಂಗ್ ಇತ್ಯಾದಿ ಆರೋಗ್ಯಕರ ಜೀವನ ಕ್ರಮ ಕತ್ರಿನಾ ಕೈಫ್ ಸೌಂದರ್ಯವನ್ನು ಇನ್ನೂ ಹಸಿಯಾಗಿಸಿದೆ.

ಕತ್ರಿನಾ ಕೈಫಿಗೆ ವ್ಯಾಯಾಮ ಮೇಸ್ಟ್ರು ಪ್ರದೀಪ್ ಭಾಟೀಯ. ಅವರು ನೀಡಿದ ಆಕೆಯ ಫಿಟ್ ನೆಸ್ ಮಂತ್ರ ಆಕೆಯ ಸೌಂದರ್ಯದ ರಹಸ್ಯ, ಶ್ರಮ ಮತ್ತು ತಪಸ್ಸನ್ನು ಸಾರಿ ಹೇಳುತ್ತದೆ.

ಅಜಬ್ ಪ್ರೇಮ್ ಕಿ ಘಾಝಾಬ್ ಕಹಾನಿ ಮತ್ತು ರಾಜ್ ನೀತಿ ಸಿನಿಮಾ ಶೂಟಿಂಗ್ ನಲ್ಲೇ ಈಕೆಗೆ ಭಾಟೀಯ ಫಿಟ್ ನೆಸ್ ತರಬೇತಿ ನೀಡಿದ್ದಾರೆ. ತನ್ನ ಬ್ಯುಸಿ ಶೆಡ್ಯೂಲಿನಲ್ಲೂ ವಾರಕ್ಕೆ ಮೂರು ದಿನ ಒಂದು ಗಂಟೆಯಷ್ಟು ವ್ಯಾಯಾಮ, ಯೋಗ ಮಾಡುತ್ತಾರಂತೆ!

ಅದೊಂದು ದಿನ. ಪ್ರದೀಪ್ ಬಾಟೀಯರಿಗೆ ಮಧ್ಯರಾತ್ರಿ ಕರೆ ಮಾಡಿ ಬನ್ನಿ ಸಾರ್ ಎಂದು ಕತ್ರಿನಾ ಕರೆದಿದ್ದಾರೆ. ಆಗಷ್ಟೇ ಶೂಟಿಂಗ್ ಮುಗಿಸಿದರೂ ತನ್ನ ದೇಹಸಿರಿಯನ್ನು ಕಾಪಾಡಿಕೊಳ್ಳಲು ಆ ಮಧ್ಯರಾತ್ರಿ ವ್ಯಾಯಾಮ ಹೇಳಿಸಿಕೊಂಡಿದ್ದಾಳೆ. ಫಿಟ್ ನೆಸ್ ವಿಷಯದಲ್ಲಿ ಆಕೆಯ ಶ್ರದ್ಧೆ, ಕಟ್ಟುನಿಟ್ಟು ಕುರಿತು ಫಿಟ್ ನೆಸ್ ಗುರು ಭಾಟೀಯ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ದಿನನಿತ್ಯ ಜಿಮ್, ಈಜು ಮತ್ತು ಜಾಗಿಂಗ್ ಮಾಡುತ್ತಾರೆ. ಮನಶಾಂತಿಗಾಗಿ ಯೋಗ, ದೇಹದ ತೂಕ ಕಡಿಮೆ ಮಾಡಲು ವ್ಯಾಯಾಮ ಮಾಡುತ್ತಾರೆ. ಶೀಲಾ ಕಿ ಜವಾನಿ ಐಟಂ ಸಾಂಗ್ ಗಾಗಿ ದೇಹದ ತೂಕವನ್ನು ಶ್ರದ್ಧೆಯಿಂದ ಕಷ್ಟಪಟ್ಟು ಇಳಿಸಿಕೊಂಡಿದ್ದರಂತೆ!

ತಾಜಾ ತರಕಾರಿ, ಧಾನ್ಯಕಾಳು ಅವರ ಆಹಾರಕ್ರಮದಲ್ಲಿ ಹೆಚ್ಚು ಬಳಕೆಯಾಗುತ್ತದೆ. ಶೂಟಿಂಗ್ ನಲ್ಲಿ ಹಸಿವಾದರೆ ಹಣ್ಣು ತಿನ್ನುತ್ತಾರಂತೆ.

ಬೆಳಗ್ಗೆ ಎದ್ದಕೂಡಲೇ ಕತ್ರಿನಾ ಕೈಫ್ ನಾಲ್ಕು ಗ್ಲಾಸ್ ನೀರುಕುಡಿಯುತ್ತಾರೆ. ಬ್ರೇಕ್ ಫಾಸ್ಟಿನಲ್ಲಿ ಬ್ರೆಡ್, ಪಿನಟ್ ಬೆಣ್ಣೆ ಅಥವಾ ಮೊಟ್ಟೆಯ ಬಿಳಿಭಾಗ ತಿನ್ನುತ್ತಾರೆ. ಗ್ರಿಲ್(ಸುಟ್ಟ) ಮೀನು, ಗ್ರೀನ್ ಸಲಾಡ್, ಕಜೆ ಅಕ್ಕಿಯ ಅನ್ನ ಮಧ್ಯಾಹ್ನದ ಊಟ. ಮೊದಲು ಕೋಳಿ ಖಾದ್ಯ ತಿನ್ನುತ್ತಿದ್ದರು. ಅದರಲ್ಲಿ ಫ್ಯಾಟ್ ಅಂಶ ಜಾಸ್ತಿಯಿದ್ದರಂತೆ ಕೋಳಿಗೆ ಗುಡ್ ಬಾಯ್ ಹೇಳಿದ್ದಾರಂತೆ.

ಪ್ರೀಯಾಂಕಾ ಛೋಪ್ರಾ ಫಿಟ್ ನೆಸ್ ಕತೆ ಇನ್ನೂ ಇಂಟ್ರೆಸ್ಟಿಂಗ್

English summary

Katrina Kaif | Diet Fitness Plan | Bollywood Celebrity | ಕತ್ರಿನಾ ಕೈಫ್ ಜೀವನ ಕ್ರಮ | ಫಿಟ್ ನೆಸ್ ಮತ್ತು ಆರೋಗ್ಯ

A healthy mind and a healthy diet is Katrina Kaif's secret behind her perfect figure. Regular yoga and exercises have made the actress achieve this figure. For her role in Tees Maar Khan, Katrina had to follow a strict diet and fitness regime. Today's Bollywood celebrities diet is of Katrina Kaif.
Story first published: Saturday, August 13, 2011, 12:07 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more