For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗೆ ಯಾವ ತಿನಿಸು ಒಳ್ಳೆಯದು?

By Dr Arpandev Bhattacharyya
|
Eating Habits Of Diabetic Patients

ನಿಮ್ಮ ಆಯ್ಕೆಯ ತಿಂಡಿ ತಿನಿಸು ತಿನ್ನಬಹುದಾದರೂ ಕೆಲವು ಮುನ್ನಚ್ಚರಿಕೆ ಅಗತ್ಯ. ಮನೆಯಲ್ಲೇ ತಯಾರಿಸಿದ ಸ್ಯಾಂಡ್ ವಿಚ್ ನಿಂದ ಹಿಡಿದು, ನ್ಯೂಡಲ್ಸ್, ಸಿಹಿ ರಹಿತ ಬಿಸ್ಕೇಟ್ ಗಳು, ಮಧ್ಯಮ ಗಾತ್ರದ ಸೇಬು ಹಣ್ಣು ಸೇವಿಸಬಹುದು. ತಂಪು ಪಾನೀಯಗಳು ನಿಮಗಷ್ಟವಾದರೆ ಅಡ್ಡಿಯಿಲ್ಲ, ಹೆಚ್ಚು ಸಕ್ಕರೆ ಅಂಶವಿಲ್ಲ ಸಾಫ್ಟ್ ಡಿಂಕ್ಸ್ ಕುಡಿಯಲು ಯಾವುದೇ ಅಡ್ಡಿ ಆತಂಕ ಬೇಡ.

ಉಪವಾಸವಿದ್ದರೆ ಬ್ಲಡ್ ಶುಗರ್ ಸಮಪ್ರಮಾಣದಲ್ಲಿರುತ್ತದೆಯೇ?

ಇಲ್ಲ, ಖಂಡಿತ ಸಾಧ್ಯವಿಲ್ಲ. ಆಹಾರ ಸಮತೋಲನ ಕಾಯ್ದುಕೊಳ್ಳುವುದು ಎಷ್ಟು ಮುಖ್ಯವೋ , ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸುವುದು ಅಷ್ಟೇ ಮುಖ್ಯ. ಊಟ, ತಿಂಡಿ ಬಿಟ್ಟ್ಟರೆ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸಲು ಬರುವುದಿಲ್ಲ. ಸಮತೋಲನ ಆಹಾರ ಸೇವಿಸದೆ ಉಪವಾಸವಿದ್ದರೆ, ನಿಮ್ಮ ದೇಹದ ತೂಕ ಇಳಿಯುತ್ತದೆ ಅಲ್ಲದೆ, ದೇಹದಲ್ಲಿ ನಿಃಶಕ್ತಿ ಆವರಿಸುತ್ತದೆ. ಸಕ್ಕರೆ ಪ್ರಮಾಣ ಎಷ್ಟಿದ್ದರೂ ಆಹಾರ ಸೇವನೆ ಮಾತ್ರ ಕಾಲ ಕಾಲಕ್ಕೆ ಆಗಲೇಬೇಕು.

ಊಟ ಮಾಡದಿದ್ದರೆ ಏನಾಗುತ್ತದೆ?

ಇದು ಯಾವುದೇ ರೀತಿ ದೇಹಕ್ಕೆ ಪೂರಕವಾಗುವುದಿಲ್ಲ. ಒಮ್ಮೆ ನೀವು ಊಟವನ್ನು ಮಾಡದೇ ಆಗೇ ಇದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಳಿತಕ್ಕೊಳಗಾಗುತ್ತದೆ. ಅನಿಯಮಿತವಾಗಿ ಆಹಾರ ಸೇವಿಸುವುದು, ಅತಿ ಹೆಚ್ಚು ಸೇವಿಸುವುದು, ಉಪವಾಸವಿರುವುದು, ಅಲ್ಪಾಹಾರ ಸೇವನೆ ಇತ್ಯಾದಿ ಆಚರಣೆಗಳನ್ನು ಇಂದೇ ಕೈ ಬಿಡುವುದು ಒಳ್ಳೆಯದು. ಆಹಾರ ಸೇವಿಸುವುದು ಎಷ್ಟು ಮುಖ್ಯವೋ ಎಷ್ಟು ಪ್ರಮಾಣದ ಹಾಗೂ ಯಾವ ರೀತಿಯ ಸೇವಿಸುತ್ತಿದ್ದೇವೆ ಎಂಬುದು ಅಷ್ಟೇ ಮುಖ್ಯ.

ಕೆಲಸದ ಒತ್ತಡದಿಂದ ನಿಯಮಿತವಾಗಿ ಆಹಾರ ಸೇವನೆ ಅಸಾಧ್ಯ, ಏನು ಮಾಡಲಿ?

ನಿಮ್ಮ ದೈನಂದಿನ ಚಟುವಟಿಕೆ ಹಾಗೂ ಆಹಾರ ಸೇವನೆ ಕ್ರಮವನ್ನು ಯೋಜಿತವಾಗಿ ರೂಪಿಸದೇ ಎಲ್ಲರೂ ಕೊಡುವ ಸಾಮಾನ್ಯವಾದ ನೆವ ಇದಾಗಿದೆ. ಆದರೆ, ಇದು ಕೂಡದು. ನಿಮ್ಮ ಚಟುವಟಿಕೆಗಳ ವೇಳಾಪಟ್ಟಿ ತಯಾರಿಸುವುದು ಒಳ್ಳೆಯದು. ಪ್ರತಿದಿನ ದೈಹಿಕ ಹಾಗೂ ಮಾನಸಿಕವಾಗಿ ಒತ್ತಡ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ.

ಹೊರಗಡೆ ತಿಂಡಿ ತೀರ್ಥ ಸೇವನೆಗೆ ಬ್ರೇಕ್ ಹಾಕಬೇಕೆ?

ಅಂಥದ್ದೇನು ಬೇಡ, ಪ್ರತಿ ದಿನ ಅಲ್ಲದಿದ್ದರೂ ಯೋಜಿತವಾಗಿ ನಿಮ್ಮ ಸೇವೆನೆ ಮುಂದುವರೆಸಬಹುದು. ಆದರೆ, ಯಾವುದು ಸರಿಯಾದ ಆಹಾರ, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬ ಅರಿವಿರಬೇಕು. ಮದ್ಯ ಸೇವಿಸುವವರು ಜೀರೋ ಕ್ಯಾಲೋರಿ ಡಿಂಕ್ಸ್ ಮಾತ್ರ ಕುಡಿತ್ತೀವಿ ಅಂದರೂ ನಂತರ ಹಸಿದ ಹೊಟ್ಟೆ ತುಂಬಿಸಲು ಬೇಕಾಬಿಟ್ಟಿ ತಿನ್ನುವ ಸಾಧ್ಯತೆಗಳೇ ಹೆಚ್ಚು ಎಂಬುದನ್ನು ನೆನಪಿಡಿ.

ಅನಾರೋಗ್ಯದ ಸಮಯದಲ್ಲಿ ಏನ್ನನ್ನು ತಿನ್ನಬೇಕು?

ದೈನಂದಿನ ಸಾಮಾನ್ಯ ಅಹಾರ ಸೇವನೆ ಕಷ್ಟವಾದ ಸಂದರ್ಭದಲ್ಲಿ ದ್ರವಾಹಾರಕ್ಕೆ ಮೊರೆ ಹೋಗಬಹುದು. ಹೆಚ್ಚಿನ ಮಾಹಿತಿಗೆ Sick day rule ನ ವಿಭಾಗವನ್ನು ವೀಕ್ಷಿಸಬಹುದು.

ಐಸ್ ಕ್ರೀಮ್, ಕೃತಕ ಸಿಹಿ ಪದಾರ್ಥಗಳನ್ನು ಸೇವಿಸಬಹುದೇ?

ಕೆಲವೊಮ್ಮೆ ಸೇವಿಸಲಡ್ಡಿಯಿಲ್ಲ, ಆದರೆ, ಐಸ್ ಕ್ರೀಂ ಸೇವನೆ ಚಟವಾದರೆ ಕಷ್ಟ. ಈಗ ಸಿಹಿ ರಹಿತ ಐಸ್ ಕ್ರೀಂ ಗಳು ಲಭ್ಯವಿದ್ದರೂ, ಕ್ಯಾಲೋರಿಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂಬುದನ್ನು ಗಮನದಲ್ಲಿಡಿ.

ಕೃತಕ ಸಿಹಿ ಪದಾರ್ಥಗಳನ್ನು ಸಹಾ ಆಗಾಗ ಸೇವಿಸುವುದು ಸುರಕ್ಷಿತ. ಆದರೆ, ದೈನಂದಿನ ಆಹಾರದಲ್ಲಿ ಬಳಸುವುದು ಬೇಡ. ಬಿಸಿ ಮಾಡುವುದರಿಂದ, ಹುರಿಯುವುದರಿಂದ ಅಥವಾ ಕುದಿಸುವುದರಿಂದ ಕೃತಕ ಸಿಹಿ ಪದಾರ್ಥಗಳ ಸಿಹಿ ಅಂಶ ನಶಿಸುತ್ತದೆ.

ಹಣ್ಣುಗಳನ್ನು ತಿನ್ನಬಹುದೇ?

ಖಂಡಿತಾ ತಿನ್ನಬಹುದು. ಹಾಗೂ ಹಣ್ಣುಗಳನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಸಕ್ಕರೆ ಕಾಯಿಲೆ ಬಂದವರು ಹಣ್ಣುಗಳನ್ನು ತಿನ್ನಬಾರದು ಎಂಬ ತಪ್ಪು ಕಲ್ಪನೆ ಹಿಂದಿನಿಂದ ಜಾರಿಯಲ್ಲಿದೆ. ಆದರೆ, ಯಾವ ಹಣ್ಣು ಹಾಗೂ ಎಷ್ಟು ಪ್ರಮಾಣ ಎಂಬುದನ್ನು ನಿರ್ಧರಿಸಿ ತಿನ್ನಬೇಕಾಗುತ್ತದೆ.

ಪ್ರತಿ ದಿನ ಹಣ್ಣಿನ 3 ರಿಂದ 5 ಭಾಗದ ಸೇವಿಸಬಹುದು(ಒಂದು ಹಣ್ಣಿ ಹೋಳು :1 ಮಧ್ಯಮ ಗಾತ್ರದ ಸೇಬು ಅಥವಾ 1 ಸೀಬೆ ಹಣ್ಣು ಅಥವಾ 1 ಕಿತ್ತಳೆ ಅಥವಾ 1 ಸಣ್ಣ ಬಾಳೆ ಹಣ್ಣು ಅಥವಾ 1 ಮರಸೇಬು ಅಥವಾ 12 ರಿಂದ 15 ದ್ರಾಕ್ಷಿ ಅಥವಾ 1 ಪಪ್ಪಾಯಿ ತುಂಡು ಅಥವಾ 1 ಅನಾನಸ್ ತುಂಡು..ಇತ್ಯಾದಿ)

ನಿಮ್ಮ ಆಯ್ಕೆಯ ಹಣ್ಣುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬಹುದು. ಅತಿಹೆಚ್ಚಿನ ಕ್ಯಾಲೋರಿ ವುಳ್ಳ ಒಣದ್ರಾಕ್ಷಿ, ಖರ್ಜೂರ ಇತ್ಯಾದಿಗಳನ್ನು ದಯವಿಟ್ಟು ಸೇವಿಸಬೇಡಿ.

ಯಾವ ಯಾವ ತಿಂಡಿ ತಿನಿಸು ಸೇವಿಸಬಾರದು?

ನೇರವಾಗಿ ಹೆಚ್ಚಿನ ಅಂಶದ ಸಕ್ಕರೆವುಳ್ಳ, ಜಾಮ್, ಜೇನುತುಪ್ಪ, ಚಾಕೊಲೇಟ್ ಗಳು ಬೇಡವೇ ಬೇಡ. ಇವುಗಳು ರಿಫೈನ್ಡ್ ಆದ ಕಾರ್ಬೋಹೈಡ್ರೇಟ್ ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ತ್ವರಿತವಾಗಿ ಹೆಚ್ಚಾಗುತ್ತದೆ. ಇದಲ್ಲದೆ ಬೆಣ್ಣೆ, ತುಪ್ಪ, ಹಾಲಿನ ಕೆನೆ, ಗಿಣ್ಣು ಹಾಗೂ ಘನ ಖಾದ್ಯ ತೈಲಗಳು ಕೂಡಾ ಸೇವನೆಗೆ ಯೋಗ್ಯವಲ್ಲ.

English summary

ಮಧುಮೇಹಿಗಳಿಗೆ ಯಾವ ತಿನಿಸು ಒಳ್ಳೆಯದು?

Read on to know what a diabetic patient should eat and what he should not
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X