For Quick Alerts
ALLOW NOTIFICATIONS  
For Daily Alerts

ಕೂದಲನ್ನು ಸಮೃದ್ಧಗೊಳಿಸುವ ಹಳ್ಳಿಗಾಡಿನ ಸೀಗೆಕಾಯಿ ಸೋಪ್

By Super
|

ಪ್ರತಿದಿನವೂ ಜನರು ಸರಾಸರಿ ಸುಮಾರು 50 ರಿ೦ದ 100 ರಷ್ಟು ತಲೆಗೂದಲನ್ನು ಕಳೆದುಕೊಳ್ಳುತ್ತಾರೆ ಎ೦ಬುದನ್ನು ಚರ್ಮಶಾಸ್ತ್ರಜ್ಞರೂ ಸಹ ಒಪ್ಪಿಕೊಳ್ಳುತ್ತಾರೆ. ಕಳೆದುಹೋದ ತಲೆಗೂದಲ ಸ್ಥಾನವನ್ನು ಹೊಸತಾಗಿ ಬೆಳೆಯುವ ಕೂದಲು ತು೦ಬುತ್ತದೆಯಾದ್ದರಿ೦ದ ಇದೊ೦ದು ಅತೀ ಸಾಮಾನ್ಯವಾದ ಸ೦ಗತಿಯೇ ಆಗಿದೆ. ಆದಾಗ್ಯೂ, ಅನಾರೋಗ್ಯಕರ ಪರಿಸ್ಥಿತಿಗಳಾದ ಉಷ್ಣ ಅಥವಾ ಬಿಸಿಲು ಹಾಗೂ ರಾಸಾಯನಿಕಗಳಿಗೆ ತಲೆಯನ್ನು ವಿಪರೀತವಾಗಿ ಒಡ್ಡಿಕೊ೦ಡಾಗ ಕೆಲವೊಮ್ಮೆ ತಲೆಗೂದಲು ನಷ್ಟವಾಗುವುದು೦ಟು.

ಆರೋಗ್ಯಕರವಾದ ನೀಳ ಕೂದಲು ಬಹುಶಃ ಪ್ರತಿ ಮಹಿಳೆಯ ಕನಸಾಗಿರುತ್ತದೆ. ಅಲ್ಲದೆ, ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳುವುದಕೊಸ್ಕರ ದುಬಾರಿ ಬೆಲೆಯ ಶಾಂಪೂಗೆ ಮೊರೆ ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ. ಆದ್ದರಿಂದ ನಿಮ್ಮ ಕೂದಲು ಅರೋಗ್ಯಕರ ರೀತಿಯಲ್ಲಿ ಕಾಣುವಂತಾಗಲು ನೀವು ಏನು ಮಾಡಬಹುದು? ಹೀಗೆ ನಿಮ್ಮ ಕೂದಲು ನೀವು ಎಣಿಸಿದಷ್ಟು ಆಕರ್ಷಕವಾಗಿ ಕಾಣಬೇಕೆಂದರೆ ಮಾರುಕಟ್ಟೆಯಲ್ಲಿ ಯಾವುದಾದರೂ ವಸ್ತು ಇದೆಯೇ? ಹೌದು ಅದು ಮಾರುಕಟ್ಟೆಯಲ್ಲಿ ಇದೆ; ನಾವು ಹೇಳುತ್ತಿರುವ ವಸ್ತು 'ಸೀಗೆಕಾಯಿ' ಸೋಪ್! ಇನ್ನು ಮಾರುಕಟ್ಟೆಯ ದುಬಾರಿ ಬೆಲೆಯ ಶಾಂಪೂಗೆ ಗುಡ್ ಬೈ ಹೇಳಿ..!

ಸೀಗೆಕಾಯಿ ಎನ್ನುವುದು ಬಹಳ ಹಿಂದಿನಿಂದ ಕೂದಲು ಮತ್ತು ನೆತ್ತಿಯ ಆರೈಕೆಗಳಿಗೆ ಬಳಕೆಯಾಗುತ್ತಿರುವ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಏಷ್ಯಾ ಉಪಖಂಡದಲ್ಲಿ ಇದು ಶತಮಾನಗಳಿಂದ ಜನಪ್ರಿಯವಾಗಿದೆ ಮತ್ತು ಇತರ ಖಂಡಗಳಲ್ಲಿಯೂ ಇದರ ಬಳಕೆ ಹರಡಿದೆ. ಅಕೇಶಿಯಾ ಕಾನ್ಸಿನ್ನಾ (Acacia Concinna) ಎಂಬ ಮರದ ಹಣ್ಣಿನ ಬೀಜದಿಂದ ತಯಾರಾದ ಸಿಗೆಕಾಯಿ ತಲೆಗೂದಲಿಗೆ ಒಂದು ಅತ್ಯುತ್ತಮವಾಗಿ ಶುದ್ಧೀಕರಿಸುವ ಸಾಧನ. ವರ್ಷಪೂರ್ತಿ ನೀವು ಸುಲಭವಾಗಿ ಸಿಗೆಕಾಯಿ ಸೋಪ್ ಅಂಗಡಿಯಲ್ಲಿ ಕಾಣಬಹುದು ಮತ್ತು ಅದನ್ನು ಕೊಳ್ಳಬಹುದಾದ ಎಟಕುವ ಬೆಲೆಯಲ್ಲಿ ದೊರಕುತ್ತದೆ. ಸೀಗೆಕಾಯಿ ಈ ರೀತಿ ಬಳಸಿದರೆ ಹೆಚ್ಚು ಪರಿಣಾಮಕಾರಿ

ಕೂದಲಿನ ಆರೈಕೆಗೆ

ಕೂದಲಿನ ಆರೈಕೆಗೆ

ಇದು ಅತ್ಯುತ್ತಮವಾಗಿ ನೈಸರ್ಗಿಕ ಶುದ್ಧೀಕರಣ ಕಾರ್ಯವನ್ನು ಮಾಡುತ್ತದೆ ಮತ್ತು ನಿಮ್ಮ ನೆತ್ತಿಯನ್ನು ರಾಸಾಯನಿಕ ವಸ್ತುಗಳಿಂದ ದೂರವಿಟ್ಟು ರಕ್ಷಣೆ ಕೊಡುತ್ತದೆ.

ಸೀಗೆಕಾಯಿ ಸೋಪ್

ಸೀಗೆಕಾಯಿ ಸೋಪ್

ಇಂದು ನಾವೆಲ್ಲಾ ಸ್ನಾನಕ್ಕೆ ವಿಭಿನ್ನ ಶೈಲಿಯ ರಾಸಾಯನಿಕಯುಕ್ತ ಸೋಪ್ ಅನ್ನೇ ಆಯ್ಕೆ ಮಾಡುತ್ತೇವೆ ಆದರೆ ಅವುಗಳ ಬಳಕೆಯಿಂದ ನೆತ್ತಿಯ ಬರಡು ಪರಿಸ್ಥಿತಿ ಉಂಟಾಗುವುದರ ಜೊತೆಗೆ ಅತಿ ಮೇದಸ್ರಾವ (ಒಂದು ದೀರ್ಘಕಾಲದ, ಮರುಕಳಿಸುವ ಚರ್ಮ ರೋಗ) ಪರಿಸ್ಥಿತಿಗೆ ಕಾರಣವಾಗುತ್ತದೆ. ಮತ್ತೊಂದೆಡೆ ಸೀಗೆಕಾಯಿಯಲ್ಲಿ ಕಡಿಮೆ ಮಟ್ಟದ ಪಿ.ಹೆಚ್ (pH - ಆಮ್ಲೀಯ ಪ್ರಮಾಣ) ಇರುತ್ತದೆ ಮತ್ತು ಅದರ ಸೌಮ್ಯ ಸ್ವಭಾವವು ಸೂಕ್ಷ್ಮಚರ್ಮದ ನೆತ್ತಿಯಿರುವವರಿಗೆ ಬಹಳ ಸೂಕ್ತವಾಗಿದೆ. ಅದರ ಬಳಕೆಯಿಂದ ನೆತ್ತಿಯನ್ನು ಬರಡುಮಾಡುವುದಿಲ್ಲ.

ಕಂಡೀಶನರ್ ಅವಶ್ಯಕತೆವಿಲ್ಲ

ಕಂಡೀಶನರ್ ಅವಶ್ಯಕತೆವಿಲ್ಲ

ಸೀಗೆಕಾಯಿ ಕೂದಲನ್ನು ಕಂಡೀಶನ್ ಮಾಡಲು ಮತ್ತು ಸದೃಢಗೊಳಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರ ಪರಿಣಾಮವಾಗಿ ನಿಮ್ಮ ಕೂದಲು ಉದುರುವುದು ನಿಲ್ಲುತ್ತದೆ. ಜೊತೆಗೆ ಇದು ತಲೆ ಹೊಟ್ಟು ನಿವಾರಿಸುವಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತದೆ ಮತ್ತು ಹೆಚ್ಚಿನ ಇನ್‍ಫೆಕ್ಷನ್ ಅನ್ನು ಸಹ ನಿವಾರಿಸುತ್ತದೆ.

ವಿಟಮಿನ್‌ಗಳ ಆಗರ

ವಿಟಮಿನ್‌ಗಳ ಆಗರ

ನಿಮ್ಮ ನೆತ್ತಿಗೆ ಸೀಗೆಕಾಯಿಯಲ್ಲಿರುವ ವಿಟಮಿನ್ ಡಿ ಮತ್ತು ಸಿ ಗಳಿಂದ ಪೋಷಣೆ ಲಭಿಸುತ್ತದೆ.

ಕೂದಲಿನ ಬೆಳವಣಿಗೆಗೆ

ಕೂದಲಿನ ಬೆಳವಣಿಗೆಗೆ

ಸೀಗೆಕಾಯಿ ಸೋಪ್ ಅನ್ನು ಇತರ ಮೂಲಿಕೆಗಳು ಮತ್ತು ನೈಸರ್ಗಿಕ ಸಾರಗಳೊಂದಿಗೆ ಚೆನ್ನಾಗಿ ಸಂಯೋಜಿಸಿರುವುದರಿಂದ ಕೂದಲ ಆರೋಗ್ಯಕ್ಕೆ ಕೂಡ ಪೂರಕವಾಗಿದೆ

ಕೂದಲಿಗೆ ಬಣ್ಣ ಹಚ್ಚುವ ಮುನ್ನ

ಕೂದಲಿಗೆ ಬಣ್ಣ ಹಚ್ಚುವ ಮುನ್ನ

ಕೂದಲಿಗೆ ಬಣ್ಣ (ಹೇರ್ ಡೈ) ಅಥವಾ ಇತರ ಯಾವುದೇ ನೈಸರ್ಗಿಕ ಬಣ್ಣವನ್ನು ಹಚ್ಚುವ ಮುನ್ನ ಕೂದಲನ್ನು ಸೀಗೆಕಾಯಿಂದ ತೊಳೆದುಕೊಳ್ಳಬೇಕು, ಹಾಗೆ ಮಾಡುವುದರಿಂದ ಬಣ್ಣವು ಉತ್ತಮವಾಗಿ ಕೂದಲನ್ನು ನೆನೆಸಿ ಹಚ್ಚಿದ ಬಣ್ಣ ಬಹಳ ಕಾಲ ಉಳಿಯುವ ಹಾಗೆ ಮಾಡುತ್ತದೆ.

ತಲೆಹೊಟ್ಟು ನಿವಾರಣೆಗೆ

ತಲೆಹೊಟ್ಟು ನಿವಾರಣೆಗೆ

ಸೀಗೆಕಾಯಿ ತಲೆಹೊಟ್ಟು ಸೇರದೇ ಇರುವುದಕ್ಕೆ ಸಹಾಯಮಾಡುತ್ತದೆ. ಮತ್ತು ತಲೆಹೊಟ್ಟು ಸೇರುವುದನ್ನು ತಡೆಯದಿದ್ದರೆ ಕೂದಲು ಉದುರುವುದಕ್ಕೆ ಕಾರಣವಾಗಬಹುದು.

English summary

7 Amazing Benefits Of Shikakai Soap For Hair

Do you, like many other young girls, dream of sporting long luscious tresses? Is your hair so brittle and weak, that you need to keep it short in a pony, so it is more manageable?Is there any product that can make your hair as beautiful as you had wanted? Well, there is; and it is shikakai we are talking about!
X
Desktop Bottom Promotion