Just In
Don't Miss
- News
ಪಂಚಮಸಾಲಿ ಮೀಸಲಾತಿ ಪ್ರತಿಭಟನಾ ಸ್ಥಳದ ಕಡೆ ತಲೆಯೂ ಹಾಕದ ಯತ್ನಾಳ್: ಇದರ ಹಿಂದಿದೆ 'ಆ' ಎಚ್ಚರಿಕೆ?
- Movies
ಜಾವೇದ್ ಅಖ್ತರ್ಗೆ ಈ ವಿವಾದಾತ್ಮಕ ನಟಿಯ ಜೀವನ ಕುರಿತು ಕತೆ ಬರೆಯಲು ಆಸೆ!
- Automobiles
ಕಂಪ್ಯಾಕ್ಟ್ ಎಸ್ಯುವಿ ಮಾರಾಟದಲ್ಲಿ ಎಕ್ಸ್ಯುವಿ 300 ಮತ್ತು ಇಕೋಸ್ಪೋರ್ಟ್ ಹಿಂದಿಕ್ಕಿದ ರೆನಾಲ್ಟ್ ಕಿಗರ್
- Sports
ಸ್ವಿಸ್ ಓಪನ್ 2021: ಫೈನಲ್ಗೆ ಲಗ್ಗೆಯಿಟ್ಟ ಭಾರತದ ಪಿವಿ ಸಿಂಧು
- Finance
ಮೊಟೊರೊಲಾ ಹೊಸ ಸ್ಮಾರ್ಟ್ಫೋನ್: ಮೊಟೊ ಜಿ 30 ಮತ್ತು ಮೊಟೊ ಜಿ 10 ಪವರ್
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಂಪತಿಗಳು ರಾಮ ಸೀತೆಯಿಂದ ಕಲಿಯಬಹುದಾದ ದಾಂಪತ್ಯ ಜೀವನ ಪಾಠ
ದಾಂಪತ್ಯ ಜೀವನ ಎಂದರೆ ಸಿಹಿ-ಕಹಿ ಎರಡೂ ಇರುತ್ತದೆ. ಕೇವಲ ಸಂತೋಷವನ್ನೇ ಬಯಸುವುದು ಸ್ತುತ್ಯರ್ಹವಲ್ಲ, ಹಾಗಂತ ದುಃಖ ಶಾಶ್ವತವಲ್ಲ. ದಾಂಪತ್ಯದಲ್ಲಿ ಸಣ್ಣ ಸಣ್ಣ ವಿಷಯಗಳು ಬಹಳ ಮುಖ್ಯವಾಗುತ್ತದೆ. ದಾಂಪತ್ಯ ಜೀವನ ಹೇಗಿರಬೇಕು ಎಂಬ ಕಲ್ಪನೆಯನ್ನು ಪೌರಾಣಿಕವಾಗಿ, ಐತಿಹಾಸಿಕವಾಗಿ, ಮನೋಶಾಸ್ತ್ರಜ್ಙರು, ಹಿರಿಯರು ಹೀಗೆ ಹಲವರು ಹಲವಾರು ವಿಭಿನ್ನ ರೀತಿ ವ್ಯಕ್ತಪಡಿಸುತ್ತಾರೆ.
ಇನ್ನು ಪೌರಾಣಿಕ ಎಂದು ಆಯ್ಕೆ ಮಾಡಿದರೆ, ಕೃಷ್ಣ, ವೆಂಕಟೇಶ, ವಿಷ್ಣು ಸೇರಿದಂತೆ ದೇವಾನು ದೇವತೆಗಳ ಪ್ರಕಾರ ದಾಂಪತ್ಯಕ್ಕೆ ತಮ್ಮದೇ ಜೀವನಾದರ್ಶಗಳನ್ನು ನೀಡಿದ್ದಾರೆ. ನಾವಿಂದು ಈ ಲೇಖನದಲ್ಲಿ ಸಮಾಜಕ್ಕೆ ಅತ್ಯಂತ ಮಾದರಿ ಎಂದೇ ಹೇಳುವ ರಾಮ-ಸೀತೆ ದಾಂಪತ್ಯ ಜೀವನ ನಮ್ಮ ಜೀವನಕ್ಕೆ ಹೇಗೆ ಮಾದರಿ. ಉತ್ತಮ ದಾಂಪತ್ಯ ನಡೆಸಲು ಅವರ ಜೀವನದಿಂದ ನಾವು ಕಲಿಯಬಹುದಾದ ವಿಷಯಗಳೇನು ಎಂಬುದನ್ನು ತಿಳಿಯೋಣ:

ಪತಿ-ಪತ್ನಿ ಪರಸ್ಪರ ಬೆಂಬಲ
ಭಗವಾನ್ ರಾಮನನ್ನು ಕಾಡಿಗೆ ಅಟ್ಟಿದಾಗ ತಾಯಿ ಸೀತಾ ಮಾತೆಯೂ ಅವನೊಂದಿಗೆ ಹೋಗಲು ನಿರ್ಧರಿಸಿದಳು. ಭಗವಾನ್ ರಾಮನು ಅರಮನೆಯಲ್ಲಿ ಉಳಿಯುವಂತೆ ಸೀತೆಗೆ ಕೋರಿದರೂ, ಅದಕ್ಕೆ ಒಪ್ಪದ ಸೀತೆ ರಾಮನೊಂದಿಗೆ ವನವಾಸಕ್ಕೆ ಹೋಗಲು ನಿರ್ಧರಿಸಿದಳು. ರಾಮನ ಎಂಥಾ ಪರಿಸ್ಥಿತಿಯಲ್ಲೂ ಪತ್ನಿ ಸೀತೆ ಸದಾ ಬೆನ್ನುಲುಬಾಗಿ ನಿಂತಿದ್ದಳು. ಹಾಗೆಯೇ ಪತ್ನಿ ಗಂಡನ ಪ್ರತಿಯೊಂದು ಪರಿಸ್ಥಿತಿಯಲ್ಲೂ ಪರಸ್ಪರ ಬೆಂಬಲಿಸಬೇಕು, ಕಷ್ಟ-ಸುಖ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು.

ತ್ಯಾಗ ಭಾವನೆ
ವೈವಾಹಿಕ ಜೀವನ ಬಲಗೊಳ್ಳಬೇಕಾದರೆ ಒಬ್ಬರಿಗೊಬ್ಬರು ತ್ಯಾಗ ಮಾಡಬೇಕು. ಅರಮನೆ ತ್ಯಜಿಸಿ ಭಗವಾನ್ ರಾಮನೊಂದಿಗೆ ಕಾಡಿನಲ್ಲಿ ವಾಸಿಸಲು ತಾಯಿ ಸೀತಾ ನಿರ್ಧರಿಸಿದ್ದಳು. ಅರಮನೆಯಲ್ಲಿ ರಾಣಿಯಂತಿದ್ದ ಸೀತೆ ಇದ್ದಕ್ಕಿಂದ್ದಂತೆ ವನವಾಸದಂಥ ಶಿಕ್ಷೆಯನ್ನು ಸ್ವೀಕರಿಸುವ ಗುಣ, ಐಶಾರಾಮಿ ಜೀವನವನ್ನು ತ್ಯಜಿಸುವ ದೊಡ್ಡ ಮನಸ್ಸು ಇಲ್ಲದೇ ಹೋಗಿದ್ದರೆ ಇಂದು ಸೀತಾ ಮಾತೆ ರಾಮ ಮಾದರಿ ದಂಪತಿ ಎನಿಸಲು ಸಾಧ್ಯವೇ ಆಗುತ್ತಿರಲಿಲ್ಲ. ರಾಮನು ಸಹ ಅಂತೆಯೇ ರಾಜನ ಪಟ್ಟ ಬಿಟ್ಟು ಕಾಡಿಗೆ ಹೊರಡಲು ಸಿದ್ಧನಾದ. ಹಾಗೆಯೇ ಪ್ರತಿ ದಂಪತಿಗಳು ಸಹ ಮದುವೆ ಜೀವನ ಸದೃಢವಾಗಬೇಕೆಂದು ಬಯಸಿದರೆ ಒಬ್ಬರಿಗೊಬ್ಬರು ಪರಸ್ಪರ ತ್ಯಾಗ ಮಾಡಲು ಕಲಿಯಲೇಬೇಕು.

ನಿಸ್ವಾರ್ಥ ಪ್ರೀತಿ
ದಾಂಪತ್ಯದಲ್ಲಿ ಸದೃಢವಾಗಿಸಲು ಪ್ರಮುಖವಾಗಿ ಬೇಕಿರುವುದು ನಿಸ್ವಾರ್ಥ ಪ್ರೀತಿ. ಇದಕ್ಕೆ ಕೃಷ್ಣ ಎಷ್ಟು ಮಾದರಿಯೋ ಅಷ್ಟೇ ರಾಮನೂ ಸಹ ನಿಸ್ವಾರ್ಥ ಪ್ರೀತಿಗೆ ಸಾಕ್ಷಿ. ನಿಜವಾದ ಪ್ರೀತಿ ಎಂದರೆ ನಿಸ್ವಾರ್ಥವಾಗಿ ಪ್ರೀತಿಯನ್ನು ನೀಡುವುದು. ರಾಮ-ಸೀತೆಯ ದಾಂಪತ್ಯದಲ್ಲಿ ಇಬ್ಬರಲ್ಲೂ ಫಲಾಪೇಕ್ಷೆ ಇಲ್ಲದೆ ಎಲ್ಲರನ್ನೂ ನಿಸ್ವಾರ್ಥವಾಗಿ ಪ್ರೀತಿಸಿದರು, ಸೇವೆಗೈದರು. ಅದಕ್ಕಾಗಿಯೇ ಅವರು ಸಾಕಷ್ಟು ಕಷ್ಟಗಳ ನಡುವೆಯೂ ಯಶಸ್ವಿಯಾಗಿ ವನವಾಸವನ್ನು ಮುಗಿಸಿದರು.

ಪ್ರಾಮಾಣಿಕತೆ
ಸಂಬಂಧವನ್ನು ಬಲಪಡಿಸಲು ಪ್ರಾಮಾಣಿಕತೆ ಎಂಬುದು ಹಾಲಿನಂತೆ. ತಾಯಿ ಸೀತಾ ಮತ್ತು ಭಗವಾನ್ ರಾಮನ ವೈವಾಹಿಕ ಜೀವನದಿಂದ, ನಾವು ಒಬ್ಬರಿಗೊಬ್ಬರು ಹೇಗೆ ಪ್ರಾಮಾಣಿಕವಾಗಿರಬೇಕು ಎಂಬುದನ್ನು ಕಲಿಯಬೇಕು. ನೀವು ಸಂಬಂಧವನ್ನು ಬಲಪಡಿಸಲು ಬಯಸಿದರೆ ಪರಸ್ಪರ ಪ್ರಾಮಾಣಿಕವಾಗಿರಿ. ನಿಮ್ಮ ಪ್ರಾಮಾಣಿಕತೆಯೇ ನಿಮ್ಮನ್ನು ಕಾಪಾಡುವುದು. ಅದು ಯಾವುದೇ ಸಂಬಂಧವಾಗಲೀ ಅದರಲ್ಲೂ ದಾಂಪತ್ಯದಲ್ಲಿ, ನೀವು ಒಮ್ಮೆ ಪ್ರಾಮಾಣಿಕತೆಗೆ ಅರ್ಹರಲ್ಲ ಎಂಬ ಭಾವನೆ ನಿಮ್ಮ ದಾಂಪತ್ಯದಲ್ಲಿ ಯಾರಿಗಾದರೂ ಅನಿಸಿದರೆ ಅಲ್ಲಿದೆ ನಿಮ್ಮ ಸಮರಸದ ಜೀವನಕ್ಕೆ ಅರ್ಥವೇ ಇರವುದಿಲ್ಲ.

ನಂಬಿಕೆ
ಯಾವುದೇ ಸಂಬಂಧದ ಅಡಿಪಾಯವೆಂದರೆ ನಂಬಿಕೆ. ನೀವು ಸಂಬಂಧ ಸಧೃಢವಾಗಿರಲು ಬಯಸಿದರೆ ಪರಸ್ಪರ ನಂಬಿಕೆ ಇರಿಸಿ. ತಾಯಿ ಸೀತೆಗೆ ಭಗವಾನ್ ರಾಮನ ಮೇಲೆ ಸಂಪೂರ್ಣ ನಂಬಿಕೆ ಇತ್ತು. ರಾವಣನು ಮಾತಾ ಸೀತೆಯನ್ನು ಲಂಕಾಕ್ಕೆ ಅಪಹರಿಸಿದಾಗ ಸೀತೆಯು ರಾಮನನ್ನು ಸಂಪೂರ್ಣವಾಗಿ ನಂಬಿದ್ದಳು, ರಾವಣನನ್ನು ಕೊನೆಗೊಳಿಸಿ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುವುದಾಗಿ ರಾಮನ ಮೇಲೆ ಸಂಪೂರ್ಣ ನಂಬಿಕೆ ಇತ್ತು, ಅಂತೆಯೇ ರಾಮ ಅದನ್ನು ಉಳಿಸಿಕೊಂಡ. ನಂಬಿಕೆ ಕಳೆದುಕೊಳ್ಳುವಂಥ ಯಾವುದೇ ಕೆಲಸವನ್ನು ದಾಂಪತ್ಯದಲ್ಲಿ ಎಂದಿಗೂ ಮಾಡಲೇಬೇಡಿ.