ಏಳೇ ದಿನದಲ್ಲಿ ಕೈ-ಕಾಲುಗಳನ್ನು ಬಿಳಿಗೊಳಿಸುವ ಮನೆಮದ್ದುಗಳು

Posted By: Sushma Charhra
Subscribe to Boldsky

ಯಾರಿಗೆ ತಾನೆ ಬಿಳಿಬಿಳಿಯಾಗಿರುವ ಕೈ ಕಾಲುಗಳು ಬೇಕು ಅನ್ನೋ ಆಸೆ ಇರಲ್ಲ ಹೇಳಿ.. ಆದ್ರೆ ಹೆಚ್ಚಿನವರು ಸೂರ್ಯನ ಕಿರಣಗಳ ಶಾಖದಿಂದಾಗಿ ಮತ್ತು ಇತರೆ ಅನೇಕ ಕಾರಣಗಳಿಂದಾಗಿ ತಮ್ಮ ಕೈ ಮತ್ತು ಕಾಲುಗಳ ಬಣ್ಣದಲ್ಲಿ ಬದಲಾಗುವ ಸಮಸ್ಯೆಯನ್ನು ಎದುರಿಸುತ್ತಾರೆ. ಮುಖದ ಬಣ್ಣಕ್ಕೆ ಇಲ್ಲವೇ ನಮ್ಮ ದೇಹದ ಒಳ ಚರ್ಮದ ಬಣ್ಣಕ್ಕೆ ಹೋಲಿಸಿದರೆ ಕೈ ಮತ್ತು ಕಾಲುಗಳ ಬಣ್ಣದಲ್ಲಿ ಬಹಳ ವ್ಯತ್ಯಾಸವಿರುವ ಸಾಧ್ಯತೆಗಳಿರುತ್ತೆ. ಆದ್ರೆ ಹೆಚ್ಚಿನವರು ಕೇವಲ ಮುಖದ ಕಾಂತಿ ಹೆಚ್ಚಳ ಮತ್ತು ಮುಖದ ಸೌಂದರ್ಯದ ಬಗ್ಗೆ ಮಾತ್ರ ಕಾಳಜಿ ವಹಿಸ್ತಾರೆ.

ಮಾರ್ಕೆಟ್ ನಲ್ಲಿ ಸಿಗುವ ರೆಡಿಮೇಡ್ ಕ್ರೀಮ್ ಗಳ ಬಳಕೆಯಿಂದ ಯಾವುದೇ ಪರಿಣಾಮ ಸಿಗದೇ ಇದ್ದಲ್ಲಿ ಖಂಡಿತ ನೀವು ಈ ಕೆಳಗೆ ನಾವು ತಿಳಿಸುವ ವಸ್ತುಗಳನ್ನು ಬಳಕೆ ಮಾಡಿ ನೋಡಿ. ಚಿಂತಿಸುವ ಅಗತ್ಯವಿಲ್ಲ. ಕೆಲವು ಸಿಂಪಲ್ ರೆಮಿಡಿಗಳು ನಿಮ್ಮ ಮನೆಮದ್ದುಗಳಾಗಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಲ್ಲದು.ಹಾಗಾದ್ರೆ ಯಾವುದನ್ನು ಬಳಸಬೇಕು ಎಂದು ಕೇಳುತ್ತಿದ್ದೀರಾ.. ಈ ಕೆಳಗಿನ ಮಾಹಿತಿ ಓದಿ.. 

ಕಿತ್ತಳೆ

ಕಿತ್ತಳೆ

ಕಿತ್ತಳೆ ಹಣ್ಣು ನಿಮ್ಮ ಚರ್ಮಕ್ಕೆ ಉತ್ತಮ ಔಷಧಿಯಾಗಬಲ್ಲದು. ಇದರಲ್ಲಿರುವ ವಿಟಮಿನ್ ಇ ಅಂಶ ನಿಮ್ಮ ಚರ್ಮಕ್ಕೆ ಕಾಂತಿ ನೀಡಲು ಸಹಕಾರಿಯಾಗಿದೆ. ಇದು ರಕ್ತಸಂಚಾರವಾಗಲು ಸಹಕರಿಸುತ್ತೆ ಹಾಗಾಗಿ ನಿಮ್ಮ ಚರ್ಮದಲ್ಲಿ ಹೊಳಪು ಬರುತ್ತೆ.

ಕಿತ್ತಳೆ ಪ್ಯಾಕ್

ಕಿತ್ತಳೆ ಪ್ಯಾಕ್

ಕೆಲವು ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪೌಡರ್ ಮಾಡಿ ಇಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ಮೊಸರು ಸೇರಿಸಿ ಕೈ ಮತ್ತು ಕಾಲುಗಳಿಗೆ ಅಪ್ಲೈ ಮಾಡ್ಕೊಂಡು 20 ನಿಮಿಷದ ನಂತರ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಕೆಲವೇ ದಿನದಲ್ಲಿ ಚರ್ಮದ ಬಣ್ಣ ನಿಮ್ಮ ನಿಜವಾದ ಚರ್ಮದ ಬಣ್ಣಕ್ಕೆ ತಿರುಗುತ್ತೆ.

ಕಿತ್ತಳೆ ಸ್ಕ್ರಬ್

ಕಿತ್ತಳೆ ಸ್ಕ್ರಬ್

ಕಿತ್ತಳೆ ಸಿಪ್ಪೆಯ ಪೌಡರ್ ಗೆ ಒಂದು ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪ ಸೇರಿಸಿ, ಮತ್ತು ಬ್ರೌನ್ ಶುಗರ್ ಆಡ್ ಮಾಡಿ ಒಂದು ವೇಳೆ ಬ್ರೌನ್ ಶುಗರ್ ಇಲ್ಲದೆ ಇದ್ದಲ್ಲಿ ನಾರ್ಮಲ್ ಸಕ್ಕರೆಯಾದರೂ ಆದೀತು. ಇದನ್ನು ದಪ್ಪ ಹಿಟ್ಟಿನಂತೆ ಮಾಡಿಕೊಂಡು ಅಪ್ಲೈ ಮಾಡಿಕೊಂಡು 20 ನಿಮಿಷದ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಏಳೇ ದಿನದಲ್ಲಿ ರಿಸಲ್ಟ್ ಸಿಗಲಿದೆ.

ನಿಂಬೆಹಣ್ಣು

ನಿಂಬೆಹಣ್ಣು

ನಿಂಬೆಯ ರಸಕ್ಕೂ ಕೂಡ ಚರ್ಮವನ್ನು ಬಿಳಿಗೊಳಿಸುವ ತಾಕತ್ತಿದೆ.

ನಿಂಬೆ ಪ್ಯಾಕ್

ಮೂರು ಟೇಬಲ್ ಸ್ಪೂನ್ ನಷ್ಟು ನಿಂಬೆರಸಕ್ಕೆ 1 ಟೇಬಲ್ ಸ್ಪೂನ್ ಮೊಸರು ಸೇರಿಸಿ.ಅದಕ್ಕೆ 2 ಟೇಬಲ್ ಸ್ಪೂನ್ ಕಡಲೆ ಹಿಟ್ಟನ್ನು ಮಿಕ್ಸ್ ಮಾಡಿ. ಇದನ್ನು ಕೈ ಮತ್ತು ಕಾಲುಗಳಿಗೆ ಪ್ಯಾಕ್ ನಂತೆ ಅಪ್ಲೈ ಮಾಡಿ20 ನಿಮಿಷದ ನಂತರ ತೊಳೆಯಿರಿ.

ನಿಂಬೆ ಸ್ಕ್ರಬ್

ನಿಂಬೆ ಸ್ಕ್ರಬ್

ಟೇಬಲ್ ಸ್ಪೂನ್ ನಿಂಬೆರಸಕ್ಕೆ 1 ಟೇಬಲ್ ಸ್ಪೂನ್ ಸಕ್ಕರೆ ಮಿಶ್ರಣ ಮಾಡಿ.ಇದಕ್ಕೆ ಎರಡು ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ. ಬೇಕಿದ್ದರೆ ನಿಂಬೆ ಸಿಪ್ಪೆಯ ಪೌಡರ್ ನ್ನು ಕೂಡ ಸೇರಿಸಿಕೊಳ್ಳಬಹುದು. ಈ ಸ್ಕ್ರಬ್ ನ್ನು ನಿಮ್ಮ ಕೈ ಮತ್ತು ಕಾಲುಗಳಿಗೆ ಮಸಾಜ್ ಮಾಡಿಕೊಳ್ಳಿ. ನಂತರ ನಾರ್ಮಲ್ ಟೆಂಪರೇಚರ್ ನ ನೀರಿನಲ್ಲಿ ಕೈ ಮತ್ತು ಕಾಲುಗಳನ್ನು ತೊಳೆದುಕೊಳ್ಳಿ. ಕೇವಲ ಏಳೇ ದಿನದಲ್ಲಿ ರಿಸಲ್ಟ್ ಸಿಗಲಿದೆ.

ಅಲೋವೆರಾ

ಅಲೋವೆರಾ

ಚರ್ಮ ಟ್ಯಾನ್ ಆಗಿದ್ದಾಗ ಅಲವೀರಾ ನಿಮ್ಮ ಚರ್ಮದ ಟ್ಯಾನ್ ಅಂಶವನ್ನು ರಿಮೂವ್ ಮಾಡಲು ಸಹಕರಿಸುತ್ತೆ. ಚರ್ಮವನ್ನು ಹೈಡ್ರೇಟ್ ಮಾಡಿ ಮಾಯಿಶ್ಚರೈಸ್ ಮಾಡಲು ಅಲವೀರಾ ಸಹಾಯ ಮಾಡುತ್ತೆ.

ಅಲೋವೆರಾ ಪ್ಯಾಕ್

ಅಲೋವೆರಾ ಪ್ಯಾಕ್

ಫ್ರೆಷ್ ಅಲೋವೆರಾ ತೆಗೆದುಕೊಂಡು ಅದರ ಜೆಲ್ ರಿಮೂವ್ ಮಾಡಿ. ಈ ಜೆಲ್ ಅನ್ನು ನಿಮ್ಮ ಕೈ ಮತ್ತು ಕಾಲುಗಳಲ್ಲಿ ಅಪ್ಲೈ ಮಾಡಿ ಚೆನ್ನಾಗಿ ಮಸಾಜ್ ಮಾಡಿ. 20 ನಿಮಿಷ ಹಾಗೆಯೇ ಬಿಡಿ.ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಕೈ ಕಾಲುಗಳ ಬಣ್ಣದಲ್ಲಿ ಆಗಿರುವ ವ್ಯತ್ಯಾಸ ಕೆಲವೇ ದಿನದಲ್ಲಿ ನಾರ್ಮಲ್ ಆಗಿ ಬಿಡುತ್ತೆ.

ಅಲೋವೆರಾ ಸ್ಕ್ರಬ್

ಎರಡು ಟೇಬಲ್ ಸ್ಪೂನ್ ಅಲೋವೆರಾ ಜೆಲ್ ಗೆ ಕೆಲವೇ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿ. ಇದನ್ನು ನಿಮ್ಮ ಚರ್ಮದ ಮೇಲೆ ಅಪ್ಲೈ ಮಾಡಿ. 15 ರಿಂದ 20 ನಿಮಿಷ ಇದನ್ನು ಹಾಗೆಯೇ ಬಿಡಿ. ಡ್ರೈ ಆದ ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ.. ಕೈ ಕಾಲುಗಳ ಸೌಂದರ್ಯದ ಹೆಚ್ಚಳಕ್ಕೆ ಇದೊಂದು ಸಿಂಪಲ್ ವಿಧಾನವಾಗಿದ್ದು, ನಿಮಗೆ ಬೆಸ್ಟ್ ರಿಸಲ್ಟ್ ನೀಡಲಿದೆ.

ಸೌತೆಕಾಯಿ

ಸೌತೆಕಾಯಿ

ಸೌತೆಕಾಯಿಯಲ್ಲಿ ವಿಟಮಿನ್ ಎ ಅಂಶವಿದ್ದು ನಿಮ್ಮ ಚರ್ಮದ ಟೋನ್ ಬದಲಾವಣೆಗೆ ಇದು ಸಹಕಾರಿಯಾಗಿದೆ. ಟ್ಯಾನ್ ರಿಮೂವ್ ಮಾಡಲು ಇದು ಬೆಸ್ಟ್ ಮೆಥೆಡ್.

ಸೌತೆಕಾಯಿ ಪ್ಯಾಕ್

ಸೌತೆಕಾಯಿಯನ್ನು ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿ ಪೇಸ್ಟ್ ತಯಾರಿಸಿಕೊಳ್ಳಿ.ಅದಕ್ಕೆ ಎರಡು ಟೇಬಲ್ ಸ್ಪೂನ್ ಅಲವೀರಾ ಜೆಲ್ ಮಿಶ್ರಣ ಮಾಡಿ. ಆ ಪೇಸ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಿಮಗೆ ಕ್ರೀಮಿ ಪೇಸ್ಟ್ ಸಿಗುತ್ತೆ. ದಿನಕ್ಕೆ ಎರಡು ಬಾರಿ ಇದನ್ನು ಅಪ್ಲೈ ಮಾಡಿಕೊಳ್ಳಿ. 10 ನಿಮಿಷದ ನಂತರ ತೊಳೆಯಿರಿ. ರೆಗ್ಯುಲರ್ ಆಗಿ ಇದನ್ನು ಬಳಕೆ ಮಾಡೋದ್ರಿಂದ ನಿಮ್ಮ ಸಮಸ್ಯೆ ನಿಮ್ಮನ್ನು ಬಿಟ್ಟು ದೂರ ಓಡಲಿದೆ.

ಸೌತೆಕಾಯಿ ಸ್ಕ್ರಬ್

4 ಟೇಬಲ್ ಸ್ಪೂನ್ ಸೌತೆಕಾಯಿ ಪೇಸ್ಟ್ ಗೆ ಎರಡು ಟೇಬಲ್ ಸ್ಪೂನ್ ಕಡಲೆ ಹಿಟ್ಟು ಮಿಶ್ರಣ ಮಾಡಿ. ಅದಕ್ಕೆ ಎರಡು ಟೇಬಲ್ ಸ್ಪೂನ್ ನಿಂಬೆ ಹಣ್ಣಿನ ರಸ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಅಪ್ಲೈ ಮಾಡಿಕೊಳ್ಳಿ. 20 ರಿಂದ 25 ನಿಮಿಷ ಬಿಟ್ಟು ಪ್ಯಾಕ್ ಡ್ರೈ ಆದ ನಂತ್ರ ವಾಷ್ ಮಾಡಿ. ಇದನ್ನು ಒಂದು ವಾರ ಪದೇ ಪದೇ ಬಳಕೆ ಮಾಡೋದ್ರಿಂದ 7 ದಿನದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ.

English summary

these-ingredients-will-brighten-your-hands-and-legs-in-7-days

Although there are umpteen ready-made creams that are available in the market to solve this issue, it might take time and a lot of money. Why to worry, when we have simple remedies that we can try at home to get instant results? Here are some natural ingredients to brighten your hands and legs in less than 10 days. Take a look.