For Quick Alerts
ALLOW NOTIFICATIONS  
For Daily Alerts

ಬ್ಲ್ಯಾಕ್ ಹೆಡ್ ಸಮಸ್ಯೆಯೇ? ಚೀನೀಯರ ಚಿಕಿತ್ಸೆ ಪ್ರಯತ್ನಿಸಿ!

By Manu
|

ಕೆಲವರಿಗೆ ಮುಖದಲ್ಲಿ, ಅದರಲ್ಲೂ ಮೂಗಿನ ಮೇಲೆ ಮತ್ತು ಮೂಗಿನ ಅಕ್ಕಪಕ್ಕ (ಈ ಭಾಗ ನೋಡಲು ಟಿ ಅಕ್ಷರದಂತಿರುವ ಕಾರಣ T-zone ಎಂದೂ ಕರೆಯುತ್ತಾರೆ) ಚಿಕ್ಕ ಚಿಕ್ಕ ಕಪ್ಪು ಚುಕ್ಕೆಗಳಂತೆ ಬ್ಲಾಕ್ ಹೆಡ್ ಗಳಿದ್ದು ಮುಜುಗರ ಉಂಟುಮಾಡುತ್ತವೆ. ನೋಡಿದವರು ಏನೆನ್ನುತ್ತಾರೋ ಎಂಬ ದುಗುಡದಿಂದ ಆತ್ಮವಿಶ್ವಾಸವೂ ಕಡಿಮೆಯಾಗುತ್ತದೆ.

ಇದನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಇದು ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಬುಡದಿಂದ ತುದಿಯವರೆಗೆ ಚಿಕ್ಕ ಕಂಭದಂತಿದ್ದು ಈ ಕಂಭದ ತುದಿಯ ಭಾಗವೇ ಬ್ಲ್ಯಾಕ್ ಹೆಡ್ ರೂಪದಲ್ಲಿ ಚರ್ಮದ ಮೇಲೆ ಕಾಣಿಸಿಕೊಂಡಿರುತ್ತದೆ. ಚರ್ಮವನ್ನು ಚಿವುಟುವ ಮೂಲಕ ಹೆಚ್ಚಿನವರು ಇದನ್ನು ನಿವಾರಿಸಲು ಯತ್ನಿಸುತ್ತಾರೆ.

Try This Secret Chinese Remedy To Remove Blackheads At Home!

ಆದರೆ ಇದರಿಂದ ಕಂಭದ ಕೇವಲ ತುದಿಯ ಭಾಗ ಮಾತ್ರ ನಿವಾರಣೆಯಾಗುತ್ತದೆಯೇ ವಿನಃ ಇಡಿಯ ಕಂಭ ಹಾಗೇ ಇರುತ್ತದೆ. ಒಂದೇ ದಿನದಲ್ಲಿ ಮತ್ತೆ ಈ ಜಾಗದಲ್ಲಿ ಕೊಳೆ ತುಂಬಿಕೊಂಡು ಬ್ಲ್ಯಾಕ್ ಹೆಡ್ ಮರುಕಳಿಸುತ್ತದೆ. ಹದಿಹರೆಯದವರಿಗೆ ನಿದ್ದೆ ಕೆಡಲು ಇದೇ ಕಾರಣ. ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸುವ ಫೇಸ್ ಮಾಸ್ಕ್

ಈ ಭಾಗದ ಚರ್ಮದಲ್ಲಿ ತೈಲಗ್ರಂಥಿಗಳು ಹೆಚ್ಚಿನ ಪ್ರಮಾಣದ ತೈಲ ಅಥವಾ sebum ಎಂಬ ಕೀವನ್ನು ಉಂಟುಮಾಡಿ ಸೂಕ್ಷ್ಮರಂಧ್ರಗಳು ತುಂಬಿಕೊಳ್ಳುತ್ತವೆ. ಇದರೊಂದಿಗೆ ಕೊಳೆ, ಧೂಳು ಸೇರಿಕೊಂಡಾಗಲೇ ಬ್ಲ್ಯಾಕ್ ಹೆಡ್ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಕೊಳೆ ಬಿಳಿಯ ಧೂಳಾಗಿದ್ದರೆ ಇದು ಬಿಳಿಯ ಬಣ್ಣದ್ದಾಗಿದ್ದು ಬ್ಲ್ಯಾಕ್ ಹೆಡ್ ಎಂದು ಕರೆಯಲಾಗುತ್ತದೆ.

ಬ್ಲಾಕ್ ಹೆಡ್ ಗಳಿಗೆ ಅಸಮರ್ಪಕ ಆಹಾರ ಸೇವನೆ, ಚರ್ಮದ ಸ್ವಚ್ಛತೆ ಮತ್ತು ಆರೈಕೆಯ ಕೊರತೆ, ಹಾರ್ಮೋನುಗಳ ಏರುಪೇರು, ಬಿಸಿಲಿಗೆ ಅತಿಹೆಚ್ಚಾಗಿ ಒಡ್ಡಿಕೊಳ್ಳುವುದು ಮೊದಲಾದ ಕಾರಣಗಳಿವೆ. ಕೆಲವೊಮ್ಮೆ ಮೇಕಪ್ ಸಾಮಾಗ್ರಿಯಲ್ಲಿರುವ ಯಾವುದೋ ಅಂಶ ಈ ಸಾಧ್ಯತೆಯನ್ನು ಹೆಚ್ಚಿಸುತ್ತಿರಲೂಬಹುದು. ನಮಗೆ ಕಾಡಿದಂತೆ ಚೀನೀಯರಿಗೂ ಈ ತೊಂದರೆ ಕಾಡಿದ್ದರೂ ಇವರು ಒಂದು ಸಾಂಪ್ರಾದಾಯಿಕ ವಿಧಾನದಿಂದ ಈ ತೊಂದರೆಯಿಂದ ಮುಕ್ತಿ ಪಡೆದಿದ್ದಾರೆ. ಬನ್ನಿ, ಈ ವಿಧಾನ ಯಾವುದು ಎಂದು ನೋಡೋಣ:

ಚೀನೀ ಮುಖಲೇಪ ತಯಾರಿಸುವ ವಿಧಾನ:
*ಅಗತ್ಯವಿರುವ ಸಾಮಾಗ್ರಿಗಳು
*ಉಪ್ಪು: ಎರಡು ಚಿಕ್ಕಚಮಚ
*ಹಲ್ಲುಜ್ಜುವ ಪೇಸ್ಟ್: ಒಂದು ಚಿಕ್ಕ ಚಮಚ ಮೂಗಿನ ಮೇಲೆ ಗೋಚರಿಸುವ ಕಪ್ಪು ಚುಕ್ಕೆ ನಿವಾರಣೆಗೆ ಸೂಕ್ತ ಸಲಹೆ

ಈ ಎರಡೂ ಸಾಮಗ್ರಿಗಳ ಮಿಶ್ರಣ ಒಂದು ಸ್ಕ್ರಬ್ ನಂತೆ ಕಾರ್ಯನಿರ್ವಹಿಸುತ್ತದೆ. ಅಂದರೆ ಚರ್ಮದ ಮೇಲೆ ಸಂಗ್ರಹವಾಗಿರುವ ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸಲು ಇದರಿಂದ ಸಾಧ್ಯವಾಗುತ್ತದೆ. ಅಲ್ಲದೇ ಸೂಕ್ಷ್ಮರಂಧ್ರಗಳ ಒಳಗೆ ಇಳಿದು ಅಲ್ಲಿನ ಕೊಳೆಯನ್ನು ಸಡಿಲಗೊಳಿಸುತ್ತದೆ. ಬಳಿಕ ತಳದಿಂದ ಈ ಕೊಳೆಯನ್ನು ಹೊರದೂಡುವ ಮೂಲಕ ಬ್ಲ್ಯಾಕ್ ಹೆಡ್ ಇಲ್ಲವಾಗುತ್ತದೆ. ಈ ಕೊಳೆಯ ಮೂಲಕ ಚರ್ಮದ ಅಡಿಯಲ್ಲಿ ಸಂಗ್ರಹವಾಗಿದ್ದ ಬ್ಯಾಕ್ಟೀರಿಯಾಗಳೂ ನಿವಾರಣೆಯಾಗಿ ಮುಂದೆ ಮೂಡಬಹುದಾಗಿದ್ದ ಮೊಡವೆಗಳಿಂದಲೂ ಮುಕ್ತಿ ದೊರಕುತ್ತದೆ.

ತಯಾರಿಸುವ ವಿಧಾನ:
*ಎರಡೂ ಸಾಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ದಪ್ಪನಾಗಿ ಮೂಗಿನ ಮೇಲೆ ಮತ್ತು ಅಕ್ಕಪಕ್ಕದ ಬ್ಲ್ಯಾಕ್ ಹೆಡ್ ಇರುವಲ್ಲೆಲ್ಲಾ ಹಚ್ಚಿ.
*ಬೆರಳುಗಳಿಂದ ನವಿರಾಗಿ ಇದರ ಮೇಲೆ ಮಸಾಜ್ ಮಾಡಿ. ಸುಮಾರು ಮೂರರಿಂದ ಐದು ನಿಮಿಷಗಳವರೆಗೆ ಮಸಾಜ್ ಮಾಡಿ. *ನಡುವೆ ಈ ಲೇಪನ ಖಾಲಿಯಾದರೆ ಇನ್ನೂ ಕೊಂಚ ಬಳಸಿ.
*ಬಳಿಕ ಐದು ನಿಮಿಷ ಹಾಗೇ ಒಣಗಲು ಬಿಡಿ.
*ನಂತರ ಉಗುರುಬೆಚ್ಚನೆಯ ನೀರಿನಿಂದ ಮತ್ತು ಸೌಮ್ಯ ಫೇಸ್ ವಾಶ್ ಬಳಸಿ ಮುಖವನ್ನು ತೊಳೆದುಕೊಂಡು ಟವೆಲ್ ಒತ್ತಿ ಒರೆಸಿಕೊಳ್ಳಿ. ಮುಂದಿನ ಒಂದು ದಿನಪೂರ್ತಿ ಈ ಭಾಗಕ್ಕೆ ಯಾವುದೇ ಪ್ರಸಾದನ ಹಚ್ಚಬೇಡಿ.

English summary

Try This Secret Chinese Remedy To Remove Blackheads At Home!

Are you feeling self-conscious lately to pose for pictures? Is the reason behind your loss of confidence the blackheads on your skin? Well, if yes, then we totally understand your plight. Blackheads can prove to be quite a hassle and they can also make you look unattractive.Did you know that the Chinese have a simple, yet effective, homemade remedy to help eliminate blackheads? You didn't? have a look
X
Desktop Bottom Promotion