For Quick Alerts
ALLOW NOTIFICATIONS  
For Daily Alerts

  ಇದು ಪಕ್ಕಾ ಹರ್ಬಲ್ ಶಾಂಪೂ-ಯಾವುದೇ ಅಡ್ಡಪರಿಣಾಮಗಳಿಲ್ಲ...

  By Manasa K M
  |

  ದಟ್ಟವಾದ ಕಪ್ಪು ಕೂದಲು ನಮ್ಮ ಭಾರತೀಯ ಮಹಿಳೆಯರ ಕನಸು. ಕೂದಲು ಸೌಂದರ್ಯದ ಬಹು ಮುಖ್ಯ ಭಾಗ. ಸುಂದರ ಆರೋಗ್ಯಕರ ಹಾಗೂ ರೇಷಿಮೆ ನುಣುಪಿನ ಕೂದಲು ಸೌಂದರ್ಯಕ್ಕೆ ಒಂದು ಮೆರುಗು ನೀಡುತ್ತದೆ. ಇಂತಹ ಕೋಮಲವಾದ ಕೂದಲನ್ನು ಹೆಂಗಸರೇ ಅಲ್ಲದೆ ಗಂಡಸರು ಕೂಡ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

  ಈಗಿನ ಜೀವನ ಶೈಲಿಯಲ್ಲಿ ಹೊಗೆ, ಮಾಲಿನ್ಯ, ಕೊಳಕು ಹೀಗೆ ಬಹಳಷ್ಟು ರೀತಿಯಲ್ಲಿ ನಮ್ಮ ಕೂದಲಿನ ಗಲೀಜಾಗುತ್ತದೆ. ನಮ್ಮ ಕೂದಲು ಜಿಡ್ಡು ಜಿಡ್ದಾಗಿ ಕಾಣುತ್ತದೆ. ಹೀಗಾಗಿ ನಾವು ವಾರಕ್ಕೆ ಮೂರು ನಾಲ್ಕು ಬಾರಿ ಯಾದರೂ ತಲೆಗೆ ಸ್ನಾನ ಮಾಡಿ ಕೂದಲು ತೊಳೆಯುತ್ತಿರುತ್ತೇವೆ.

  ಆದರೆ ನಾವು ಹೀಗೆ ಕೂದಲನ್ನು ತೊಳೆಯಲು ಬಳಸುವ ಶಾಂಪೂ ಗಳು ಮೇಲೆ ಮೇಲೆ ಕೂದಲನ್ನು ಸ್ವಚ್ಛ ಮಾಡುತ್ತವೆ ಯಾದರೂ ಅವುಗಳಲ್ಲಿನ ರಾಸಾಯನಿಕಗಳು ಕೂದಲನ್ನು ನಮಗೆ ತಿಳಿಯದಂತೆ ಹಾಳು ಮಾಡುತ್ತದೆ. ಕೂದಲಿನ ಸಮಸ್ಯೆಗಳಲ್ಲಿ ಮುಖ್ಯವಾದ ಒಣ ಹಾಗೂ ಶುಷ್ಕ ಕೂದಲು, ಕೂದಲ ಸೀಳುವಿಕೆ, ತಲೆ ಹೊಟ್ಟು, ಕೂದಲು ಉದುರುವುದು, ಇವುಗಳಿಗೆ ಶಾಂಪೂವಿನ ರಾಸಾಯನಿಕಗಳೇ ಕಾರಣ.   ಇನ್ನು ಮಾರುಕಟ್ಟೆಯ ದುಬಾರಿ ಬೆಲೆಯ ಶಾಂಪೂಗೆ ಗುಡ್ ಬೈ ಹೇಳಿ..!  

  Shampoo
   

  ನಮ್ಮ ಪೂರ್ವಿಕರು ಶಾಂಪೂವಿಗೆ ಪರ್ಯಾಯವಾಗಿ ಬಳಸುತ್ತಿದ್ದ ಅನೇಕ ಹರ್ಬಲ್ ಅಂದರೆ ಗಿಡ ಮೂಲಿಕೆಗಳ ಬಗ್ಗೆ ತಿಳಿದುಕೊಳ್ಳೋಣ. ಇದರಿಂದ ನಾವು ನಮ್ಮ ಕೂದಲಿಗೆ ರಾಸಾಯನಿಕಗಳಿಂದ ಆಗುವ ಹಾನಿಯನ್ನು ತಪ್ಪಿಸಬಹುದು. ಎಲ್ಲಕ್ಕಿಂತ ಮೊದಲು ನಾವು ತಿಳಿಯಬೇಕಾದುದು ಸೀಗೆಕಾಯಿ ಬಗ್ಗೆ. ಕೂದಲಿಗೆ ಒಂದು ವರ ಈ ಸೀಗೆಕಾಯಿ.

  ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಸೀಗೆಕಾಯಿಯನ್ನು ಕೂದಲು ತೊಳೆಯಲು ಶತಮಾನಗಳ ಮುಂಚಿನಿಂದಲೂ ಬಳಸುತ್ತಿದ್ದಾರೆ. ನಾವು ಹೆಚ್ಚು ಆಲೋಚಿಸದೆ ನಂಬಿ ಕೂದಲಿಗೆ ಹಚ್ಚಬಹುದಾದ ವಸ್ತುವಾಗಿದೆ.

  ಸೀಗೆಕಾಯಿ ನಮಗೆ ಸಿಕ್ಕಲ್ಲಿ ಅದನ್ನು ಎರಡು ಅಥವಾ ಮೂರು ದಿನ ಬೆಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟು ಕೊಳ್ಳಬಹುದು. ಇದಲ್ಲದೆ ನಮಗೆ ದಿನಸಿ ಅಂಗಡಿಗಳಲ್ಲಿ ಕೂಡ ಸೀಗೆಕಾಯಿ ಪುಡಿ ಸಿಗುತ್ತದೆ. ಕೆಲವರು ಬಾರಿ ಸೀಗೆಕಾಯಿ ಪುಡಿ ಅಲ್ಲದೆ ಅದರ ಜೊತೆ ಚಿಗರೆ ಪುಡಿಯನ್ನು ಬೆರಸಿ ಬಳಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ಕಲೆಸಿ, ಹಚ್ಚಲು, ಹರಡಲು ಹಾಗೂ ಕೂದಲಿಗೆ ಉಜ್ಜಿ ಎಣ್ಣೆ ಅಂಶ ತೆಗೆಯಲು ಅನುಕೂಲವಾಗುತ್ತದೆ ಎಂದು.   ಕೂದಲಿನ ಆರೈಕೆಗೆ ಹಳ್ಳಿಗಾಡಿನ ಸೀಗೆಕಾಯಿ

  ಸೀಗೆಕಾಯಿ ಪುಡಿಯನ್ನು ನೀರಿನಲ್ಲಿ ಕಲೆಸಿ ತಕ್ಷಣವೇ ಬಳಸ ಬಹುದು. ನಿಮಗೆ ಸುಲಭವಾಗಿ ಹಚ್ಚಲು ಅನುಕೂಲವಾಗುವಂತೆ ಸ್ವಲ್ಪ ಚಿಗರೆ ಪುಡಿಯನ್ನು ಕೂಡ ಬೆರೆಸಿಕೊಳ್ಳಿ.   

  Shapoo
   

  ಇನ್ನೊಂದು ಮುಖ್ಯ ಪದಾರ್ಥ "ಅಂಟುವಾಳ ಕಾಯಿ"

  ಅಂಟುವಾಳ ಕಾಯಿ ಆಂಧ್ರ ಪ್ರದೇಶದಲ್ಲಿ ಈಗಲೂ ಬಹು ಹೆಚ್ಚಾಗಿ ಬಳಸುವ ವಸ್ತುವಾಗಿದೆ. ಗುಂಡಗೆ ಕಂಡು ಬಣ್ಣದಲ್ಲಿ ಇರುವ ಈ ಕಾಯಿಗಳ ಒಳಗೆ ಗಟ್ಟಿಯಾದ ಬೀಜ ಇರುತ್ತದೆ. ಈ ಕಾಯಿಯನ್ನು ಬಳಸುವ ಮುನ್ನ ಬೇಜವನ್ನು ತೆಗೆಯಬೇಕು. ನಂತರ, ಒಂದು ಹಿಡಿ ಅಂಟುವಾಳ ಕಾಯಿಯನ್ನು ತೆಗೆದುಕೊಂಡು ಹಿಂದಿನ ರಾತ್ರಿ ನೆನೆಸಿಟ್ಟುಕೊಳ್ಳಿ. ನಿಮಗೆ ಸಮಯ ಇಲ್ಲದಿದ್ದರೆ, ಸ್ನಾನಕ್ಕೆ ಅರ್ಧ ಗಂಟೆ ಮುಂಚಿತವಾಗಿ ನೀರಿನಲ್ಲಿ ಚನ್ನಾಗಿ ಕುದಿಸಿ ಆರಿಸಿಕೊಳ್ಳಿ.

  ಅಂಟುವಾಳ ಕಾಯಿ ದೊರಕದಿದ್ದರೆ, ಅಂಟುವಾಳ ಕಾಯಿಯ ಪುಡಿ ಅಂಗಡಿಗಳಲ್ಲಿ ಸಿಗುತ್ತದೆ. ಅದನ್ನು ಸೀಗೆಕಾಯಿ ಪುಡಿಯಂತೆ ಬಳಸಬಹುದು. ಸೀಗೆಕಾಯಿ ಪುಡಿಯನ್ನು ಹಾಗೂ ಅಂಟುವಾಳ ಕಾಯಿ ರಸ ಅಥವಾ ಪುಡಿಯ ಜೊತೆ ಸಮ ಸಮ ವಾಗಿ ಬೆರೆಸಿ ಕೂಡ ಬಳಸ ಬಹುದು.    ಮನೆಯ ಸ್ವಚ್ಛತೆ- ಮೋಡಿ ಮಾಡುವ ಅಂಟುವಾಳ ಕಾಯಿ!  

  reetha
   

  ಇನ್ನೂ ಕೆಲವು ಪದಾರ್ಥಗಳು ಎಂದರೆ ಬೆಟ್ಟದ ನೆಲ್ಲಿಕಾಯಿ, ಕರಿಬೇವಿನ ಪುಡಿ, ಮೆಂತೆ, ಹೆಸರು ಕಾಳು, ದಾಸವಾಳ ಹೂವು, ಅಲೊವೆರ. ಈ ಪದಾರ್ಥಗಳನ್ನು ನಾವು ಸೀಗೆಕಾಯಿ ಅಥವಾ ಅಂಟುವಾಳ ಕಾಯಿಯ ಜೊತೆ ಬೆರೆಸಿಕೊಂಡು ಹಚ್ಚಬೇಕು. ಅಕ್ಕಿ ತೊಳೆದ ಅಥವಾ ಅನ್ನದಿಂದ ಬಸಿದ ನೀರು ಕೂಡ ಕೂದಲು ತೊಳೆಯಲು ಬಹಳ ಸಹಕಾರಿ. ಈಗ ನಾವು ಕೆಲವು ಸಂಯೋಜನೆಗಳನ್ನು ನೋಡೋಣ:

  1) ಸೀಗೆಕಾಯಿ ಪುಡಿ 2 ದೊಡ್ಡ ಚಮಚಕ್ಕೆ, ಬೆಟ್ಟದ ನೆಲ್ಲಿಕಾಯಿ ಪುಡಿ ಒಂದು ದೊಡ್ಡ ಚಮಚ, ತುಳಸಿ ಎಲೆ ಪುಡಿ ಒಂದು ಚಮಚ ಬೆರೆಸಿ ಕೂದಲು ತೊಳೆಯಲು ಬಳಸಬಹುದು.

  2) ದಾಸವಾಳ ಹೂವನ್ನು ನೆನೆಸಿ ರುಬ್ಬಿ ಅದಕ್ಕೆ ಅಂಟುವಾಳ ಕಾಯಿಯ ರಸವನ್ನು ಹಾಕಿ ಅದರ ಜೊತೆ ಮೆಂತೆ ಪುಡಿ ಒಂದು ಚಮಚ ಬೆರೆಸಿ ಹಚ್ಚಿ ಕೂದಲನ್ನು ತೊಳೆದುಕೊಳ್ಳಿ.

  3) ಸೀಗೆಕಾಯಿ ಪುಡಿಯ ಜೊತೆಗೆ, ಕರಿಬೇವಿನ ಪುಡಿಯನ್ನು ಬೆರೆಸಿ, ಅದಕ್ಕೆ ಟೀ ಡಿಕಾಕ್ಷನ್ ಹಾಕಿ ಕಲೆಸಿಕೊಳ್ಳಿ. ಇದರ ಜೊತೆಗೆ ಮೆಂತೆ ಅಥವಾ ತುಳಸಿ ಎಲೆಯ ಪುಡಿಯನ್ನು ಕೂಡ ಬೆರೆಸಬಹುದು.

  shikakai

  4) ಅಂಟುವಾಳ ಕಾಯಿ ರಸದ ಜೊತೆ ಮೆಂತ್ಯೆ ಹಾಗೂ ಕರಿಬೇವಿನ ಪುಡಿಯನ್ನು ಕಲೆಸಿ ಬಳಸಿ.

  5) ಅನ್ನದ ಗಂಜಿಯನ್ನು ಬಳಸಿ ಬೇರೇನನ್ನೂ ಬೆರೆಸದೇ ಕೂಡ ಕೂದಲು ತೊಳೆಯಬಹುದು. ಇದು ಹೆಚ್ಚಿಗೆ ಎಣ್ಣೆಯನ್ನು ತೆಗೆಯದೆ ಕೂದಲನ್ನು ನಯವಾಗಿ ಸ್ವಚ್ಛ ಮಾಡುತ್ತದೆ. ಇಷ್ಟು ದಿನ ಶಾಂಪೂವನ್ನು ಬಳಸಿ ಸುಲಭವಾಗಿ ತಲೆಸ್ನಾನ ಮಾಡುತ್ತಿದ್ದ ನಮಗೆ ಈ ಪುಡಿಗಳನ್ನು ರಸಗಳನ್ನು ಬಳಸಲು ಮೊದಲು ಸ್ವಲ್ಪ ಕಷ್ಟ ವಾಗಬಹುದು. ಕಣ್ಣಿನಲ್ಲಿ ನೀರು ಬರುವುದು, ಬಾಯಿ ಒಳಗೆ ಹೋಗಿ ಕಹಿ ಅನುಭವ ಬರುವುದು ನಮಗೆ ಕಷ್ಟ ಆಗಬಹುದು. ಆದರೆ, ಬಹು ಬೇಗ ನಾವು ಅದನ್ನು ಬಳಸುವ ಕೌಶಲ್ಯ ಕಲಿಯುತ್ತೀವಿ. ಈ ಪದಾರ್ಥಗಳಲ್ಲಿ ಸಹಜವಾಗಿ ಬರುವ ನೊರೆ ನಮಗೆ ಶಾಂಪುವನ್ನು ನೆನಪಿಗೆ ತರುವುದು ನಿಜ. ಆದರೆ ರಾಸಾಯನಿಕಗಳು ಇಲ್ಲದೆ.  ಕೂದಲನ್ನು ಸಮೃದ್ಧಗೊಳಿಸುವ ಹಳ್ಳಿಗಾಡಿನ ಸೀಗೆಕಾಯಿ ಸೋಪ್

  English summary

  Herbal ingredients wash your hair without shampoo

  Washing hair without shampoo - sounds like an alien concept, right? However, our grandmother and great grandmothers before that used herbal ingredients to wash their hair, and they did just fine. In fact, their hair was much more healthier, darker and heavier! Here are some natural ways to clean hairwithout using a shampoo, have a look.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more