For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಟಿಪ್ಸ್: ಬಿಸಿಲಿನ ಧಗೆಗೆ, ಹಣ್ಣುಗಳ ಫೇಸ್ ಪ್ಯಾಕ್

|

ಏರುತ್ತಿದೆ ಏರುತ್ತಿದೆ ಬಿಸಿ ಏರುತ್ತಿದೆ ಎಂದು ಪ್ರತಿಯೊಬ್ಬರು ಹೇಳುತ್ತಿರುತ್ತಾರೆ. ಬೇಸಿಗೆಯಲ್ಲಿ ಬಿಸಿ ಏರದೆ ಮತ್ತೆ ಚಳಿಗಾಲದಲ್ಲಿ ಬಿಸಿ ಏರಬೇಕೇ? ಎಂದು ತಮಾಷೆ ಮಾಡಬಹುದು. ಆದರೆ ಈ ವರ್ಷ ಬೇಸಿಗೆಯಲ್ಲಿದ್ದ ಉರಿ ಬಿಸಿಲು ಈ ಹಿಂದೆ ಎಷ್ಟೋ ವರ್ಷಗಳಲ್ಲಿ ಇರಲಿಲ್ಲ ಎನ್ನುವುದು ಹಿರಿಯರ ಹೇಳಿಕೆ. ಬೆಳಿಗ್ಗೆ ಎದ್ದು ಮನೆಯಿಂದ ಹೊರಗೆ ಬಂದರೆ ಸಾಕು. ಬಿಸಿಲ ಬೇಗೆಗೆ ಬೆಂದು ಹೋಗುತ್ತೇವೆ. ಇಂತಹ ಬಿಸಿಲಿನಲ್ಲಿ ಮೈಮೇಲೆ ಮೊಡವೆಗಳು, ಬೊಕ್ಕೆಗಳು ಬೀಳುವುದು ಸಾಮಾನ್ಯವಾಗಿದೆ. ಇದರಿಂದ ನಮಗೆ ಬಿಸಿನಲ್ಲಿ ಮತ್ತಷ್ಟು ಕಿರಿಕಿರಿಯಾಗುತ್ತದೆ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಿ ಬೇಸಿಗೆಯಲ್ಲೂ ನಿಮ್ಮ ತ್ವಚೆಯನ್ನು ತಂಪಾಗಿಡಲು ಬೋಲ್ಡ್ ಸ್ಕೈ ನಿಮಗೆ ಕೆಲವೊಂದು ಮಾರ್ಗಗಳನ್ನು ತಿಳಿಸಿಕೊಡಲಿದೆ. ಕೋಮಲವಾದ ತ್ವಚೆಗಾಗಿ ಹಣ್ಣಿನ ಫೇಸ್ ಪ್ಯಾಕ್

ಬೇಸಿಗೆಯಲ್ಲಿ ಹೆಚ್ಚಿನ ಬಿಸಿಲು ಕಾಣಿಸಿಕೊಂಡಂತೆ ನಿಮ್ಮ ಆಹಾರದಲ್ಲಿ ಕೂಡ ನೀರಿನಾಂಶವಿರುವ ಆಹಾರ ಮತ್ತು ನೀರನ್ನು ಹೆಚ್ಚಾಗಿ ಸೇವಿಸಿ. ನಿಮ್ಮ ದೇಹದಲ್ಲಿ ನೀರಿನಾಂಶವು ಹೆಚ್ಚಾಗಿದ್ದರೆ ಆಗ ಬೇಸಿಗೆಯಲ್ಲಿ ತ್ವಚೆಗೆ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಮತ್ತು ಬೇಸಿಗೆಯಲ್ಲಿ ನಿಮ್ಮ ಮುಖದ ಅಂದ ಹಾಗೆ ಉಳಿದುಕೊಳ್ಳಬೇಕೆಂದರೆ ದಿನಕ್ಕೆ ಮೂರು ಸಲವಾದರೂ ಮುಖ ತೊಳೆಯಿರಿ. ಬೇಸಿಗೆಯಲ್ಲಿ ತಂಪಾಗಿರಲು ಕೆಲವೊಂದು ಫೇಸ್ ಪ್ಯಾಕ್ ಗಳನ್ನು ನಿಮಗೆ ಸೂಚಿಸಲಾಗಿದೆ. ಈ ಏಳು ರೀತಿಯ ಫೇಸ್ ಪ್ಯಾಕ್‌ಗಳು ನಿಮ್ಮ ತ್ವಚೆಯನ್ನು ಯಾವ ರೀತಿ ತಂಪಾಗಿ ಇಡುತ್ತದೆ ಎನ್ನುವುದನ್ನು ನೀವೇ ಬಳಸಿ ನೋಡಿ...

ಮುಳ್ಳುಸೌತೆ ಫೇಸ್ ಪ್ಯಾಕ್

ಮುಳ್ಳುಸೌತೆ ಫೇಸ್ ಪ್ಯಾಕ್

ಬೇಸಿಗೆಯಲ್ಲಿ ಅತಿಹೆಚ್ಚಿನ ನೀರಿನಾಂಶ ದೇಹಕ್ಕೆ ಬೇಕೆಂದರೆ ಮುಳ್ಳುಸೌತೆಯನ್ನು ತಿನ್ನಬೇಕು. ಮುಳ್ಳುಸೌತೆ ತಿನ್ನುವುದು ಮಾತ್ರವಲ್ಲ, ಇದರ ಫೇಸ್ ಪ್ಯಾಕ್ ನಿಂದ ಮುಖವನ್ನು ತಂಪಾಗಿ ಇಡಬಹುದು. ಮುಳ್ಳುಸೌತೆಯ ಫೇಸ್ ಪ್ಯಾಕ್ ನ್ನು ಬಳಸಿದರೆ ಚರ್ಮದ ಮುಚ್ಚಿಹೋಗಿರುವ ರಂಧ್ರಗಳನ್ನು ತೆರೆದು ನಿಮಗೆ ತಂಪು ನೀಡುವುದು.

ಕಲ್ಲಂಗಡಿ ಫೇಸ್ ಪ್ಯಾಕ್

ಕಲ್ಲಂಗಡಿ ಫೇಸ್ ಪ್ಯಾಕ್

ಬೇಸಿಗೆಯಲ್ಲಿ ಬಾಯಾರಿಕೆ ಹಾಗೂ ಹಸಿವು ನೀಗಬೇಕಾದರೆ ಕಲ್ಲಂಗಡಿ ತಿನ್ನಬೇಕು ಎಂದು ಹಿರಿಯರು ಹೇಳುತ್ತಾರೆ. ಅದೇ ಕಲ್ಲಂಗಡಿಯನ್ನು ಫೇಸ್ ಪ್ಯಾಕ್ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ ತಂಪು ನೀಡುವುದು. ಇದರ ಒಂದು ಭಾಗವನ್ನು ಆಗಾಗ ಮುಖಕ್ಕೆ ಹಚ್ಚುತ್ತಲಿರಿ. ಒಣಗಿದ ಅದಕ್ಕೆ ರೋಸ್ ವಾಟರ್ ಹಾಕಿಕೊಂಡು ಮತ್ತೆ ಬಳಸಿ.

ಕಿತ್ತಳೆ ಫೇಸ್ ಪ್ಯಾಕ್

ಕಿತ್ತಳೆ ಫೇಸ್ ಪ್ಯಾಕ್

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವು ಅತಿಯಾಗಿದೆ. ಇದನ್ನು ಮುಖಕ್ಕೆ ಹಚ್ಚಿಕೊಂಡರೆ ಅತಿಯಾದ ಉಷ್ಣತೆಯಲ್ಲೂ ನಿಮ್ಮ ತ್ವಚೆಗೆ ತಂಪು ನೀಡುವುದು. ಕಿತ್ತಳೆಯ ತಿರುಳಿನಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ಇದು ಖಾಲಿಯಾದಾಗ ನಿಂಬೆಹಣ್ಣಿನ ರಸವನ್ನು ಮುಖಕ್ಕೆ ಮಸಾಜ್ ಮಾಡಿ. ಸಿಟ್ರಸ್ ಇರುವ ಎರಡು ಹಣ್ಣುಗಳು ಬೇಸಿಗೆಯಲ್ಲಿ ತ್ವಚೆಯ ಮೇಲೆ ಬೀಳುವ ಕಲೆಗಳನ್ನು ನಿವಾರಿಸುವುದು. ಕಿತ್ತಳೆ ಸಿಪ್ಪೆಯಿಂದ ಹೆಚ್ಚಿಸಿ ಮುಖದ ಬಿಳುಪು

ಖರ್ಬೂಜ ಹಣ್ಣಿನ ಫೇಸ್ ಪ್ಯಾಕ್

ಖರ್ಬೂಜ ಹಣ್ಣಿನ ಫೇಸ್ ಪ್ಯಾಕ್

ಖರ್ಬೂಜ ಹಣ್ಣಿನ ಸುವಾಸನೆ ನಿಮಗೆ ಹಿಡಿಸದೇ ಇರಬಹುದು. ಆದರೆ ಇದರಲ್ಲಿನ ಕೆಲವೊಂದು ಅಂಶಗಳು ನಿಮ್ಮ ತ್ವಚೆಗೆ ತುಂಬಾ ಒಳ್ಳೆಯದು. ಮಸ್ಕ್ ಮೆಲನ್ ತ್ವಚೆಯ ಕಾಂತಿ ಹಾಗೂ ಬಣ್ಣವನ್ನು ವೃದ್ಧಿಸುವುದು. ಇದರ ತಿರುಳು ಅಥವಾ ಜ್ಯೂಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕಲೆರಹಿತ ಕಾಂತಿಯುಕ್ತ ತ್ವಚೆಗಾಗಿ ಖರ್ಬೂಜ ಹಣ್ಣಿನ ಫೇಸ್ ಪ್ಯಾಕ್!

ದ್ರಾಕ್ಷಿಯ ಫೇಸ್ ಪ್ಯಾಕ್

ದ್ರಾಕ್ಷಿಯ ಫೇಸ್ ಪ್ಯಾಕ್

ಹಸಿರು ದ್ರಾಕ್ಷಿಗಳನ್ನು ನಿಮ್ಮ ಮುಖಕ್ಕೆ ಫೇಸ್ ಪ್ಯಾಕ್ ಆಗಿ ಬಳಸಬಹುದು. ಹೆಚ್ಚಿನ ವಿಟಮಿನ್ ಗಳನ್ನು ಹೊಂದಿರುವ ದ್ರಾಕ್ಷಿಯ ತಿರುಳು ನಿಮ್ಮ ತ್ವಚೆ ಚೆನ್ನಾಗಿ ಉಸಿರಾಡುವಂತೆ ಮಾಡುವುದು. ಇದು ಮೊಡವೆ ಹಾಗೂ ಕಲೆಗಳನ್ನು ನಿವಾರಿಸುತ್ತದೆ. ಮುಖದ ಕಾಂತಿಗೆ- ದ್ರಾಕ್ಷಿ ಹಣ್ಣಿನ ಫೇಸ್ ಪ್ಯಾಕ್

ಸೀಯಾಳದ (ಎಳೆನೀರು) ಫೇಸ್ ಪ್ಯಾಕ್

ಸೀಯಾಳದ (ಎಳೆನೀರು) ಫೇಸ್ ಪ್ಯಾಕ್

ಬೇಸಿಗೆಯಲ್ಲಿ ತಿರುಗಾಡಿ ಬಂದು ತುಂಬಾ ಬೆವರು ಮುಖದ ಮೇಲಿಂದ ಇಳಿಯುತ್ತಿದ್ದರೆ ಒಂದು ಸೀಯಾಳದ ನೀರಿನಿಂದ ಮುಖವನ್ನು ತೊಳೆಯಿರಿ. ಅದರ ಎಳೆಯ ಕಾಯಿಯನ್ನು ಬಿಸಾಡದೆ ಮುಖಕ್ಕೆ ಮಸಾಜ್ ಮಾಡಿ. ನೈಸರ್ಗಿಕ ಪಾನೀಯ ಎಳನೀರು: ಸರ್ವರೋಗಕ್ಕೂ ಇದು ಪನ್ನೀರು..!

ಸ್ಟ್ರಾಬೆರಿ ಫೇಸ್ ಪ್ಯಾಕ್

ಸ್ಟ್ರಾಬೆರಿ ಫೇಸ್ ಪ್ಯಾಕ್

ಕೆಲವು ಸ್ಟ್ರಾಬೆರಿಗಳನ್ನು ತೆಗೆದುಕೊಂಡು ಮಿಕ್ಸಿಗೆ ಹಾಕಿ ಅದನ್ನು ಚೆನ್ನಾಗಿ ರುಬ್ಬಿಕೊಳ್ಳಿ ಮತ್ತು ಫೇಸ್ ಪ್ಯಾಕ್ ಆಗಿ ಬಳಸಿ. ಇದು ಚರ್ಮದಲ್ಲಿನ ಮುಚ್ಚಿದ ರಂಧ್ರವನ್ನು ತೆರೆದು ಕಲೆಗಳನ್ನು ನಿವಾರಿಸುತ್ತದೆ. ಸ್ಟ್ರಾಬೆರಿಯಂಥ ಕೆನ್ನೆ ಪಡೆಯಲು ಕಷ್ಟವೇನಿಲ್ಲ

English summary

Fruity Face Packs That Make Your Skin Cool In Summer

When the sun's rays get to you, the skin tends to boil up and get sweaty. This uncomfortable feeling is not so great, especially when it interferes with your pores and clogs them up. To keep these ugly-looking zits at bay, we at Boldsky tell you what to do to keep your skin cool and lovely. Have a look of, Fruity Face Packs That Make Your Skin Cool In Summer
Story first published: Thursday, April 28, 2016, 20:15 [IST]
X
Desktop Bottom Promotion