For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯಕ್ಕೆ ನೈಸರ್ಗಿಕ ಫೇಸ್ ಪ್ಯಾಕ್, ಬೇಕೆ ಬೇಕು!

By Super
|

ಸೌಂದರ್ಯದ ಬಗ್ಗೆ ಕಾಳಜಿ ಇರುವವರಿಗೆಲ್ಲಾ ಮುಖಲೇಪಗಳ ಮಹತ್ವವೇನೆಂದು ತಿಳಿದೇ ಇರುತ್ತದೆ. ಅದರಲ್ಲೂ ನೈಸರ್ಗಿಕ ಮುಖ ಲೇಪಗಳೇ ಮುಖದ ಕೋಮಲ ಚರ್ಮಕ್ಕೆ ಅತಿ ಸೂಕ್ತ. ಏಕೆಂದರೆ ಇದರಲ್ಲಿ ಯಾವುದೇ ಅಡ್ಡಪರಿಣಾಮವಿರದ ಕಾರಣ ತಾರುಣ್ಯವನ್ನು ಬಹುಕಾಲದವರೆಗೆ ಕಾಪಾಡಿಕೊಳ್ಳಬಹುದು. ಸೌಂದರ್ಯತಜ್ಞರ ಪ್ರಕಾರ ವಾರಕ್ಕೊಮ್ಮೆಯಾದರೂ ಮುಖಲೇಪದ ಬಳಕೆ ಸೂಕ್ತ ಕ್ರಮವಾಗಿದೆ.

ಇದರಿಂದ ಮುಖದ ಚರ್ಮದಲ್ಲಿ ಆರ್ದ್ರತೆಯನ್ನು ಉಳಿಸಿಕೊಂಡು ಸಜಹ ಸೌಂದರ್ಯವನ್ನು ವೃದ್ದಿಸುವ ಮೂಲಕ ಚರ್ಮದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಅಷ್ಟಕ್ಕೂ ಮುಖಲೇಪ ಹೇಗೆ ಕೆಲಸ ಮಾಡುತ್ತದೆಂದರೆ ಇದರಲ್ಲಿರುವ ಪೋಷಕಾಂಶಗಳು ಚರ್ಮದ ಸೂಕ್ಷ್ಮರಂಧ್ರಗಳ ಒಳಗೆ ಇಳಿದು ಕೆಳಚರ್ಮದಲ್ಲಿರುವ ಗ್ರಂಥಿಗಳಿಗೆ ಪೋಷಣೆ ನೀಡುವ ಜೊತೆಗೇ ಅತಿ ಸೂಕ್ಷ್ಮ ನರಾಗ್ರಗಳಿಗೆ ಪ್ರಚೋದನೆಯನ್ನು ನೀಡಿ ರಕ್ತಪರಿಚಲನೆ ಹೆಚ್ಚುವಂತೆ ಮಾಡುತ್ತವೆ.

Beauty Benefits Of Using Facial Mask

ಮುಖಲೇಪ ಹಚ್ಚಿ ತೊಳೆದುಕೊಂಡ ಬಳಿಕ ಕೊಂಚ ಚರ್ಮ ಕೆಂಪಗಾಗಿ ಕಾಣಲಿಕ್ಕೆ ಇದೇ ಕಾರಣ. ಮುಖಲೇಪವನ್ನು ಗೋಡೆಗೆ ಸುಣ್ಣ ಬಳಿದಂತೆ ಬಳಿಯುವುದು ಸಲ್ಲದು, ಇದಕ್ಕೂ ಒಂದು ಕ್ರಮವಿದೆ. ಅಂದರೆ ತುಟಿಗಳ ಮೇಲೆ, ಕಣ್ಣುರೆಪ್ಪೆಗಳ ಮೇಲೆ, ಕೂದಲು ಪ್ರಾರಂಭವಾಗುವ ಚರ್ಮದ ಅಂಚುಗಳಿಗೆ ಹಚ್ಚಬಾರದು. ಮೂಗಿನ ಅಕ್ಕಪಕ್ಕ, ಮೂಗಿನ ಮೇಲೆ ಮತ್ತು ಕಣ್ಣುಗಳ ಕೆಳಭಾಗದಲ್ಲಿ ಇತರ ಭಾಗಗಳಿಗಿಂತ ಕೊಂಚ ದಪ್ಪನಾಗಿ ಹಚ್ಚಬೇಕು.

ಹೆಚ್ಚಿನ ಸಂದರ್ಭದಲ್ಲಿ ಈ ಲೇಪಗಳಲ್ಲಿ ಪ್ರಮುಖವಾಗಿ ಜೇಡಿ ಅಥವಾ ಜೆಲ್ ಉಪಯೋಗಿಸಲಾಗುತ್ತದೆ. ಇವು ಸಾಮಾನ್ಯವಾಗಿ ಕಡಿಮೆ ಪ್ರಾಬಲ್ಯ ಹೊಂದಿದ್ದು ಮುಖಲೇಪದ ಇತರ ಪೋಷಕಾಂಶಗಳು ಚರ್ಮಕ್ಕೆ ಇಳಿಯಲು ಸಹಾಯ ಮಾಡುತ್ತವೆ. ಮುಖಲೇಪ ಹಚ್ಚಿದ ಬಳಿಕ ಕಣ್ಣುಗಳನ್ನು ಮುಚ್ಚಿಕೊಂಡು ಕೆಲವಾರು ನಿಮಿಷಗಳಾದರೂ, ಸಾಮಾನ್ಯವಾಗಿ ಸುಮಾರು ಇಪ್ಪತ್ತು ನಿಮಿಷ, ಒಣಗಲು ಬಿಡಬೇಕು.

ಈ ಅವಧಿಯಲ್ಲಿ ಕಣ್ಣುಗಳ ಮೇಲೆ ಸೌತೆಯ ಬಿಲ್ಲೆಯೊಂದನ್ನು ಇರಿಸುವ ಮೂಲಕ ಕಣ್ಣುಗಳಿಗೆ ತಂಪು ನೀಡಬಹುದು. ಬಳಿಕ ಕೇವಲ ತಣ್ಣೀರಿನಿಂದ ಮಾತ್ರ ತೊಳೆದುಕೊಳ್ಳಬೇಕು. ಬಿಸಿನೀರು ಸಲ್ಲದು, ಏಕೆಂದರೆ ಬಿಸಿನೀರು ಸೂಕ್ಷ್ಮರಂಧ್ರಗಳ ಒಳಗೆ ಇಳಿದಿದ್ದ ಪೋಷಕಾಂಶಗಳನ್ನು ಮತ್ತೆ ಹೊರಗೆ ಸೆಳೆದುಬಿಡುತ್ತದೆ. ಹೆಚ್ಚಿನ ಮುಖಲೇಪಗಳಲ್ಲಿ ಈ ಸೂಕ್ಷ್ಮರಂಧ್ರಗಳಲ್ಲಿ ಹುದುಗಿದ್ದ ಕೊಳೆಯನ್ನು ಆಳದಿಂದ ನಿವಾರಿಸುವ ಮತ್ತು ಚರ್ಮಕ್ಕೆ ಆರ್ದ್ರತೆ ನೀಡುವ ಎರಡೂ ಗುಣಗಳಿರುತ್ತವೆ.

ಈ ಗುಣಗಳಿಂದಾಗಿ ಸೂಕ್ಷ್ಮರಂಧ್ರಗಳಲ್ಲಿ ಹುದುಗಿದ್ದ ಕೊಳೆ, ಕೀಟಾಣುಗಳು ಹಾಗೂ ಮೊಡವೆ ಮೂಡಲು ಆಸ್ಪದ ನೀಡುವ ಚರ್ಮದ ಆಳದಲ್ಲಿ ಸ್ರವಿಸಿರುವ ಕೀವು ಸಹಾ ನಿವಾರಣೆಯಾಗುತ್ತದೆ. ಅಲ್ಲದೇ ಹೊರಚರ್ಮದ ಪದರದ ಸತ್ತ ಜೀವಕೋಶಗಳು ಗಟ್ಟಿಯಾಗಿ ಅಂಟಿಕೊಂಡಿದ್ದುದನ್ನು ಸಡಿಲಗೊಳಿಸಿ ತೊಳೆದಾಗ ಸುಲಭವಾಗಿ ನಿವಾರಣೆಯಾಗಲು ನೆರವಾಗುತ್ತವೆ.

ಈ ಮೂಲಕ ಚರ್ಮದ ಹೊರಪದರಲ್ಲಿ ಕಳಕಳಿಸುವ ಹೊಸ ಜೀವಕೋಶಗಳು ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಜೀವಕೋಶಗಳು ಚರ್ಮದ ಸೆಳೆತವನ್ನು ಹೆಚ್ಚಿಸಿ ನೆರಿಗೆಗಳು ಮೂಡದಂತೆ ಮಾಡುತ್ತವೆ. ಅಲ್ಲದೇ ಹೆಚ್ಚಿನ ಸೆಳೆತ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ಅಲ್ಲದೇ ಈ ಮುಖಲೇಪಗಳು ಯಾವುದೇ ಉರಿ ತರಿಸದೇ ತಂಪಾಗಿಸುವ ಗುಣ ಹೊಂದಿರುವ ಕಾರಣ ಹಚ್ಚಿದ್ದಷ್ಟೂ ಹೊತ್ತು ಅಪ್ಯಾಯಮಾನವಾಗಿರುವುದು ಮಾತ್ರವಲ್ಲ, ತೊಳೆದಬಳಿಕವೂ ತಾಜಾತನವನ್ನು ವಾರವಿಡೀ ಉಳಿಸಿಕೊಳ್ಳಲು ನೆರವಾಗುತ್ತವೆ. ಮುಖಲೇಪವನ್ನು ಹಚ್ಚಲು ಪರಿಣಿತರೇ ಬೇಕೆಂದಿಲ್ಲ, ಆದರೆ ಪರಿಣಿತರು ಈ ಬಗ್ಗೆ ಹೆಚ್ಚಿನ ಅನುಭವ ಮತ್ತು ಪರಿಜ್ಞಾನ ಹೊಂದಿರುವ ಕಾರಣ ಸಾಧ್ಯವಾದರೆ ಇವರ ಸೇವೆ ಪಡೆಯುವುದೇ ಉತ್ತಮ.

ಅಲ್ಲದೇ ಇವರಿಗೆ ನಿಮ್ಮ ಚರ್ಮದ ಬಗೆ ಯಾವುದೆಂದು ತಿಳಿದು ಇದಕ್ಕೆ ಸೂಕ್ತವಾದ ಮುಖಲೇಪವನ್ನು ಸಲಹೆ ಮಾಡಲು ಸಾಧ್ಯ. ಅಲ್ಲದೇ ಮುಖಲೇಪದೊಂದಿಗೆ ನಯವಾದ ಮಸಾಜ್ ಸಹಾ ಹೆಚ್ಚಿನ ಪೋಷಣೆ ನೀಡುವ ಕಾರಣ ಈ ಸೇವೆ ಕೊಂಚ ದುಬಾರಿ ಎನಿಸಿದರೂ ಉತ್ತಮವಾಗಿದೆ. ಆದರೆ ಅನಿವಾರ್ಯವಲ್ಲ. ಮನೆಯಲ್ಲಿಯೇ ನೀವೇ ಸ್ವತಃ ನಿಮ್ಮ ಮುಖಕ್ಕೆ ಕೊಂಚ ಮಸಾಜ್ ಮಾಡಿಕೊಂಡು ನಿಮಗೆ ಸೂಕ್ತವಾದ ಮುಖಲೇಪವನ್ನು ಲೇಪಿಸಿಕೊಂಡು ಸಹಾ ಉತ್ತಮ ಆರೈಕೆ ಪಡೆಯಬಹುದು.

ಮುಖಲೇಪ ಹಚ್ಚಿಕೊಳ್ಳುವ ಮುನ್ನ ಮುಖವನ್ನು ಚೆನ್ನಾಗಿ ತೊಳೆದುಕೊಂಡ ಬಳಿಕ ಕೊಂಚ ಬಿಸಿನೀರಿನಿಂದ ಪ್ರೋಕ್ಷಳಿಸಿಕೊಳ್ಳಬೇಕು. ಇದರಿಂದ ಮುಖದ ಚರ್ಮದ ಸೂಕ್ಷ್ಮರಂಧ್ರಗಳು ಅಗಲವಾಗಿ ತೆರೆಯುತ್ತವೆ. ಮುಖಲೇಪ ಹಚ್ಚಿಕೊಳ್ಳುವ ಮುನ್ನ ಮುಖ ಒದ್ದೆಯಾಗಿಯೇ ಇರಲಿ. ಬಳಿಕ ಹಚ್ಚುವ ಮುಖಲೇಪವನ್ನು ವೃತ್ತಾಕಾರದ ಮಸಾಜ್ ಮೂಲಕ ಕೊಂಚವೇ ಒತ್ತಡ ನೀಡಿ ಹಚ್ಚಬೇಕು. ನಂತರ ಇಪ್ಪತ್ತು ನಿಮಿಷ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

English summary

Beauty Benefits Of Using Facial Mask

Facial masks may be comforting or energizing, and the activities and rites often associated with applying a facial mask provide immense relief to the nervous system. A facial mask is usually defined as a salve that is applied to the face, similar to covering with cream. In many masks clay or gel is used as a foundation, as these will remain in position when applied, and these are usually harmless to most skin types.
Story first published: Saturday, June 11, 2016, 19:55 [IST]
X
Desktop Bottom Promotion