For Quick Alerts
ALLOW NOTIFICATIONS  
For Daily Alerts

  ಸ್ಕಿನ್ ಕೇರ್ ಟಿಪ್ಸ್- ಮುಖದ ಅಂದಕ್ಕೆ ಫಲಪ್ರದ ಮನೆಮದ್ದು

  By Manu
  |

  ಒಂದು ವೇಳೆ ನಿಮ್ಮಿಂದ ಸಮಯವನ್ನು ಹಿಂದೆ ಹಾಕಿ ಶರೀರವನ್ನು ಹಿಂದಿನ ಸ್ಥಿತಿಗೆ ಕೊಂಡೊಯ್ಯಲು ಸಾಧ್ಯವಾಗುವುದಂತಿದ್ದರೆ ಏನನ್ನು ಬಯಸುತ್ತೀರಿ ಎಂದು ಕೇಳಿದರೆ ತಾರುಣ್ಯ, ದಟ್ಟವಾದ ಕೂದಲು, ದೃಢ ಶರೀರ ಎಂಬ ಉತ್ತರ ದೊರಕುತ್ತದೆ. ಆದರೆ ಇದು ಸಾಧ್ಯವಿಲ್ಲದ ಕಾರಣ ಹೆಚ್ಚಿನವರು ಈ ಕ್ರಿಯೆಯನ್ನು ಕೃತಕವಾಗಿ ಪಡೆಯಬಯಸುತ್ತಾರೆ. ಇದರಲ್ಲಿ ಒಂದು ಮುಖಕ್ಕೆ ನಾನಾ ಬಗೆಯ ಫೇಸ್ ಕ್ರೀಮ್ ಅನ್ನು ಹಚ್ಚಿಕೊಂಡು ಹಿಂದಿನ ತಾರುಣ್ಯ ಪಡೆಯುವುದು! ಆದರೆ ಇದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಸಾಕಷ್ಟು ಬಾರಿ ಬೋಲ್ಡ್ ಸ್ಕೈ ತಂಡ ನಿಮ್ಮನ್ನು ಎಚ್ಚರಿಸಿದೆ!, ಬನ್ನಿ ಅದಕ್ಕೆಂದೇ ಕೆಲವೊಂದು ಮನೆಮದ್ದನ್ನು ನಿಮಗೆ ಪರಿಚಯಿಸುತ್ತಿದ್ದು, ಅವು ಯಾವುದು ಎಂಬುದನ್ನು ಮುಂದೆ ಓದಿ..  ಫಳ ಫಳ ಹೊಳೆಯುವ ಮುಖದ ಅಂದಕ್ಕೆ ಸರಳ ಟಿಪ್ಸ್

  ಇಂದು ನಾವು ಪರಿಚಯಿಸುತ್ತಿರುವ, ಮನೆಮದ್ದು ಇತರ ಯಾವುದೇ ಮನೆಮದ್ದಿನಂತೆ ಇವೂ ಕೊಂಚ ನಿಧಾನವಾಗಿದ್ದು ಸ್ಪಷ್ಟ ಪರಿಣಾಮ ಪಡೆಯಲು ಕೊಂಚ ಸಾವಧಾನದ ಅಗತ್ಯವಿದೆ. ಆದರೆ ಇದರ ಪ್ರತಿಫಲ ಮಾತ್ರ ಬಹಳ ಸಿಹಿಯಾಗಿರುತ್ತದೆ. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದಿರುವ ಮತ್ತು ಸೂಕ್ಷ್ಮ ಸಂವೇದಿ ಚರ್ಮದವರಿಗೂ ಸೂಕ್ತವಾದ ಕಾರಣ ಎಲ್ಲರೂ ಸುರಕ್ಷಿತವಾಗಿ ಬಳಸಬಹುದು. ಇನ್ನು ಇದರ ಫಲ ಪಡೆಯಬೇಕಾದರೆ ಕನಿಷ್ಠ ಹದಿನೈದು ದಿನಗಳಾದರೂ ಒಂದೂ ದಿನ ತಪ್ಪದಂತೆ ಸರಿಯಾಗಿ ಅನುಸರಿಸಬೇಕು.  ದಾಳಿಂಬೆ ಸಿಪ್ಪೆ ಬಳಸಿ, ಸೌಂದರ್ಯ ವೃದ್ಧಿಸಿ

  ಆದರೆ ಒಂದು ವಿಷಯ ಮಾತ್ರ ಎಚ್ಚರದಲ್ಲಿರಲಿ. ಒಂದು ವೇಳೆ ಹಿಂದಿನ ಒಂದು ವಾರ ಅಥವಾ ತಿಂಗಳ ಅವಧಿಯಲ್ಲಿ ಚರ್ಮವನ್ನು ಬಿಳಿಚಿಸಿಕೊಂಡಿದ್ದರೆ ಈ ವಿಧಾನ ಅನುಸರಿಸುವುದನ್ನು ತಡಮಾಡಿ. ಅಂದರೆ ಸುಮಾರು ಒಂದು ಅಥವಾ ಒಂದೂವರೆ ತಿಂಗಳವರೆಗಾದರೂ ಕಾಯುವುದು ಅನಿವಾರ್ಯವಾಗಿದೆ. ಬನ್ನಿ, ಈ ವಿಧಾನ ಯಾವುದು ಎಂಬ ನಿಮ್ಮ ಕುತೂಹಲವನ್ನು ತಣಿಸಲಿದೆ, ಮುಂದೆ ಓದಿ...

  ಅಕ್ಕಿ, ಹಾಲು, ಜೇನಿನ ಫೇಸ್ ಪ್ಯಾಕ್

  ಅಕ್ಕಿ, ಹಾಲು, ಜೇನಿನ ಫೇಸ್ ಪ್ಯಾಕ್

  ಅಕ್ಕಿ: (ಬೆಳ್ತಿಗೆ ಅಕ್ಕಿ, ಕಡಿಮೆ ಪಾಲಿಶ್ ಇದ್ದಷ್ಟೂ ಉತ್ತಮ) ಮೂರು ದೊಡ್ಡಚಮಚ

  ಹಾಲು : ಒಂದು ದೊಡ್ಡ ಚಮಚ

  ಜೇನು: ಒಂದು ದೊಡ್ಡ ಚಮಚ ಫೇಸ್ ಪ್ಯಾಕ್ ತಯಾರಿಸುವ ವಿಧಾನ

  ಅಕ್ಕಿ, ಹಾಲು, ಜೇನಿನ ಫೇಸ್ ಪ್ಯಾಕ್

  ಅಕ್ಕಿ, ಹಾಲು, ಜೇನಿನ ಫೇಸ್ ಪ್ಯಾಕ್

  *ಮೊದಲು ಅಕ್ಕಿಯನ್ನು ತಣ್ಣೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಎಷ್ಟು ಎಂದರೆ ಮುಂದೆ ತೊಳೆದಾಗ ನೀರಿನಲ್ಲಿ ಅಕ್ಕಿಯ ಬಿಳಿಯ ಬಣ್ಣ ಬರದಷ್ಟು.

  *ಬಳಿಕ ಅಕ್ಕಿಯ ಎರಡಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರು ಹಾಕಿ ಕುದಿ. ಕುದಿ ಬಂದ ಬಳಿಕ ಉರಿ ಚಿಕ್ಕದಾಗಿಸಿ ಸುಮಾರು ಹತ್ತು ನಿಮಿಷ ಕುದಿಯಲು ಬಿಡಿ.

  * ನಡುನಡುವೆ ಕೆಲವು ಅಗುಳುಗಳನ್ನು ಹಿಸುಕಿ ನೋಡಿ. ಅಕ್ಕಿ ಸುಮಾರು ಶೇಖಡಾ ಎಂಬತ್ತರಷ್ಟು ಬೆಂದ ಬಳಿಕ (ಅಂದರೆ ನಡುವೆ ಒಂದು ಚಿಕ್ಕ ನೂಲಿನಷ್ಟು ಅಕ್ಕಿ ಗಟ್ಟಿಯಾಗಿದ್ದಾಗ) ಇಳಿಸಿ ತಕ್ಷಣವೇ ನೀರನ್ನು ಬಸಿದು ಇನ್ನೊಂದು ಪಾತ್ರೆಯಲ್ಲಿ ಸಂಗ್ರಹಿಸಿ

  ಅಕ್ಕಿ, ಹಾಲು, ಜೇನಿನ ಫೇಸ್ ಪ್ಯಾಕ್

  ಅಕ್ಕಿ, ಹಾಲು, ಜೇನಿನ ಫೇಸ್ ಪ್ಯಾಕ್

  * ಈ ನೀರಿನಿಂದ ಮೂರು ದೊಡ್ಡಚಮಚದಷ್ಟು ನೀರನ್ನು ಒಂದು ಪಾತ್ರೆ ಅಥವಾ ಬೋಗುಣಿಯಲ್ಲಿ ಸಂಗ್ರಹಿಸಿ

  * ಇದಕ್ಕೆ ಜೇನು ಮತ್ತು ಹಾಲನ್ನು ಹಾಕಿ ಚೆನ್ನಾಗಿ ಕಲಕಿ.

  * ಕೊಂಚ ತಣಿದ ಬಳಿಕ ಈ ದ್ರವ ಗಾಢವಾಗುತ್ತದೆ. ಈ ಲೇಪವನ್ನು ಈಗತಾನೇ ತಣ್ಣೀರಿನಲ್ಲಿ ತೊಳೆದ ಮುಖದ ಮೇಲೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ.

  * ಒಣಗಿದ ಬಳಿಕ ಇದು ಸಿಪ್ಪೆಯಂತೆ ಏಳಲು ಆರಂಭವಾಗುತ್ತದೆ. ಪಾತ್ರೆಯಲ್ಲಿ ಉಳಿದಿದ್ದ ಅಕ್ಕಿಯ ನೀರನ್ನು ಬಳಸಿ ನಯವಾಗಿ ತಿಕ್ಕುತ್ತಾ ಈ ಲೇಪವನ್ನು ನಿವಾರಿಸಿ.

  * ಎಲ್ಲಾ ಅಕ್ಕಿ ಬಸಿದ ನೀರು ಮುಗಿದ ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ. ಬಿಸಿನೀರೂ ಬೇಡ.

  * ನಿತ್ಯವೂ ಒಂದೇ ಹೊತ್ತಿನಲ್ಲಿ ಸತತವಾಗಿ ಎರಡು ವಾರಗಳ ಕಾಲ ಅನುಸರಿಸಿ. ಒಂದು ವಾರದ ಬಳಿಕ ಈ ಮನೆಮದ್ದಿನ ಪರಿಣಾಮಗಳನ್ನು ಕಾಣಬಹುದು.

  ಕಳಿತ ಬಾಳೆಹಣ್ಣು

  ಕಳಿತ ಬಾಳೆಹಣ್ಣು

  ಒಂದು ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಎರಡು ದೊಡ್ಡಚಮಚ ಜೇನು ಮತ್ತು ಎರಡು ದೊಡ್ಡಚಮಚ ಲಿಂಬೆರಸದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖದ ಚರ್ಮಕ್ಕೆ ದಪ್ಪನಾಗಿ ಹಚ್ಚಿ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ತಕ್ಷಣವೇ ಮುಖ ಉತ್ತಮ ಕಾಂತಿ ಪಡೆಯುತ್ತದೆ.

  ಹೀರೆಕಾಯಿ ಸಿಪ್ಪೆ

  ಹೀರೆಕಾಯಿ ಸಿಪ್ಪೆ

  ಹೀರೆಕಾಯಿಯನ್ನು ಅಡುಗಗೆ ಬಳಸುವಾಗ ಅದರ ಚೂಪಾದ ಸಿಪ್ಪೆಯ ಭಾಗವನ್ನು ತೆಗೀತೀರ ಅಲ್ವಾ? ತೀರಾ ಅಡುಗೆಯಲ್ಲಿ ತಿಳುವಳಿಕೆ ಇರುವವರಲ್ಲಿ ಕೆಲವರು ಮಾತ್ರ ಅದನ್ನು ಬಳಸಿ ರುಚಿರುಚಿಯಾದ ಚಟ್ನಿ ತಯಾರಿಸಿಕೊಳ್ತಾರೇನೋ.. ಆದ್ರೆ ಉಳಿದವ್ರು ಖಂಡಿತ ಅದನ್ನು ಕಸದ ಬುಟ್ಟಿಗೆ ಎಸೆದು ಬಿಡ್ತಾರೆ. ಆದ್ರೆ ಇನ್ಮುಂದೆ ಹಾಗೆ ಮಾಡ್ಬೇಡಿ..

  ಹೀರೆಕಾಯಿ ಸಿಪ್ಪೆ

  ಹೀರೆಕಾಯಿ ಸಿಪ್ಪೆ

  ಹೀರೆಕಾಯಿ ಸಿಪ್ಪೆ ಬದಲಾಗಿ ಆ ಹೀರೆಕಾಯಿಯ ಸಿಪ್ಪೆಯನ್ನು ಮಿಕ್ಸಿ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ ಎರಡು ಟೀ ಸ್ಪೂನ್ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಸಿ, ಆ ಪೇಸ್ಟ್ ನಿಂದ ಬಾಡಿ ಸ್ಕ್ರಬ್ ಮಾಡ್ಕೊಳ್ಳಿ. ನಿಮ್ಮ ದೇಹದ ಟ್ಯಾನ್ ರಿಮೂವ್ ಮಾಡಲು ಈ ಮಿಶ್ರಣ ನಿಮ್ಗೆ ಸಹಾಯ ಮಾಡಲಿದೆ.

  ತುಳಸಿ ಎಲೆಗಳು

  ತುಳಸಿ ಎಲೆಗಳು

  ತುಳಸಿ ಎಲೆಗಳು ನೈಸರ್ಗಿಕವಾದ ಬ್ಯಾಕ್ಟೀರಿಯಾ ನಿವಾರಕವಾಗಿವೆ. ಇದು ಬೇಗನೇ ಸೋಂಕಿಗೆ ಒಳಗಾಗುವ ಸೂಕ್ಷ್ಮ ಚರ್ಮದವರಿಗೆ ಅತಿ ಸೂಕ್ತವಾಗಿದ್ದು ಉತ್ತಮ ಪೋಷಣೆ ನೀಡುತ್ತದೆ. ವಿಶೇಷವಾಗಿ ಚರ್ಮದ ಸೂಕ್ಷ್ಮರಂಧ್ರಗಳಲ್ಲಿದ್ದ ಕೊಳೆ ಮತ್ತು ಕಲ್ಮಶಗಳನ್ನು ನಿವಾರಿಸಲು ತುಳಸಿಯ ರಸ ಉತ್ತಮವಾಗಿದೆ. ತುಳಸಿ ಎಲೆಗಳನ್ನು ಅರೆದು ತೆಳುವಾದ ಲೇಪನದ ರೂಪದಲ್ಲಿ ಹಚ್ಚಬಹುದು ಅಥವಾ ಈ ಎಲೆಗಳನ್ನು ಕುದಿಸಿ ತಣಿಸಿ ಸೋಸಿದ ನೀರಿನಿಂದ ಚರ್ಮವನ್ನು ತೊಳೆದುಕೊಳ್ಳುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ನೀಡಬಹುದು.

   

  English summary

  Simple Homemade Beauty Tips for Glowing Skin

  To look beautiful is a dream of every woman. As a general tendency, we always try hard and doing lot of expenses on cosmetic products, visiting our beauty parlor once a week, & other facial treatments that makes use of harmful chemicals..!! So here are the few effective home remedies have a look
  Story first published: Tuesday, April 26, 2016, 11:24 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more