Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸದ್ದಿಲ್ಲದೆ ಸದ್ದುಮಾಡುವ 'ಮಧುಮೇಹದ' ಬಗ್ಗೆ ಇರಲಿ ಎಚ್ಚರ!
ಸದ್ದಿಲ್ಲದೆ ನಿಧಾನವಾಗಿ ಕೊಲ್ಲುವ ರೋಗವೇ ಮಧುಮೇಹ. ಬೇರೆ ರೋಗಗಳು ಮಧುಮೇಹದಷ್ಟು ಕಾಡುವುದು ಕಡಿಮೆ. ಮಧುಮೇಹ ಜೀವಮಾನವಿಡಿ ಕಾಡುತ್ತಲೇ ಇರುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಆಗದೆ ಇರುವುದರಿಂದ ಮಧುಮೇಹ ಕಾಣಿಸುತ್ತದೆ. ಎರಡನೇ ಮಟ್ಟದ ಮಧುಮೇಹವು ಯಾವುದೇ ವ್ಯಕ್ತಿಯನ್ನು ತೀವ್ರವಾಗಿ ಕಾಡುತ್ತದೆ.

ಎರಡನೇ ಮಟ್ಟದ ಮಧುಮೇಹವಿರುವ ವ್ಯಕ್ತಿಯ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಆಗುವುದು ಇಲ್ಲ ಅಥವಾ ಅದನ್ನು ಸರಿಯಾಗಿ ಬಳಸದೇ ಇರುವುದು ಎನ್ನುವುದು ಎಂದರ್ಥ. ಎರಡನೇ ಮಟ್ಟದ ಮಧುಮೇಹ ಇರುವ ವ್ಯಕ್ತಿಗಳಲ್ಲಿ ರಕ್ತದ ಸಕ್ಕರೆ ಮಟ್ಟವು ಅಧಿಕವಾಗಿರುತ್ತದೆ. ಅದರಲ್ಲೂ ದೇಹದಲ್ಲಿ ಬೊಜ್ಜು ಬೆಳೆಸಿಕೊಂಡಿದ್ದರೆ ಆಗ ಸಮಸ್ಯೆ ಮತ್ತಷ್ಟು ಹದಗೆಡುತ್ತದೆ.
ಇಂತಹ ವ್ಯಕ್ತಿಗಳು ಸಂಸ್ಕರಿತ ಕೊಬ್ಬನ್ನು ಹೊಂದಿರುವ ಆಹಾರದಿಂದ ದೂರ ಉಳಿಯಬೇಕು ಮತ್ತು ಆದಷ್ಟು ಮಟ್ಟಿಗೆ ವ್ಯಾಯಾಮ ಮಾಡುತ್ತಿರಬೇಕು. ಎರಡನೇ ಮಟ್ಟದ ಮಧುಮೇಹ ಇರುವ ವ್ಯಕ್ತಿಗಳು ಯಾವ್ಯಾವ ಆಹಾರಗಳಿಂದ ದೂರ ಉಳಿಯಬೇಕು ಎನ್ನುವ ಬಗ್ಗೆ ಬೋಲ್ಡ್ ಸ್ಕೈ ಪಟ್ಟಿ ಮಾಡಿದೆ. ಇದನ್ನು ಓದಿಕೊಂಡು ಮಧುಮೇಹವನ್ನು ನಿಯಂತ್ರಣದಲ್ಲಿಡಿ. ಮಧುಮೇಹಿಗಳಿಗೆ ಯಾವ ಹಣ್ಣುಗಳು ಸೂಕ್ತ? ಅದೂ ಎಷ್ಟು ಪ್ರಮಾಣದಲ್ಲಿ?
ಸಕ್ಕರೆ
1 ಅಥವಾ 2ನೇ ಮಟ್ಟದ ಮಧುಮೇಹ ಇರುವ ರೋಗಿಗಳು ಸಕ್ಕರೆ ತಿನ್ನಲೇಬಾರದು. ಸೋಡಾ, ಕುಕೀಸ್ ಇತ್ಯಾದಿಗಳು ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು. ಅತಿಯಾಗಿ ಸಕ್ಕರೆ ಇರುವಂತಹ ಆಹಾರವನ್ನು ತ್ಯಜಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಒಂದು ಮಟ್ಟದಲ್ಲಿ ಇರುತ್ತದೆ.
ಕೊಬ್ಬುಯುಕ್ತ ಹಾಲಿನ ಉತ್ಪನ್ನಗಳು
2ನೇ ಮಟ್ಟದ ಮಧುಮೇಹವಿರುವ ವ್ಯಕ್ತಿಗಳು ದೇಹದಲ್ಲಿರುವ ಇನ್ಸುಲಿನ್ ಗ್ಲೂಕೋಸ್ ವಿಘಟನೆಗೊಳ್ಳುವ ಕಾರ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ. ಅತಿಯಾದ ಆರ್ದ್ರಿತ ಕೊಬ್ಬನ್ನು ಹೊಂದಿರುವಂತಹ ಆಹಾರಗಳು ಈ ಸಮಸ್ಯೆಯನ್ನು ಉಂಟು ಮಾಡುತ್ತದೆ ಎಂದು ತಿಳಿದುಬಂದಿದೆ. ಇದರಿಂದ ಮೊಸರು, ಗಿಣ್ಣು ಇತ್ಯಾದಿಗಳಿಂದ ದೂರವಿರಬೇಕು. ನೆನಪಿರಲಿ ಮಧುಮೇಹ ಕಣ್ಣನ್ನೂ ಬಾಧಿಸುತ್ತದೆ!
ಒಣದ್ರಾಕ್ಷಿ
ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ಪೋಷಕಾಂಶ ಮತ್ತು ಖನಿಜಾಂಶಗಳು ಇದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಇದರಲ್ಲಿ ಉನ್ನತ ಮಟ್ಟದ ಸಕ್ಕರೆ ಕೂಡ ಇದೆ. ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಇದನ್ನು ತಿನ್ನುವುದನ್ನು ಕಡೆಗಣಿಸಿ.
ಸಂಸ್ಕರಿತ ಕೊಬ್ಬು
2ನೇ ಮಟ್ಟದ ಮಧುಮೇಹ ಹೊಂದಿರುವ ವ್ಯಕ್ತಿಗಳು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಸಂಸ್ಕರಿತ ಮಾಂಸವನ್ನು ತಿನ್ನುವುದರಿಂದ ಈ ಅಪಾಯವು ಹೆಚ್ಚಾಗುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಈ ಮಟ್ಟದ ಮಧುಮೇಹ ಇರುವವರಲ್ಲಿ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಏನೇ ಹೇಳಿ ಮಧುಮೇಹ ನಿಯಂತ್ರಣಕ್ಕೆ ಮನೆಮದ್ದೇ ಸೂಕ್ತ
ಕರಿದ ಆಹಾರಗಳು
ಕರಿದ ಆಹಾರಗಳಲ್ಲಿ ಆರ್ದ್ರಿತ ಕೊಬ್ಬು ಹೆಚ್ಚಾಗಿರುತ್ತದೆ. ಇದನ್ನು ತಿನ್ನುವುದರಿಂದ ತೂಕವು ಹೆಚ್ಚಳವಾಗುತ್ತದೆ. ಇದು ಇನ್ಸುಲಿನ ನಿರೋಧಕವನ್ನು ಉಲ್ಬಣಗೊಳಿಸುತ್ತದೆ. ಮೇಲೆ ತಿಳಿಸಿರುವಂತಹ ಆಹಾರವನ್ನು ತ್ಯಜಿಸಿದರೆ ಎರಡನೇ ಮಟ್ಟದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications




