For Quick Alerts
ALLOW NOTIFICATIONS  
For Daily Alerts

ಕಾಂತಿಯುಕ್ತ ತ್ವಚೆಗೆ ಸಿಂಪಲ್ ಆಯುರ್ವೇದ ಟಿಪ್ಸ್

ಕಾಂತಿಯುತ ಹಾಗೂ ಹೊಳೆಯುವ ಚರ್ಮವನ್ನು ಪಡೆಯಲು ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲು ನೈಸರ್ಗಿಕದತ್ತ ಪದಾರ್ಥಗಳಿಂದ ತಯಾರಿಸಿದ ಮನೆಮದ್ದನ್ನು ಬಳಸುವುದು ಸೂಕ್ತ...

By Hemanth
|

ಆಯುರ್ವೇದದ ಮೂಲಕ ತ್ವಚೆಯ ಆರೈಕೆ ಮಾಡಬಹುದು. ತ್ವಚೆಯನ್ನು ಸ್ವಚ್ಛ ಮಾಡುವುದು, ಸತ್ತ ಚರ್ಮವನ್ನು ತೆಗೆದುಹಾಕಬಹುದು ಮತ್ತು ತೇವಾಂಶವನ್ನು ನೀಡಬಹುದು. ತ್ವಚೆಯ ವಿಶೇಷ ಆರೈಕೆಯಲ್ಲಿ ಆಯುರ್ವೇದವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮುಖದ ಫೇಶಿಯಲ್ ಹಾಗೂ ಚರ್ಮದ ಆರೈಕೆಗೆ ಆಯುರ್ವೇದವು ತುಂಬಾ ಒಳ್ಳೆಯದಾಗಿದೆ. ಇದು ಹೇಗೆಂದು ಮುಂದೆ ತಿಳಿಯಿರಿ. ಬ್ಯೂಟಿ ಟಿಪ್ಸ್: ಸುಂದರ ಮೈಕಾಂತಿಗೆ ಆಯುರ್ವೇದ ಚಿಕಿತ್ಸೆ

*ಹಾಲಿಗೆ ಅರಿಶಿನ ಮತ್ತು ಗಂಧದ ಹುಡಿಯನ್ನು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಐದು ನಿಮಿಷ ಬಿಟ್ಟು ತೊಳೆಯಿರಿ. ಚರ್ಮದ ತಾಜಾತನಕ್ಕೆ ಇರಲಿ ತೆಂಗಿನ ಹಾಲು

*ಕಿತ್ತಳೆ ಸಿಪ್ಪೆಯನ್ನು ಬೆಣ್ಣೆ ಹಾಗೂ ಹಾಲಿನೊಂದಿಗೆ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಕೆಲವು ನಿಮಿಷ ಕಾಲ ಮುಖಕ್ಕೆ ಹಚ್ಚಿಕೊಂಡು ಬಳಿಕ ಬಿಸಿ ನೀರಿನಿಂದ ತೊಳೆಯಿರಿ.

face pack

*ಒಂದು ಮಿಕ್ಸಿ ಜಾರಿಗೆ ಮೊಸರು, ಕಿವಿ ಹಣ್ಣು, ಒಂದು ಚಮಚ ಬಾದಾಮಿ ಎಣ್ಣೆ, ಮತ್ತು ಒಂದು ಚಮಚ ಜೇನುತುಪ್ಪ ಹಾಕಿಕೊಳ್ಳಿ. ಬಾದಾಮಿಯ ಹುಡಿ ಹಾಕಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಬಿಸಿ ಒದ್ದೆ ಬಟ್ಟೆಯಿಂದ ಇದನ್ನು ತೆಗೆಯಿರಿ.

ಮನೆಯಲ್ಲೇ ತಯಾರಿಸುವ ಮಾಯಿಶ್ಚರೈಸರ್
*ಒಂದು ಚಮಚ ರೊಸ್ ವಾಟರ್, ಕಿತ್ತಳೆ ಜ್ಯೂಸ್, ಲಿಂಬೆ ರಸ, ಆಲಿವ್ ಎಣ್ಣೆ ಮತ್ತು ಒಂದು ಮೊಟ್ಟೆಯ ಬಿಳಿ ಲೋಳೆ ಮಿಶ್ರಣದಿಂದ ಮಾಸ್ಕ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಮೊಡವೆ ಮರೆಮಾಚಲು- ಮೊಟ್ಟೆಯ ಬಿಳಿಲೋಳೆಯ ಮಾಸ್ಕ್!

* ಹುಡಿ ಮಾಡಿದಂತಹ ಜೇನುಮೇಣ ನಾಲ್ಕು ಔನ್ಸ್ ದ್ರಾಕ್ಷಿ ಬೀಜದ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನು ಹಾಕಿಕೊಂಡು ಬಿಸಿ ಮಾಡಿ. ಇದು ಕರಗುವ ತನಕ ಬಿಸಿ ಮಾಡಿ ಮತ್ತು ತೆಗೆದಿಟ್ಟುಕೊಳ್ಳಿ. ಅರ್ಧ ಕಪ್ ಓಟ್ಸ್ ಅನ್ನು ನೀರಿಗೆ ಹಾಕಿಕೊಂಡು ಹತ್ತು ನಿಮಿಷ ಕಾಲ ನೆನೆಸಿ. ಓಟ್ಸ್ ನೆನೆಸಿದ ನೀರನ್ನು ತೆಗೆಯಿರಿ ಮತ್ತು ಇದನ್ನು ಅರ್ಧ ಕಪ್ ಗ್ರೀನ್ ಟೀ ಜತೆ ಸೇರಿಸಿಕೊಳ್ಳಿ.

*ಬ್ಲೆಂಡರ್ ಅನ್ನು ಆನ್ ಮಾಡಿ ಇದಕ್ಕೆ ಎಣ್ಣೆಯನ್ನು ಬೆರೆಸಿಕೊಳ್ಳಿ. ಬಳಿಕ ಗ್ರೀನ್ ಟೀ ಮಿಶ್ರಣವನ್ನು ಇದಕ್ಕೆ ಹಾಕಿ. ಬ್ಲೆಂಡರ್ ತನ್ನಷ್ಟಕ್ಕೆ ನಿಲ್ಲುವ ತನಕ ಅದು ತಿರುಗುತ್ತಿರಲಿ. ಈಗ ಪೇಸ್ಟ್ ಅನ್ನು ತೆಗೆದು ಪ್ರಿಡ್ಜ್ ನಲ್ಲಿಡಿ. ಬೇಕಾದಾಗ ತೆಗೆದು ಮಾಯಿಶ್ಚರೈಸ್ ಮಾಡಿಕೊಳ್ಳಿ. ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ ಗ್ರೀನ್ ಟೀ ಫೇಸ್ ಪ್ಯಾಕ್

English summary

Home Remedies for Beauty, Skin Care and Facial Glow

An Ayurvedic skin care regimen includes procedures for cleansing, toning, exfoliating, and moisturizing the skin. Ayurveda also has special formulas to help with specific skin care problems, such as eye treatments and special techniques for facial massage.
X
Desktop Bottom Promotion