For Quick Alerts
ALLOW NOTIFICATIONS  
For Daily Alerts

ಮನೆಯ ಸ್ವಚ್ಛತೆ- ಮೋಡಿ ಮಾಡುವ ಅಂಟುವಾಳ ಕಾಯಿ!

By Arshad
|

ಸೋಪುಗಳ ಬಳಕೆ ವ್ಯಾಪಕವಾಗುವ ಮುನ್ನ ನಮ್ಮ ಹಿರಿಯರು ಅಂಟುವಾಳ ಕಾಯಿಯನ್ನೇ ಸ್ವಚ್ಛತೆಗಾಗಿ ಅವಲಂಬಿಸಿದ್ದರು. ಇಂದಿಗೂ ಚಿನ್ನಾಭರಣಗಳನ್ನು ಸ್ವಚ್ಛಗೊಳಿಸಲು ಅಂಟುವಾಳ ಕಾಯಿಯನ್ನೇ ನೆಚ್ಚಿಕೊಂಡಿದ್ದವರಿದ್ದಾರೆ. ಏಕೆಂದರೆ ಇದೊಂದು ನೈಸರ್ಗಿಕ ಮಾರ್ಜಕವಾಗಿದ್ದು ಯಾವುದೇ ಅಡ್ಡ ಪರಿಣಾಮಗಳಿಲ್ಲದಿರುವುದು, ಯಾವುದೇ ಹಾನಿಕಾರಕ ರಾಸಾಯನಿಕವಿಲ್ಲದಿರುವುದು, ಚರ್ಮಕ್ಕೆ ಸುರಕ್ಷಿತವಾಗಿರುವುದು ಮೊದಲಾದವು ಹೆಚ್ಚಿನ ಜನಪ್ರಿಯತೆಗೆ ಕಾರಣವಾಗಿತ್ತು.

ಆದರೆ ಇದನ್ನು ಸಂಗ್ರಹಿಸುವುದು ಮತ್ತು ಉಪಯೋಗಿಸುವ ಮುನ್ನ ಕೊಂಚ ಜಜ್ಜಿ ರಸ ತೆಗೆಯುವುದು ಮೊದಲಾದ ಶ್ರಮದ ಕೆಲಸಗಳಿರುವುದರಿಂದ ಇಂದಿನ ಧಾವಂತದ ಯುಗದಲ್ಲಿ ಅಂಟುವಾಳ ಯಾರಿಗೂ ಬೇಡವಾಗಿದೆ. ಆದರೆ ಇಂದಿಗೂ ಹಸಿಯಾಗಿ ಸಿಗದಿದ್ದರೂ ಒಣಫಲಗಳ ರೂಪದಲ್ಲಿ ಅಂಟುವಾಳ ಕಾಯಿ ಗ್ರಂಥಿಗೆ ಅಂಗಡಿಗಳಲ್ಲಿ ದೊರಕುತ್ತದೆ.

ಕೆಲವು ಬಹುಪಯೋಗಿ ಮಳಿಗೆಗಳಲ್ಲಿ ರೀಠಾ, ಅರಿಠಾ (ಹಿಂದಿ ಪದಗಳು) ಎಂಬ ಹೆಸರಿನಲ್ಲಿ ಸಿಗುತ್ತವೆ. ಇವನ್ನು ಬಳಸಿ ನಿಮ್ಮ ಮನೆಯ ಅಂದವನ್ನು ಅಗ್ಗದಲ್ಲಿ ಮತ್ತು ಸುಲಭವಾಗಿ ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ವಿವರಿಸಲಾಗಿದೆ ಮುಂದೆ ಓದಿ..

ಮನೆಯ ಕಿಟಕಿ ಗಾಜುಗಳನ್ನು ಸ್ಪಟಿಕದಷ್ಟು ಶುಭ್ರವಾಗಿಸಿ

ಮನೆಯ ಕಿಟಕಿ ಗಾಜುಗಳನ್ನು ಸ್ಪಟಿಕದಷ್ಟು ಶುಭ್ರವಾಗಿಸಿ

ನೀರನ್ನು ಸಿಂಪಡಿಸಬಲ್ಲ ವ್ಯವಸ್ಥೆಯಿರುವ ಬಾಟಲಿಯೊಂದರಲ್ಲಿ ಕಾಲು ಲೀಟರ್ ನೀರು, ತಲಾ ಹದಿನೈದು ಮಿಲಿಲೀಟರ್ ನಷ್ಟು ಅಂಟುವಾಳ ರಸ ಮತ್ತು ಶಿರ್ಕಾ ಸೇರಿಸಿ ಮಿಶ್ರಣ ಮಾಡಿ. ಈ ನೀರನ್ನು ಗಾಜಿನ ಮೇಲೆ ಸಿಂಪಡಿಸಿ ಒಣಗಿರುವ ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಗಾಜುಗಳು ಸ್ಪಟಿಕದಂತೆ ಹೊಳೆಯುತ್ತವೆ.

ಚಿನ್ನಾಭರಣಗಳನ್ನು ಸ್ವಚ್ಛಗೊಳಿಸಲು

ಚಿನ್ನಾಭರಣಗಳನ್ನು ಸ್ವಚ್ಛಗೊಳಿಸಲು

ಚಿನ್ನ ಸ್ವಚ್ಛಗೊಳಿಸುತ್ತೇವೆಂದು ಚಿನ್ನ ಕರಗಿಸುವ ದ್ರಾವಣದಲ್ಲಿ ಕರಗಿಸಿ ಮೋಸಮಾಡುವ ಜನರಿಂದ ದೂರವಿರಲು ಈ ಕೆಲಸವನ್ನು ನಾವೇ ಸ್ವತಃ ಮಾಡಿಕೊಳ್ಳುವುದು ಉತ್ತಮ. ಇದಕ್ಕಾಗಿ ಅಂಟುವಾಳಕಾಯಿಗಳನ್ನು ನೆನೆಸಿಟ್ಟಿದ್ದ ನೀರಿನಲ್ಲಿ ಮುಳುಗಿಸಿಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚಿನ್ನಾಭರಣಗಳನ್ನು ಸ್ವಚ್ಛಗೊಳಿಸಲು

ಚಿನ್ನಾಭರಣಗಳನ್ನು ಸ್ವಚ್ಛಗೊಳಿಸಲು

ಸುಮಾರು ಐದು ನಿಮಿಷಗಳ ಬಳಿಕ ಹಳೆಯ ಮೃದುವಾದ ಹಲ್ಲುಜ್ಜುವ ಬ್ರಶ್ ತೆಗೆದುಕೊಂಡು ನಯವಾಗಿ ಉಜ್ಜಿ ಕೊಳೆಯನ್ನು ತೆಗೆಯಿಸಿ. ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ. ನಿಮ್ಮ ಚಿನ್ನಾಭರಣಗಳು ಹೊಸತರಂತೆ ಹೊಳೆಯುತ್ತವೆ.

ಕೈ ತೊಳೆಯುವ ದ್ರಾವಣವನ್ನಾಗಿಸಿ

ಕೈ ತೊಳೆಯುವ ದ್ರಾವಣವನ್ನಾಗಿಸಿ

ಊಟದ ಬಳಿಕ ಕೈತೊಳೆಯಲು ಸೋಪಿನ ಬದಲು ಅಂಟುವಾಳದ ರಸ ಬೆರೆತ ನೀರನ್ನು ಬಳಸಬಹುದು. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಕೆಲವು ಅಂಟುವಾಳಕಾಯಿಗಳನ್ನು ಹಾಕಿ ನೀರಿನಿಂದ ತುಂಬಿಸಿ ಒಂದು ರಾತ್ರಿಯಿಡೀ ಇಡಿ. ಮುಂಜಾನೆ ಅಂಟುವಾಳಕಾಯಿ ನೀರನ್ನು ಹೀರಿ ಮೃದುವಾಗಿರುತ್ತದೆ. ಇದನ್ನು ಹಿಚುಕಿ ರಸವನ್ನು ಹಿಂಡಿ ತೆಗೆಯಿಸಿ. ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ಸೋಸಿ ಒಂದು ಲಿಂಬೆಹಣ್ಣಿನ ರಸವನ್ನು ಸೇರಿಸಿ.

ಕೈ ತೊಳೆಯುವ ದ್ರಾವಣವನ್ನಾಗಿಸಿ

ಕೈ ತೊಳೆಯುವ ದ್ರಾವಣವನ್ನಾಗಿಸಿ

ಈ ದ್ರಾವಣನ್ನು ಕೈ ತೊಳೆಯಲು ಉಪಯೋಗಿಸುವುದರಿಂದ ಕೈ ಶುಭ್ರವಾಗಿರುವುದರ ಜೊತೆಗೇ ನವಿರಾದ ಲಿಂಬೆಯ ಪರಿಮಳವೂ ಹರಡುತ್ತದೆ. ಈ ನೀರನ್ನು ಒಂದು ವಾರದಲ್ಲಿ ಖಾಲಿ ಮಾಡಿ. ಆ ಬಳಿಕ ಲಿಂಬೆಯ ಪ್ರಭಾವದಿಂದ ಈ ನೀರು ಕೊಂಚ ಹುಳಿವಾಸನೆ ಬರಲು ಪ್ರಾರಂಭವಾಗುತ್ತದೆ. ಲಿಂಬೆರಸ ಸೇರಿಸದಿದ್ದರೆ ಸುಮಾರು ಒಂದು ತಿಂಗಳವರೆಗೂ ಬಳಸಬಹುದು.

ನಿಮ್ಮ ಸಾಕುಪ್ರಾಣಿಗಳನ್ನು ಸ್ನಾನ ಮಾಡಿಸಲು

ನಿಮ್ಮ ಸಾಕುಪ್ರಾಣಿಗಳನ್ನು ಸ್ನಾನ ಮಾಡಿಸಲು

ಸಾಕುಪ್ರಾಣಿಗಳನ್ನು ಸ್ನಾನ ಮಾಡಿಸಲು ನೈಸರ್ಗಿಕವಾದ ಅಂಟುವಾಳದ ರಸ ಬೆರೆತ ನೀರು ಅತ್ಯುತ್ತಮವಾಗಿದೆ. ಇದರಿಂದ ಪ್ರಾಣಿಗಳ ಮೈಮೇಲಿದ್ದ ಚಿಗಟ, ಉಣುಗು ಮೊದಲಾದ ಕ್ರಿಮಿಗಳು ನಿವಾರಣೆಯಾಗುತ್ತವೆ.

ರತ್ನಗಂಬಳಿ ಸ್ವಚ್ಛಗೊಳಿಸಲು

ರತ್ನಗಂಬಳಿ ಸ್ವಚ್ಛಗೊಳಿಸಲು

ಮನೆಯ ಅಂದ ಹೆಚ್ಚಿಸುವ ರತ್ನಗಂಬಳಿಯ ಸ್ವಚ್ಛತೆಯೇ ದೊಡ್ಡ ಸಮಸ್ಯೆ. ಏಕೆಂದರೆ ನೀರು ಕುಡಿದ ಬಳಿಕ ಈ ಕಂಬಳಿ ಹೆಣಭಾರವಾಗುತ್ತದೆ. ಇದನ್ನು ಹೊರಲು ಹತ್ತಾರು ಜನರ ಸಹಾಯ ಬೇಕಾಗುತ್ತದೆ. ಬದಲಿಗೆ ಅಂಟುವಾಳ ರಸ ಬೆರೆತ ನೀರನ್ನು ರತ್ನಗಂಬಳಿಯ ಎಲ್ಲೆಡೆ ನವಿರಾಗಿ ಸಿಂಪಡಿಸಿ ಕೊಂಚ ಹೊತ್ತಿನ ಬಳಿಕ ಬ್ರಶ್ ಮೂಲಕ ಅಥವಾ ವ್ಯಾಕ್ಯೂಮ್ ಕ್ಲೀನರ್ ಮೂಲಕ ಸ್ವಚ್ಛಗೊಳಿಸಿ. ಇದರಿಂದ ಕಂಬಳಿಯನ್ನು ಅದರ ಸ್ಥಾನದಿಂದ ತೆಗೆಯದೆಯೇ ಸ್ವಚ್ಛಗೊಳಿಸಬಹುದು. ಇದು ಒಣಗಲೂ ಅತಿ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಹೆಚ್ಚೂ ಕಡಿಮೆ ಸ್ವಚ್ಛಗೊಳಿಸಿದ ಮರುಕ್ಷಣವೇ ಇದನ್ನು ಬಳಸಲು ಪ್ರಾರಂಭಿಸಬಹುದು.

ದೇವರ ವಿಗ್ರಹಗಳ ಸ್ವಚ್ಛತೆಗೆ

ದೇವರ ವಿಗ್ರಹಗಳ ಸ್ವಚ್ಛತೆಗೆ

ಅಂಟುವಾಳ ಕಾಯಿಯನ್ನು ನೀರಿನಲ್ಲಿ ನೆನೆಸಿ ಆ ನೀರಿನಲ್ಲಿ ವಿಗ್ರಹಗಳನ್ನು ಮುಳುಗಿಸಿಡಿ. ಸುಮಾರು ಅರ್ಧ ಗಂಟೆ ಅಥವಾ ಒಂದು ಗಂಟೆಯ ಬಳಿಕ ವಿಗ್ರಹವನ್ನು ಹೊರತೆಗೆದು ಇದೇ ನೀರಿನಲ್ಲಿ ಅದ್ದಿದ ಹತ್ತಿಯ ಒರಟು ಬಟ್ಟೆಯಿಂದ ಕೊಂಚ ಒತ್ತಡ ನೀಡಿ ಒರೆಸಿ. ತುಕ್ಕು ಸುಲಭವಾಗಿ ನಿವಾರಣೆಯಾಗಿ ವಿಗ್ರಹಗಳು ತಮ್ಮ ಮೂಲಬಣ್ಣದಲ್ಲಿ ಹೊಳೆಯುತ್ತವೆ.

English summary

House Cleaning Tips With Soap Nut

Washing Nuts or Ritha / Reetha /Aritha (in Hindi) or Anthwaal (Kannada) - these are some of the terms this nut is referred to most of the time. Did you know soap nut is an effective natural ingredient you can use to make your home clean and sparkle. It is also inexpensive so this means no more holes in your pocket. Soap nut is widely used for beauty purposes. It is a natural and a perfect shampoo based ingredient that is good for your tresses. But, today Boldsky shares with you different ways in which you can use this cheap ingredient to clean your home.
X
Desktop Bottom Promotion