For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಟಿಪ್ಸ್- ಒಮ್ಮೆ ಈ ನೈಸರ್ಗಿಕ ವಿಧಾನ ಪ್ರಯತ್ನಿಸಿ ನೋಡಿ

By Jaya subramanya
|

ಕಲೆ ಮತ್ತು ಮೊಡವೆಗಳಿಲ್ಲದ ಸುಂದರ ತ್ವಚೆಯನ್ನು ಪಡೆದುಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತದೆ. ಜಾಹೀರಾತುಗಳಲ್ಲಿ ಬರುವ ಸುಂದರ ತ್ವಚೆಯನ್ನು ನಾವು ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲದಿದ್ದರೂ ಕಲೆ ಇಲ್ಲದ ಸ್ವಚ್ಛ ಮುಖಾರವಿಂದವನ್ನು ನಾವು ಪಡೆದುಕೊಳ್ಳಬಹುದಾಗಿದೆ. ಜಾಹೀರಾತುಗಳಲ್ಲಿ ಬರುವ ಕ್ರೀಮ್, ಲೋಶನ್ ಮಾಡದೇ ಇರುವ ಮ್ಯಾಜಿಕ್‌ಗಳನ್ನು ನೈಸರ್ಗಿಕ ಉತ್ಪನ್ನಗಳು ಮಾಡಬಲ್ಲವು ಎಂಬುದನ್ನು ನೀವು ನಂಬಲೇಬೇಕು.

Easy Ways To Get A Flawless Skin

ನಿಯಮಿತವಾಗಿ ಇಂತಹ ನೈಸರ್ಗಿಕ ಉತ್ಪನ್ನಗಳನ್ನು ನೀವು ಬಳಸಿದ್ದೇ ಆದಲ್ಲಿ ದೋಷರಹಿತ ತ್ವಚೆಯನ್ನು ಪಡೆಯುವಲ್ಲಿ ನೀವು ಯಶಸ್ವಿಯಾಗುವುದು ಖಂಡಿತ. ಮೊಸರು, ಕೇಸರಿ, ಕಿತ್ತಳೆ ಸಿಪ್ಪೆ ಹುಡಿ, ಟೊಮೇಟೊ ಹಾಗೂ ಬಾದಾಮಿ ತ್ವಚೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವಲ್ಲಿ ನೆರವಾಗಲಿದೆ. ಈ ಉತ್ಪನ್ನಗಳು ತ್ವಚೆಯ ಛಾಯೆಯನ್ನು ವರ್ಧಿಸಲು ಸಹಕಾರಿಯಾಗಿದ್ದು ತ್ವಚೆಯ ಕಲೆ ಮತ್ತು ಗಾಯಗಳನ್ನು ಹೋಗಲಾಡಿಸುತ್ತವೆ. ವಾರಗಳ ಕಾಲ ಈ ಉತ್ಪನ್ನಗಳನ್ನು ಬಳಸಿ ನಂತರ ಫಲಿತಾಂಶವನ್ನು ನೀವೇ ಅರಿತುಕೊಳ್ಳಿ. ಇಂದಿನ ಲೇಖನದಲ್ಲಿ ನಿಮಗೆ ಕಾಂತಿಯುಕ್ತ ತ್ವಚೆಯನ್ನು ನೀಡುವಲ್ಲಿ ಸಹಕಾರಿಯಾಗಿರುವ ಉತ್ಪನ್ನಗಳ ಪಟ್ಟಿಯನ್ನು ನೀಡುತ್ತಿದ್ದು ಇವುಗಳನ್ನು ಬಳಸಿ ಫಲಿತಾಂಶವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಬನ್ನಿ ಆ ಉತ್ಪನ್ನಗಳೇನು ಎಂಬುದನ್ನು ಇಂದಿಲ್ಲಿ ನೋಡೋಣ.

ಮೊಸರು
ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ತ್ವಚೆಯನ್ನು ಬ್ಲೀಚ್ ಮಾಡುವ ಅಂಶಗಳನ್ನು ಒಳಗೊಂಡಿದೆ. ಮೊಸರನ್ನು ತ್ವಚೆಯ ಮೇಲೆ ಉಜ್ಜಿಕೊಳ್ಳಿ ನಂತರ ಸ್ವಲ್ಪ ಹೊತ್ತಿನ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ತ್ವಚೆಯನ್ನು ಮಾಯಿಶ್ಚರೈಸ್ ಮಾಡಿ ತ್ವಚೆಯನ್ನು ಇನ್ನಷ್ಟು ಕಾಂತಿಯುಕ್ತಗೊಳಿಸುವಲ್ಲಿ ಮೊಸರು ಸಹಕಾರಿ.

ಕೇಸರಿ
ದುಬಾರಿ ಮಸಾಲೆ ಸಾಮಾಗ್ರಿಯಾಗಿರುವ ಕೇಸರಿ ತ್ವಚೆಯನ್ನು ಕಾಂತಿಯುಕ್ತಗೊಳಿಸುವಲ್ಲಿ ಹೆಸರುವಾಸಿಯಾಗಿದೆ. ತ್ವಚೆಗೆ ದೋಷರಹಿತ ಕಾಂತಿಯನ್ನು ಒದಗಿಸುವಲ್ಲಿ ಇದು ನೆರವಾಗಲಿದೆ. ಹಾಲಿನಲ್ಲಿ ಕೇಸರಿಯ ಎಳೆಗಳನ್ನು ನೆನೆಸಿರಿ ನಂತರ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಸ್ವಲ್ಪ ಹೊತ್ತಿನ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

ಕಿತ್ತಳೆ ಸಿಪ್ಪೆ ಹುಡಿ
ತ್ವಚೆಯನ್ನು ಕಾಂತಿಯುಕ್ತಗೊಳಿಸುವ ಉತ್ಪನ್ನಗಳಲ್ಲಿ ಕಿತ್ತಳೆ ಸಿಪ್ಪೆಯ ಹುಡಿ ಅಗ್ರಸ್ಥಾನದಲ್ಲಿದೆ. ಹುಡಿಗೆ ಒಂದು ಚಮಚದಷ್ಟು ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ 20 ನಿಮಿಷಗಳ ಕಾಲ ಇದನ್ನು ಹಾಗೆಯೇ ಬಿಡಿ. ನಂತರ ಶುದ್ಧವಾದ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಉತ್ತಮ ಫಲಿತಾಂಶವನ್ನು ಗಳಿಸಿಕೊಳ್ಳಲು ವಾರಕ್ಕೊಮ್ಮೆ ಇದನ್ನು ಮಾಡಿ

ಬಾದಾಮಿ ಮತ್ತು ಹಾಲು
ಗಾಢವಾದ ತ್ವಚೆಯನ್ನು ಉಪಚರಿಸಲು ಹಾಲು ಮತ್ತು ಬಾದಾಮಿ ಉತ್ತಮ ಕಾಂಬಿನೇಶನ್ ಎಂದೆನಿಸಿದೆ. ಕಪ್ಪು ಕಲೆಗಳನ್ನು ತಿಳಿಗೊಳಿಸಿ. ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳನ್ನು ನಿವಾರಿಸುತ್ತದೆ ಹಾಗೂ ಮುಖವನ್ನು ಕಲೆ ಮತ್ತು ಸುಕ್ಕಿಲ್ಲದೆ ತಾಜಾಗೊಳಿಸುತ್ತದೆ ಅಂತೆಯೇ ಮುಖದಲ್ಲಿ ಯುವತ್ವ ಶೋಭಿಸುವಂತೆ ಮಾಡುತ್ತದೆ. ಸ್ವಲ್ಪ ಹಾಲನ್ನು ಬಳಸಿ ಬಾದಾಮಿಯ ದಪ್ಪನೆಯ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಸಂಪೂರ್ಣ ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ ಸ್ವಲ್ಪ ಸಮಯ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ನಿತ್ಯವೂ ಈ ಹಂತವನ್ನು ಅನುಸರಿಸಿ.

ಟೊಮೇಟೊ ಹಾಗೂ ಕೊತ್ತಂಬರಿ ಮಾಸ್ಕ್
ಟೊಮೇಟೊ ಮತ್ತು ಕೊತ್ತಂಬರಿ ಸಮ್ಮಿಶ್ರಣವು ತ್ವಚೆಯನ್ನು ಕಾಂತಿಯುಕ್ತಗೊಳಿಸುವಲ್ಲಿ ಅತ್ಯುತ್ತಮ ಎಂದೆನಿಸಿದೆ. ಎಲ್ಲಾ ವಿಧಧ ತ್ವಚೆಗೂ ಇದು ಪರಿಣಾಮಕಾರಿಯಾದುದು. 2 ಚಮಚದಷ್ಟು ಕೊತ್ತಂಬರಿ ರಸವನ್ನು ಸಿದ್ಧಪಡಿಸಿಕೊಂಡು ಇದಕ್ಕೆ ಸಮಪ್ರಮಾಣದ ಟೊಮೇಟೊ ರಸವನ್ನು ಸೇರಿಸಿಕೊಳ್ಳಿ. ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಂಡು ಸ್ವಲ್ಪ ಕಾಲ ಬಿಟ್ಟು ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

English summary

Easy Ways To Get A Flawless Skin

Every woman dreams of having a flawless skin tone. However, not all of us are blessed with a flawless skin tone like the one we usually come across in commercials. These may be marketing gimmicks, but what if we told you attaining a flawless skin is possible? Yes, all that you need to do is to stick to a few natural remedies and use them on a regular basis. These remedies not only add a glow to the skin, but also make the skin more flawless with their constant usage.
X
Desktop Bottom Promotion