For Quick Alerts
ALLOW NOTIFICATIONS  
For Daily Alerts

ಮಧುಮೇಹ ನಿಯಂತ್ರಿಸುವ ನೈಸರ್ಗಿಕ 'ಜ್ಯೂಸ್'-ಶೀಘ್ರ ಪರಿಹಾರ

By Hemanth
|

ಸಾವಿಲ್ಲದ ಮನೆಯಿಂದ ಸಾಸಿವೆ ಕಾಳು ತಂದು ಕೊಡು ಎಂದು ಗೌತಮ ಬುದ್ಧ ಹೇಳಿದ್ದನಂತೆ. ಆದರೆ ಈಗಿನ ಕಾಲದಲ್ಲಿ ಮಧುಮೇಹದ ರೋಗಿಗಳು ಇಲ್ಲದ ಮನೆಯಿಂದ ಸಾಸಿವೆ ಕಾಳು ತಂದು ಕೊಡು ಎಂದರೆ ಸರಿಹೊಂದಬಹುದೇನೋ? ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಯಾರನ್ನೂ ಕೇಳಿದರೂ ಅವರಿಗೆ ಮಧುಮೇಹ ಅಥವಾ ಡಯಾಬಿಟಿಸ್ ಇದ್ದೇ ಇರುತ್ತದೆ, ಎಂಬಂತಹ ಸ್ಥಿತಿ ಬಂದುಬಿಟ್ಟಿದೆ... ಸದ್ದಿಲ್ಲದೆ ಸದ್ದುಮಾಡುವ 'ಮಧುಮೇಹದ' ಬಗ್ಗೆ ಇರಲಿ ಎಚ್ಚರ!

ಯಾಕೆಂದರೆ ಮಧುಮೇಹವೆನ್ನುವುದು ವಿಶ್ವದ ಶೇಕಡಾ 50ರಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತಾ ಇದೆ. ಹಿಂದೆ 50 ದಾಟಿದ ಬಳಿಕ ಮಧುಮೇಹ ಬರುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಜೀವನ ಶೈಲಿ, ಒತ್ತಡ ಮತ್ತು ತಿನ್ನುವ ಆಹಾರದಿಂದ ಮಧುಮೇಹವೆನ್ನುವುದು ಸರ್ವೇ ಸಾಮಾನ್ಯವಾಗಿದೆ.

Diabetes

ಅದರಲ್ಲೂ ಅಪಾಯಕಾರಿ ವಿಷಯ ಏನಪ್ಪಾ ಅಂದರೆ, ಮಧುಮೇಹ ಸಣ್ಣ ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಅಧಿಕವಾದಾಗ ಮಧುಮೇಹವು ಕಾಣಿಸಿಕೊಳ್ಳುತ್ತದೆ. ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಸಾಮಾನ್ಯ ಜೀವನ ಸಾಗಿಸಬಹುದು. ಮಧುಮೇಹಕ್ಕೆ ಮನೆಮದ್ದನ್ನು ಬಳಸಿಕೊಂಡು ಯಾವ ರೀತಿ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ಈ ಲೇಖನದ ಮೂಲಕ ನೀವು ತಿಳಿಯಿರಿ...... ಮಾವಿನ ಎಲೆ ಮಧುಮೇಹ ನಿಯಂತ್ರಿಸಬಲ್ಲದು!

ಮನೆಮದ್ದು ತಯಾರಿಸಲು ಬೇಕಾಗುವ ಸಾಮಾಗ್ರಿಗಳು
*ಹಸಿ ಬ್ರಾಕೋಲಿ ಜ್ಯೂಸ್ ½ ಕಪ್
*ಉದ್ದ ಸೋರೆ ಕಾಯಿ ಜ್ಯೂಸ್ ½ ಕಪ್ ಆರೋಗ್ಯಕ್ಕೆ ಆಸರೆಯಾಗೋ ತರಕಾರಿ- ಸೋರೆಕಾಯಿ

ಒಂದು ದಿನವೂ ಬಿಡದೆ ನಿಯಮಿತವಾಗಿ ನೀವು ಇದನ್ನು ಸೇವನೆ ಮಾಡುತ್ತಾ ಇದ್ದರೆ ಮಧುಮೇಹವನ್ನು ನೈಸರ್ಗಿಕ ರೀತಿಯಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಈ ಜ್ಯೂಸ್ ನೊಂದಿಗೆ ವೈದ್ಯರು ಹೇಳಿದಂತಹ ಆಹಾರಕ್ರಮ ಪಾಲಿಸಿಕೊಂಡು ಹೋಗಿ ದಿನವೂ ವ್ಯಾಯಾಮ ಮಾಡಬೇಕು. ಇದು ಮಧುಮೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ. ಮಧುಮೇಹಿಗಳೇ, ವೈದ್ಯರಲ್ಲಿ ತಪ್ಪದೇ ಈ ಪ್ರಶ್ನೆಗಳನ್ನು ಕೇಳಿ...

ಬ್ರಾಕೋಲಿಯಲ್ಲಿ ವಿಟಮಿನ್ ಬಿ ಮತ್ತು ನಾರಿನಾಂಶವು ಸಮೃದ್ಧವಾಗಿದೆ. ಇದು ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತದೆ. ಇದರಿಂದ ಮಧುಮೇಹವು ಹದ್ದುಬಸ್ತಿನಲ್ಲಿರುತ್ತದೆ. ಉದ್ದ ಸೋರೆಕಾಯಿಯಲ್ಲಿರುವಂತಹ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಪ್ರತಿರೋಧಕ ಶಕ್ತಿಯನ್ನು ಆರೋಗ್ಯವಾಗಿಡುತ್ತದೆ. ಇದರಿಂದ ಮಧುಮೇಹದಿಂದಾಗಿ ದೇಹದಲ್ಲಿ ಉಂಟಾಗಿರುವ ಸೋಂಕಿನ ವಿರುದ್ಧ ಹೋರಾಡುತ್ತದೆ.

ಮನೆಮದ್ದು ತಯಾರಿಸುವ ಮತ್ತು ಬಳಸುವ ವಿಧಾನ
*ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಕಪ್ ಗೆ ಹಾಕಿ.
*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.


*ಈಗ ಇದು ಸೇವಿಸಲು ತಯಾರಾಗಿದೆ.
*ಪ್ರತೀ ದಿನ ಉಪಹಾರಕ್ಕೆ ಮೊದಲು ಮೂರು ತಿಂಗಳ ಕಾಲ ಸೇವಿಸಿ.
*ಈ ಜ್ಯೂಸ್‌ಗೆ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಬೇಡಿ.
ಸೂಚನೆ: ಯಾವುದಕ್ಕೂ ಈ ಮನೆಮದ್ದನ್ನು ಪ್ರಯತ್ನಿಸುವ ಮೊದಲು ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ
English summary

Secret Home Remedy To Treat Diabetes That Doctors Never Tell You!

Diabetes can be described as a condition in which, the blood glucose level, or the blood sugar level, becomes extremely high, giving rise to a number of undesirable symptoms. Although diabetes has no cure, its symptoms can be treated and here is an exceptional home remedy for diabetes.
Story first published: Saturday, January 28, 2017, 10:10 [IST]
X
Desktop Bottom Promotion