ಕೂದಲಿನ ಆರೈಕೆಗೆ ಹಳ್ಳಿಗಾಡಿನ ಸೀಗೆಕಾಯಿ

By Deepu

ಹಿಂದಿನ ಕಾಲದಿಂದಲೂ ಸೀಗೆ ಕಾಯಿಯು ನಮ್ಮ ಕೂದಲನ್ನು ಆರೈಕೆ ಮಾಡುವ ಒಂದು ಉತ್ತಮ ಕೇಶ ಸಂರಕ್ಷಕ ಪದಾರ್ಥವಾಗಿ ಬಳಕೆಯಲ್ಲಿದೆ. ಶಾಂಪೂಗಳು ನಮ್ಮ ಮನೆಯನ್ನು ಪ್ರವೇಶಿಸುವ ಮುನ್ನ ಅದರ ಸ್ಥಳದಲ್ಲಿ ಯಾವಾಗಲು ಸೀಗೆಕಾಯಿ ಇರುತ್ತಿತ್ತು. ಊರ ಪಕ್ಕದಲ್ಲಿ ಒಂದು ಸೀಗೆ ಬೇಲಿ ಇರುತ್ತಿದ್ದವು. ಆ ಸೀಗೆ ಬೇಲಿ ಅಥವಾ ಮರದ ಬಳಿ ಹೋಗಿ ಸೀಗೆಕಾಯಿಯನ್ನು ಹಾಯ್ದುಕೊಂಡು ಬಂದು, ಅದನ್ನು ಒಣಗಿಸಿ, ಪುಡಿ ಮಾಡಿಕೊಂಡು ಕೂದಲನ್ನು ತೊಳೆಯಲು ಬಳಸಿಕೊಳ್ಳುತ್ತಿದ್ದರು.

ಸೀಗೆಕಾಯಿಯು ಕೂದಲನ್ನು ಕಾಪಾಡುವ ಒಂದು ಸ್ವಾಭಾವಿಕ ಉತ್ಪನ್ನ. ಇದರಲ್ಲಿ ಪಿ ಎಚ್ ಪ್ರಮಾಣ ಕಡಿಮೆ ಇರುತ್ತದೆ ಮತ್ತು ಇದು ಸುಂದರ, ಹೊಳೆಯುವ ಕೂದಲನ್ನು ಬಯಸುವವರಿಗೆ ಹೇಳಿ ಮಾಡಿಸಿದ ಮನೆ ಮದ್ದಾಗಿದೆ. ಜೊತೆಗೆ ಇದು ಮೆದು ಪದಾರ್ಥವಾಗಿದ್ದು ಕೂದಲಿನ ಮೇಲೆ ಯಾವುದೇ ಅಡ್ಡಪರಿಣಾಮವನ್ನು ಬೀರದೆ, ಕೂದಲಿಗೆ ನೀರಿನಂಶವನ್ನು ನೀಡಿ, ಕೂದಲು ಇನ್ನಷ್ಟು ಸೊಂಪಾಗಿ ಹೊಳೆಯುವಂತೆ ಮಾಡುತ್ತದೆ.

ಹೀಗೆ ಸೀಗೆಕಾಯಿಯನ್ನು ಪ್ರತಿ ನಿತ್ಯ ಬಳಸುವುದರಿಂದ ಕೂದಲಿನ ಬುಡ, ಕಾಂಡ ಎಲ್ಲವೂ ಸದೃಢವಾಗುವುದರ ಜೊತೆಗೆ, ತಲೆ ಹೊಟ್ಟು ಸಹ ನಿವಾರಣೆಯಾಗುತ್ತದೆ ಮತ್ತು ಕೂದಲಿಗೆ ಹಿಂದಿನ ಕಳೆ ಮತ್ತು ಜೀವಂತಿಕೆ ಲಭಿಸುತ್ತದೆ. ಜೊತೆಗೆ ಸೀಗೆಕಾಯಿ ಒಂದು ಉತ್ತಮ ಕಂಡೀಶನರ್ ಸಹ ಹೌದು ಎಂಬುದನ್ನು ಗಮನಿಸಲೇಬೇಕಾದ ಅಂಶವಾಗಿದೆ.

ಸೀಗೆಕಾಯಿಯಲ್ಲಿ ಇರುವ ಅಂಶಗಳು ಕೂದಲಿನ ಬೇರಿನಲ್ಲಿರುವ ಸೂಕ್ಷ್ಮ ಪೋಷಕಾಂಶಗಳನ್ನು ವರ್ಧಿಸಿ, ಕೂದಲ ಬೆಳವಣಿಗೆಯನ್ನು ಸುಗಮಗೂಳಿಸುತ್ತದೆ. ಹೀಗೆ ಹಲವಾರು ವಿಧದಲ್ಲಿ ಸೀಗೆಕಾಯಿಯು ನಿಮ್ಮ ಕೂದಲಿಗೆ ಪ್ರಯೋಜನವನ್ನು ಉಂಟು ಮಾಡುತ್ತದೆ. ಈ ಅಂಕಣದಲ್ಲಿ ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಸೀಗೆಕಾಯಿಯ ಕೆಲವೊಂದು ಪ್ರಯೋಜನಗಳನ್ನು ಹಂಚಿಕೊಳ್ಳುತ್ತಿದೆ. ಇದನ್ನು ತಿಳಿದುಕೊಂಡು ಸೀಗೆಕಾಯಿಯನ್ನು ನಿಮ್ಮ ಕೂದಲಿನ ಸದುಪಯೋಗಕ್ಕೆ ಬಳಸಿಕೊಳ್ಳಿ. ಬನ್ನಿ ಸೀಗೆಕಾಯಿ ಏನೆಲ್ಲಾ ಪ್ರಯೋಜನಗಳನ್ನು ನೀಡುತ್ತದೆ ತಿಳಿದುಕೊಳ್ಳೋಣ...

ಬಿಳಿಕೂದಲನ್ನು ತಡೆಯುತ್ತದೆ

ಬಿಳಿಕೂದಲನ್ನು ತಡೆಯುತ್ತದೆ

ಸೀಗೆಕಾಯಿಯಲ್ಲಿ ಬಿಳಿ ಕೂದಲನ್ನು ತಡೆಗಟ್ಟುವ ಹಲವಾರು ಅಂಶಗಳು ಇರುತ್ತವೆ. ಆಮ್ಲಾ, ಸೀಗೆಕಾಯಿ ಮತ್ತು ಅಂಟು ವಾಳ ಪದಾರ್ಥಗಳನ್ನು ಸೇರಿಸಿದ ಹೇರ್ ಪ್ಯಾಕ್ ಅನ್ನು ನಿಮ್ಮ ಕೂದಲಿಗೆ ಲೇಪಿಸುವ ಮೂಲಕ ನಿಮ್ಮ ಕೂದಲು ಬೆಳ್ಳಗಾಗುವುದನ್ನು ತಡೆಯಬಹುದು. ಇದು ನಿಮ್ಮ ಕೂದಲಿಗೆ ಹೊಳಪನ್ನು ನೀಡುವುದರ ಜೊತೆಗೆ ಅದು ನಳನಳಿಸುವಂತೆ ಮಾಡುತ್ತದೆ ಹಾಗು ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ.

ತಲೆಹೊಟ್ಟನ್ನು ನಿವಾರಿಸುತ್ತದೆ

ತಲೆಹೊಟ್ಟನ್ನು ನಿವಾರಿಸುತ್ತದೆ

ಸೀಗೆಕಾಯಿಯು ತಲೆಹೊಟ್ಟಿಗೆ ರಾಮಬಾಣ. ಇದರಲ್ಲಿರುವ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಅಂಶಗಳು ಕೂದಲಿನಲ್ಲಿರುವ ತಲೆಹೊಟ್ಟನ್ನು ನಿವಾರಿಸುವುದರ ಜೊತೆಗೆ, ಕೂದಲಿನ ಬುಡದಲ್ಲಿರುವ ಅನಾರೋಗ್ಯವನ್ನು ಮತ್ತು ಸಮಸ್ಯೆಗಳನ್ನು ನಿವಾರಿಸುತ್ತದೆ. ಸೀಗೆಕಾಯಿಯಿಂದ ನಿಮ್ಮ ಕೂದಲನ್ನು ತೊಳೆದುಕೊಳ್ಳುವ ಮೂಲಕ ನಿಮ್ಮ ಕೂದಲಿನ ಸಮಸ್ಯೆಗಳಿಂದ ಮುಕ್ತರಾಗಬಹುದು.

ಕೂದಲು ಉದುರುವಿಕೆಗೆ ಪರಿಹಾರ

ಕೂದಲು ಉದುರುವಿಕೆಗೆ ಪರಿಹಾರ

ಸೀಗೆಕಾಯಿಯು ಕೂದಲಿನ ಉದುರುವಿಕೆಯನ್ನು ತಡೆಯುತ್ತದೆ. ಜೊತೆಗೆ ಇದು ಕೂದಲನ್ನು ದಪ್ಪ ಸಹ ಮಾಡುತ್ತದೆ. ಇದು ಕೂದಲನ್ನು ಆರೋಗ್ಯವಾಗಿರಿಸುವ ಮೂಲಕ ಅದು ತುಂಡಾಗುವುದನ್ನು ತಡೆಯುತ್ತದೆ. ತುಂಡಾಗುವಿಕೆಯು ಸಹ ಕೂದಲು ಉದುರುವಿಕೆಗೆ ಕಾರಣವಾಗಿರುತ್ತದೆ. ಸೀಗೆಕಾಯಿಯಿಂದ ಇದಕ್ಕೆ ಪರಿಹಾರ ಸಿಕ್ಕುತ್ತದೆ.

ಕೂದಲನ್ನು ಸದೃಢಗೊಳಿಸುತ್ತದೆ

ಕೂದಲನ್ನು ಸದೃಢಗೊಳಿಸುತ್ತದೆ

ಸೀಗೆಕಾಯಿಯು ಕೂದಲಿನ ಬೇರನ್ನು ಸದೃಢಗೊಳಿಸುತ್ತದೆ. ಇದು ಕೂದಲನ್ನು ಬುಡದಿಂದಲೇ ಸದೃಢಗೊಳಿಸುತ್ತದೆ. ಸೀಗೆಕಾಯಿಯನ್ನು ಕೂದಲನ್ನು ಸ್ವಚ್ಛಗೊಳಿಸುವ ಸಾಧನವಾಗಿ ಬಳಸಲಾಗುತದೆ. ಇದಕ್ಕೆ ಸೀಗೆಕಾಯಿಯಲ್ಲಿರುವ ಮೆದು ಗುಣವೇ ಕಾರಣ. ಇದು ಸೀಗೆಕಾಯಿಯ ಒಂದು ಉತ್ತಮ ಪರಿಹಾರವಾಗಿರುತ್ತದೆ.

ಸಣ್ಣ ಪ್ರಮಾಣದ ಗಾಯಗಳನ್ನು ಗುಣಪಡಿಸುತ್ತದೆ

ಸಣ್ಣ ಪ್ರಮಾಣದ ಗಾಯಗಳನ್ನು ಗುಣಪಡಿಸುತ್ತದೆ

ಸೀಗೆಕಾಯಿಯು ಕೂದಲಿನ ಬುಡದಲ್ಲಿರುವ ಕೆಲವೊಂದು ಸಣ್ಣ ಸಣ್ಣ ಗಾಯಗಳನ್ನು ನಿವಾರಣೆ ಮಾಡುತ್ತದೆ. ಸೀಗೆಕಾಯಿಯನ್ನು ಕೂದಲಿನ ಬುಡಕ್ಕೆ ಲೇಪಿಸುವ ಮೂಲಕ ಈ ಪರಿಹಾರವನ್ನು ಪಡೆಯಬಹುದು. ಸೀಗೆಕಾಯಿ ಲೇಪಿಸಿ, ಸ್ವಲ್ಪ ಸಮಯದ ನಂತರ ತೊಳೆದರೆ ಸಾಕು, ಗಾಯ, ಮುಂತಾದ ಸಮಸ್ಯೆಗಳು ನಿಮ್ಮಿಂದ ಮಾಯವಾಗುತ್ತದೆ. ಜೊತೆಗೆ ತುರಿಕೆ ಮತ್ತು ಉರಿಯಿಂದ ಸಹ ಸೀಗೆಕಾಯಿ ಪರಿಹಾರ ನೀಡುತ್ತದೆ.

ಸೀಗೆಕಾಯಿ ಶಾಂಪೂವನ್ನು ಮಾಡುವ ವಿಧಾನ

ಸೀಗೆಕಾಯಿ ಶಾಂಪೂವನ್ನು ಮಾಡುವ ವಿಧಾನ

ಈ ಅದ್ಭುತವಾದ ಶಾಂಪೂವನ್ನು ತಯಾರಿಸುವುದು ತುಂಬಾ ಸುಲಭ. 500 ಮಿ.ಲೀ ನೀರನ್ನು ತೆಗೆದುಕೊಳ್ಳಿ, ಅದರಲ್ಲಿ 5-6 ಅಂಟುವಾಳಗಳನ್ನು ಹಾಕಿ.

ತದನಂತರ 6-7 ತುಂಡು ಸೀಗೆಕಾಯಿ ಮತ್ತು ನೆಲ್ಲಿಕಾಯಿಗಳನ್ನು ಇದಕ್ಕೆ ಬೆರೆಸಿ ರಾತ್ರಿಯೆಲ್ಲ ನೆನೆಯಲು ಬಿಡಿ

*ಮರುದಿನ ಬೆಳಗ್ಗೆ ಈ ಮಿಶ್ರಣವನ್ನು ಬೇಯಿಸಿ. ನಂತರ ಉರಿಯನ್ನು ಆರಿಸಿ. ಮಿಶ್ರಣವನ್ನು ತಣ್ಣಗಾಗಲು ಬಿಡಿ. ನಂತರ ಇವುಗಳನ್ನು ರುಬ್ಬಿಕೊಳ್ಳಿ. ಶಾಂಪೂವಿನ ರೂಪಕ್ಕೆ ಬರುವಂತೆ ರುಬ್ಬಿಕೊಳ್ಳಿ.

*ಇದನ್ನು ಮಾಡುವಾಗ ನಿಮಗೆ ಇವುಗಳಲ್ಲಿ ಅಡಗಿರುವ ಸತ್ವಗಳು ಅರಿವಿಗೆ ಬರುತ್ತವೆ. ಈ ಶಾಂಪೂವಿನಲ್ಲಿರುವ ಎಲ್ಲಾ ಒಳ್ಳೆಯ ಅಂಶಗಳು, ನಿಮ್ಮ ಶಾಂಪೂವನ್ನು ಅತ್ಯಂತ ಆರೋಗ್ಯಕರ ಮಾಡುತ್ತವೆ.

X
Desktop Bottom Promotion