For Quick Alerts
ALLOW NOTIFICATIONS  
For Daily Alerts

ಸೋಯಾಬೀನ್‌‌ನಲ್ಲಿ ಅಡಗಿದೆ ಬ್ಯೂಟಿ ಸೀಕ್ರೆಟ್

By Hemanth
|

ಸೋಯಾಬೀನ್ ಹೆಸರು ಕೇಳಿದರೆ ಸಾಕು ಎಲ್ಲರ ಬಾಯಲ್ಲಿ ನೀರು ಬರುವುದು ಸಹಜ. ಯಾಕೆಂದರೆ ಇದರಿಂದ ಹಲವಾರು ರೀತಿಯ ಅಡುಗೆಗಳನ್ನು ಮಾಡಬಹುದು. ಈ ಸೋಯಾಬೀನ್ ನಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ. ವಿಟಮಿನ್, ಪ್ರೋಟೀನ್ ಮತ್ತು ಖನಿಜಾಂಶವು ಸಾಕಷ್ಟಿದೆ. ನೀವು ಇದನ್ನು ಕೇವಲ ಆಹಾರಕ್ಕಾಗಿ ಮಾತ್ರ ಬಳಸದೆ ಚರ್ಮ ಮತ್ತು ಕೂದಲಿನ ಸಮಸ್ಯೆಗೂ ಬಳಸಿಕೊಳ್ಳಬಹುದು.

ಸೋಯಾಬೀನ್ ನಲ್ಲಿರುವ ಪೌಷ್ಠಿಕಾಂಶಗಳು ಕೂದಲನ್ನು ಕಾಂತಿಯುವಾಗಿ ಮಾಡಿ ಚರ್ಮವು ಹೊಳೆಯುವಂತೆ ಮಾಡುತ್ತದೆ. ಸೋಯಾಬೀನ್‌ನ ಬೀಜ ಮತ್ತು ಅದರ ಮೇಲ್ಭಾಗವನ್ನು ಹಲವಾರು ರೀತಿಯ ಕೂದಲಿನ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. ಇದು ಕೂದಲಿಗೆ ಶಕ್ತಿ ಮತ್ತು ಪೋಷಕಾಂಶವನ್ನು ತುಂಬುತ್ತದೆ.

ತಲೆಬುರುಡೆಯಾಗಿ ಸರಿಯಾಗಿ ರಕ್ತಸಂಚಾರವಾಗಲು ಇದು ನೆರವಾಗುತ್ತದೆ. ಇದರಿಂದಾಗಿ ಸೋಯಾಬಿನ್ ಅನ್ನು ಹಲವಾರು ಶಾಂಪೂಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ನಿಮ್ಮ ಆಹಾರದಲ್ಲಿ ಸೋಯಾಬಿನ್ ಬಳಕೆಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಇದು ಚರ್ಮ ಮತ್ತು ಕೂದಲಿನ ಸಮಸ್ಯೆಗೆ ಉತ್ತಮ ಪರಿಹಾರ. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಸೋಯಾಬೀನ್ ನಿಂದ ಆಗುವಂತಹ ಹಲವಾರು ರೀತಿಯ ಸೌಂದರ್ಯ ಲಾಭಗಳ ಬಗ್ಗೆ ವಿವರಿಸಲಿದೆ. ಇದರ ಬಗ್ಗೆ ತಿಳಿದುಕೊಳ್ಳಲು ಲೇಖನವನ್ನು ಓದಿ...

ಚರ್ಮಕ್ಕೆ ತೇವಾಂಶ ನೀಡುತ್ತದೆ

ಚರ್ಮಕ್ಕೆ ತೇವಾಂಶ ನೀಡುತ್ತದೆ

ಒಣ ಹಾಗೂ ಒರಟು ಚರ್ಮವನ್ನು ದೂರ ಮಾಡಿ ಚರ್ಮಕ್ಕೆ ತೇವಾಂಶ ನೀಡಬೇಕಾದರೆ ಸೋಯಾಬೀನ್ ಬಳಸಿ. ಇದು ಯಾವುದೇ ರೀತಿಯ ಚರ್ಮಕ್ಕೂ ಒಗ್ಗಿಕೊಳ್ಳುತ್ತದೆ. ಚರ್ಮದಲ್ಲಿರುವ ಹೆಚ್ಚುವರಿ ಜಿಡ್ಡಿನಾಂಶವನ್ನು ಇದು ತೆಗೆದುಹಾಕುತ್ತದೆ.

ಅವಧಿ ಪೂರ್ವ ವಯಸ್ಸಾಗುವುದನ್ನು ತಡೆಯುತ್ತದೆ

ಅವಧಿ ಪೂರ್ವ ವಯಸ್ಸಾಗುವುದನ್ನು ತಡೆಯುತ್ತದೆ

ಚರ್ಮದಲ್ಲಿ ನೆರಿಗೆ, ಕಂದು ಕಲೆಗಳು ಮತ್ತು ಮುದುಕರಂತೆ ಕಾಣಿಸುವುದನ್ನು ಸೋಯಾಬೀನ್ ಬಳಕೆಯಿಂದ ತಡೆಯಬಹುದು. ಸೋಯಾದಲ್ಲಿರುವ ಫೈಟೊಸ್ಟ್ರೋಜನ್ ದೇಹದಲ್ಲಿ ಹೆಚ್ಚುವರಿ ಈಸ್ಟ್ರೋಜನ್ ಅನ್ನು ಉತ್ಪತ್ತಿ ಮಾಡಿ ನೆರಿಗೆ ಬರುವುದು ಮತ್ತು ಸುಕ್ಕುಗಟ್ಟುವುದನ್ನು ತಡೆಯುತ್ತದೆ.

ಚರ್ಮಕ್ಕೆ ಪುನರ್ಚೇತನ ನೀಡುವುದು

ಚರ್ಮಕ್ಕೆ ಪುನರ್ಚೇತನ ನೀಡುವುದು

ಸೋಯಾಬೀನ್ ನಲ್ಲಿರುವ ವಿಟಮಿನ್ ಈ ಅಂಶವು ಚರ್ಮದಲ್ಲಿ ಸತ್ತಕೋಶಗಳನ್ನು ತೆಗೆದುಹಾಕುತ್ತದೆ. ಇದರಿಂದ ಚರ್ಮವು ಹೊಳಪನ್ನು ಪಡೆಯುತ್ತದೆ. ಸೋಯಾಬೀನ್ ಹುಡಿಯನ್ನು ನೀರಿನಲ್ಲಿ ಕಲಸಿ ಅದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ. ಇದನ್ನು ಸ್ವಲ್ಪ ಸಮಯ ಹಾಗೆ ಬಿಟ್ಟು ಬಳಿಕ ತೊಳೆದುಕೊಳ್ಳಿ.

ಉಗುರುಗಳನ್ನು ಬಲಗೊಳಿಸುತ್ತದೆ

ಉಗುರುಗಳನ್ನು ಬಲಗೊಳಿಸುತ್ತದೆ

ಆಹಾರದಲ್ಲಿ ಕೆಲವು ದಿನ ಸೋಯಾಬೀನ್ ಅನ್ನು ಬಳಸಿಕೊಂಡರೆ ಆಗ ನಿಮ್ಮ ಕಳೆಗುಂದಿದ ಉಗುರುಗಳ ಹೊಸ ರೂಪವನ್ನು ಪಡೆಯುತ್ತದೆ. ಇದು ಫಂಗಲ್ ಸೋಂಕಿನಿಂದ ಉಗುರನ್ನು ಕಾಪಾಡಿ ಹೊಳಪು ಹಾಗೂ ಶಕ್ತಿಯನ್ನು ನೀಡುತ್ತದೆ.

ಹೊಳೆಯುವ ಕೂದಲಿಗಾಗಿ

ಹೊಳೆಯುವ ಕೂದಲಿಗಾಗಿ

ಹೊಳೆಯುವ ಕೂದಲನ್ನು ಪಡೆಯಬೇಕಾದರೆ ನೀವು ಸೋಯಾಬೀನ್ ಅನ್ನು ಬಳಸಲೇಬೇಕು. ಇದು ಕೂದಲನ್ನು ನುಣುಪು ಹಾಗೂ ಹೊಳೆಯುವಂತೆ ಮಾಡುತ್ತದೆ. ನಿಮ್ಮ ಕೂದಲು ಫಲಫಲ ಹೊಳೆಯುವಂತೆ ಮಾಡಲು ಸೋಯಾಬೀನ್ ತುಂಬಾ ಉಪಕಾರಿ.

English summary

Amazing Beauty Benefits Of Soybeans

Soybean is a legume that is known for its health benefits. It is a healthy nutritious food that is rich in nutrients like vitamins, minerals and protein. It is not only good for the health but is also highly beneficial in improving hair and skin health. Soybean turns out to be handy and useful for treating many skin and hair problems. Therefore, in this article, we at Boldsky will be listing out some of the amazing beauty benefits of soybean. Read on to know more about it.
X
Desktop Bottom Promotion