For Quick Alerts
ALLOW NOTIFICATIONS  
For Daily Alerts

ಬಾಲಿವುಡ್ ಅಂದಗಾತಿಯರ ಚೆಂದದ ಮೈಕಟ್ಟಿನ ಗುಟ್ಟು

|
Bollywood beauties diet
ಬಾಲಿವುಡ್ ನಟಿಯರೆಂದರೆ ಸೌಂದರ್ಯದ ಖನಿಗಳು. ಅವರ ರೂಪ ಯಾವತ್ತಿಗೂ ಬೆರಗು. ಅವರ ದೇಹಸಿರಿ, ಮೈಮಾಟ, ಕಾಡುವ ನೋಟ, ರೂಪ ಲಾವಣ್ಯ ಅವರನ್ನು ಬಾಲಿವುಡ್ ಲೋಕದಲ್ಲಿ ಗಟ್ಟಿಯಾಗಿ ಕೂರಿಸಿದೆ.

ಅರುವತ್ತು ದಾಟಿದರೂ ಸುಕ್ಕು ಮೂಡದ ಹೇಮಮಾಲಿನಿ ಎಲ್ಲರಿಗೆ ನೆನಪಿಗೆ ಬರುತ್ತಾಳೆ. ಸದ್ಯ ಬೇಡಿಕೆಯಲ್ಲಿರುವ ಕತ್ರಿನಾ ಕೈಫ್, ಪ್ರಿಯಾಂಕ ಛೋಪ್ರಾ, ಕರೀನಾ ಕಪೂರ್ ಇವರೆಲ್ಲರ ಸೌಂದರ್ಯ ಯುವತಿಯರಲ್ಲೇ ಅಸೂಯೆ ಮೂಡಿಸುತ್ತದೆ. ಪಡ್ಡೆ ಹುಡುಗರ ನಿಟ್ಟುಸಿರಿಗೆ ಸಾಕ್ಷಿಯಾಗುತ್ತದೆ.

ಬಾಲಿವುಡ್ ನಟಿಯರಿಗೆ ಸೌಂದರ್ಯವೇ ಆಭರಣ. ಪ್ರತಿಭೆಯಿದ್ದರೂ ಸೌಂದರ್ಯ ಕೈಕೊಟ್ಟರೆ ಅವಕಾಶಗಳು ದೂರ ಸಾಗುತ್ತವೆ. ಸೌಂದರ್ಯವನ್ನು, ಮೈಮಾಟವನ್ನು, ದೇಹಸಿರಿಯನ್ನು ಅವರು ಜೋಪಾನವಾಗಿ ಕಾಯ್ದುಕೊಳ್ಳುತ್ತಾರೆ. ಯೌವ್ವನ ಕಾಪಾಡಿಕೊಳ್ಳಲು ಅವರು ಸಂಜೀವಿನಿ ಬಳಸುವುದಿಲ್ಲ.

ಸೌಂದರ್ಯ ಜನ್ಮಜಾತ ಕೊಡುಗೆ. ಅದು ಹುಟ್ಟಿನಿಂದಲೇ ಬಂದದ್ದು ಅಂತ ವಾದಿಸಬಹುದು. ಅವರಲ್ಲಿ ಸೌಂದರ್ಯವಿದೆ. ಅದಕ್ಕೆ ಮೆರೆಯುತ್ತಾರೆ ಅನ್ನಬಹುದು. ಆದರೆ ಆ ಸೌಂದರ್ಯದ ಹಿಂದಿನ ಗುಟ್ಟು ಹುಟ್ಟಿನಿಂದ ಬಂದದ್ದಲ್ಲ.

ಬಾಲಿವುಡ್ ನಟಿಯರಿಗೆ ಸೌಂದರ್ಯವನ್ನು ಕಾಪಿಡುವುದು ಒಂದು ತಪಸ್ಸು. ಒಂದು ದಿನ ಆಲಸ್ಯ ಮಾಡಿದರೆ ಬೊಜ್ಜು ಸಂಗಾತಿಯಾದೀತು. ಸೊಂಟ, ನಿತಂಬ, ಕುಂಭ ಸೇರಿದಂತೆ ಪ್ರತಿಅಂಗದ ರೂಪ ಲಾವಣ್ಯವನ್ನು ಉಳಿಸಿಕೊಳ್ಳಲು ಅವರು ದಿನದ ಹೆಚ್ಚಿನ ಸಮಯ ಬಳಸುತ್ತಾರೆ.

ಅವರ ನಿತ್ಯ ದಿನಚರಿ, ಜೀವನಕ್ರಮ, ಸೇವಿಸುವ ಆಹಾರ, ಬದುಕಿನ ಕ್ರಮ, ವ್ಯಾಯಾಮ, ಪಥ್ಯ ಸೇರಿದಂತೆ ಅವರ ನಿತ್ಯ ಬದುಕು ಅಚ್ಚರಿ ಹುಟ್ಟಿಸುತ್ತದೆ. ಬಾಲಿವುಡ್ ಅಂದಗಾತಿಯರ ಚೆಂದದ ಮೈಕಟ್ಟಿನ ಗುಟ್ಟು ಇಲ್ಲಿ ರಟ್ಟಾಗಿದೆ. ಇನ್ನೂ ಹಾಟ್ ನಟಿಯಾಗಿ, ಸೌಂದರ್ಯದ ಖನಿಯಾಗಿ ಸೆಳೆಯುವ ಅವಳ ಹೆಸರು ಕತ್ರಿನಾ ಕೈಫ್. ಅವಳ ಸೌಂದರ್ಯದ ಗುಟ್ಟು ಮುಂದಿನ ಪುಟದಲ್ಲಿ ಬೆಚ್ಚಗಿದೆ.

English summary

Bollywood beauties diet | Celebrities diet | ಬಾಲಿವುಡ್ ನಟಿಯರ ಸೌಂದರ್ಯದ ಗುಟ್ಟು ರಟ್ಟು

Everyone wants to know the Bollywood beauties diet which makes them flaunt the perfectly shaped figure. Lets check out celebrities diet of three gorgeous Bollywood beauties
Story first published: Saturday, August 13, 2011, 12:10 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more