For Quick Alerts
ALLOW NOTIFICATIONS  
For Daily Alerts

ಇನ್ನು ಮಾರುಕಟ್ಟೆಯ ದುಬಾರಿ ಬೆಲೆಯ ಶಾಂಪೂಗೆ ಗುಡ್ ಬೈ ಹೇಳಿ..!

By Super
|

ಆರೋಗ್ಯಯುತವಾದ ಹಾಗೂ ಹೊಳೆಯುವ ಕಾ೦ತಿಯುಕ್ತ ಕೇಶರಾಶಿಯು ಯಾರಿಗೇ ತಾನೇ ಬೇಡ ಹೇಳಿ?! ನಿಮ್ಮ ಜೀವನಗಳಿ೦ದ ಮಾನಸಿಕ ಒತ್ತಡವನ್ನು ಒ೦ದು ವೇಳೆ ನಿವಾರಿಸಿಕೊಳ್ಳಲು ಸಾಧ್ಯವಾದಲ್ಲಿ, ಉತ್ತಮ ಸ೦ತುಲಿತ ಆಹಾರಕ್ರಮವನ್ನು ಅನುಸರಿಸಿದಲ್ಲಿ, ಹಾಗೂ ನೀರನ್ನು ಧಾರಾಳವಾಗಿ ಸೇವಿಸುತ್ತಿದ್ದಲ್ಲಿ, ನಿಮ್ಮ ತ್ವಚೆ ಹಾಗೂ ಕೇಶರಾಶಿ ಅಥವಾ ಕೂದಲಿನ ಅಂದವು ಆರೋಗ್ಯಪೂರ್ಣ ಬೆಳವಣಿಗೆಯಿ೦ದ ನಳನಳಿಸುವ೦ತಾಗುತ್ತವೆ.

ಕೇಶರಾಶಿಯು ಮನಸೂರೆಗೊಳ್ಳುವ೦ತೆ ಕಾಣಬೇಕೆ೦ದು ನೀವು ಬಯಸಿದಲ್ಲಿ, ಈ ದಿಶೆಯಲ್ಲಿ ನೀವು ತೆಗೆದುಕೊಳ್ಳಬೇಕಾದ ಮೊದಲ ಕ್ರಮವೇನೆ೦ದರೆ, ನಿಮ್ಮ ಕೇಶರಾಶಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊ೦ದಿಗೆ, ಕೇಶರಾಶಿಯನ್ನು ಆ೦ತರ೦ಗಿಕವಾಗಿಯೂ ಹಾಗೂ ಬಹಿರ೦ಗವಾಗಿಯೂ ಚೆನ್ನಾಗಿ ಪೋಷಿಸಿಟ್ಟುಕೊಳ್ಳುವುದು.

ಇವೆಲ್ಲಕ್ಕಿ೦ತಲೂ ಹೊರತಾಗಿ, ನಿಮ್ಮ ಕೇಶರಾಶಿಗಾಗಿ ಒ೦ದು ಉತ್ತಮ ಶ್ಯಾ೦ಪೂ ಹಾಗೂ ಕ೦ಡೀಶನರ್‌ಗಳನ್ನು ಬಳಸಿಕೊಳ್ಳುವುದು ತೀರಾ ಅವಶ್ಯಕವಾಗಿರುತ್ತದೆ. ಹೆಚ್ಚಿನ ವಾಣಿಜ್ಯೋದ್ದೇಶದ ಉತ್ಪನ್ನಗಳು ನೆತ್ತಿಯಿ೦ದ ನೈಸರ್ಗಿಕ ತೈಲಾ೦ಶವನ್ನು ನಿವಾರಿಸಿಬಿಡುತ್ತವೆ. ಈ ವಾಣಿಜ್ಯೋದ್ದೇಶದ ಉತ್ಪನ್ನಗಳ ಪೈಕಿ ಹೆಚ್ಚಿನವುಗಳಲ್ಲಿ ಅಡಕವಾಗಿರಬಹುದಾದ ಸ೦ಶ್ಲೇಷಿತ ಉತ್ಪನ್ನಗಳು ನಿಮ್ಮ ಕೇಶರಾಶಿಗೆ ಕೃತಕವಾಗಿ ಪ್ರೋಟೀನ್ ಪಾಲಿಮರ್‌ಗಳನ್ನು ಬಳಿಯುತ್ತವೆ ಅಥವಾ ಲೇಪಿಸುತ್ತವೆ. ಹೀಗಾದಾಗ ಕೂದಲು ದೊರಗಾಗಿ, ಶಿಥಿಲಗೊಳ್ಳತೊಡಗುತ್ತದೆ. ನೀಲಗಿರಿ ತೈಲದಿಂದ ನೂರೆಂಟು ಉಪಯೋಗ

ಇದಕ್ಕೆ ವ್ಯತಿರಿಕ್ತವಾಗಿ ಮನೆಯಲ್ಲಿಯೇ ತಯಾರಿಸಿಕೊ೦ಡ ಶಾ೦ಪೂಗಳು ಬಳಕೆಗೆ ಸುರಕ್ಷಿತವಾಗಿರುತ್ತವೆ, ಆರೋಗ್ಯದಾಯಕವಾಗಿರುತ್ತವೆ, ಅಗ್ಗವಾಗಿರುತ್ತವೆ, ಹಾಗೂ ಎಲ್ಲಕ್ಕಿ೦ತಲೂ ಹೆಚ್ಚಾಗಿ ನಿಮ್ಮ ಕೇಶರಾಶಿಯ ಆರೋಗ್ಯಕ್ಕೆ ಬಲು ಹಿತಕರವಾಗಿರುತ್ತವೆ. ನಾವೀಗ ಮನೆಯಲ್ಲಿಯೇ ಶಾಂಪೂವನ್ನು ತಯಾರಿಸುವ ಬಗೆ ಹೇಗೆ೦ಬುದನ್ನು ಇಲ್ಲಿ ನೋಡೋಣ.

Tips To Make Natural Homemade Shampoo For Good Hair

ಬೇಕಾಗುವ ಸಾಮಗ್ರಿಗಳು:
*ಅರ್ಧ ಕಪ್ ನಷ್ಟು ಭಟ್ಟಿ ಇಳಿಸಿದ ನೀರು
*ಕಾಲು ಭಾಗದಷ್ಟು ದ್ರವ castile ಸಾಬೂನು
*ಎರಡು ಚಮಚಗಳಷ್ಟು ಅವೊಕಾಡೊ ಎಣ್ಣೆ
*ಟೇಬಲ್ ಚಮಚದಷ್ಟು ಪೆಪ್ಪರ್ ಮಿ೦ಟ್ ಎಣ್ಣೆ
* ಒ೦ದು ಟೇಬಲ್ ಚಮಚದಷ್ಟು ಟೀ ಟ್ರೀ ಎಣ್ಣೆ
*ಒ೦ದು ಟೇಬಲ್ ಚಮಚದಷ್ಟು ತರಕಾರಿ ಗ್ಲಿಸಿರಿನ್
*ಹತ್ತರಿ೦ದ ಹದಿನೈದು ಹನಿಗಳಷ್ಟು ತೆಂಗಿನ ಎಣ್ಣೆ


*ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಚೆನ್ನಾಗಿ ಮಿಶ್ರಗೊಳಿಸಿ ದ್ರಾವಣವನ್ನು ಒ೦ದು ಸೀಸದಲ್ಲಿ ಶೇಖರಿಸಿಡಿರಿ. ಈ ಉದ್ದೇಶಕ್ಕಾಗಿ ನೀವು ಒ೦ದು ಹಳೆಯ ಶಾಂಪೂವಿನ ಬಾಟಲ್ ಅನ್ನೂ ಕೂಡಾ ಬಳಸಬಹುದು. ಬಳಕೆಗೆ ಮೊದಲು ಬಾಟಲ್ ಅನ್ನು ಚೆನ್ನಾಗಿ ಕುಲುಕಿರಿ. ಬಳಸಿಕೊಳ್ಳುವಾಗ, ನಿಮ್ಮ ನೆತ್ತಿಯ ಮೇಲೆ ಸಣ್ಣ ಪ್ರಮಾಣದಲ್ಲಿ ಶಾ೦ಪೂವನ್ನು ಸುರಿದುಕೊಳ್ಳಿರಿ. ಶಾಂಪೂವು ನೆತ್ತಿಯ ಮೇಲೆ ಚೆನ್ನಾಗಿ ನೊರೆಯನ್ನುತ್ಪತ್ತಿ ಮಾಡಲಿ.
*ಹೀಗೆ ಬಳಸಿಕೊ೦ಡಲ್ಲಿ ಆರೋಗ್ಯಯುತವಾದ ಕೇಶರಾಶಿಯು ನಿಮ್ಮದಾಗುತ್ತದೆ. ಜೊತೆಗೆ, ಫಲಿತಾ೦ಶವನ್ನು ಅತ್ಯುತ್ತಮವಾಗಿ ಮೂಡಿಬರುವ೦ತಾಗಿಸುವ ನಿಟ್ಟಿನಲ್ಲಿ, ನೈಸರ್ಗಿಕ ಶಾಂಪೂವನ್ನು ಕೈಗೆತ್ತಿಕೊಳ್ಳುವುದಕ್ಕೆ ಮೊದಲು ಕೇಶರಾಶಿಯನ್ನು ಕೊಳೆಕಲ್ಮಶಗಳಿ೦ದ ಮುಕ್ತವಾಗಿಸಿಕೊಳ್ಳಿ. ಹೀಗೆ ಮಾಡುವುದರಿ೦ದ ನಿಮ್ಮ ನೆತ್ತಿಯಲ್ಲಿರಬಹುದಾದ ಸಮಸ್ತ ರಾಸಾಯನಿಕ ಪದಾರ್ಥಗಳ ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಕೇಶರಾಶಿಗೆ ಮಹತ್ತರ ಹೊಳಪನ್ನೂ ಹಾಗೂ ವಿನ್ಯಾಸವನ್ನೂ ನೀಡುತ್ತದೆ.
*ಶಾಂಪೂವನ್ನು ಬಳಸಿಕೊ೦ಡು ನೀರನ್ನು ತೊಳೆದುಕೊ೦ಡ ಬಳಿಕ, ನೀವು ನಿಮ್ಮ ಕೇಶರಾಶಿಗಾಗಿ ಮೊಸರು ಹಾಗೂ ಮೊಟ್ಟೆಗಳ ಮಿಶ್ರಣದ ಕ೦ಡೀಶನರ್ ಅನ್ನು ಬಳಸಿಕೊಳ್ಳಬಹುದು. ಈ ನೈಸರ್ಗಿಕವಾದ ಕ೦ಡೀಶನರ್, ಶುಷ್ಕ ಹಾಗೂ ಶಿಥಿಲಗೊ೦ಡಿರುವ ಕೇಶರಾಶಿಯ ಆರೋಗ್ಯಕ್ಕೆ ಹಿತಕರವಾಗಿದೆ ಹಾಗೂ ಜೊತೆಗೆ ಕೇಶರಾಶಿಯನ್ನು ಬೆಳವಣಿಗೆಯನ್ನು ಹಾಗೂ ದಟ್ಟತೆಯನ್ನು ವೃದ್ಧಿಸುತ್ತದೆ.
English summary

Tips To Make Natural Homemade Shampoo For Good Hair

All of us desire for healthy and shiny hair. If you eliminate stress from your lives, eat a well-balanced diet and have plenty of water, your skin and hair will radiate a healthy glow. The first step towards great-looking hair is to keep it clean and well nourished both from inside and outside.
Story first published: Tuesday, April 28, 2015, 16:29 [IST]
X
Desktop Bottom Promotion