For Quick Alerts
ALLOW NOTIFICATIONS  
For Daily Alerts

ಮೊಡವೆ ಮರೆಮಾಚಲು- ಮೊಟ್ಟೆಯ ಬಿಳಿಲೋಳೆಯ ಮಾಸ್ಕ್!

|

ಪ್ರತಿಯೊಬ್ಬರು 'ನಾನು ಅಂದವಾಗಿ ಕಾಣಬೇಕು' ಎಂದು ಆಸೆ ಪಡುವುದು ಸಹಜ. ಅಂದವಾಗಿ ಕಾಣಿಸಲು ಡ್ರೆಸ್ಸಿಂಗ್ ಚೆನ್ನಾಗಿರಬೇಕು, ಮೇಕಪ್ ಮಾಡಬೇಕು ಇವೆಲ್ಲಾ ನಿಜ. ಆದರೆ ಇವೆಲ್ಲಾಕ್ಕಿಂತ ಹೆಚ್ಚಾಗಿ ತ್ವಚೆ ಅಕರ್ಷಕವಾಗಿರಬೇಕು. ತ್ವಚೆ ಅಂದವಾಗಿ ಕಾಂತಿಯುತವಾಗಿದ್ದರೆ ಪ್ರತಿಯೊಬ್ಬರು ನಮ್ಮ ಸೌಂದರ್ಯವನ್ನು ಹಾಡಿ ಹೊಗಳುತ್ತಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಆದರೆ ಹೆಚ್ಚಿನವರಿಗೆ ಮುಖದಲ್ಲಿ ಮೂಡುವಂತಹ ಮೊಡವೆ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಕೆಲವೊಮ್ಮೆ ಇದರಿಂದ ಹೊರಬರಲು ಏನೇನೋ ಪ್ರಯತ್ನ ಮಾಡಿದರೂ ಅದರಲ್ಲಿ ಯಶಸ್ವಿಯಾಗದೇ ನಿರಾಸೆ ಅನುಭವಿಸುತ್ತಾರೆ. ಹಾಗೆಂದು ಕೈಕಟ್ಟಿ ಕುಳಿತುಕೊಂಡರೆ ಮುಖದಲ್ಲಿನ ಮೊಡವೆಗಳು ಹಾಗೆ ಉಳಿದುಕೊಳ್ಳುತ್ತದೆ! ಹಾಗಾಗಿ ಇವೆಲ್ಲಾ ಸಮಸ್ಯೆಯಿಂದ ಮುಕ್ತಿ ಹೊಂದಲು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಮೊಡವೆಯನ್ನು ಹೋಗಲಾಡಿಸಬಹುದು. ಹದಿಹರೆಯದಲ್ಲಿ ಕಾಡುವ ಮೊಡವೆಗೆ ಅದ್ಭುತ ಜ್ಯೂಸ್

ಸಾಮಾನ್ಯವಾಗಿ ಮೊಡವೆಗಳಿವೆ ಪ್ರಮುಖ ಕಾರಣವೆಂದರೆ ಒತ್ತಡ, ಹಾರ್ಮೋನು ಅಸಮತೋಲನ ಮತ್ತು ಸ್ವಚ್ಛತೆಯ ಕೊರತೆ. ಮನೆಮದ್ದನ್ನು ಬಳಸಿಕೊಂಡು ಮೊಡವೆಯನ್ನು ದೂರವಿಟ್ಟು ಮುಖವು ಕಾಂತಿಯುತವಾಗಿ ಹೊಳೆಯುವಂತೆ ಮಾಡಬಹುದಾಗಿದೆ. ಮೊಡವೆಗಳನ್ನು ಪರಿಣಾಮಕಾರಿಯಾಗಿ ಹೋಗಲಾಡಿಸಲು ಮೊಟ್ಟೆಯ ಬಿಳಿಭಾಗ ತುಂಬಾ ಪರಿಣಾಮಕಾರಿ ಮನೆಮದ್ದು.

ವಿಟಮಿನ್ ಬಿ2 ನ್ನು ಹೊಂದಿರುವ ಮೊಟ್ಟೆಯ ಬಿಳಿ ಭಾಗವು ಮೊಡವೆಗಳನ್ನು ಗುಣಪಡಿಸಿ, ಕಡಿಮೆ ಮಾಡುತ್ತದೆ. ಮೊಡವೆ ಮತ್ತು ಅದರಿಂದ ಆಗಿರುವ ಗಾಯಗಳಿಂದ ಮುಕ್ತಿ ಪಡೆಯಲು ಮೊಟ್ಟೆಯ ಬಿಳಿಭಾಗವನ್ನು ಯಾವ ರೀತಿ ಬಳಸಬಹುದು ಎನ್ನುವುದನ್ನು ನಾವಿಲ್ಲಿ ತಿಳಿದುಕೊಳ್ಳುವ.

 ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆ

ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆ

ಮೊಡವೆ ಮತ್ತು ಎಣ್ಣೆಯಂಶವಿರುವ ತ್ವಚೆಗೆ ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆ ಅತ್ಯುತ್ತಮ ಮಿಶ್ರಣ. ಇದು ಮೊಡವೆಗಳನ್ನು ನಿವಾರಿಸುವುದು ಮಾತ್ರವಲ್ಲದೆ ಮುಖದಲ್ಲಿನ ಕಲೆಗಳನ್ನು ನಿವಾರಿಸುತ್ತದೆ. ಮೊಟ್ಟೆಯನ್ನು ಒಡೆದು ಅದರ ಬಿಳಿಭಾಗವನ್ನು ಹಳದಿಯಿಂದ ಬೇರ್ಪಡಿಸಿ. ಮುಂದೆ ಓದಿ

 ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆ

ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆ

ಕೆಲವು ಹನಿ ಲಿಂಬೆ ರಸವನ್ನು ಮೊಟ್ಟೆಯ ಬಿಳಿಭಾಗದೊಂದಿಗೆ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿ. ಇದನ್ನು 30 ನಿಮಿಷಗಳ ಕಾಲ ಹಾಗೆ ಬಿಟ್ಟು ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮೊದಲು ಮುಖ ತೊಳೆದು, ಬಳಿಕ ಅಂತಿಮವಾಗಿ ತಂಪಾದ ನೀರಿನಿಂದ ಮುಖ ತೊಳೆದರೆ ಆಗ ಚರ್ಮದ ರಂಧ್ರಗಳು ಅಲ್ಲೇ ಗಟ್ಟಿಯಾಗುತ್ತದೆ.

ಮೊಟ್ಟೆ ಬಿಳಿ ಭಾಗ, ಜೇನು ಮತ್ತು ಲಿಂಬೆ

ಮೊಟ್ಟೆ ಬಿಳಿ ಭಾಗ, ಜೇನು ಮತ್ತು ಲಿಂಬೆ

ಈ ಮಿಶ್ರಣವು ಚರ್ಮವನ್ನು ಗಟ್ಟಿಗೊಳಿಸಲು, ಕಾಂತಿಯುತವಾಗಿಸಲು ಮತ್ತು ಚರ್ಮದ ರಂಧ್ರಗಳನ್ನು ಸಣ್ಣದು ಮಾಡಲು ನೆರವಾಗುತ್ತದೆ. ಮೊಟ್ಟೆಯ ಬಿಳಿಭಾಗದಲ್ಲಿರುವ ಲೈಸೋಝೈಂ ಎನ್ನುವ ಕಿಣ್ವವು ಮೊಡವೆಗಳನ್ನು ಉಂಟುಮಾಡುವಂತಹ ಕೀಟಾಣುಗಳನ್ನು ನಾಶ ಮಾಡುತ್ತದೆ. ಜೇನು, ಲಿಂಬೆರಸ ಮತ್ತು ಮೊಟ್ಟೆಯ ಬಿಳಿ ಭಾಗವನ್ನು ಒಳಗೊಂಡ ಫೇಸ್ ಮಾಸ್ಕ್ ನ್ನು ಹಾಕಿಕೊಂಡರೆ ಅದು ಮುಖದಲ್ಲಿನ ಅತಿಯಾದ ಎಣ್ಣೆಯಂಶವನ್ನು ತಡೆಗಟ್ಟುತ್ತದೆ ಮತ್ತು ಇದರಿಂದ ಮೊಡವೆಗಳು ಕಡಿಮೆಯಾಗುತ್ತದೆ.

ಮೊಟ್ಟೆ ಬಿಳಿ ಭಾಗ, ಜೇನು ಮತ್ತು ಲಿಂಬೆ

ಮೊಟ್ಟೆ ಬಿಳಿ ಭಾಗ, ಜೇನು ಮತ್ತು ಲಿಂಬೆ

ಒಂದು ಮೊಟ್ಟೆಯನ್ನು ಒಡೆದು ಅದರ ಹಳದಿಯಿಂದ ಬಿಳಿಯನ್ನು ಬೇರ್ಪಡಿಸಿ. ಒಂದು ಚಮಚ ಜೇನು ಮತ್ತು ಕೆಲವು ಹನಿ ಲಿಂಬೆ ರಸವನ್ನು ಮೊಟ್ಟೆಯ ಬಿಳಿಭಾಗಕ್ಕೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷಗಳ ಕಾಲ ಹಾಗೆ ಬಿಡಿ, ಸ್ವಲ್ಪ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದ ಬಳಿಕ ಅಂತಿಮವಾಗಿ ತಂಪಾದ ನೀರಿನಿಂದ ಮುಖ ತೊಳೆಯಿರಿ.

ಅರಿಶಿನ, ಕಿತ್ತಳೆ ಜ್ಯೂಸ್ ಮತ್ತು ಮೊಟ್ಟೆಯ ಬಿಳಿಭಾಗ

ಅರಿಶಿನ, ಕಿತ್ತಳೆ ಜ್ಯೂಸ್ ಮತ್ತು ಮೊಟ್ಟೆಯ ಬಿಳಿಭಾಗ

ಮೊಡವೆಗಳಿಂದ ಉಂಟಾಗಿರುವಂತಹ ಗಾಯಗಳನ್ನು ನಿವಾರಿಸುವಲ್ಲಿ ಈ ಮಿಶ್ರಣವು ಅದ್ಭುತವಾಗಿ ಕೆಲಸ ಮಾಡುತ್ತದೆ. ಒಂದು ಸಣ್ಣ ಪಿಂಗಾಣಿಗೆ ಕಿತ್ತಳೆ ಜ್ಯೂಸ್ ಹಾಕಿ ಮತ್ತು ಅದಕ್ಕೆ ಒಂದು ಮೊಟ್ಟೆಯ ಬಿಳಿ ಭಾಗ ಹಾಗೂ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಇದು ಕಪ್ಪು ಕಲೆಗಳನ್ನು ನಿವಾರಿಸಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಮೊಟ್ಟೆಯ ಬಿಳಿಭಾಗ, ಜೇನು ಮತ್ತು ದಾಲ್ಚಿನ್ನಿ

ಮೊಟ್ಟೆಯ ಬಿಳಿಭಾಗ, ಜೇನು ಮತ್ತು ದಾಲ್ಚಿನ್ನಿ

ಇದು ಚರ್ಮವನ್ನು ಸ್ವಚ್ಛಗೊಳಿಸಿ, ಪದರಪದರವಾಗಿ ಸುಲಿದು ಹೋಗುವಂತೆ ಮಾಡಲು ನೆರವಾಗುತ್ತದೆ. ಒಂದು ಚಮಚ ಜೇನಿನೊಂದಿಗೆ ಎರಡು ಮೊಟ್ಟೆಗಳ ಬಿಳಿಭಾಗ ಹಾಗೂ ಪುಡಿ ಮಾಡಿದ ದಾಲ್ಚಿನ್ನಿ ಚಕ್ಕೆಯನ್ನು ಹಾಕಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು 30 ನಿಮಿಷಗಳ ಕಾಲ ಹಾಗೆ ಬಿಡಿ. ಬಳಿಕ ತಂಪಾದ ನೀರಿನಲ್ಲಿ ಮುಖವನ್ನು ತೊಳೆಯಿರಿ.

English summary

Ways To Use Egg White To Treat Acne And Acne Scars

Some reasons for acne are stress, hormonal imbalance and improper hygiene. By following simple home remedies, one can keep acne and pimples at bay and attain clear and glowing skin. Egg white is one of those remedies which is used to treat acne and pimples effectively. It works great for acne.
Story first published: Wednesday, August 19, 2015, 17:52 [IST]
X
Desktop Bottom Promotion