ಮೂಗಿನ ಮೇಲೆ ಮೂಡುವ ಬ್ಲ್ಯಾಕ್ ಹೆಡ್‌ ಸಮಸ್ಯೆಗೆ ಮನೆಮದ್ದು

By: Arshad
Subscribe to Boldsky

ಮೂಗು, ಮೂಗಿನ ಪಕ್ಕದ ಭಾಗ ಹಾಗೂ ಕಣ್ಣ ಕೆಳಗಿನ ಕೆನ್ನೆಯ ಭಾಗದಲ್ಲಿ ಕಪ್ಪು ಚುಕ್ಕೆಗಳಂತೆ ಮೂಡುವ ಭಾಗಗಳೇ ಬ್ಲ್ಯಾಕ್ ಹೆಡ್ ಅಥವಾ ಕಪ್ಪುತಲೆಗಳು. ಇವುಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಇವು ನೋಡಲಿಕ್ಕೆ ಕಪ್ಪಾಗಿದ್ದರೂ ಇವು ಜೇಡಿಮಣ್ಣಿನಂತೆ ಚರ್ಮದ ಆಳದವರೆಗೂ ಚರ್ಮದ ರಂಧ್ರಗಳಲ್ಲಿ ತುಂಬಿಕೊಂಡಿರುತ್ತವೆ.

ಚಿವುಟಿ ತೆಗೆಯಲು ಯತ್ನಿಸಿದರೆ ಕೇವಲ ಮೇಲ್ಭಾಗದ ಚಪ್ಪಟೆ ತಲೆ ಮಾತ್ರ ಹೋಗುತ್ತದೆಯೇ ವಿನಃ ಮೊಳೆಯಂತಹ ಇಡಿಯ ಭಾಗ ಚರ್ಮದೊಳಗೆ ಹಾಗೇ ಉಳಿದುಬಿಡುತ್ತದೆ ಮತ್ತು ಕೆಲವೇ ದಿನಗಳಲ್ಲಿ ಈ ಕೊಳೆ ಹೊರದೂಡಲ್ಪಟ್ಟು ಮೇಲ್ಭಾಗ ಮತ್ತೊಮ್ಮೆ ಚಟ್ಟೆಯಾಗಿ ಕಪ್ಪುತಲೆಯ ರೂಪ ಪಡೆಯುತ್ತದೆ. ಬ್ಲ್ಯಾಕ್ ಹೆಡ್ ಸಮಸ್ಯೆಯೇ? ಚೀನೀಯರ ಚಿಕಿತ್ಸೆ ಪ್ರಯತ್ನಿಸಿ! 

ಇವನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಹಲವಾರು ಸ್ಕ್ರಬ್ ಹಾಗೂ ಇತರ ಪ್ರಸಾಧನಗಳಿವೆ. ಇವುಗಳನ್ನು ಬಳಸುತ್ತಾ ಬಂದರೆ ಇವನ್ನು ಬರದಂತೆ ನೋಡಿಕೊಳ್ಳಬಹುದೇ ವಿನಃ ಈಗಾಗಲೇ ಇರುವ ಕಪ್ಪುತಲೆಗಳನ್ನು ನಿವಾರಿಸಲು ಸಾಧ್ಯವಿಲ್ಲ. ಉಳಿದಂತೆ ಲೋಹದ ಕಪ್ಪುತಲೆ ನಿವಾರಕಾ ಉಪಕರಣ ಬಲವಂತವಾಗಿ ಚರ್ಮವನ್ನು ಹಿಸಿಯುವ ಕಾರಣ ನೋವು ನೀಡುವುದರ ಜೊತೆಗೇ ಚರ್ಮವನ್ನೂ ಘಾಸಿಗೊಳಿಸುತ್ತದೆ.  

Black heads
 

ಇಂದು ಈ ಹಠಮಾರಿ ಕಪ್ಪುತಲೆಯನ್ನು ನಿವಾರಿಸಲು ನಮ್ಮಲ್ಲಿ ಸಮರ್ಥವಾದ ಎರಡು ವಿಧಾನಗಳಿವೆ. ಇವೆಲ್ಲವೂ ಮನೆಯಲ್ಲಿಯೇ ಸಿಗುವ ಸಾಮಾಗ್ರಿಗಳನ್ನು ಆಧರಿಸಿದ್ದು ಸುರಕ್ಷಿತ ಹಾಗೂ ಸಮರ್ಪಕವೂ ಆಗಿವೆ. ಈ ಎರಡನ್ನೂ ಅನುಸರಿಸಿ ನೋಡಿ ನಿಮಗೆ ಹೆಚ್ಚು ಯಾವುದು ಉಪಯುಕ್ತವೆಂದು ಕಂಡಿತೋ ಅದೇ ವಿಧಾನವನ್ನು ಮುಂದಿನ ಬಾರಿ ಪ್ರಯೋಗಿಸಬಹುದು.  ಬ್ಲ್ಯಾಕ್ ಹೆಡ್ ನಿವಾರಣೆಗೆ ಏನು ಮಾಡಬಹುದು?   

cinnamon
 

ವಿಧಾನ 1

ಈ ವಿಧಾನದಲ್ಲಿ ಒಂದು ಚಿಕ್ಕಚಮಚ ಜೇನು ಮತ್ತು ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಚೆನ್ನಾಗಿ ಬೆರೆಸಿ ಈ ಲೇಪನವನ್ನು ಕಪ್ಪು ತಲೆಗಳಿರುವ ಭಾಗಕ್ಕೆ ತೆಳುವಾಗಿ ಹಚ್ಚಿ. ಕೊಂಚ ಒಣಗಿದ ಬಳಿಕ ಹತ್ತಿಯ ಬಟ್ಟೆಯ ಪಟ್ಟಿಯೊಂದನ್ನು ಹಚ್ಚಿದ ಭಾಗದ ಮೇಲೆ ಆವರಿಸುವಂತೆ ಕೊಂಚವೇ ಒತ್ತಡ ಹಾಕಿ ಅಂಟಿಸಿ. ಇನ್ನೂ ಕೊಂಚಕಾಲ ಹಾಗೇ ಬಿಡಿ. ಲೇಪನ ಪೂರ್ಣವಾಗಿ ಒಣಗಿದೆ ಎಂದು ಅನ್ನಿಸಿದ ಬಳಿಕ ಒಂದು ಕಡೆಯಿಂದ ಸಿಪ್ಪೆ ಸುಲಿದಂತೆ ಈ ಪಟ್ಟಿಯನ್ನು ಎತ್ತುತ್ತಾ ಬನ್ನಿ. ಕಪ್ಪು ತಲೆಗಳು ಬುಡಸಹಿತ ಈ ಪಟ್ಟಿಗೆ ಅಂಟಿಕೊಂಡಿರುವುದನ್ನು ನೋಡಬಹುದು.  

Honey
 

ವಿಧಾನ 2

ಕೊಂಚ ಹಳೆಯ ಮತ್ತು ಹಠಮಾರಿ ಕಪ್ಪುತಲೆಗಳಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಇದಕ್ಕಾಗಿ ಬೇಕಾಗಿರುವುದು ಸಾದಾ ಗಿಲಾಟಿನ್. ಅಂದರೆ ಯಾವುದೇ ರುಚಿಕಾರಕಗಳನ್ನು ಸೇರಿಸಿರದ ಪಾರದರ್ಷಕ ಜಿಲಾಟಿನ್ (unflavoured gelatin). ಇದು ಕೊಂಚ ಗಟ್ಟಿಯಾಗಿರುವುದರಿಂದ ಒಂದು ಚಮಚದಷ್ಟನ್ನು ಒಂದು ಚಿಕ್ಕ ತಟ್ಟೆಯಲ್ಲಿ ಹಾಕಿ ಕೊಂಚವೇ ಉಗುರುಬೆಚ್ಚನೆಯ ನೀರು ಬೆರೆಸಿ ಮೂಗಿಗೆ ಹಚ್ಚಿಕೊಳ್ಳುವಷ್ಟು ತೆಳುವಾಗಿಸಿ. 

ingredients powder
 

ಬಳಿಕ ಕಪ್ಪುತಲೆ ಇರುವಲ್ಲೆಲ್ಲಾ ತೆಳುವಾಗಿ ಹಚ್ಚಿ ಗಟ್ಟಿಯಾಗಲು ಬಿಡಿ. ಗಟ್ಟಿಯಾದ ಬಳಿಕ ಸಿಪ್ಪೆ ಸುಲಿದಂತೆ ಒಂದು ಕಡೆಯಿಂದ ಸುಲಿಯುತ್ತಾ ಬನ್ನಿ, ಇದರ ಅಡಿಭಾಗದಲ್ಲಿ ಕಪ್ಪುತಲೆಗಳು ಅಂಟಿಕೊಂಡು ಎದ್ದು ಬಂದಿರುತ್ತವೆ. ಮೊದಲನೆಯ ವಿಧಾನ ಸುಲಭವಾಗಿ ತೆಗೆಯುವ ಕಾರಣ ಸಾಧಾರಣ ಗಾತ್ರದ ಕಪ್ಪುತಲೆಗಳಿಗೆ ಸೂಕ್ತ. ಎರಡನೆಯ ವಿಧಾನ ಹಳೆಯ ಮತ್ತು ದೊಡ್ಡಗಾತ್ರದ ಮತ್ತು ಹಠಮಾರಿ ಕಪ್ಪುತಲೆಗಳಿಗೆ ಸೂಕ್ತವಾಗಿದೆ.

English summary

Home Remedies to Get Rid of Blackheads Fast

We found a way in which you can get rid of the blackheads at home without using any of the scary tools, that is by using simple and effective home ingredients. If you'd want to know how to remove blackheads at home
Subscribe Newsletter