Latest Updates
-
ಯುಗಾದಿ ಹಬ್ಬದ ಸಿಹಿಗೆ ಮಾಡಿ ರವೆ ಉಂಡೆ: ಇಲ್ಲಿದೆ ಸುಲಭದ ವಿಧಾನ -
ಕುಂಭ ರಾಶಿಯಲ್ಲಿ ಅಪರೂಪದ ಮಹಾಲಕ್ಷ್ಮಿ ಯೋಗ: ಈ ರಾಶಿಯವರ ಹಣ, ಸಂಪತ್ತು ವೃದ್ಧಿಗೆ ಶುಭ ಸಮಯ! -
ಬ್ರೇಕ್ಫಾಸ್ಟ್ಗೆ ಮಸಾಲೆ ವಾಂಗೀಬಾತ್ ಮಾಡಿ: ಇಲ್ಲಿದೆ ಸುಲಭದ ವಿಧಾನ -
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ! -
ಎರಡು ಹೊತ್ತು ಸವಿಯಬಹುದಾದ ಕಾಬೂಲ್ ಕಡ್ಲೆ ಕುಷ್ಕ! ಥಟ್ ಅಂತ ರೆಡಿ ಮಾಡಬಹುದು -
ಮಂಗಳ-ಗುರು ಸಂಯೋಗದಿಂದ ಕಾದಿಗೆ ಅಪರೂಪದ ಯೋಗ: ಈ ಮೂರು ರಾಶಿಯವರ ಜೀವನದಲ್ಲಿ ಶುಭಯೋಗ! -
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಬ್ಯೂಟಿ ಟಿಪ್ಸ್: ಸುಂದರ ಮೈಕಾಂತಿಗೆ ಆಯುರ್ವೇದ ಚಿಕಿತ್ಸೆ
ನಾಲ್ಕು ಜನರ ಮುಂದೆ ಸುಂದರವಾಗಿ ಕಾಣಬೇಕು. ಅವರು ತನ್ನ ಸೌಂದರ್ಯ ಹಾಗೂ ತ್ವಚೆಯನ್ನು ಪ್ರಶಂಸಿಸಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಇದು ಹೆಚ್ಚು. ಇದಕ್ಕಾಗಿ ಕಂಪನಿಗಳು ಕೂಡ ಹಲವಾರು ರೀತಿಯ ಸೌಂದರ್ಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುತ್ತಲೇ ಇರುತ್ತದೆ. ಹೊಸ ಹೊಸ ಕ್ರೀಮ್‌ಗಳ ಬಗ್ಗೆ ಜಾಹೀರಾತು ಕೂಡ ನೋಡುತ್ತಾ ಇರುತ್ತೇವೆ. ಆದರೆ ಇದರಲ್ಲಿ ಇರುವಂತಹ ರಾಸಾಯನಿಕಗಳ ಬಗ್ಗೆನಮಗೆ ತಿಳಿದೇ ಇರುವುದಿಲ್ಲ.
ಇಂತಹ ಕ್ರೀಮ್‌ಗಳು ಕೆಲವು ದಿನಗಳವರೆಗೆ ಮೈಕಾಂತಿಯನ್ನು ನೀಡಿದರೂ ಬಳಿಕ ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಉಂಟಾಗುತ್ತದೆ. ಆಯುರ್ವೇದದಲ್ಲಿ ಹೇಳಲಾಗಿರುವಂತಹ ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಒಳ್ಳೆಯ ಮೈಕಾಂತಿಯನ್ನು ಪಡೆಯಬಹುದಾಗಿದೆ. ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಬಲ್ಲ ಕೆಲವೊಂದು ಆಯುರ್ವೇದಿಕ್ ಮನೆಮದ್ದಿನ ಬಗ್ಗೆ ಬೋಲ್ಡ್ ಸ್ಕೈ ಇಂದು ನಿಮಗೆ ಹೇಳಿಕೊಡಲಿದೆ. ಇದನ್ನು ಪರೀಕ್ಷಿಸಿ ನೋಡಿ.

ಅರಿಶಿನ
ಹಲವಾರು ಆರೋಗ್ಯ ಗುಣಗಳನ್ನು ಹೊಂದಿರುವ ಅರಶಿನವು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ ಮತ್ತು ಇದು ತ್ವಚೆಯ ಕಾಂತಿ ವೃದ್ಧಿಸುವುದು. ಚರ್ಮದ ಸಮಸ್ಯೆಗಳಾಗಿರುವ ಮೊಡವೆ, ಕಲೆ ಮತ್ತು ಚರ್ಮದ ಬಣ್ಣ ಮಾಸಿದ್ದರೆ ಇದು ಒಳ್ಳೆಯ ಮದ್ದಾಗಿದೆ. ಸರ್ವಗುಣ ಸಂಪನ್ನ ಅರಿಶಿನ ಎಂಬ ಸಂಜೀವಿನಿ
ಅರಿಶಿನಬಳಸುವುದು ಹೇಗೆ?
ಅರಿಶಿನ ಹಾಗೂ ಹಾಲನ್ನು ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಳ್ಳಿ. ಕಾಲು ಹಾಗೂ ಕೈಗಳಿಗೆ ಇದನ್ನು ಬಳಸಬಹುದು. ನಿಯಮಿತವಾಗಿ ಬಳಸಿದರೆ ಚರ್ಮದಲ್ಲಿ ಕಾಂತಿಯನ್ನು ಪಡೆಯುತ್ತೀರಿ.
ಅಲೋವೆರಾ (ಲೋಳೆಸರ)
ಆಯುರ್ವೇದದಲ್ಲಿ ಅಲೋವೆರಾವನ್ನು ಘರ್ತಿಕುಮಾರಿ ಎಂದು ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಚರ್ಮದ ಆರೈಕೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಇದು ಚರ್ಮವನ್ನು ಶಮನಗೊಳಿಸಿ ಪುನರುಜ್ಜೀವನಗೊಳಿಸುವುದು ಮಾತ್ರವಲ್ಲದೆ ನೈಸರ್ಗಿಕವಾಗಿ ಬಣ್ಣವನ್ನು ನೀಡುವುದು. ಬಹುಪಯೋಗಿ ಲೋಳೆಸರದ ಲಾಭಗಳು ಒಂದೇ, ಎರಡೇ?

ಅಲೋವೆರಾ ಬಳಸುವ ವಿಧಾನ
ಅಲೋವೆರಾ ಮತ್ತು ಕ್ರೀಮ್ ನ ಒಂದು ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಒಂದು ಹಿಡಿ ಅರಶಿನ ಹಾಕಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಅಲೋವೆರಾ ಜೆಲ್ ನಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ಕಾಂತಿಯನ್ನು ನೀಡುವುದು ಮತ್ತು ಕ್ರೀಮ್ ಚರ್ಮಕ್ಕೆ ತೇವಾಂಶವನ್ನು ನೀಡುವುದು.
ಕೇಸರಿ
ಭಾರತೀಯರು ಹಲವಾರು ಶತಮಾನಗಳಿಂದಲೂ ಕೇಸರಿಯನ್ನು ಅಡುಗೆ ಹಾಗೂ ಇನ್ನಿತರ ರೂಪಗಳಲ್ಲಿ ಬಳಸುತ್ತಾ ಇದ್ದಾರೆ. ಅತ್ಯಂತ ದುಬಾರಿಯಾಗಿರುವ ಕೇಸರಿಯನ್ನು ಹಿಂದಿನ ಕಾಲದಲ್ಲಿ ರಾಣಿಯರು ತಮ್ಮ ತ್ವಚೆಯ ಕಾಂತಿಗೆ ಬಳಸುತ್ತಿದ್ದರು. ಕೇಸರಿಯ ಕೆಲವೊಂದು ಎಸಲುಗಳನ್ನು ಬಳಸಿದರೆ ಅದು ತ್ವಚೆಯ ಹೊಳಪನ್ನು ಹೆಚ್ಚಿಸುವುದು. ಕೇಸರಿಯ ರಹಸ್ಯ: ಕಣ ಕಣದಲ್ಲೂ ಸೌಂದರ್ಯದ ಶಕ್ತಿ!

ಬಳಸುವ ವಿಧಾನ
ರಾತ್ರಿ ಕೆಲವು ಎಸಲು ಕೇಸರಿಯನ್ನು ನೆನೆಸಿಡಿ. ಬೆಳಿಗ್ಗೆ ಇದನ್ನು ಆಲಿವ್ ಎಣ್ಣೆ ಅಥವಾ ಹಾಲಿನೊಂದಿಗೆ ಬೆರೆಸಿ. ಹತ್ತಿಯ ಉಂಡೆ ಬಳಸಿಕೊಂಡು ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಳಿಕ ಮುಖ ತೊಳೆಯಿರಿ. 2-3 ವಾರದಲ್ಲಿ ಕಾಂತಿಯುತ ಹಾಗೂ ಹೊಳೆಯುವ ತ್ವಚೆಯು ನಿಮ್ಮದಾಗಲಿದೆ.



Click it and Unblock the Notifications











