For Quick Alerts
ALLOW NOTIFICATIONS  
For Daily Alerts

ತ್ವಚೆಗೆ ರೋಸ್ ವಾಟರ್‌‌ನ ಪ್ರಯೋಜನಗಳು ಹಾಗೂ ಇದನ್ನು ಬಳಸಲು ಸ್ಟೆಪ್ ಬೈ ಸ್ಟೆಪ್ ಟಿಪ್ಸ್

|

ಸೌಂದರ್ಯವನ್ನು ವೃದ್ಧಿಸಲು ನಾವೆಲ್ಲರು ಇನ್ನಿಲ್ಲದಂತೆ ಕಸರತ್ತು ಮಾಡುತ್ತೇವೆ. ಆದರೆ ಕೆಲವೊಂದು ಸರಳ ಆರೈಕೆಗಳು ಮುಖದ ಸೌಂದರ್ಯವನ್ನು ಹೆಚ್ಚಿಸುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಗುಲಾಬಿ ದಳಗಳಿಂದ ತಯಾರಿಸಲ್ಪಟ್ಟಿರುವಂತಹ ರೋಸ್ ವಾಟರ್ ನ್ನು ಬಳಸಿಕೊಂಡು ಕೂಡ ಮುಖದ ಸೌಂದರ್ಯ ಕಾಪಾಡಿಕೊಳ್ಳಬಹುದು. ರೋಸ್ ವಾಟರ್ ನಮ್ಮ ಚರ್ಮಕ್ಕೆ ಹಲವಾರು ಲಾಭವನ್ನು ನೀಡುವುದು. ಹಿಂದಿನಿಂದಲೂ ರೋಸ್ ವಾಟರ್ ನ್ನು ತ್ವಚೆಯ ಆರೈಕೆಗೆ ಬಳಸಿಕೊಂಡು ಬರಲಾಗುತ್ತಾ ಇದೆ.

ಇದು ಮುಖಕ್ಕೆ ನೈಸರ್ಗಿಕ ಕಾಂತಿ ನೀಡುವುದು ಮಾತ್ರವಲ್ಲದೆ, ಹಲವಾರು ರೀತಿಯ ಲಾಭಗಳನ್ನು ನೀಡುವುದು. ಇದರಲ್ಲಿ ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ. ಇದು ಚರ್ಮಕ್ಕೆ ತುಂಬಾ ಪರಿಣಾಮಕಾರಿ. ತ್ವಚೆಯ ಪಿಎಚ್ ಸಮತೋಲನ ಕಾಪಾಡುವುದರೊಂದಿಗೆ ಇದು ತೇವಾಂಶ, ಪೋಷಣೆ ಮತ್ತು ಚಣ್ಣವನ್ನು ನೀಡುವುದು. ಅದೇ ರೀತಿಯಾಗಿ ಮುಖದ ಮೇಲಿನ ಧೂಳು, ಕಲ್ಮಶ ಇತ್ಯಾದಿಯನ್ನು ತೆಗೆದುಹಾಕುವುದು. ತ್ವಚೆಯ ಆರೈಕೆಯಲ್ಲಿ ನೀವು ರೋಸ್ ವಾಟರ್ ನ್ನು ಯಾವ ರೀತಿಯಲ್ಲಿ ಸೇರಿಸಿಕೊಂಡು ಅದರ ಲಾಭ ಪಡೆಯಬಹುದು ಎಂದು ಈ ಲೇಖನದಲ್ಲಿ ನೀಡಲಾಗಿದೆ.

ಮೊಡವೆ ನಿವಾರಣೆ

ಮೊಡವೆ ನಿವಾರಣೆ

ರೋಸ್ ವಾಟರ್ ನ್ನು ಮುಖಕ್ಕೆ ಸ್ಪ್ರೇ ಮಾಡಿದರೆ ಆಗ ಮುಖದ ಮೇಲೆ ಇರುವಂತಹ ಅತಿಯಾದ ಎಣ್ಣೆಯಂಶವು ಹೋಗುವುದು ಮತ್ತು ಮೊಡವೆ ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ಇದು ನಿಯಂತ್ರಿಸುವುದು. ರೋಸ್ ವಾಟರ್ ನ್ನು ನೀವು ಮುಖಕ್ಕೆ ಹಚ್ಚಿಕೊಂಡಾಗ ಅದು ಮೊಡವೆ ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ಶಾಶ್ವತವಾಗಿ ನಿವಾರಿಸಲು ನೆರವಾಗುವುದು. ರೋಸ್ ವಾಟರ್ ನ್ನು ಅರಶಿನ ಜತೆಗೆ ಸೇರಿಸಿಕೊಂಡು ನೀವು ಬಳಸಿಕೊಳ್ಳಬಹುದು. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮೊಡವೆ ಹಾಗೂ ಬೊಕ್ಕೆ ನಿವಾರಣೆ ಮಾಡಲು ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

2 ಚಮಚ ರೋಸ್ ವಾಟರ್

½ ಚಮಚ ಅರಶಿನ

ತಯಾರಿಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ರೋಸ್ ವಾಟರ್ ಮತ್ತು ಅರಶಿನವನ್ನು ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣದಲ್ಲಿ ಹತ್ತಿ ಉಂಡೆ ಅದ್ದಿಕೊಳ್ಳಿ ಮತ್ತು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

•ಇದನ್ನು 10-15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ತೊಳೆಯಿರಿ.

•ಉತ್ತಮ ಫಲಿತಾಂಶ ಪಡೆಯಬೇಕಿದ್ದರೆ ಆಗ ನೀವು ದಿನದಲ್ಲಿ ಎರಡು ಸಲ ಇದನ್ನು ಪ್ರಯತ್ನಿಸಿ.

ಒಣ ಚರ್ಮ ನಿವಾರಣೆ

ಒಣ ಚರ್ಮ ನಿವಾರಣೆ

ರೋಸ್ ವಾಟರ್ ಚರ್ಮದಲ್ಲಿ ಮೊಶ್ಚಿರೈಸರ್ ನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಇದರಿಂದ ಚರ್ಮ ಒಣಗುವುದು ತಪ್ಪುವುದು. ಇದನ್ನು ನಿಯಮಿತವಾಗಿ ಬಳಕೆ ಮಾಡಿದಾಗ ಅದು ಚರ್ಮಕ್ಕೆ ಒಳ್ಳೆಯ ತೇವಾಂಶ ಮತ್ತು ಪೋಷಣೆ ನೀಡುವುದು. ಇದನ್ನು ನೀವು ಗ್ಲಿಸರಿನ್ ಜತೆಗೆ ಬೆರೆಸಿಕೊಂಡು ಹಚ್ಚಬಹುದು. ಇದು ಮನೆಯಲ್ಲೇ ತಯಾರಿಸಬಹುದಾದ ಒಳ್ಳೆಯ ಟೋನರ್ ಆಗಿದೆ.

ಬೇಕಾಗುವ ಸಾಮಗ್ರಿಗಳು

2 ಚಮಚ ರೋಸ್ ವಾಟರ್

1 ಚಮಚ ಗ್ಲಿಸರಿನ್

ತಯಾರಿಸುವ ವಿಧಾನ

•ರೋಸ್ ವಾಟರ್ ಮತ್ತು ಗ್ಲಿಸರಿನ್ ನ್ನು ಒಂದು ಪಿಂಗಾಣಿಯಲ್ಲಿ ಮಿಶ್ರಣ ಮಾಡಿಕೊಳ್ಳಿ.

•ಈ ಮಿಶ್ರಣವನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು 20 ನಿಮಿಷ ಕಾಲ ಹಾಗೆ ಬಿಡಿ.

•ಇದರ ಬಳಿಕ ಮುಖ ತೊಳೆದು ಒರೆಸಿಕೊಳ್ಳಿ.

•ದಿನದಲ್ಲಿ ಒಂದು ಅಥವಾ ಎರಡು ಸಲ ಹೀಗೆ ಮಾಡಿದರೆ ನಿಮಗೆ ನಿರೀಕ್ಷಿತ ಫಲಿತಾಂಶ ಲಭ್ಯ ಆಗುವುದು.

ಒಡೆದ ಪಾದ ಮತ್ತು ತುಟಿಗಳಿಗಾಗಿ

ಒಡೆದ ಪಾದ ಮತ್ತು ತುಟಿಗಳಿಗಾಗಿ

ರೋಸ್ ವಾಟರ್ ನಲ್ಲಿ ಶಮನಕಾರಿಯಾಗಿರುವಂತಹ ಫೆನೊಲಿಕ್ ಅಂಶವಿದೆ ಮತ್ತು ಇದು ಒಣ ಹಾಗೂ ಒಡೆದಿರುವ ತುಟಿಗಳಿಗೆ ಶಮನ ನೀಡುವುದು. ಜೇನುತುಪ್ಪದ ಜತೆಗೆ ಇದನ್ನು ಬೆರೆಸಿಕೊಂಡರೆ ಆಗ ಉತ್ತಮ ಫಲಿತಾಂಶ ಪಡೆಯಬಹುದು. ಜೇನುತುಪ್ಪದಲ್ಲಿ ಶಮನಕಾರಿ ಗುಣವಿದೆ ಮತ್ತು ಇದು ಚರ್ಮಕ್ಕೆ ಪೋಷಣೆ ನೀಡಿ, ನಯವಾಗಿಸುವುದು.

ಬೇಕಾಗುವ ಸಾಮಗ್ರಿಗಳು

*2 ಚಮಚ ರೋಸ್ ವಾಟರ್

*1 ಚಮಚ ಜೇನುತುಪ್ಪ

ತಯಾರಿಸುವ ವಿಧಾನ

*ಒಂದು ಪಿಂಗಾಣಿಗೆ ರೋಸ್ ವಾಟರ್ ಹಾಕಿ.

*ಇದಕ್ಕೆ ಈಗ ಸ್ವಲ್ಪ ಜೇನುತುಪ್ಪ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ.

*ಈ ಮಿಶ್ರಣವನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ.

*15 ನಿಮಿಷ ಬಿಟ್ಟು ಇದನ್ನು ತೊಳೆಯಿರಿ.

*ನಿರೀಕ್ಷಿತ ಫಲಿತಾಂಶ ಬೇಕಿದ್ದರೆ ಆಗ ನೀವು ದಿನದಲ್ಲಿ ಒಂದು ಅಥವಾ ಎರಡು ಸಲ ಇದನ್ನು ಬಳಸಿಕೊಳ್ಳಿ.

ಮೇಕಪ್ ತೆಗೆಯಲು ಬಳಸಿಕೊಳ್ಳಿ

ಮೇಕಪ್ ತೆಗೆಯಲು ಬಳಸಿಕೊಳ್ಳಿ

ರೋಸ್ ವಾಟರ್ ಚರ್ಮಕ್ಕೆ ತೇವಾಂಶ ನೀಡುವುದು ಮಾತ್ರವಲ್ಲದೆ, ಇದು ಚರ್ಮಕ್ಕೆ ಯಾವುದೇ ಹಾನಿ ಉಂಟು ಮಾಡದೆ ಮುಖದ ಮೇಲಿನ ಮೇಕಪ್ ತೆಗೆಯಲು ನೆರವಾಗುವುದು.

*ಬೇಕಾಗುವ ಸಾಮಗ್ರಿಗಳು

*2 ಚಮಚ ರೋಸ್ ವಾಟರ್

ಬಳಸುವ ವಿಧಾನ

*ರೋಸ್ ವಾಟರ್ ನಲ್ಲಿ ಹತ್ತಿ ಉಂಡೆಯನ್ನು ಅದ್ದಿಕೊಳ್ಳಿ ಮತ್ತು ಇದನ್ನು ಮುಖಕ್ಕೆ ನಿಧಾನವಾಗಿ ಉಜ್ಜಿಕೊಂಡು ಮೇಕಪ್ ತೆಗೆಯಿರಿ.

ಹೀಗೆ ಮಾಡಿದ ಬಳಿಕ ನೀವು ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ ಮತ್ತು ಒರೆಸಿಕೊಳ್ಳಿ.

*ನಿಮಗೆ ಬೇಕೆಂದು ಅನಿಸಿದಾಗ ಹೀಗೆ ಮಾಡಿ.

ಒಡೆದಿರುವ ಪಾದಗಳಿಗೆ

ಒಡೆದಿರುವ ಪಾದಗಳಿಗೆ

ರೋಸ್ ವಾಟರ್ ನ್ನು ಕೇವಲ ಮುಖಕ್ಕೆ ಮಾತ್ರ ಬಳಸಿಕೊಳ್ಳುವುದಲ್ಲ. ಇದರಿಂದ ಇನ್ನು ಹಲವಾರು ರೀತಿಯ ಲಾಭಗಳು ಇವೆ. ಇದು ಒಡೆದಿರುವ ಪಾದಗಳ ಸಮಸ್ಯೆ ನಿವಾರಣೆ ಮಾಡುವುದು. ರೋಸ್ ವಾಟರ್ ನ್ನು ನೀವು ಲಿಂಬೆರಸದ ಜತೆಗೆ ಸೇರಿಸಿಕೊಂಡು ಅದರ ಲಾಭ ಪಡೆಯಬಹುದು. ಲಿಂಬೆ ರಸವು ಚರ್ಮವನ್ನು ಕಿತ್ತೊಗೆಯಲು ನೆರವಾಗುವುದು ಮತ್ತು ಒಡೆದ ಪಾದಗಳಿಗೆ ತುಂಬಾ ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

*2 ಚಮಚ ರೋಸ್ ವಾಟರ್

*1 ಚಮಚ ಲಿಂಬೆರಸ

ತಯಾರಿಸುವ ವಿಧಾನ

*ಸ್ವಲ್ಪ ರೋಸ್ ವಾಟರ್ ಮತ್ತು ಲಿಂಬೆ ರಸವನ್ನು ಅರ್ಧದಷ್ಟು ಬಿಸಿ ನೀರು ಇರುವ ಟಬ್ ಗೆ ಹಾಕಿಕೊಳ್ಳಿ.

*ಈ ನೀರಿನಲ್ಲಿ ಪಾದಗಳನ್ನು ಇಟ್ಟುಬಿಡಿ. ಒಡೆದ ಪಾದಗಳ ನಿವಾರಣೆ ಮಾಡಲು ರೋಸ್ ವಾಟರ್ ಮತ್ತು ಲಿಂಬೆರಸವು ಕೆಲಸ ಮಾಡಲು ಬಿಡಿ.

*ನೀರು ತಣ್ಣಗಾಗುವ ತನಕ 20-25 ನಿಮಿಷ ಪಾದಗಳನ್ನು ಹಾಗೆ ನೀರಿನಲ್ಲಿ ಮುಳುಗಿಸಿ ಇಡಿ.

*ನೀರಿನಿಂದ ಹೊರತೆಗೆದ ಬಳಿಕ ಪಾದಗಳನ್ನು ಸರಿಯಾಗಿ ಒರೆಸಿಕೊಂಡು, ಬಳಿಕ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

*ನಿರೀಕ್ಷಿತ ಫಲಿತಾಂಶ ಪಡೆಯಲು ಇದನ್ನು ದಿನದಲ್ಲಿ ಒಂದು ಸಲ ಪ್ರಯೋಗಿಸಿ.

ಬಣ್ಣ ಮಾಸುವುದನ್ನು ತಡೆಯುವುದು

ಬಣ್ಣ ಮಾಸುವುದನ್ನು ತಡೆಯುವುದು

ಸೂರ್ಯನ ಬಿಸಿಲಿಗೆ ಅತಿಯಾಗಿ ಮೈಯೊಡ್ಡುವ ಪರಿಣಾಮವಾಗಿ ಕಾಣಿಸಿಕೊಳ್ಳುವಂತಹ ಮೈ ಬಣ್ಣ ಕುಂದುವ ಸಮಸ್ಯೆಯನ್ನು ರೋಸ್ ವಾಟರ್ ನಿವಾರಣೆ ಮಾಡುವುದು. ಇದು ಚರ್ಮಕ್ಕೆ ಶಮನ ನೀಡುವುದು. ಕಲೆ ಹಾಗೂ ಕಪ್ಪು ಕಲೆಗಳಿಗೆ ಇದು ತುಂಬಾ ಪರಿಣಾಮಕಾರಿ ಆಗಿರುವುದು. ಕಡಲೆಹಿಟ್ಟಿನ ಜತೆಗೆ ರೋಸ್ ವಾಟರ್ ಬಳಸಿಕೊಂಡರೆ ಆಗ ಸತ್ತ ಚರ್ಮದ ಕೋಶವನ್ನು ಇದು ತೆಗೆಯುವುದು ಮತ್ತು ಚರ್ಮವು ತುಂಬಾ ಕಾಂತಿಯುತ ಹಾಗೂ ಯೌವನಯುತವಾಗಿ ಕಾಣಿಸುವುದು.

ಬೇಕಾಗುವ ಸಾಮಗ್ರಿಗಳು

*2 ಚಮಚ ರೋಸ್ ವಾಟರ್

*2 ಚಮಚ ಕಡಲೆಹಿಟ್ಟು

*½ಚಮಚ ಅರಶಿನ

ತಯಾರಿಸುವ ವಿಧಾನ

*ಒಂದು ಪಿಂಗಾಣಿಯಲ್ಲಿ ಹೇಳಿಷ್ಟು ಪ್ರಮಾಣದ ರೋಸ್ ವಾಟರ್ ಮತ್ತು ಕಡಲೆಹಿಟ್ಟನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ನಯವಾದ ಪೇಸ್ಟ್ ಮಾಡಿಕೊಳ್ಳಲು ಸರಿಯಾಗಿ ಕಲಸಿಕೊಳ್ಳಿ.

*ಇದಕ್ಕೆ ಅರಶಿನ ಹಾಕಿ ಮತ್ತು ಮತ್ತೆ ಸರಿಯಾಗಿ ಕಲಸಿಕೊಳ್ಳಿ.

*ಬಾಧಿತ ಪ್ರದೇಶಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ.

*15 ನಿಮಿಷ ಹಾಗೆ ಬಿಡಿ ಮತ್ತು ಬಳಿಕ ಮುಖ ತೊಳೆಯಿರಿ.

*ಈ ವಿಧಾನವನ್ನು ನೀವು ದಿನದಲ್ಲಿ ಎರಡು ಸಲ ಬಳಸಿದರೆ ನಿರೀಕ್ಷಿತ ಫಲಿತಾಂಶ ಸಿಗುವುದು.

ಒರಟು ಕೂದಲಿನ ನಿವಾರಣೆಗೆ

ಒರಟು ಕೂದಲಿನ ನಿವಾರಣೆಗೆ

ತಲೆಬುರುಡೆಗೆ ರೋಸ್ ವಾಟರ್ ನ್ನು ಹಚ್ಚಿಕೊಂಡಾಗ ಅದರಿಂದ ಅತಿಯಾಗಿ ಬರುವ ಎಣ್ಣೆಯ ಉತ್ಪತ್ತಿಯು ನಿಯಂತ್ರಣಕ್ಕೆ ಬರುವುದು ಮತ್ತು ಎಣ್ಣೆಯುಕ್ತ ಮತ್ತು ಜಿಡ್ಡಿನ ತಲೆಬುರುಡೆಯ ಸಮಸ್ಯೆಯನ್ನು ಇದು ದೂರ ಮಾಡುವುದು. ಇದು ಕೂದಲಿಗೆ ಸೀರಮ್ ಆಗಿ ಕೆಲಸ ಮಾಡಿ ಒರಟು ಕೂದಲಿನ ಸಮಸ್ಯೆ ನಿವಾರಣೆ ಮಾಡುವುದು. ಒರಟು ಕೂದಲಿನ ಸಮಸ್ಯೆ ನಿವಾರಣೆ ಮಾಡಲು ರೋಸ್ ವಾಟರ್ ನ್ನು ಗ್ಲಿಸರಿನ್ ಜತೆಗೆ ಬೆರೆಸಿಕೊಂಡು ಬಳಸಿಕೊಳ್ಳಿ. ಇದರಿಂದ ತಲೆಹೊಟ್ಟು ಕೂಡ ನಿವಾರಣೆ ಆಗುವುದು.

ಬೇಕಾಗುವ ಸಾಮಗ್ರಿಗಳು

*4 ಚಮಚ ರೋಸ್ ವಾಟರ್

*4 ಚಮಚ ಗ್ಲಿಸರಿನ್

ತಯಾರಿಸುವ ವಿಧಾನ

*ರೋಸ್ ವಾಟರ್ ಮತ್ತು ಗ್ಲಿಸರಿನ್ ನ್ನು ಸಮಪ್ರಮಾಣದಲ್ಲಿ ಪಿಂಗಾಣಿಯಲ್ಲಿ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ.

ಈ ಮಿಶ್ರಣವನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಅರ್ಧ ಗಂಟೆ ಕಾಲ ಹಾಗೆ ಬಿಡಿ. ಈ ವೇಳೆ ನೀವು ಕೂದಲನ್ನು ಶಾವರ್ ಕ್ಯಾಪ್ ಹಾಕಿ ಮುಚ್ಚಿಕೊಳ್ಳಿ.

*30 ನಿಮಿಷ ಬಳಿಕ ಕೂದಲನ್ನು ತೊಳೆಯಿರಿ ಮತ್ತು ಕೂದಲನ್ನು ಸರಿಯಾಗಿ ಒಣಗಿಸಿ.

ನಿರೀಕ್ಷಿತ ಫಲಿತಾಂಶ ಪಡೆಯಲು ನೀವು ಮೂರು ದಿನಕ್ಕೊಮ್ಮೆ ಇದನ್ನು ಬಳಸಿಕೊಳ್ಳಿ.

ಕಣ್ಣುಗಳು ಊದಿಕೊಂಡಿರುವುದನ್ನು ನಿವಾರಣೆ ಮಾಡುವುದು

ಕಣ್ಣುಗಳು ಊದಿಕೊಂಡಿರುವುದನ್ನು ನಿವಾರಣೆ ಮಾಡುವುದು

ರೋಸ್ ವಾಟರ್ ನಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಚರ್ಮವನ್ನು ತಾಜಾಗೊಳಿಸುವುದು. ಇದರಿಂದಾಗಿ ಕಣ್ಣಿನ ಕೆಳಭಾಗದಲ್ಲಿ ಊದಿಕೊಂಡಿರುವ ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ರೋಸ್ ವಾಟರ್

ಬಳಸುವ ವಿಧಾನ

•ಸ್ವಲ್ಪ ರೋಸ್ ವಾಟರ್ ನಲ್ಲಿ ಹತ್ತಿ ಉಂಡೆಯನ್ನು ಅದ್ದಿಕೊಳ್ಳಿ ಮತ್ತು ಅದನ್ನು ಕಣ್ಣಿನ ಕೆಳಭಾಗಕ್ಕೆ ನಿಧಾನವಾಗಿ ಉಜ್ಜಿಕೊಳ್ಳಿ.

•ಕೆಲವು ನಿಮಿಷ ಕಾಲ ಇದನ್ನು ಹಾಗೆ ಬಿಡಿ ಅಥವಾ ಸಂಪೂರ್ಣವಾಗಿ ಒಣಗಲಿ.

•ನಿಮಗೆ ಅಗತ್ಯವೆನಿಸಿದಾಗ ಇದನ್ನು ಪುನರಾವರ್ತಿಸಿ.

ಚರ್ಮದ ಪಿಎಚ್ ಮಟ್ಟವನ್ನು ಇದು ಕಾಪಾಡುವುದು

ಚರ್ಮದ ಪಿಎಚ್ ಮಟ್ಟವನ್ನು ಇದು ಕಾಪಾಡುವುದು

ರೋಸ್ ವಾಟರ್ ಚರ್ಮದ ಬಣ್ಣವನ್ನು ಉತ್ತಮಪಡಿಸುವುದು ಮತ್ತು ಇದು ಚರ್ಮದಲ್ಲಿನ ಪಿಎಚ್ ಮಟ್ಟವನ್ನು ಕಾಪಾಡುವುದು. ಇದು ಚರ್ಮದಲ್ಲಿ ಇರುವಂತಹ ಎಣ್ಣೆ ಮತ್ತು ಧೂಳನ್ನು ನಿವಾರಣೆ ಮಾಡುವುದು. ರೋಸ್ ವಾಟರ್ ಗೆ ಸ್ವಲ್ಪ ಮುಲ್ತಾನಿ ಮಿಟ್ಟಿ ಹಾಕಿಕೊಂಡು ಮಿಶ್ರಣ ಮಾಡಿ, ಅದರಿಂದ ಸಿಗುವ ಹೆಚ್ಚಿನ ಲಾಭ ಪಡೆಯಿರಿ. ಮುಲ್ತಾನಿ ಮಿಟ್ಟಿಯು ಖನಿಜಾಂಶಗಳಿಂದ ಸಮೃದ್ಧವಾಗಿದೆ ಮತ್ತು ಇದು ಚರ್ಮಕ್ಕೆ ಪೋಷಣೆ ನೀಡಿ ಆರೋಗ್ಯವಾಗಿಡಲು ನೆರವಾಗುವುದು.

ಬೇಕಾಗುವ ಸಾಮಗ್ರಿಗಳು

2 ಚಮಚ ರೋಸ್ ವಾಟರ್

1 ಚಮಚ ಮುಲ್ತಾನಿ ಮಿಟ್ಟಿ

ತಯಾರಿಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ರೋಸ್ ವಾಟರ್ ಮತ್ತು ಮುಲ್ತಾನಿ ಮಿಟ್ಟಿ ಹಾಕಿಕೊಳ್ಳಿ. ಎರಡು ಈಗ ಸರಿಯಾಗಿ ಮಿಶ್ರಣ ಮಾಡಿ.

•ಈ ಮಿಶ್ರಣವನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ.

•20 ನಿಮಿಷ ಕಾಲ ಇದನ್ನು ಹಾಗೆ ಬಿಡಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ.

•ವಾರದಲ್ಲಿ ಎರಡು ಸಲ ಬಳಸಿಕೊಂಡರೆ ನಿಮಗೆ ನಿರೀಕ್ಷಿತ ಫಲಿತಾಂಶ ಸಿಗುವುದು.

ವಯಸ್ಸಾಗುವ ಲಕ್ಷಣ ತಡೆಯುವುದು

ವಯಸ್ಸಾಗುವ ಲಕ್ಷಣ ತಡೆಯುವುದು

ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿರುವಂತಹ ರೋಸ್ ವಾಟರ್ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು ಮತ್ತು ಫ್ರೀ ರ್ಯಾಡಿಕಲ್ ನಿಂದ ಚರ್ಮಕ್ಕೆ ಆಗುವಂತಹ ಹಾನಿ ತಡೆಯುವುದು. ಇದರಿಂದ ಚರ್ಮವು ತುಂಬಾ ಆರೋಗ್ಯಕಾರಿ, ಕಾಂತಿಯುತ ಮತ್ತು ಯೌವನಯುತವಾಗಿ ಕಾಣಿಸುವುದು. ಯೌವನಯುತ ಚರ್ಮ ಪಡೆಯಲು ನೀವು ಇದನ್ನು ಅಲೋವೆರಾದ ಜತೆಗೆ ಸೇರಿಸಿಕೊಂಡು ಬಳಸಬಹುದು.

ಬೇಕಾಗುವ ಸಾಮಗ್ರಿಗಳು

2 ಚಮಚ ರೋಸ್ ವಾಟರ್

2 ಚಮಚ ಅಲೋವೆರಾ ಲೋಳೆ

ತಯಾರಿಸುವ ವಿಧಾನ

•ಒಂದು ಪಿಂಗಾಣಿಯಲ್ಲಿ ಸ್ವಲ್ಪ ರೋಸ್ ವಾಟರ್ ಮತ್ತು ತಾಜಾವಾಗಿ ತೆಗೆದ ಅಲೋವೆರಾ ಲೋಳೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಕಲಸಿಕೊಂಡು ಮಿಶ್ರಣ ಮಾಡಿ ಪೇಸ್ಟ್ ಮಾಡಿ.

•ಈ ಮಿಶ್ರಣವನ್ನು ಮುಖ ಹಾಗು ಕುತ್ತಿಗೆ ಭಾಗಕ್ಕೆ ಹಚ್ಚಿಕೊಳ್ಳಿ. ಕಣ್ಣು ಮತ್ತು ಕಿವಿಯ ಭಾಗವನ್ನು ನೀಡು ಕಡೆಗಣಿಸಿ.

•15 ನಿಮಿಷ ಕಾಲ ನೀವು ಇದನ್ನು ಹೀಗೆ ಬಿಡಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ.

•ನಿರೀಕ್ಷಿತ ಫಲಿತಾಂಶ ಪಡೆಯಬೇಕಾದರೆ ಆಗ ನೀವು ದಿನದಲ್ಲಿ ಎರಡು ಸಲ ಇದನ್ನು ಬಳಸಿಕೊಳ್ಳಿ.

English summary

Rosewater Benefits For Skin & step by step tips To Use It

Rosewater is one of the most commonly used natural ingredients for skin care. It offers a number of skin care benefits apart from imparting a natural glow. It possesses anti-inflammatory and antioxidant properties that are beneficial for your skin.[1] Besides, it maintains the pH balance of your skin. It also hydrates, nourishes, and tones your skin and removes any dirt, dust or grime settled on it.
X
Desktop Bottom Promotion