For Quick Alerts
ALLOW NOTIFICATIONS  
For Daily Alerts

"ಅಪ್ಪ ದಯವಿಟ್ಟು ನೀನು ಹೀಗಿರಬೇಡ": ಮಗಳ ಮನವಿ

|

ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ವಿಧಾನಗಳು. ಆದರೆ ನೀವು ನಿಮ್ಮ ಮಕ್ಕಳೊಂದಿಗೆ ಹೇಗೆ ವರ್ತಿಸುತ್ತೀರಿ ಎಂಬುದು ಅವರ ಯೌವ್ವನದ ಮೇಲೆ ಬಹಳ ದೊಡ್ಡ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿದೆಯಾ?

These Character In Father Will Efffects On Daughter Relationships

ನೀವು ಗಮನಿಸಿರಬಹುದು ಕೆಲವರು ಬೇರೆಯವರೊಂದಿಗೆ ಬೆರೆಯುವುದಕ್ಕೆ ಕಷ್ಟ ಪಡುತ್ತಾರೆ, ಇನ್ನೂ ಕೆಲವರು ಬಹಳ ಸುಲಭವಾಗಿ ಇತರರೊಂದಿಗೆ ಬೆರೆತು ಬಿಡುತ್ತಾರೆ. ಒಂದು ಅಧ್ಯಯನವು ಹೇಳುವ ಪ್ರಕಾರ ಮಗಳ ವರ್ತನೆಯು ಆಕೆಯ ತಂದೆ ಅವಳೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನು ಆಧರಿಸಿರುತ್ತದೆ.

ನೀವಿದನ್ನು ಗಮನಿಸದೆ ಇರಬಹುದು ಆದರೆ ನಿಮ್ಮ ಮಗಳ ವರ್ತನೆಯು ನೀವು ಅವಳೊಂದಿಗೆ ಯಾವ ರೀತಿ ಸಂಬಂಧವನ್ನು ನಿರ್ವಹಿಸಿರುತ್ತೀರಿ ಎಂಬುದನ್ನು ಆಧರಿಸಿರುತ್ತದೆ. ಸರಿಯಾದ ಕ್ರಮದಲ್ಲಿ ನಿಮ್ಮ ಮಗಳೊಂದಿಗೆ ವರ್ತಿಸುವುದರ ಲಾಭ ನಿಮಗೆ ಮತ್ತು ಆಕೆಗೆ ಇಬ್ಬರಿಗೂ ಆಗಲಿದೆ.

ನೀವು ಅದರ ಪರಿಣಾಮವನ್ನು ಖಂಡಿತ ಕೂಡಲೇ ಗಮನಿಸುವುದಿಲ್ಲ ಆದರೆ ಆಕೆಯು ತನ್ನ ಯೌವನವನ್ನು ಪ್ರಾರಂಭಿಸುವಾಗ ಖಂಡಿತ ಅದರ ಫಲಿತಾಂಶ ಲಭ್ಯವಾಗುತ್ತದೆ. ತಂದೆಯಾಗಿರುವ ನೀವು ನಿಮ್ಮಲ್ಲಿರುವ ಕೆಲವು ವಿಷಾಂಶಗಳನ್ನು ತೊಡೆದು ಹಾಕಿಕೊಂಡು ಬದುಕುವುದರ ಪರಿಣಾಮ ನೀವು ನಿಮ್ಮ ಮಗಳು ಬಯಸುವಂತಹ ಉತ್ತಮ ತಂದೆಯಾಗುವುದಕ್ಕೆ ಸಾಧ್ಯವಾಗುತ್ತದೆ.

ಹಾಗಾದ್ರೆ ಆ ವಿಷಾಂಶಗಳು ಯಾವುವು? ತಂದೆ-ಮಗಳ ಸಂಬಂಧದಲ್ಲಿ ತಂದೆಯಾಗಿರುವ ನೀವು ಮಾಡಬಾರದ ಕೆಲವು ವಿಚಾರಗಳ ಬಗ್ಗೆ ಹೇಳ್ತೀವಿ ಕೇಳಿ.

ತಂದೆಯ ಅನುಪಸ್ಥಿತಿ

ತಂದೆಯ ಅನುಪಸ್ಥಿತಿ

ಈ ರೀತಿಯ ತಂದೆಯಂದಿರು ತಮ್ಮ ಕುಟುಂಬ ವ್ಯವಸ್ಥೆಯಿಂದಲೆ ಹೊರಹೋಗಿರುತ್ತಾರೆ. ಈ ರೀತಿ ತನ್ನ ಕುಟುಂಬವನ್ನು ತೊರೆದ ತಂದೆ ನಿಜಕ್ಕೂ ಆ ಕುಟುಂಬಕ್ಕೆ ಅನಾರೋಗ್ಯಕಾರಿ. ಇದು ಮಗಳಿಗೆ ಭಯವನ್ನು ಸೃಷ್ಟಿಸಬಹುದು ಮತ್ತು ಒತ್ತಡದ ಜೀವನಕ್ಕೆ ಆಕೆಯನ್ನು ತಳ್ಳುವ ಸಾಧ್ಯತೆ ಇದೆ.

ಇದು ಜೈಲು ಸೇರಿರುವ ತಂದೆಯರಿಗೂ ಕೂಡ ಅನ್ವಯಿಸುತ್ತದೆ. ಅವರ ಮಕ್ಕಳು ತಂದೆಯ ಪ್ರೀತಿಯ ಹೊರತಾಗಿಯೂ ಬೆಳೆಯಬೇಕಾಗುತ್ತದೆ. ಅವರನ್ನು ಬೆದರಿಸಿದಾಗ ಬೆಂಬಲಕ್ಕೆ ನಿಲ್ಲಲು ಇಂತಹ ಮಕ್ಕಳಿಗೆ ಯಾರೂ ಇರುವುದಿಲ್ಲ. ಜೈಲಿಗೆ ಕರೆ ಮಾಡುವುದಕ್ಕೂ ಸಾಧ್ಯವಿಲ್ಲ. ಆ ವೆಚ್ಚ ಭರಿಸುವುದಕ್ಕೂ ಅಸಾಧ್ಯ.ಹೆಚ್ಚಿನ ಕುಟುಂಬದವರಿಗೆ ಜೈಲಿನಲ್ಲಿರುವ ತಂದೆಯನ್ನು ಮಾತನಾಡಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ಇದೇ ಕಾರಣಕ್ಕೆ ಜೈಲ್ ಏಡ್ ನ್ನು ಸ್ಥಾಪಿಸಲಾಯಿತು. ಜೈಲು ಸೇವೆಗಳ ಮೂಲಕ ಸೆರೆವಾಸವನ್ನು ನಿಭಾಯಿಸಲು ಮತ್ತು ಜೈಲಿನಲ್ಲಿರುವ ವ್ಯಕ್ತಿಗಳ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶ ಹೊಂದಲಾಗಿದೆ. ಅಗ್ಗದ ಜೈಲು ಕರೆಗಳನ್ನು ಮಾಡುವುದರಿಂದ ಹಿಡಿದು ಜೈಲು ಮೇಲ್ ಪೋಸ್ಟ್‌ಕಾರ್ಡ್‌ಗಳನ್ನು ಕಳುಹಿಸುವವರೆಗೆ ಇದೀಗ ಅವಕಾಶವಿದೆ. ಸ್ಥಳೀಯ ಜೈಲು ಬೆಂಬಲ ಗುಂಪುಗಳನ್ನು ಹುಡುಕಲು ನೀವು ನಮ್ಮ ಆನ್‌ಲೈನ್ ಡೇಟಾಬೇಸ್ ಅನ್ನು ಸಹ ಬಳಸಬಹುದು. ಅಥವಾ ದೇಶದಲ್ಲಿ ಎಲ್ಲಿಯಾದರೂ ಕೈದಿಯನ್ನು ಹುಡುಕಲು ನಮ್ಮ ಕೈದಿ ಲೊಕೇಟರ್ ನ್ನು ಬಳಸಬಹುದು.

ಕಾಯಿಲೆಯಲ್ಲಿರುವ ತಂದೆ

ಕಾಯಿಲೆಯಲ್ಲಿರುವ ತಂದೆ

ಇದು ನಿಮ್ಮ ಕಂಟ್ರೋಲ್ ನಲ್ಲಿ ಇಲ್ಲದೆ ಇರುವ ವಿಚಾರ. ಆದರೂ ಇದು ನಿಮ್ಮ ಮಗಳಿಗೆ ತೊಂದರೆಯುಂಟು ಮಾಡಬಹುದು. ಅನುಪಸ್ಥಿತಿಯಲ್ಲಿ ರುವ ತಂದೆಯಿಂದಾಗುವ ಸಮಸ್ಯೆಯಂತೆ ಇದೂ ಕೂಡ ಮಗಳಲ್ಲಿ ಕೆಟ್ಟ ಭಾವನೆಗೆ ಕಾರಣವಾಗಬಹುದು. ಎಲ್ಲಾ ಗಂಡಸರೂ ಇಷ್ಟೇ. ನಮ್ಮನ್ನು ತೊರೆದು ಬಿಡುತ್ತಾರೆ ಎಂಬ ಭಾವನೆ‌ ಸೃಷ್ಟಿಸಬಹುದು.

ಅನುಪಸ್ಥಿತಿಯಲ್ಲಿರುವ ತಂದೆ

ಅನುಪಸ್ಥಿತಿಯಲ್ಲಿರುವ ತಂದೆ

ದೈಹಿಕವಾಗಿ ಉಪಸ್ಥಿತಿ ಇದ್ದರೂ ಮಾನಸಿಕವಾಗಿ ಮಗಳ ಜೊತೆ ಅನುಪಸ್ಥಿತಿಯಲ್ಲಿರುವ ಕೆಲವು ತಂದೆಯಿರುತ್ತಾರೆ. ದೈಹಿಕ ಉಪಸ್ಥಿತಿಯ ಜೊತೆಗೆ ಮಗಳ ಜೊತೆಗಿನ ಮಾನಸಿಕ ಉಪಸ್ಥಿತಿ ಕೂಡ ಬಹಳ ಮುಖ್ಯವಾಗಿರುತ್ತದೆ. ಇಲ್ಲದೆ ಇದ್ದರೆ ನಿಮ್ಮ ಮಗಳು ತಂದೆಯಿಂದ ಅಸಡ್ಡೆಗೆ ಒಳಗಾದ ಭಾವನೆಗೆ ಹೋಗಬಹುದು. ತಂದೆ ತನ್ನನ್ನು ಪ್ರೀತಿಸುವುದಿಲ್ಲ ಅಂದುಕೊಳ್ಳಬಹುದು. ಹಾಗಾಗಿ ಆಕೆ‌ ಖುದ್ದು ತನ್ನ ಸಮಸ್ಯೆಯನ್ನು ಮತ್ತು ಭವಿಷ್ಯದಲ್ಲಿ ತನ್ನ ಸಂಗಾತಿಯ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲವಾಗಬಹುದು.

ನಂಬಿಕೆಗೆ ಅನರ್ಹವಾಗಿರುವ ತಂದೆ

ನಂಬಿಕೆಗೆ ಅನರ್ಹವಾಗಿರುವ ತಂದೆ

ಯಾವ ತಂದೆ ತನ್ನ ಹೆಂಡತಿಗೆ ಮೋಸ ಮಾಡುತ್ತಾನೋ ಆತ ತನ್ನ ಇಡೀ ಕುಟುಂಬಕ್ಕೆ ಮೋಸ ಮಾಡುತ್ತಾನೆ. ಹಾಗಾಗಿ ನಿಮ್ಮ ಸಂಗಾತಿಗೆ ಮಾತ್ರ ಅಪನಂಬಿಕೆ ಅ‌ನ್ನೋ ವಿಚಾರ ಅನ್ವಯಿಸುತ್ತದೆ ಎಂದು ಭಾವಿಸಬೇಡಿ. ಬದಲಾಗಿ ಇದು ಅಪನಂಬಿಕೆಯ ವಿಚಾರ ನಿಮ್ಮ ಮಗಳಿಗೂ ಅನ್ವಯಿಸುತ್ತದೆ.

ನಿಮ್ಮ ಮಗಳ ವಿಚಾರದಲ್ಲಿ ಇದು ಅನಾರೋಗ್ಯಕಾರಿಯಾದ ಸಂಗತಿಯಾಗಿದ್ದು ಇದು ಇತರರೊಂದಿನ ಅವಳ ಸಂಬಂಧದ ಮೇಲೂ ಪರಿಣಾಮ ಬೀರಬಹುದು. ನಿಮ್ಮ ಮಗಳಿಗೆ ನಂಬಿಕೆ ಸಮಸ್ಯೆ ಎದುರಾಗಬಹುದು ಮತ್ತು ಆಕೆ ಎಲ್ಲಾ ಗಂಡಸರು ಮೋಸಗಾರರು ಎಂದು ಭಾವಿಸಬಹುದು.

ಚಟದಲ್ಲಿರುವ ತಂದೆ

ಚಟದಲ್ಲಿರುವ ತಂದೆ

ಇದೀಗ ಈ ವಿಧದ ತಂದೆ ಮಗಳ ಸಂಬಂಧವು ಬಹಳ ಕಿರಿಕಿರಿ ಮಾಡುತ್ತದೆ. ವ್ಯಸನಕ್ಕೆ ಸಿಲುಕಿರುವ ತಂದೆಗಳು ಅವನ ಮಗುವಿಗೆ ಪ್ರತ್ಯೇಕತೆಯನ್ನು ಸೃಷ್ಟಿಸುತ್ತಾರೆ. ಚಟದಲ್ಲಿರುವ ತಂದೆ ಬಹಳ ತೊಂದರೆದಾಯಕ ಯಾಕೆಂದರೆ ಮಗಳೂ ಕೂಡ ತಂದೆಯ ಚಟವನ್ನೇ ಕಲಿತು ಬಿಡುವ ಸಾಧ್ಯತೆ ಹೆಚ್ಚಿರುತ್ತದೆ.

 ನಿಂದನೀಯ ಅಪ್ಪ

ನಿಂದನೀಯ ಅಪ್ಪ

ಈ ರೀತಿಯ ತಂದೆ ಅತ್ಯಂತ ಆಘಾತಕಾರಿ. ಲೈಂಗಿಕ ಮತ್ತು ದೈಹಿಕ ಕಿರುಕುಳವು ನಿಮ್ಮ ಮಗಳ ಮೇಲೆ ಮಾನಸಿಕ ಪರಿಣಾಮಗಳನ್ನು ಬೀರುತ್ತದೆ. ಇದು ಸಾಮಾನ್ಯ ನಡವಳಿಕೆಯಲ್ಲ ಮತ್ತು ನಿಮ್ಮ ಮಗಳು ಇದನ್ನು ಎಂದಿಗೂ ಅನುಭವಿಸಬಾರದು. ದುರದೃಷ್ಟವಶಾತ್, ತಮ್ಮ ಸ್ವಂತ ತಂದೆಯಿಂದ ಲೈಂಗಿಕ ಕಿರುಕುಳಕ್ಕೊಳಗಾದ ಬಹಳಷ್ಟು ಮಹಿಳೆಯರು ಇದ್ದಾರೆ. ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ನೈತಿಕ ನಡವಳಿಕೆಯ ಸಮಸ್ಯೆಗಳಿರಬಹುದು ಎಂದು ಸಮೀಕ್ಷೆಗಳು ಹೇಳುತ್ತವೆ.

ವಿಮರ್ಷಾತ್ಮಕ ಅಪ್ಪ

ವಿಮರ್ಷಾತ್ಮಕ ಅಪ್ಪ

ವಿಮರ್ಷಾತ್ಮಕ ತಂದೆ ಎಂದರೆ ಅತೀ ಹೆಚ್ಚು ಗುಣಮಟ್ಟವನ್ನು ಹೊಂದಿರುವವರು ಮತ್ತು ಅದನ್ನು ಪೂರೈಸಲು ಅಸಾಧ್ಯವಾಗುವಿಕೆ. ನಿಮ್ಮ ಮಗಳಿಗೆ ಉತ್ತಮ ಗುರಿಗಳನ್ನು ಸೃಷ್ಟಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದು ಅವಳಿಗೆ ಒತ್ತಡವನ್ನು ಸೃಷ್ಟಿ ಮಾಡಬಹುದು. ಅತಿಯಾದ ಒತ್ತಡವು ಪ್ರತಿಯೊಬ್ಬರಿಗೂ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ ತಲುಪಲು ಅಸಾಧ್ಯವಾಗುವಂತಹ ಮಾನದಂಡವನ್ನು ಪೂರೈಸಲು ‌ನಿಮ್ಮ ಮಗಳು ವಿಫಲವಾದರೆ ಆಕೆ ಅದು ಆಕೆಯ ಸೋಲು ಎಂದು ಭಾವಿಸಬಹುದು. ನಿಮ್ಮ ಅತಿಯಾದ ಗುಣಮಟ್ಟದ ಗುರಿಗಳು ಆಕೆಯ ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಕೊರತೆಗೆ ಕಾರಣವಾಗಬಹುದು.

ಸೊಕ್ಕಿನ ಅಪ್ಪ

ಸೊಕ್ಕಿನ ಅಪ್ಪ

ಈ ರೀತಿಯ ತಂದೆಯರು ಸ್ವಯಂ ಕೇಂದ್ರಿತ ಮತ್ತು ಸೊಕ್ಕಿನವರು. ಅವರು ಕುಟುಂಬವನ್ನು ಹಾಳು ಮಾಡಿಯಾದರೂ ತಾವು ಬಯಸಿದ್ದ‌ನ್ನು ಪಡೆಯುತ್ತಾರೆ. ಅವರಿಗೆ ಪರಾನುಭೂತಿ ಮತ್ತು ನೈತಿಕತೆಯ ಪ್ರಜ್ಞೆ ಇರುವುದಿಲ್ಲ.

ಇಂತಹ ವಿಷಕಾರಿ ಗುಣಗಳಿರುವ ತಂದೆ ಮಗಳ ನಡುವೆ ಒಂದು ದೊಡ್ಡ ಅಂತರ ನಿರ್ಮಾಣವಾಗುತ್ತದೆ. ಒಂದು ವೇಳೆ ನೀವೂ ಕೂಡ ಸೊಕ್ಕಿನ ತಂದೆಯಾಗಿದ್ದರೆ ನಿಮ್ಮ ಮಗಳೂ ಕೂಡ ಈ ಅಭ್ಯಾಸ ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ತಂದೆ

ಕಠಿಣ ಅಥವಾ ನ್ಯಾಯೋಚಿತ, ಪ್ರೀತಿಯ ಅಥವಾ ಪ್ರೀತಿ ಇಲ್ಲದ, ಬೆಂಬಲವಿರುವ ಅಥವಾ ಬೆಂಬಲ ಇಲ್ಲದಿರುವ, ಈ ಎಲ್ಲಾ ಯಾವುದೇ ಭಾವನೆಯಲ್ಲಿದ್ದರೂ ಕೂಡ ಅದು ನಿಮ್ಮ ಮಗಳ ಯೌವನದ‌ ಮೇಲೆ ಪರಿಣಾಮ ಬೀರುತ್ತದೆ. ಈ ಎಲ್ಲಾ ಕಾರಣದಿಂದಾಗಿ ಪ್ರತಿ ಮಗಳಿಗೂ ತನ್ನ ತಂದೆ ತನ್ನ ಜೀವನಕ್ಕೆ ಬಹಳ ಮುಖ್ಯ ಎಂಬುದು ತಿಳಿದಿರುವುದು ಒಳ್ಳೆಯದು.

English summary

These Character In Father Will Efffects On Daughter Relationships

Here we are discussing about these These types of Character In Father Will Efffects On Daughter Relationships. a daughter’s actions depend on how their father treats them. You may not realize it, but your daughter’s behavior depends on the relationship she has with you. Read more.
X
Desktop Bottom Promotion