Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ದಾಸವಾಳದಲ್ಲಿರುವ ಔಷಧೀಯ ಗುಣಗಳು
ದಾಸವಾಳದ ಎಲೆಗಳನ್ನು ಕೂದಲಿನ ಪೋಷಣೆಗೆ ಬಳಸಬಹುದು ಎನ್ನುವುದು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವ ವಿಷಯ. ಆದರೆ ಬರೀ ಕೂದಲನ್ನು ಪೋಷಣೆ ಮಾಡುವುದು ಮಾತ್ರವಲ್ಲ ಇನ್ನು ಅನೇಕ ಗುಣಗಳು ದಾಸವಾಳದ ಎಲೆಯಲ್ಲಿ ಮತ್ತು ಹೂವಿನಲ್ಲಿದೆ ಗೊತ್ತಾ?
ದಾಸವಾಳದ ಹೂವಿನಲ್ಲಿ ಔಷಧೀಯ ಗುಣಗಳಿವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅದರಲ್ಲೂ ಕೆಂಪು ಮತ್ತು ಬಿಳಿ ದಾಸವಾಳದ ಹೂವನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಲ್ಲಿ ನಾವು ದಾಸವಾಳ ಹೂವಿನಲ್ಲಿರುವ ಕೆಲ ಔಷಧೀಯ ಗುಣಗಳ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಕೂದಲಿಗೆ ಉತ್ತಮವಾದ ಕಂಡೀಷನರ್
ದಾಸವಾಳದ ಎಲೆ ಜೊತೆ ಹೂವನ್ನು ಹಾಕಿ ಪೇಸ್ಟ್ ರೀತಿ ಮಾಡಿ ತಲೆಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುವುದು, ಅಕಾಲಿಕ ನೆರಿಗೆ ಉಂಟಾಗುವುದನ್ನು ತಪ್ಪಿಸಬಹುದು. ಅಲ್ಲದೆ ಇದು ನೈಸರ್ಗಿಕವಾದ ಕಂಡೀಷನರ್ ಆಗಿದ್ದು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.

ಟೀ
ಇದರ ಹೂವಿನಿಂದ ಟೀ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಿಡ್ನಿ ಸಮಸ್ಯೆ ಬರದಂತೆ ತಡೆಯಲು, ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಖಿನ್ನತೆಯನ್ನು ಹೋಗಲಾಡಿಸುವಲ್ಲಿಯೂ ಸಹಕಾರಿ.

ತ್ವಚೆ ಆರೈಕೆ
ಇದನ್ನು ಕಾಸ್ಮೆಟಿಕ್ ತಯಾರಿಕೆಯಲ್ಲೂ ಬಳಸುತ್ತಾರೆ. ಇದು ಸೂರ್ಯನ ನೇರಳಾತೀತ ಕಿರಣಗಳಿಂದ ತ್ವಚೆ ರಕ್ಷಣೆ ಮಾಡುವುದರಿಂದ ಸನ್ ಸ್ಕ್ರೀನ್ ಕ್ರೀಂಗಳಲ್ಲೂ ಮತ್ತು ಇತರ ಸೌಂದರ್ಯವರ್ಧಕಗಳಲ್ಲೂ ಬಳಸಬಹುದು.

ಬಿಪಿಯನ್ನು ಕಮ್ಮಿ ಮಾಡುತ್ತದೆ
ದಾಸವಾಳದ ಟೀ ಕುಡಿಯುವವವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಉಂಟಾಗುವುದಿಲ್ಲ ಎಂದು ಸಮೀಕ್ಷೆಯಿಂದ ಸಾಬೀತಾಗಿದೆ.

ಗಾಯವನ್ನು ಗುಣಪಡಿಸುತ್ತದೆ
ದಾಸವಾಳದ ಎಲೆಯ ರಸವನ್ನು ಹಿಂಡಿ ಗಾಯದ ಮೇಲೆ ಹಾಕಿದರೆ ಗಾಯವು ಬೇಗನೆ ಗುಣಮುಖವಾಗುವುದು.

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ದಾಸವಾಳ ಹೂವಿನ ಟೀ ಕುಡಿಯುವುದರಿಂದ ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಸಂಧಿವಾತದ ನೋವನ್ನು ಕಮ್ಮಿ ಮಾಡುತ್ತದೆ.

ಕೆಮ್ಮು ಮತ್ತು ಶೀತಕ್ಕೆ ಮನೆಮದ್ದು
ದಾಸವಾಳ ಹೂವಿನಲ್ಲಿ ವಿಟಮಿನ್ ಸಿ ಇದ್ದು ಇದು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೆಮ್ಮು, ಶೀತ ಈ ರೀತಿಯ ಸಾಮಾನ್ಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ತೂಕ ಕಮ್ಮಿಯಾಗಲು ಮತ್ತು ಜೀರ್ಣಕ್ರಿಯೆಗೆ
ದಾಸವಾಳದ ಟೀ ಕುಡಿಯುವುದರಿಂದ ಮೈಯ ಬೊಜ್ಜು ಕೂಡ ಕಮ್ಮಿಯಾಗುವುದು. ಅಲ್ಲದೆ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ.

ಮುಟ್ಟಿನ ನೋವನ್ನು ಕಮ್ಮಿ ಮಾಡುತ್ತದೆ
ಕೆಲವರಿಗೆ ಮುಟ್ಟಿನ ಸಮಯದಲ್ಲಿ ವಿಪರೀತ ನೀವು ಕಂಡು ಬರುತ್ತದೆ. ಅದನ್ನು ಕಮ್ಮಿ ಮಾಡುವಲ್ಲಿ ದಾಸವಾಳ ಟೀ ಸಹಾಯ ಮಾಡುವುದು.

ಅಕಾಲಿಕ ನೆರಿಗೆ ವಿರುದ್ಧ ಹೋರಾಡುತ್ತದೆ
ವಯಸ್ಸಾಗುತ್ತಿದ್ದಂತೆ ನೆರಿಗೆ ಬೀಳುವುದು ಸಹಜ, ಆದರೆ ಕೆಲವರು ಚಿಕ್ಕ ಪ್ರಾಯದಲ್ಲಿಯೇ ವಯಸ್ಸಾದವರಂತೆ ಕಾಣುತ್ತಾರೆ. ದಾಸವಾಳದ ಟೀ ಕುಡಿದರೆ ಈ ರೀತಿಯ ಅಕಾಲಿಕ ಮುಪ್ಪು ಉಂಟಾಗುವುದನ್ನು ತಡೆಯಬಹುದು.



Click it and Unblock the Notifications
