For Quick Alerts
ALLOW NOTIFICATIONS  
For Daily Alerts

ಹಿಮ್ಮಡಿ ಆರೋಗ್ಯ ಕಾಪಾಡಬೇಕೆ? ಹಾಗಾದರೆ ಆಯುರ್ವೇದದ ಮೊರೆ ಹೋಗಿ

By Divya
|

ಸೌಂದರ್ಯ ಎನ್ನುವುದು ಕೇವಲ ಮುಖಕ್ಕೆ ಸೀಮಿತವಾಗಿದ್ದಲ್ಲ. ಇಡೀ ದೇಹವನ್ನು ಆಧರಿಸಿಯೇ ಸೌಂದರ್ಯವನ್ನು ಅಳೆಯಲಾಗುತ್ತದೆ. ಹಾಗಾಗಿ ಮುಖದ ಜೊತೆಗೆ ಕೈಬೆರಳು, ಪಾದ ಹಾಗೂ ಹಿಮ್ಮಡಿಯ ಆರೋಗ್ಯವೂ ಗಣನೆಗೆ ಬರುತ್ತದೆ. ಪಾದ ಹಾಗೂ ಹಿಮ್ಮಡಿಯ ಬಗ್ಗೆ ಹೆಚ್ಚು ಕಾಳಜಿ ವಹಿಸದಿದ್ದರೆ ಅದೆಷ್ಟೇ ಬೆಲೆಬಾಳುವ ಅಥವಾ ಸುಂದರವಾದ ಪಾದರಕ್ಷೆಯನ್ನು ಧರಿಸಿದರೂ ಅದು ಸುಂದರವಾಗಿ ಕಾಣದು.

ಕಾಡುವ ಸಮಸ್ಯೆ ಹಿಮ್ಮಡಿ ಒಡಕು-ಇಲ್ಲಿದೆ ಸಿಂಪಲ್ ಮದ್ದು

ದೇಹದ ಎಲ್ಲಾ ಭಾರವನ್ನು ಹೊರುವ ಪಾದಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಪಾದದ ವಿಚಾರವನ್ನು ತೆಗೆದುಕೊಂಡರೆ ಹಿಮ್ಮಡಿ ಒಡೆಯುವುದು, ಹಿಮ್ಮಡಿ ಬಿರುಕು ಬಿಡುವುದು ಸಾಮಾನ್ಯವಾದ ಸಮಸ್ಯೆ. ಈ ಸಮಸ್ಯೆ ನಮ್ಮ ನಿರ್ಲಕ್ಷ್ಯದಿಂದ ಹಾಗೂ ವಂಶಾವಳಿಯ ಸಮಸ್ಯೆಯಿಂದ ಉಂಟಾಗುವ ಸಾಧ್ಯತೆ ಇದೆ. ಧೂಳು ಹಾಗೂ ಶುಷ್ಕ ತ್ವಚೆಯು ನಮ್ಮ ಹಿಮ್ಮಡಿಯ ಆರೋಗ್ಯವನ್ನು ಬಹು ಬೇಗ ಹಾಳು ಮಾಡುತ್ತವೆ. ಇದು ಮೇಲ್ನೋಟಕ್ಕೆ ದೊಡ್ಡ ಸಮಸ್ಯೆ ಅನಿಸದಿದ್ದರೂ, ಸದಾ ಕಾಲ ನೋವು ಉರಿಯಿಂದ ಕೂಡಿರುತ್ತದೆ.

ಪದೇ ಪದೇ ಕಾಡುವ ಹಿಮ್ಮಡಿ ಒಡೆತಕ್ಕೆ ಬೇಸತ್ತು ಹೋಗಿರುವಿರಾ?

ಈ ಸಮಸ್ಯೆಯಿಂದ ಹೊರ ಬರಲು ಕ್ರೀಮ್ ಹಾಗೂ ಲೋಷನ್ ತಾತ್ಕಾಲಿಕವಾದ ಪರಿಹಾರವನ್ನು ನೀಡುತ್ತವೆ. ಆದರೆ ಶಾಶ್ವತವಾಗಿ ಈ ಸಮಸ್ಯೆಯಿಂದ ಮುಕ್ತಿ ಹೊಂದಬೇಕು ಎನ್ನುವ ಮನಸ್ಸು ನಿಮ್ಮದಾಗಿದ್ದರೆ ಆಯುರ್ವೇದ ಚಿಕಿತ್ಸೆಯ ಮೊರೆ ಹೋಗಬಹುದು. ಅದು ಹೇಗೆ? ಎನ್ನುವ ಗೊಂದಲಕ್ಕೆ ಈ ಲೇಖನ ಉತ್ತರ ನೀಡುತ್ತದೆ ನೋಡಿ...

ಆಸನಗಳಿಂದ ಆರೈಕೆ

ಆಸನಗಳಿಂದ ಆರೈಕೆ

ಯೋಗಾಸನವು ನಮ್ಮ ದೇಹದ ಎಲ್ಲಾ ಆರೋಗ್ಯ ಸಮಸ್ಯೆಯನ್ನು ಬಗೆ ಹರಿಸುತ್ತದೆ. ಹಾಗೆಯೇ ಹಿಮ್ಮಡಿಯ ಸೀಳುಗಳನ್ನು ಮುಚ್ಚುತ್ತವೆ. ಚಂದ್ರ ಭೇದನಾ, ಭಾಸ್ತ್ರಿಕಾ ಪ್ರಾಣಯಾಮ, ಸೀತಾಕರಿ ಪ್ರಾಣಯಾಮ, ಸೆಟಾಲಿ ಭಾಸ್ತ್ರಿಕಾ ಪ್ರಾಣಾಯಾಮಗಳು ಹಿಮ್ಮಡಿಯ ಸಮಸ್ಯೆಯನ್ನು ಬಗೆ ಹರಿಸುತ್ತವೆ. ಇವುಗಳ ವಿಧಾನಗಳನ್ನು ಯೋಗ ಶಿಕ್ಷಕರು ಅಥವಾ ತಜ್ಞರಿಂದ ತಿಳಿದುಕೊಳ್ಳಬೇಕು.

ಸರಿಯಾದ ಆಹಾರ ಕ್ರಮ

ಸರಿಯಾದ ಆಹಾರ ಕ್ರಮ

ಆಯುರ್ವೇದದ ಪ್ರಕಾರ ಸೂಕ್ತವಾದ ಆಹಾರ ಕ್ರಮದಿಂದ ಬಿರುಕುಗೊಂಡ ಹಿಮ್ಮಡಿಗೆ ಆರೈಕೆ ನೀಡಬಹುದು. ಆಯುರ್ವೇದದ ಪ್ರಕಾರ ಸಂಸ್ಕರಿಸಿಟ್ಟ ಹಿಟ್ಟುಗಳು, ಬೇಯಿಸಿದ ಟೊಮೆಟೊ, ಬದನೆಕಾಯಿ ಹಾಗೂ ಆಲೂಗಡ್ಡೆಯನ್ನು ಸೇವಿಸಬಾರದು. ಸಾಧ್ಯವಾದಷ್ಟು ಈರುಳ್ಳಿ, ಬೆಳ್ಳುಳ್ಳಿ, ತುಪ್ಪ ಮತ್ತು ಬೆಣ್ಣೆಯನ್ನು ತಿನ್ನಬಹುದು.

ಆಯುರ್ವೇದದ ಪರಿಹಾರವನ್ನು ಅನ್ವಯಿಸಿ

ಆಯುರ್ವೇದದ ಪರಿಹಾರವನ್ನು ಅನ್ವಯಿಸಿ

ಅಶ್ವಗಂಧ ಎಣ್ಣೆ ಮತ್ತು ಜಾತ್ಯಾದಿ ಎಣ್ಣೆಯನ್ನು ಮಿಶ್ರಗೊಳಿಸಿ, ಸ್ವಲ್ಪ ಬಿಸಿ ಮಾಡಿ. ಮಲಗುವ ಮುನ್ನ ಹಿಮ್ಮಡಿಗೆ ಅದನ್ನು ಲೇಪಿಸಿಕೊಂಡು, ಸಾಕ್ಸ್ ಧರಿಸಿ ಮಲಗಿ. ಮರುದಿನ ಬೆಚ್ಚಗಿನ ನೀರು ಹಾಗೂ ಸೋಪುಗಳ ಸಹಾಯದಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ಹಿಮ್ಮಡಿಯು ಆರೋಗ್ಯ ಪೂರ್ಣವಾಗುವುದು.

ಪದ್ಮಾಸನ ಮಾಡಿ

ಪದ್ಮಾಸನ ಮಾಡಿ

ತ್ವಚೆಯನ್ನು ಮೃದುಗೊಳಿಸಿ, ಆರೋಗ್ಯದಿಂದ ಕೂಡಿರುವಂತೆ ಮಾಡಲು ಉತ್ತಮ ಮಾರ್ಗ ಪದ್ಮಾಸನ. ಮೃದುವಾದ ನೀರಿನಲ್ಲಿ ಆಯುರ್ವೇದ ಎಣ್ಣೆಗಳಾದ , ಪ್ಯಾಚೌಲಿ, ಲ್ಯಾವೆಂಡರ್ ಅಥವಾ ಗುಲಾಬಿ ಹೂವಿನ ಎಣ್ಣೆ ಹಾಕಿ. ನಂತರ ಆ ಮಿಶ್ರಣದಲ್ಲಿ ಪಾದವನ್ನು ಮುಳುಗಿಸಿ ಇಡಿ. ಹೀಗೆ 20 ನಿಮಿಷದ ಬಳಿಕ ಕಾಲನ್ನು ಹೊರ ತೆಗೆಯಿರಿ. ಹೀಗೆ ನಿಯಮಿತವಾಗಿ ಮಾಡುತ್ತಾ ಬಂದರೆ ಹಿಮ್ಮಡಿ ಒಡಕು ಸುಧಾರಣೆಗೊಳ್ಳುವುದು.

ಒದ್ದೆಯಾದ ಪಾದರಕ್ಷೆಯನ್ನು ಧರಿಸದಿರಿ

ಒದ್ದೆಯಾದ ಪಾದರಕ್ಷೆಯನ್ನು ಧರಿಸದಿರಿ

ಒದ್ದೆಯಾದ ಶೂ, ಸಾಕ್ಸ್, ಇನ್ನಿತರ ವಿನ್ಯಾಸದ ಪಾದರಕ್ಷೆಯನ್ನು ಧರಿಸದಿರಿ. ಇವು ಒಡ್ಡೆಯಾಗಿದ್ದರೆ ತೇವಾಂಶ ಹೆಚ್ಚುವುದರಿಂದ ಹಿಮ್ಮಡಿಯ ಆರೋಗ್ಯ ಹದಗೆಡುವುದು. ಜೊತೆಗೆ ಬಿರುಕು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸೋಂಕು ಹರಡುವ ಸಾಧ್ಯತೆಯೂ ಇದೆ.

 ಬರಿಗಾಲಲ್ಲಿ ನಡೆಯಿರಿ

ಬರಿಗಾಲಲ್ಲಿ ನಡೆಯಿರಿ

ಆಯುವೇದದ ಪ್ರಕಾರ ಬರಿಗಾಲಲ್ಲಿ ನಡೆಯುವುದರಿಂದಲೂ ಹಿಮ್ಮಡಿ ಆರೋಗ್ಯವನ್ನು ಕಾಪಾಡಬಹುದು. ಪ್ರತೀ ದಿನ ಬೆಳಗ್ಗೆ, ಹುಲ್ಲುಗಾವಲಿನಲ್ಲಿ ಬರಿಗಾಲಿನಿಂದ ನಡೆಯಬೇಕು. ಹೀಗೆ ಮಾಡುವುದರಿಂದ ರಕ್ತ ಸಂಚಾರ ಸುಗಮವಾಗಿ ಒಡಕು ಉಂಟಾಗದು ಎಂದು ಹೇಳಲಾಗುತ್ತದೆ.

English summary

Treating Cracked Heels With Ayurveda

Being beautiful is not only concentrating on your face. Your whole body requires your equal attention. And your feet is the most neglected part of your body.It is your feet that face the most strenuous experience throughout the day. It is very important to relax your feet, so that you can start a new day with new energy. One of the most common feet problems is cracked heels. Instead of applying creams, you can try the best ways to treat cracked heels with Ayurveda.
X
Desktop Bottom Promotion