ಕೂದಲಿನ ಆರೈಕೆಗೆ, ಮನೆಯಂಗಳದ 'ದಾಸವಾಳ ಹೂವು'!

By: Hemanth
Subscribe to Boldsky

ಮಹಿಳೆಯರಿಗೆ ಕೂದಲು ಉದುರುವ ಸಮಸ್ಯೆ ಕಾಡುವುದು ಸಾಮಾನ್ಯ. ಇಂತಹ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ಕೆಲವೊಂದು ಕಂಪೆನಿಗಳು ತಲೆ ಕೂದಲು ಉದುರುವುದನ್ನು ತಡೆಯುವಂತಹ ಹಲವಾರು ರೀತಿಯ ಶಾಂಪೂಗಳು ಹಾಗೂ ಕಂಡೀಷನರ್‌ಗಳನ್ನು ಮಾರುಕಟ್ಟೆಗೆ ತರುತ್ತಲೇ ಇದೆ. ತಲೆ ತುರಿಕೆಗೆ ದಾಸವಾಳ ಸಮರ್ಪಕ ಉತ್ತರವಾಗಬಲ್ಲುದೇ?   

haircare tips
 

ಜಾಹೀರಾತುಗಳನ್ನು ನೋಡಿ ನನ್ನ ಕೂದಲು ಕೂಡ ಅದೇ ರೀತಿಯಾಗಬೇಕೆಂದು ಬಯಸಿ ಶಾಂಪೂ ತಂದು ಹಚ್ಚಿಕೊಳ್ಳುವುದಿದೆ. ಆದರೆ ಇದು ಕೆಲವೇ ಸಮಯ. ಮತ್ತೆ ತಲೆಕೂದಲು ಉದುರುವ ಸರದಿ ಬಂದೇ ಬರುತ್ತದೆ. ಇದಕ್ಕಾಗಿಯೇ ನೈಸರ್ಗಿಕವಾಗಿ ಸಿಗುವಂತಹ ದಾಸವಾಳವನ್ನು ಬಳಸಿಕೊಂಡು ಕೂದಲು ಉದುರುವುದನ್ನು ತಡೆಯಬಹುದು. 

hair fall
 

ದಾಸವಾಳದ ಹೂ ಇರುವಂತಹ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು ಕೂದಲಿನ ಆರೈಕೆ ಮಾಡಿದರೆ ಕೂದಲು ಉದುರುವುದು ನಿಂತು ಕಾಂತಿಯುತ ಕೂದಲನ್ನು ಪಡೆಯಬಹುದು. ಕೂದಲು ಉದುರುವ ಸಮಸ್ಯೆಗೆ ದಾಸವಾಳ ಹೂ ಅತೀ ಪರಿಣಾಮಕಾರಿ. ಬನ್ನಿ ಇದನ್ನು ಬಳಸುವುದು ಹೇಗೆ ಎಂದು ಲೇಖನ ಓದುತ್ತಾ ತಿಳಿಯಿರಿ.   ದಾಸವಾಳದಲ್ಲಿರುವ ಔಷಧೀಯ ಗುಣಗಳು    

Hibiscus

ಬೇಕಾಗುವ ಸಾಮಗ್ರಿಗಳು

*ದಾಸವಾಳದ ಹೂಗಳು

*ತೆಂಗಿನ ಎಣ್ಣೆ 

coconut oil

*ಹರಳೆಣ್ಣೆ

*ದಾಸವಾಳದ ಹೂವಿನ ದಳಗಳು ಮತ್ತು ಎಲೆಗಳನ್ನು ಒಂದು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಸಮ ಪ್ರಮಾಣದ ತೆಂಗಿನ ಎಣ್ಣೆ ಮತ್ತು ಕಂಪು ಪದಾರ್ಥದ ಎಣ್ಣೆಯನ್ನು ಇದಕ್ಕೆ ಹಾಕಿಕೊಳ್ಳಿ. ಪಾರದರ್ಶಕವಾಗಿರುವ ಬಾಟಲಿಯಲ್ಲಿ ಇದನ್ನು ಹಾಕಿಡಿ.

*ಎಣ್ಣೆಯು ದಾಸವಾಳದ ಎಲೆ ಹಾಗೂ ಹೂವಿನಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ರಾತ್ರಿಯಿಡಿ ಇದನ್ನು ಹಾಗೆಯೇ ಇಡಿ.

Hibiscus coconut oil

*ಮರುದಿನ ಬೆಳಿಗ್ಗೆ ಬಾಟಲಿಯಲ್ಲಿನ ಸ್ವಲ್ಪ ಎಣ್ಣೆಯನ್ನು ತೆಗೆದು ಬಿಸಿ ಮಾಡಿ ತಲೆಬುರುಡೆಗೆ ಹಚ್ಚಿಕೊಳ್ಳಿ. ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡುವುದರಿಂದ ರಕ್ತದ ಪರಿಚಲನೆ ಉತ್ತಮವಾಗುತ್ತದೆ. ಇದರಿಂದ ಕೂದಲಿನ ಬೆಳವಣಿಗೆ ಸರಿಯಾಗಿ ಆಗುವುದು. ದಾಸವಾಳ ಹೂವಿನ ಚಹಾ-ಸ್ವಲ್ಪ ಹುಳಿ, ದುಪ್ಪಟ್ಟು ಸಿಹಿ..!

*ದಾಸವಾಳವು ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲದೆ ಕೂದಲಿನ ಬೆಳವಣಿಗೆ, ಕೂದಲಿನ ಮರುನಿರ್ಮಾಣ ಹಾಗೂ ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.     ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ! 

Hibiscus flower
 

*ಕೂದಲು ಉದುರುವ ಸಮಸ್ಯೆ ಇರುವವರು ದಾಸವಾಳವನ್ನು ಖಂಡಿತವಾಗಿಯೂ ಬಳಸಬೇಕು. ಯಾಕೆಂದರೆ ಇದರಲ್ಲಿ ಅತ್ಯಧಿಕ ಪೋಷಕಾಂಶಗಳು ಇದೆ. ಇದನ್ನು ಪ್ರಯತ್ನಿಸಿ ನೋಡಿ. ನಿಮ್ಮ ಅನುಭವ ತಿಳಿಸಿ.   ದಾಸವಾಳ ಹೂವಿನ ಹತ್ತಾರು ಔಷಧೀಯ ಗುಣಗಳು!

English summary

This One Flower Can Cure Your Hair Fall Problem!

Hair fall troubles every single woman. After all, it is really sad to see your precious strands falling away. This one remedy using a flower can help stop your hair fall to a great extent. So, go on and make this amazing oil that combats hair loss and has a flower in it. Trust us, the flower makes all the difference when it comes to tackling the hair fall problem.
Please Wait while comments are loading...
Subscribe Newsletter