For Quick Alerts
ALLOW NOTIFICATIONS  
For Daily Alerts

ಏನೇ ಹೇಳಿ ಮಧುಮೇಹ ನಿಯಂತ್ರಣಕ್ಕೆ ಮನೆಮದ್ದೇ ಸೂಕ್ತ

By Arshad
|

ಇಂಗ್ಲೀಷಿನವರ ಕಾಲದಲ್ಲಿ ಭಾರತೀಯರಿಗೆ ಮಧುಮೇಹವಿದ್ದರೆ ಅದೊಂದು ಗೌರವದ ಸಂಗತಿಯಾಗಿತ್ತು. ಸಾಮಾನ್ಯವಾಗಿ ಬ್ರಿಟಿಷರಿಗೇ ಹೆಚ್ಚಾಗಿ ಬರುತ್ತಿದ್ದ ಈ ಕಾಯಿಲೆಯಿಂದಾಗಿ 'ಪರಂಗಿಯವರ ಕಾಯಿಲೆ' ಎಂದೂ ಕನ್ನಡನಾಡಿನಲ್ಲಿ ಹೆಸರುವಾಸಿಯಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಕಾಡುತ್ತಿರುವ ಮಧುಮೇಹ ಒಂದು ಮೌನ ಕೊಲೆಗಾರನಾಗಿದೆ.

ಸಾಮಾನ್ಯ ಜನರು ಸಕ್ಕರೆ ತಿನ್ನುವುದರಿಂದಲೇ ಸಕ್ಕರೆ ಕಾಯಿಲೆ ಬರುತ್ತದೆ ಎಂದು ಇಂದಿಗೂ ತಿಳಿದಿದ್ದಾರೆ. ಆದರೆ ಇದಕ್ಕೆ ಕಾರಣ ಬೇರೆಯೇ ಇದೆ. ಮಧುಮೇಹ ಬರುವ ಸಾಧ್ಯತೆ ಇರುವವರಿಗೆ ಯಾವುದಾದರೊಂದು ಹಂತದಲ್ಲಿ ಬರುವುದು ಖಚಿತವಾದರೂ ಯಾವಾಗ ಬರುತ್ತದೆ ಎಂದು ಹೇಳುವಂತಿಲ್ಲ. ಆದರೆ ಬಂದ ಮೇಲೆ ಮಾತ್ರ ಇದನ್ನು ಸಂಭಾಳಿಸಿಕೊಂಡು ಹೋಗಬೇಕೇ ವಿನಃ ಇದನ್ನು ಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಮಧುಮೇಹವನ್ನು ನಿಯಂತ್ರಿಸುವ ಹಿತ್ತಲ ಗಿಡದ ತರಕಾರಿ ಜ್ಯೂಸ್‌

ಸೂಕ್ತ ಆಹಾರ, ವ್ಯಾಯಮ ಮತ್ತು ಶಿಸ್ತುಬದ್ಧ ಜೀವನದ ಮೂಲಕ ಮಧುಮೇಹ ಬರುವ ಸಾಧ್ಯತೆಯನ್ನು ದೂರಮಾಡಬಹುದು ಹಾಗೂ ಈಗಾಗಲೇ ಮಧುಮೇಹ ಆವರಿಸಿದ್ದರೆ ನಿಯಂತ್ರಣದಲ್ಲಿರಿಸಬಹುದು. ರಕ್ತದಲ್ಲಿನ ಗ್ಲೋಕೋಸ್ ಪ್ರಮಾಣವನ್ನು ನಿಯಂತ್ರಿಸಲು ನಾಲಿಗೆಯ ಮೇಲೆ ಹತೋಟಿ ಮುಖ್ಯ, ಜೊತೆಗೇ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಸೂಕ್ತ ಆಹಾರ ಸೇವಿಸುವುದೂ ಅಗತ್ಯ.

ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ವೈದ್ಯವಿಜ್ಞಾನ ಹಲವು ಔಷಧಿಗಳನ್ನು ಪ್ರಸ್ತುತಪಡಿಸಿದೆ. ಇವು ಪ್ರಸ್ತುತ ಸ್ಥಿತಿಗೆ ಉತ್ತಮವಾದರೂ ದೀರ್ಘಕಾಲಕ್ಕೆ ಸಲ್ಲವು. ಏಕೆಂದರೆ ನಮ್ಮ ದೇಹ ಸತತವಾಗಿ ಸೇವಿಸುವ ಈ ಮಾತ್ರೆಗಳಿಗೆ ಒಗ್ಗಿ ಬಿಡುತ್ತದೆ, ಬಳಿಕ ವೈದ್ಯರು ಬೇರೆಯೇ ಔಷಧಿಗಳನ್ನು ಸಲಹೆ ಮಾಡುತ್ತಾರೆ. ಇದು ಹೀಗೇ ಮುಂದುವರೆಯುತ್ತದೆ. ಇದರ ಬದಲಿಗೆ ನಿಸರ್ಗವೇ ಹಲವು ವಿಧದ ಔಷಧಿಗಳನ್ನು ಸುಲಭ ಆಹಾರಗಳ ಮೂಲಕ ನೀಡಿದೆ. ಇವುಗಳ ಸದ್ಭಳಕೆಯ ಮೂಲಕ ಟೈಪ್ 1 ಮತ್ತು ಟೈಪ್ 2 ಮಧುಮೇಹವಿದ್ದವರೂ ಸಾಮಾನ್ಯಜೀವನ ನಡೆಸಬಹುದಾಗಿದೆ. ಮಧುಮೇಹಿ ರೋಗಿಗಳ ಪಾಲಿನ ಸಂಜೀವಿನಿ- ಕುಂಬಳಕಾಯಿ

ಯಾವುದಕ್ಕೂ ಮಧುಮೇಹ ನಿಯಂತ್ರಿಸಲು ನೀವು ಸೇವಿಸಲಿರುವ ಆಹಾರದ ಬಗ್ಗೆ ನಿಮ್ಮ ವೈದ್ಯರಲ್ಲಿ ಸಮಾಲೋಚಿಸಿ ಮುಂದುವರೆಯುವುದು ಉತ್ತಮ. ಏಕೆಂದರೆ ಮಧುಮೇಹದ ಹೊರತಾಗಿ ನಮ್ಮಲ್ಲಿ ಇನ್ನೂ ಹಲವಾರು ಆರೋಗ್ಯ ಕುರಿತಾದ ತೊಂದರೆಗಳಿದ್ದು ವೈದ್ಯರ ಪರೀಕ್ಷೆಯ ಮೂಲಕವೇ ಇವು ಕಂಡುಬರುವ ಕಾರಣ ವೈದ್ಯರ ಸಲಹೆಯಿಲ್ಲದೇ ಯಾವುದೇ ಆಹಾರ ಅಥವಾ ಔಷಧಿಗಳನ್ನು ತೆಗೆದುಕೊಳ್ಳಲು ಹೋಗದಿರಿ. ಬನ್ನಿ ಮಧುಮೇಹದ ನಿಯಂತ್ರಣಕ್ಕೆ ಮನೆಮದ್ದುಗಳು ಕೃತಕ ಔಷಧಿಗಳಿಗಿಂತಲೂ ಏಕೆ ಉತ್ತಮ ಎಂಬುದರ ಬಗ್ಗೆ ವಿವರಗಳನ್ನು ಪಡೆಯೋಣ: ಮಧುಮೇಹ ರೋಗದ ಹೆಡೆಮುರಿ ಕಟ್ಟಿಹಾಕುವ ಫಲಪ್ರದ ಮನೆಮದ್ದು

ಇವು ಸುರಕ್ಷಿತವಾಗಿವೆ

ಇವು ಸುರಕ್ಷಿತವಾಗಿವೆ

ಮನೆಮದ್ದುಗಳು ಸುರಕ್ಷಿತವಾಗಿದ್ದು ಯಾವುದೇ ಅಡ್ಡಪರಿಣಾಮಗಳಿಲ್ಲದಿರುವುದರಿಂದ ಮಧುಮೇಹದ ಜೊತೆಗೇ ದೇಹದ ಇತರ ಸ್ಥಿತಿಗಳನ್ನೂ ಉತ್ತಮಗೊಳಿಸುತ್ತದೆ. ಒಂದು ವೇಳೆ ಯಾವುದೇ ಪರಿಣಾಮ ಇಲ್ಲ ಎಂದಾದರೂ ದೇಹಕ್ಕೆ ಏನೂ ಹಾನಿ ಮಾಡದು. ಆದ್ದರಿಂದ ಮನೆಮದ್ದುಗಳು ಮಧುಮೇಹ ನಿಯಂತ್ರಣಕ್ಕೂ ಸೂಕ್ತವಾಗಿವೆ.

ನಿಯಂತ್ರಣವನ್ನು ಕ್ರಮಬದ್ಧಗೊಳಿಸುತ್ತದೆ

ನಿಯಂತ್ರಣವನ್ನು ಕ್ರಮಬದ್ಧಗೊಳಿಸುತ್ತದೆ

ಔಷಧಿಗಳು ಥಟ್ಟನೇ ತಮ್ಮ ಪ್ರಭಾವವನ್ನು ತೋರಿಸುವ ಮೂಲಕ ದೇಹದ ಗ್ಲೂಕೋಸ್ ಪ್ರಮಾಣದಲ್ಲಿ ಥಟ್ಟನೇ ಏರುವ ಅಥವಾ ಇಳಿಸುವ ಕೆಲಸವನ್ನು ಮಾಡುತ್ತವೆ. ಇದಕ್ಕೆ ದೇಹ ತಯಾರಿಲ್ಲದ ಕಾರಣ ರಕ್ತದಲ್ಲಿ ಏಕಾಏಕಿ ಸಕ್ಕರೆ ಕಡಿಮೆಯಾಗುವುದು (hypoglycemia)ಅಥವಾ ಏಕಾಏಕಿ ಹೆಚ್ಚಾಗುವುದು (hyperglycemia) ಮೊದಲಾದ ತೊಂದರೆಗಳು ಎದುರಾಗುತ್ತವೆ. ಮನೆಮದ್ದುಗಳು ನಿಧಾನವಾಗಿ ಕೆಲಸ ಮಾಡುವ ಕಾರಣ ದೇಹ ಈ ಮದ್ದುಗಳ ಪರಿಣಾಮವನ್ನು ಪಡೆಯಲು ಸುಲಭವಾಗುತ್ತದೆ. ಇದು ನಿಯಂತ್ರಣವನ್ನು ಕ್ರಮಬದ್ಧಗೊಳಿಸಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ

ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ

ಮನೆಮದ್ದುಗಳು ಮತ್ತು ಆಯುರ್ವೇದೀಯ ಔಷಧಗಳು ಮುಖ್ಯವಾಗಿ ಗ್ಲೂಕೋಸ್ ನಿಯಂತ್ರಣಕ್ಕಾಗಿ ಬಳಸಲ್ಪಟ್ಟರೂ ದೇಹದ ಇತರ ಅಂಗಗಳಿಗೂ ಪೂರಕವಾದ ಪೋಷಣೆಯನ್ನು ನೀಡುವ ಮೂಲಕ ಇಡಿಯ ದೇಹದ ಆರೋಗ್ಯವನ್ನು ವೃದ್ಧಿಸುತ್ತವೆ. ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುವ ಮೂಲಕ ಮಧುಮೇಹದ ಜೊತೆಗೇ ಇತರ ತೊಂದರೆಗಳೂ ಕಡಿಮೆಯಾಗುತ್ತವೆ.

ಮಧುಮೇಹದಿಂದಾಗಿ ಬರುವ ತೊಂದರೆಗಳನ್ನು ನಿವಾರಿಸುತ್ತದೆ

ಮಧುಮೇಹದಿಂದಾಗಿ ಬರುವ ತೊಂದರೆಗಳನ್ನು ನಿವಾರಿಸುತ್ತದೆ

ಮಧುಮೇಹವಿದ್ದವರಿಗೆ ಹಲವು ಇತರ ತೊಂದರೆಗಳು ಆವರಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಉದಾಹರಣೆಗೆ ಕಣ್ಣಿನ ದೃಷ್ಟಿ (ಗ್ಲುಕೋಮಾ, ಕ್ಯಾಟರಾಕ್ಟ್) ಗಾಯಗಳು ಮಾಗದಿರುವುದು (ಗ್ಯಾಂಗ್ರೀನ್), ಮೂತ್ರಪಿಂಡಗಳ ವೈಫಲ್ಯ ಮೊದಲಾದವು ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಮನೆಮದ್ದುಗಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದಂತೆ ಈ ತೊಂದರೆಗಳು ಆವರಿಸುವ ಸಾಧ್ಯತೆಯನ್ನು ಸಾಕಷ್ಟು ಕಡಿಮೆಗೊಳಿಸಬಹುದು.

ಆಯ್ಕೆಯ ಸೌಲಭ್ಯ

ಆಯ್ಕೆಯ ಸೌಲಭ್ಯ

ಮಧುಮೇಹ ನಿಯಂತ್ರಣಕ್ಕೆ ಹಲವಾರು ಮದ್ದುಗಳು ಲಭ್ಯವಿದ್ದು ಆಯ್ಕೆಯ ಸೌಲಭ್ಯವಾಗಿದೆ. ಇವುಗಳಲ್ಲಿ ನಿಮಗೆ ಸೂಕ್ತ ಮತ್ತು ಇಷ್ಟವಾಗುವುದನ್ನೇ ಆರಿಸಿ ಸೇವಿಸುವ ಮೂಲಕ ಮಧುಮೇಹದ ನಿಯಂತ್ರಣದ ಕಾರ್ಯವೂ ಇಷ್ಟಪಟ್ಟೇ ನಡೆಯುತ್ತದೆ. ಇಷ್ಟಪಟ್ಟು ನಡೆಯುವ ಕಾರ್ಯಗಳು ಬಹುತೇಕ ಯಶಸ್ವಿಯಾಗುತ್ತವೆ.

ವೈದ್ಯರ ಔಷಧಿಗಿಂತ ಕಡಿಮೆ ಪ್ರಬಲವಾಗಿರುತ್ತವೆ

ವೈದ್ಯರ ಔಷಧಿಗಿಂತ ಕಡಿಮೆ ಪ್ರಬಲವಾಗಿರುತ್ತವೆ

ವೈದ್ಯರು ನೀಡುವ ಔಷಧಿಗಳು ಬಹಳ ಪ್ರಬಲವಾಗಿದ್ದು ಕೆಲವೊಮ್ಮೆ ಕೇವಲ ಅರ್ಧದಷ್ಟೇ ಮಾತ್ರೆಯನ್ನು ಸೇವಿಸಬೇಕಾಗುತ್ತದೆ. ಆದರೆ ಮನೆಮದ್ದುಗಳು ಈ ಔಷಧಿಗಳಿಗಿಂತಲೂ ಎಷ್ಟೋ ಪಟ್ಟು ಸೌಮ್ಯವಾಗಿದ್ದು ದೇಹದ ಯಾವುದೇ ಅಂಗಗಳಿಗೆ ಹಾನಿ ಎಸಗದಿರುವ ಕಾರಣ ಇವು ಹೆಚ್ಚು ಸುರಕ್ಷಿತವಾಗಿವೆ.

ಊಟದ ಒಂದು ಭಾಗವೂ ಆಗಬಹುದು

ಊಟದ ಒಂದು ಭಾಗವೂ ಆಗಬಹುದು

ಮಾತ್ರೆಗಳೆಂದೂ ಊಟಕ್ಕೆ ಸಮನಾಗಲು ಸಾಧ್ಯವಿಲ್ಲ. ಆದರೆ ಮನೆಮದ್ದು ನಿಮ್ಮ ಒಂದು ಹೊತ್ತಿನ ಊಟವೇ ಆಗಬಹುದು. ಇದು ಒಂದು ರೀತಿಯಲ್ಲಿ ಔಷಧಿ ಸೇವಿಸುವುದಕ್ಕಿಂತ ಹೆಚ್ಚಾಗಿ ಊಟ ಮಾಡುವ ಭಾವನೆಯನ್ನೇ ಮೂಡಿಸುತ್ತದೆ.

ನಿಮಗೆ ಸೂಕ್ತವೋ ಅಲ್ಲವೋ ಎಂದು ಪರೀಕ್ಷಿಸಲು ಸಾಧ್ಯ

ನಿಮಗೆ ಸೂಕ್ತವೋ ಅಲ್ಲವೋ ಎಂದು ಪರೀಕ್ಷಿಸಲು ಸಾಧ್ಯ

ಯಾವುದೇ ಔಷಧಿ ಎಲ್ಲರಿಗೂ ಸಮಾನವಾಗಿ ಒಗ್ಗುವುದಿಲ್ಲ. ಕೆಲವರಿಗೆ ಹೆಚ್ಚು ಒಗ್ಗಿದರೆ ಕೆಲವರಿಗೆ ಒಗ್ಗದೇ ಇರಬಹುದು. ಇದನ್ನು ಪರೀಕ್ಷಿಸಲು ಇದನ್ನು ಸೇವಿಸಿಯೇ ನೋಡಬೇಕು. ಇದರಲ್ಲಿ ಅಡ್ಡಪರಿಣಾಮ ಇಲ್ಲದ ಕಾರಣ ಯಾವುದೇ ಪರಿಣಾಮ ಬರದೇ ಇದ್ದರೆ ಇದು ನಿಮಗೆ ಒಗ್ಗದು ಎಂಬ ತೀರ್ಮಾನಕ್ಕೆ ಬರಬಹುದು. ಆದರೆ ವೈದ್ಯರ ಔಷಧಿಯಲ್ಲಿ ಈ ರೀತಿಯಾಗಿ ಪರಿಕ್ಷಿಸಿಕೊಳ್ಳುವುದು ಅಪಾಯಕಾರಿಯಾಗಿದೆ.

ದುಬಾರಿ ಔಷಧಿಯಲ್ಲಿರುವ ಪ್ರಮುಖ ಅಂಶಗಳೇ ಇರುತ್ತವೆ

ದುಬಾರಿ ಔಷಧಿಯಲ್ಲಿರುವ ಪ್ರಮುಖ ಅಂಶಗಳೇ ಇರುತ್ತವೆ

ದುಬಾರಿ ಔಷಧಿಯ ಒಳಗಿರುವ ಅಂಶಗಳ ಪಟ್ಟಿ ಗಮನಿಸಿದರೆ ಪ್ರಮುಖ ಅಂಶಗಳು ಮನೆಮದ್ದುಗಳಲ್ಲಿಯೂ ಇರುತ್ತವೆ. ವಾಸ್ತವವಾಗಿ ಈ ಮನೆಮದ್ದುಗಳ ಪ್ರಭಾವವನ್ನು ಪರೀಕ್ಷಿಸಿ ಅದಕ್ಕೆ ಕಾರಣವಾದ ಅಂಶಗಳನ್ನು ಕೃತಕವಾಗಿ ಸೇರಿಸಿಯೇ ಈ ಮಾತ್ರೆಗಳನ್ನು ತಯಾರಿಸಲಾಗಿರುತ್ತದೆ. ಅಂತೆಯೇ ಇವೇ ಅಂಶಗಳಿರುವ ಮನೆಮದ್ದುಗಳನ್ನು ಸೇವಿಸುವ ಮೂಲಕ ಔಷಧಿಗಳ ಪರಿಣಾಮವನ್ನೇ ಪಡೆಯಬಹುದು.

ನಿತ್ಯದ ಔಷಧಿಯೊಡನೆಯೂ ಸೇವಿಸಬಹುದು

ನಿತ್ಯದ ಔಷಧಿಯೊಡನೆಯೂ ಸೇವಿಸಬಹುದು

ಸಾಮಾನ್ಯವಾಗಿ ವೈದ್ಯರು ತಾವು ನೀಡುವ ಔಷಧಿಯನ್ನು ಬಿಟ್ಟು ಮನೆಮದ್ದುಗಳನ್ನು ಸೇವಿಸಲು ಸಲಹೆ ನೀಡುವುದಿಲ್ಲ. ಬದಲಾಗಿ ಆ ಔಷಧಿಗಳ ಜೊತೆಗೇ ಮನೆಮದ್ದುಗಳನ್ನೂ ಸೇವಿಸುವ ಮೂಲಕ ರೋಗದಿಂದ ಹೊರಬರುವ ಪ್ರಕ್ರಿಯೆ ಇನ್ನಷ್ಟು ಉತ್ತಮಗೊಳ್ಳುತ್ತದೆ. ಆದರೆ ಯಾವುದಕ್ಕೂ ಇವುಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅಗತ್ಯ.

English summary

Why Home Remedies Are Best For Diabetes

Diabetes is considered a silent killer. Once detected, curing diabetes is difficult. But managing diabetes and preventing future complication is easy, if you are wise enough to select the best remedy measures. For controlling blood glucose levels, you have to be committed and consistent with your trials. Since treatment of diabetes is a long term process, most people prefer to go for natural home remedies.
X
Desktop Bottom Promotion