For Quick Alerts
ALLOW NOTIFICATIONS  
For Daily Alerts

ಮುಖದ ಅಂದ ಹೆಚ್ಚಿಸುವ, ಮಾವಿನ ಹಣ್ಣಿನ ಫೇಶಿಯಲ್

By Manu
|

ಬೇಸಿಗೆ ಬಂತೆಂದರೆ ಸಾಕು, ಬಿಸಿಲಿನ ತಾಪ, ಸೆಕೆ, ಬೆವರು, ಅಲರ್ಜಿ, ನಿರ್ಜಲೀಕರಣ, ಚರ್ಮದ ಸಮಸ್ಯೆ ಹೀಗೆ ಒಂದೊಂದಾಗಿ ಕಾಡಲು ಶುರುವಾಗುತ್ತದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಅತಿಯಾಗಿರುವ ಕಾರಣ ಸ್ವಚ್ಛವಾದ ಕುಡಿಯುವ ನೀರು ಸಿಗದೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಆದರೆ ಬೇಸಿಗೆಯಲ್ಲಿ ನಾವು ಇಷ್ಟಪಡುವ ಒಂದು ವಿಷಯವೆಂದರೆ ಅದು ಈ ಕಾಲದಲ್ಲಿ ಸಿಗುವ ಹಣ್ಣುಗಳು. ಬೇಸಿಗೆಯಲ್ಲಿ ಸಿಗುವ ಮಾವಿನ ಹಣ್ಣು, ನೇರಳೆ, ಹಲಸು ಮುಂತಾದವುಗಳನ್ನು ತಿನ್ನುವಾಗ ನಮಗೆ ಬಿಸಿಲಿನ ತಾಪದ ಬಗ್ಗೆ ತಿಳಿಯುವುದೇ ಇಲ್ಲ. ಅದರಲ್ಲೂ ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವು ತಿಂದರೆ ಆಗುವ ಸಂತೋಷವೇ ಬೇರೆ. ಇದು ಕೇವಲ ತಿನ್ನಲು ಮಾತ್ರವಲ್ಲದೆ ಚರ್ಮದ ಚಿಕಿತ್ಸೆ ಬಳಸಬಹುದು ಎನ್ನುವುದನ್ನು ನಾವಿಲ್ಲಿ ತಿಳಿದುಕೊಳ್ಳುವ. ತ್ವಚೆಯ ಕೋಮಲತೆಗಾಗಿ ಮಾವಿನ ಹಣ್ಣಿನ ಫೇಸ್ ಪ್ಯಾಕ್

ಮಾವನ್ನು ಇಷ್ಟಪಡದೆ ಇರುವವರು ತುಂಬಾ ಕಡಿಮೆ ಎನ್ನಬಹುದು. ಮಾವಿನ ರುಚಿ ನೋಡುವಾಗ ಅದರ ಕೆಲವು ತುಂಡುಗಳನ್ನು ನಿಮ್ಮ ಚರ್ಮಕ್ಕೆ ಚೆನ್ನಾಗಿ ತಿಕ್ಕಿಕೊಳ್ಳಿ ಮತ್ತು ಅದರಿಂದ ಬರುವ ಫಲಿತಾಂಶ ನೋಡಿ. ಆದರೆ ನೀವು ಈ ಬಗ್ಗೆ ಒಂದು ಎಚ್ಚರಿಕೆ ವಹಿಸಿಕೊಳ್ಳಬೇಕು. ಏನೆಂದರೆ ಮಾವಿನ ಹಣ್ಣಿನ ಜ್ಯೂಸ್ ಗಳು ಮಾರುಕಟ್ಟೆಯಲ್ಲಿ ತುಂಬಾ ಸಿಗುತ್ತದೆ. ಆದರೆ ಅದನ್ನು ಬಳಸದೆ ತಾಜಾ ಹಣ್ಣಿನ ತುಂಡುಗಳನ್ನೇ ಬಳಸಿಕೊಳ್ಳಿ. ಪ್ರಿಡ್ಜ್ ನಲ್ಲಿಟ್ಟ ಮಾವಿನ ಹಣ್ಣಿನ ತುಂಡನ್ನು ಮುಖದ ಮೇಲಿಟ್ಟರೆ ಚರ್ಮವು ಪುನರ್ಚೇತನಗೊಳ್ಳುವುದು. ಮಾವಿನ ಹಣ್ಣಿನಿಂದ ಚರ್ಮಕ್ಕೆ ಉಂಟಾಗುವ ಲಾಭಗಳ ಬಗ್ಗೆ ನಾವಿಲ್ಲಿ ಚರ್ಚಿಸುವ...

ತ್ವಚೆ ಹೊಳೆಯುವಂತೆ ಆಗಲು

ತ್ವಚೆ ಹೊಳೆಯುವಂತೆ ಆಗಲು

ವಿಟಮಿನ್ ಎ ಮತ್ತು ಬೆಟಾ ಕ್ಯಾರೋಟಿನ್ ನಿಂದ ಸಮೃದ್ಧವಾಗಿರುವ ಮಾವಿನ ಹಣ್ಣನ್ನು ಚರ್ಮಕ್ಕೆ ಹಚ್ಚಿಕೊಂಡರೆ ಆಗ ಚರ್ಮವು ತೇಜಸ್ಸನ್ನು ಪಡೆದು ಕಲೆಗಳು ನಿವಾರಣೆಯಾಗಿ ಹೊಳಪನ್ನು ಪಡೆಯುವುದು.

ಸುಕ್ಕುಗಟ್ಟುವುದನ್ನು ತಡೆಯುವುದು

ಸುಕ್ಕುಗಟ್ಟುವುದನ್ನು ತಡೆಯುವುದು

ಮಾವಿನ ಹಣ್ಣು ಚರ್ಮಕ್ಕೆ ಎಷ್ಟು ಉಪಯೋಗಿಯೆಂದರೆ ಇದು ಚರ್ಮದಲ್ಲಿ ಸುಕ್ಕು ಗಟ್ಟುವುದು, ನೆರಿಗೆಗಳನ್ನು ಹೋಗಲಾಡಿಸಿ ಯೌವನವನ್ನು ತಂದುಕೊಡುತ್ತದೆ. ಇದರಲ್ಲಿನ ವಿಟಮಿನ್ ಸಿ ಚರ್ಮದ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಇದು ದೇಹದಲ್ಲಿನ ನೀರಿನಾಂಶವನ್ನು ಕಾಪಾಡುತ್ತದೆ.

ಕಪ್ಪುಕಲೆಗಳ ನಿವಾರಣೆ

ಕಪ್ಪುಕಲೆಗಳ ನಿವಾರಣೆ

ಬೇಸಿಗೆಯಲ್ಲಿ ಎಣ್ಣೆ ಚರ್ಮವನ್ನು ಹೊಂದಿರುವವರಲ್ಲಿ ದೇಹದಲ್ಲಿ ಉಂಟಾಗುವ ಜಿಡ್ಡಿನಿಂದಾಗಿ ಕಪ್ಪು ಕಲೆಗಳು ಸೃಷ್ಟಿಯಾಗುತ್ತದೆ. ಇದರ ನಿವಾರಣೆಗಾಗಿ ಮಾವಿನ ತಿರುಗಳನ್ನು ತೆಗೆದು ಅದನ್ನು ಅರ್ಧಚಮಚ ಹಾಲು ಹಾಗೂ ಅರ್ಧ ಚಮಚ ಜೇನಿನೊಂದಿಗೆ ಬೆರೆಸಿ ಮುಖದ ಮೇಲೆ ಸ್ಕ್ರಬ್ ಮಾಡಿದರೆ ಫಲಿತಾಂಶವನ್ನು ನೀವೇ ನೋಡಬಹುದು.

ಚರ್ಮವನ್ನು ಶುಚಿಗೊಳಿಸುವುದು

ಚರ್ಮವನ್ನು ಶುಚಿಗೊಳಿಸುವುದು

ಚರ್ಮವನ್ನು ಶುಚಿಗೊಳಿಸಲು ನೀವು ಯಾವುದೇ ರೀತಿಯ ರಾಸಾಯನಿಕವನ್ನು ಬಳಸುತ್ತಿದ್ದರೆ ಅದನ್ನು ಈಗಲೇ ಬಿಡಿ ಮತ್ತು ಮಾವಿನ ಹಣ್ಣನ್ನು ಬಳಸಿಕೊಳ್ಳಿ. ಮಾವಿನ ಹಣ್ಣಿನ ಸ್ವಲ್ಪ ತಿರುಳು ಹಾಗೂ ಹಿಟ್ಟಿನಿಂದ ಚರ್ಮವನ್ನು ಶುಚಿಗೊಳಿಸಿ ಆಗ ಚರ್ಮದಲ್ಲಿನ ಕಲೆಗಳು, ಸತ್ತಕೋಶಗಳ ನಿವಾರಣೆಯಾಗಿ ಚರ್ಮವು ಹೊಳಪನ್ನು ಪಡೆಯುವುದು.

ಸೂಕ್ಷ್ಮ ಚರ್ಮಕ್ಕೆ ಅತ್ಯುತ್ತಮ ಚಿಕಿತ್ಸೆ

ಸೂಕ್ಷ್ಮ ಚರ್ಮಕ್ಕೆ ಅತ್ಯುತ್ತಮ ಚಿಕಿತ್ಸೆ

ಕೆಲವರಿಗೆ ಚರ್ಮಕ್ಕೆ ಏನು ಬಳಸಿದರೂ ಅದರಿಂದ ಏನಾದರೂ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಇಂತಹ ಸಮಸ್ಯೆಯಿರುವವರು ಮಾವಿನ ಹಣ್ಣನ್ನು ಧಾರಾಳವಾಗಿ ಬಳಸಬಹುದು. ಮಾವಿನ ಹಣ್ಣಿನ ತಿರುಳು, ಹಾಲು, ಜೇನು ಮತ್ತು ಓಟ್ ಮೀಲ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಇದನ್ನು ಮುಖದ ಮೇಲೆ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

English summary

How Mangoes Are Good For Your Skin

Summer is here with all its irritation, suntan, dehydration, allergies and a lot of other skin problems. The only good thing about summer is its basket of fruits. When it comes to you in golden chariot and burns everything wherever it looks, it brings the abundance of fruits which is its only blessing. So, read on to know more about how mangoes benefit the skin.
X
Desktop Bottom Promotion