ಕಣ್ಮನ ಸೆಳೆದ ಜಾಕ್ವಲಿನ್ ಸಾಂಪ್ರದಾಯಿಕ ಉಡುಪು

By: Jaya subramanya
Subscribe to Boldsky

ಈಗೀಗ ಹೆಚ್ಚಿನ ನಟೀ ಮಣಿಯರು ಫ್ಯಾಷನ್‌ ವಿಷಯದಲ್ಲಿ ಚೂಸಿಯಾಗುತ್ತಿದ್ದಾರೆ. ತಮ್ಮ ಸಿನಿಮಾ ಪ್ರಚಾರಕ್ಕಾಗಿ ಸಾಂಪ್ರದಾಯಿಕ ಉಡುಗೆಗಳನ್ನೇ ಇವರು ಬಳಸಿಕೊಳ್ಳುತ್ತಿದ್ದು ಆಧುನಿಕ ಉಡುಗೆಯಾಗಿ ಈ ಸಾಂಪ್ರದಾಯಿಕ ದಿರಿಸುಗಳು ಪ್ರತಿಯೊಬ್ಬರ ಮನವನ್ನು ಕದಿಯುತ್ತಿವೆ. ಈ ಸಾಲಿಗೆ ಈಗ ಚೆಂದದ ಬೆಡಗಿ ಜಾಕ್ವಲಿನ್ ಕೂಡ ಈಗ ಸೇರಿದ್ದಾರೆ.

ತಮ್ಮ ಮುಂಬರುವ ಚಿತ್ರ ಜಂಟಲ್‌ಮೆನ್‌ಗಾಗಿ ಜಾಕ್ವಲಿನ್ ಪ್ರಚಾರ ಕಾರ್ಯಕ್ರಮವನ್ನು ಆರಂಭಿಸಿದ್ದು ಸಾಂಪ್ರದಾಯಿಕ ದಿರಿಸನ್ನು ಧರಿಸಿ ಅವರು ಸಿನಿ ಪ್ರಚಾರವನ್ನು ಮಾಡುತ್ತಿದ್ದಾರೆ. ಸುಕ್ರತಿ ಮತ್ತು ಆಕೃತಿ ಕ್ರೀಮ್ ಬಣ್ಣದ ಅನಾರ್ಕಲಿ ಹಾಗೂ ಹೂಗಳಿರುವ ಉದ್ದನೆಯ ಫ್ರಾಕ್ ಅನ್ನು ಜಾಕ್ವಲಿನ್ ಧರಿಸಿದ್ದಾರೆ.

Jacqueline Fernandez

ಅಂತೂ ಎರಡು ದಿರಿಸುಗಳಲ್ಲಿ ಕೂಡ ಜಾಕ್ವಲಿನ್ ಇನ್ನಷ್ಟು ಸುಂದರಿಯಂತೆ ಕಂಡುಬರುತ್ತಿದ್ದು ಆಧುನಿಕ ಉಡುಗೆಗಳಿಗಿಂತ ಇಂತಹ ಉಡುಗೆಗಳಲ್ಲೇ ಜಾಕ್ವಲಿನ್ ಇನ್ನಷ್ಟು ಮುದ್ದಾಗಿ ಕಂಡುಬರುತ್ತಿದ್ದಾರೆ ಎಂಬುದು ಮಾತ್ರ ಸುಳ್ಳಲ್ಲ. ದಿರಿಸಿಗೆ ತಕ್ಕಂತೆ ಸರಳ ಮೇಕಪ್ ಮಾಡಿಕೊಂಡಿರುವ ಈ ಸುಂದರಿ ವೇದಿಕೆಯಲ್ಲಿ ನೃತ್ಯ ಭಂಗಿಗಳಿಗೆ ಹೆಜ್ಜೆ ಹಾಕಿದ್ದಾರೆ. ಅಂತೂ ಜಾಕ್ವಲಿನ್‌ನ ಈ ಸೊಗಸಾದ ದಿರಿಸನ್ನು ನಾವು ಟ್ರೈ ಮಾಡಬಹುದಾಗಿದ್ದು ಯಾವುದೇ ಸಮಾರಂಭಗಳಲ್ಲಿ ಇದು ಉತ್ತಮವಾಗಿ ಹೊಂದುವ ದಿರಿಸಾಗಿದೆ...

Jacqueline Fernandez
Jacqueline Fernandez
English summary

Jacqueline Fernandez Turned To Traditionals For Her Movie Promotion

Jacqueline Fernandez recently went traditional with her style for the promotion of her upcoming movie A Gentleman. It was not once but twice that she went for traditional wear for the movie promotion. It goes without saying that she looked marvellous in both the attires. For one of the ethnic looks, she wore a Sukriti and Aakriti cream coloured gota patti anarkali suit. It made her look extremely gorgeous and also very sophisticated.
Story first published: Friday, August 18, 2017, 23:50 [IST]
Subscribe Newsletter