For Quick Alerts
ALLOW NOTIFICATIONS  
For Daily Alerts

ಚರ್ಮದ ತಾಜಾತನಕ್ಕೆ ಇರಲಿ ತೆಂಗಿನ ಹಾಲು

By Su.Ra
|

ಪ್ರತಿ ಹೆಣ್ಣಿಗೂ ತಾನು ಸೌಂದರ್ಯವತಿಯಾಗಿರಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಹಾಗಾಗಿ ಆಕೆ ಇನ್ನಿಲ್ಲದ ಕಸರತ್ತು ಮಾಡ್ತಲೇ ಇರ್ತಾಳೆ. ಆದ್ರೆ ತನ್ನ ಕಣ್ಣೆದುರೇ ಇರುವ ಕೆಲವು ಪದಾರ್ಥಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿ ಬಿಡ್ತಾರೆ. ಹಾಗಾಗಿ ನಿಮ್ಮ ವಿಫಲತೆಯನ್ನು ದೂರ ಮಾಡಿ ನಿಮ್ಮ ಸೌಂದರ್ಯ ಹೆಚ್ಚಿಸುವ ಕೆಲ್ಸಕ್ಕೆ ನಾವು ಕೂಡ ಕೈ ಜೋಡಿಸ್ತಾ ಇದ್ದೇವೆ,. ಅದಕ್ಕಾಗಿ ಕೆಲವು ಸಿಂಪಲ್ ಸಲಹೆ ಸೂತ್ರಗಳು ಇಲ್ಲಿವೆ. ಅದ್ರಲ್ಲೂ ಪ್ರಮುಖವಾಗಿ ನಾವೀಗ ತಿಳಿಸ್ತಾ ಇರೋದು ತೆಂಗಿನ ಹಾಲಿನ ವಿಶೇಷ ಸತ್ವ ಮತ್ತು ಅವುಗಳಿಂದ ತಯಾರಿಸಿಕೊಳ್ಳಬಹುದಾದ ಸೌಂದರ್ಯವರ್ಧಕಗಳ ಬಗ್ಗೆ..

ತೆಂಗಿನ ಹಾಲನ್ನು ಅದರ ಸೌಂದರ್ಯವರ್ಧಕ ಗುಣದಿಂದಾಗಿ ಅನೇಕ ಬ್ಯೂಟಿ ಪ್ರೊಡಕ್ಟ್ ಗಳಲ್ಲಿ ಬಳಕೆ ಮಾಡಲಾಗುತ್ತೆ. ನಮ್ಮ ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ಅನೇಕ ಬ್ಯೂಟಿ ಪ್ರೊಡಕ್ಟ್ ಗಳಲ್ಲಿ ತೆಂಗಿನ ಹಾಲನ್ನು ಬಳಕೆ ಮಾಡ್ಬಹುದು. ನೈಸರ್ಗಿಕವಾಗಿ ಚರ್ಮಕ್ಕೆ ಕಾಂತಿ ನೀಡುವ ಸಾಮರ್ಥ್ಯ ತೆಂಗಿನ ಹಾಲಿಗಿದೆ. ಸೂರ್ಯನ ವಿಕಿರಣಗಳಿಂದಾದ ಹಾನಿಯನ್ನು ತಪ್ಪಿಸುವ ಗುಣ ಕೂಡ ತೆಂಗಿನ ಹಾಲಿಗಿದೆ. ತೆಂಗಿನ ಹಾಲು ಅನಾದಿ ಕಾಲದಿಂದಲೂ ದಕ್ಷಿಣ ಭಾರತದವ್ರು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಳಸ್ತಾ ಇದ್ದಾರೆ..

ತೆಂಗಿನ ಹಾಲಿನ ಮಾಯಿಶ್ಚರೈಸರ್

ತೆಂಗಿನ ಹಾಲಿನ ಮಾಯಿಶ್ಚರೈಸರ್

ನಿಮ್ಮ ಚರ್ಮ ಡ್ರೈ ಆಗಿದ್ದು, ಯಾವಾಗ್ಲೂ ಸ್ಕ್ರಾಚಸ್ ನಿಂದ ಕೂಡಿರುತ್ತಾ? ಅದ್ರಲ್ಲೂ ಚಳಿಗಾಲದಲ್ಲಿ ಸ್ವಲ್ಪ ಅಧಿಕವೇ ಎಂಬಂತೆ ಕಿರಿಕಿರಿಯಾಗ್ತಾ ಇದ್ಯಾ? ಹಾಗಾದ್ರೆ ಸಮಪ್ರಮಾಣದಲ್ಲಿ ತೆಂಗಿನ ಹಾಲು ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ. ಅದಕ್ಕೆ ಎರಡು ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ರಿಂದ 20 ನಿಮಿಷ ಹಾಗೆಯೇ ಬಿಡಿ. ಡ್ರೈ ಆಗಲು ಬಿಡಬೇಡಿ. ಬದಲಾಗಿ ಆಗಾಗ ಮಸಾಜ್ ಮಾಡಿಕೊಳ್ತಾ ಇರಿ. ನಂತ್ರ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ..ಖಂಡಿತವಾಗ್ಲೂ ನಿಮ್ಮ ಇರಿಟೇಟಿಂಗ್ ಡ್ರೈ ಸ್ಕಿನ್ ನಿವಾರಣೆಯಾಗಿ, ಸ್ಮೂತ್ ಚರ್ಮವನ್ನು ಪಡೆದುಕೊಳ್ಳಬಹುದು.

ತೆಂಗಿನ ಹಾಲಿನ ಕ್ಲೆನ್ಸರ್

ತೆಂಗಿನ ಹಾಲಿನ ಕ್ಲೆನ್ಸರ್

ಮನೆಯಲ್ಲಿ ಇರಿಸಿದ್ದ ಕ್ಲೆನ್ಸಿಂಗ್ ಮಿಲ್ಕ್ ಖಾಲಿಯಾಗಿದೆ, ಏನ್ ಮಾಡೋದು ಅಂತ ನೀವು ಯೋಚಿಸ್ತಾ ಇದ್ರೆ ತೆಂಗಿನ ಹಾಲು ನಿಮ್ಮ ಬೆಸ್ಟ್ ಕ್ಲೆನ್ಸರ್ ಆಗಬಲ್ಲದು. ನೈಸರ್ಗಿಕವಾಗಿ ಚರ್ಮವನ್ನು ಕ್ಲೆನ್ಸ್ ಮಾಡುವ ಸಾಮರ್ಥ್ಯ ತೆಂಗಿನ ಹಾಲಿಗಿದ್ದು, ಮಾಯ್ಚರೈಸರನ್ನು ನಿಮ್ಮ ಮುಖದಲ್ಲಿ ಬ್ಯಾಲೆನ್ಸ್ ಮಾಡಲು ಸಹಕಾರಿಯಾಗಿದೆ. ಒಂದು ಟೇಬಲ್ ಸ್ಪೂನ್ ನಷ್ಟು ಗಟ್ಟಿಮೊಸರನ್ನು ತೆಂಗಿನಹಾಲಿಗೆ ಮಿಕ್ಸ್ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಐದರಿಂದ ಹತ್ತು ನಿಮಿಷ ಮುಖವನ್ನು ಉಜ್ಜಿಕೊಂಡು ನಂತ್ರ ಕಾಟನ್ ಬಟ್ಟೆಯಿಂದ ಮುಖವನ್ನು ಒರೆಸಿ, ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ.

ಮೇಕಪ್ ರಿಮೂವ್ ಮಾಡಲು ಬಳಸ್ಬಹುದು ತೆಂಗಿನ ಹಾಲು

ಮೇಕಪ್ ರಿಮೂವ್ ಮಾಡಲು ಬಳಸ್ಬಹುದು ತೆಂಗಿನ ಹಾಲು

ಇದು ಖಂಡಿತ ಕಷ್ಟದ ಕೆಲಸ ಅಲ್ಲವೇ ಅಲ್ಲ, ಮುಖಕ್ಕೆ ದಪ್ಪನೆಯ ಮೇಕಪ್ ಹಚ್ಚಿದ್ರಿ, ಅದನ್ನು ತೆಗಿಬೇಕು. ಯಾವುದೇ ಕೆಮಿಕಲ್ ಗಳನ್ನು ಬಳಸದೇ, ಚರ್ಮಕ್ಕೆ ಹಾನಿ ಮಾಡದೇ ನಿಮ್ಮ ಮೇಕಪ್ ರಿಮೂವ್ ಮಾಡ್ಬೇಕು ಅಂದ್ರೆ ತೆಂಗಿನ ಹಾಲು ಬಳಕೆ ಮಾಡ್ಬಹುದು. ಒಂದು ಪಾರ್ಟ್ ನಷ್ಟು ಆಲಿವ್ ಎಣ್ಣೆಗೆ ಅರ್ಧ ಪಾರ್ಟ್ ನಷ್ಟು ತೆಂಗಿನಹಾಲನ್ನು ಸೇರಿಸಿ. ಇದನ್ನು ಯಾವಾಗ್ಲೂ ನಿಮ್ಮ ಮುಖದ ಮೇಕಪ್ ತೆಗೆಯಲು ಬಳಸಿದ್ರೆ ಖಂಡಿತ ನಿಮ್ಮ ಮುಖ ಹೊಳಪಿನಿಂದ ಕೂಡಿರುತ್ತೆ. ಕಣ್ಣಿನ ಮೇಕಪ್ ನ್ನೂ ಕೂಡ ಸರಾಗವಾಗಿ ತೆಗೆಯುವ ಸಾಮರ್ಥ್ಯ ಈ ಮಿಶ್ರಣಕ್ಕಿದೆ.

ಚರ್ಮದ ಹೊಳಪು ಹೆಚ್ಚಿಸುವ ತೆಂಗಿನ ಹಾಲಿನ ಫೇಸ್ ಪ್ಯಾಕ್

ಚರ್ಮದ ಹೊಳಪು ಹೆಚ್ಚಿಸುವ ತೆಂಗಿನ ಹಾಲಿನ ಫೇಸ್ ಪ್ಯಾಕ್

ಸ್ವಲ್ಪ ತೆಂಗಿನಹಾಲಿಗೆ, ಗಂಧದ ಪುಡಿಯನ್ನು ಸೇರಿಸಿ. ಅದಕ್ಕೆ ಸ್ವಲ್ಪ ಕೇಸರಿ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲಸಿ ಮತ್ತು ಮುಖಕ್ಕೆ ಅಪ್ಲೈ ಮಾಡ್ಕೊಳ್ಳಿ. ಇದು ಪ್ಯಾಕ್ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ ಹೊಳಪು ಬರುವಂತೆ ಮಾಡುತ್ತೆ. ನೈಸರ್ಗಿಕವಾಗಿ ಮುಖದ ಹೊಳಪು ಹೆಚ್ಚಿಸಲು ಇದು ಸಹಕಾರಿ.

ನೆರಿಗೆಗಳನ್ನು ನಿಯಂತ್ರಿಸಲು ಬಳಸಿ ತೆಂಗಿನ ಹಾಲು

ನೆರಿಗೆಗಳನ್ನು ನಿಯಂತ್ರಿಸಲು ಬಳಸಿ ತೆಂಗಿನ ಹಾಲು

6 ರಿಂದ 8 ಬಾದಾಮಿಯನ್ನು ರಾತ್ರಿಯೇ ನೀರಿನಲ್ಲಿ ನೆನಸಿಡಿ. ಬೆಳಿಗ್ಗೆ ಅದರ ಚರ್ಮವನ್ನು ತೆಗೆದು ಪೇಸ್ಟ್ ತಯಾರಿಸಿಕೊಳ್ಳಿ. ಕೆಲವು ಹನಿ ತೆಂಗಿನ ಹಾಲು ಮತ್ತು ವಿಟಮಿನ್ ಇ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕಲಸಿ. ವಾರದಲ್ಲಿ ಮೂರು ನಾಲ್ಕು ಬಾರಿ ಈ ರೀತಿ ಮುಖಕ್ಕೆ ಹಚ್ಚಿಕೊಂಡು ನಂತ್ರ ತೊಳೆಯಿರಿ. ಚರ್ಮದಲ್ಲಿ ನೆರಿಗೆ ಕಾಣಿಸಿಕೊಂಡು ವಯಸ್ಸಾದಂತೆ ಕಾಣುವುದು, ಮತ್ತು ಚರ್ಮ ಇಳಿಬಿದ್ದಂತಾಗಿರುವ ಸಮಸ್ಯೆ ನಿವಾರಣೆಗೆ ಈ ಮಿಶ್ರಣ ನಿಮಗೆ ಸಹಾಯ ಮಾಡಲಿದೆ.

ಸನ್ ಬರ್ನ್ ಸಮಸ್ಯೆಗೆ ಹೇಳಿ ಮಾಡಿಸಿದ್ದು ತೆಂಗಿನ ಹಾಲು

ಸನ್ ಬರ್ನ್ ಸಮಸ್ಯೆಗೆ ಹೇಳಿ ಮಾಡಿಸಿದ್ದು ತೆಂಗಿನ ಹಾಲು

ಒಂದು ಪಾರ್ಟ್ ನಷ್ಟು ತೆಂಗಿನ ಹಾಲಿಗೆ , ಅದರ ಅರ್ಧದಷ್ಟು ಗುಲಾಬಿ ರಸವನ್ನು ಸೇರಿಸಿ. ಒಂದು ಬಾಟಲ್ ನಲ್ಲಿ ಈ ಮಿಶ್ರಣವನ್ನು ಹಾಕಿ ಪ್ರಿಡ್ಜ್ ನಲ್ಲಿಡಿ. ಯಾವಾಗ ಉರಿ ಉರಿ ಬಿಸಿಲಿನಿಂದ ಬಳಲಿ ಬೆಂಡಾಗಿ ಬರ್ತೀರೋ ಆಗ ಈ ಮಿಶ್ರಣವನ್ನು ಸ್ಪ್ರೇ ಮಾಡ್ಕೊಳ್ಳಿ. ಕೇವಲ ಮುಖಕ್ಕೆ ಮಾತ್ರವಲ್ಲ, ಕೈಗಳಿಗೆ ಮತ್ತು ಕುತ್ತಿಗೆಯ ಭಾಗದಲ್ಲಿ ಆಗುವ ಸನ್ ಬರ್ನ್ ಸಮಸ್ಯೆಗೂ ಕೂಡ ಇದು ಪರಿಹಾರ ನೀಡಲಿದೆ. ಟ್ರೈ ಮಾಡಿ ನೋಡಿ.

ನೆನಪಿನಲ್ಲಿಡಿ

ನೆನಪಿನಲ್ಲಿಡಿ

ಈಗೆಲ್ಲ ತೆಂಗಿನ ಹಾಲು ಕೂಡ ಪ್ಯಾಕೆಟ್ ರೂಪದಲ್ಲಿ ಮಾರ್ಕೆಟ್ ನಲ್ಲಿ ಲಭ್ಯವಿದೆ, ಇಂತಹ ಪ್ರಿಸರ್ವ್ ತೆಂಗಿನ ಹಾಲನ್ನು ಯಾವುದೇ ಕಾರಣಕ್ಕೂ ಬಳಸ್ಬೇಡಿ. ಇದ್ರಲ್ಲಿ ಪ್ರಿಸರ್ವೇಟಿವ್ ಅಂಶವನ್ನು ಬಳಸಿದ್ದು, ಅವು ನಿಮ್ಮ ಚರ್ಮಕ್ಕೆ ಅಲರ್ಜಿ ಮಾಡುವ ಸಾಧ್ಯತೆಗಳಿರುತ್ತೆ.

English summary

Amazing Beauty Uses Of Coconut Milk

Coconut milk can be used to for many beauty purposes. It makes your skin soft and will brighten up your complexion. There will be no need of any chemical skin care product after you start using coconut milk on your skin. Have a look at some of the beauty amazing beauty benefits of coconut milk.
Story first published: Wednesday, December 16, 2015, 20:28 [IST]
X
Desktop Bottom Promotion