For Quick Alerts
ALLOW NOTIFICATIONS  
For Daily Alerts

ಸಕುಟುಂಬ ಭೋಜನ ಸವಿಯಬೇಕೆ ಈ ಟಿಪ್ಸ್ ಪಾಲಿಸಿ

|

ಬೆಳಗ್ಗಿನ ಮತ್ತು ಮಧ್ಯಾಹ್ನದ ಊಟದಲ್ಲಿ ಮನೆಯ ಎಲ್ಲಾ ಸದಸ್ಯರು ಜೊತೆಯಾಗಿ ಊಟ ಮಾಡಲು ಸಾಧ್ಯವಾಗದಿರಬಹುದು. ಆದರೆ ಸಾಮಾನ್ಯವಾಗಿ ರಾತ್ರಿಯ ಊಟದ ಸಮಯದಲ್ಲಿ ಎಲ್ಲರೂ ಮನೆಯಲ್ಲಿದ್ದು ಒಟ್ಟಿಗೇ ಮಾಡುವ ರಾತ್ರಿಯೂಟ ವಿಶೇಷವಾಗಿ ಮಕ್ಕಳ ಜೀವನದ ಮೇಲೆ ಅಪಾರವಾದ ಪ್ರಭಾವ ಬೀರಬಹುದು. ಈ ರೀತಿಯ ಅಧ್ಯಯನಗಳು ತಮ್ಮ ಹೆತ್ತವರೊಂದಿಗೆ ಊಟ ಮಾಡುವ ಮಕ್ಕಳಿಗೆ ಭಾವನಾತ್ಮಕ ಮತ್ತು ದೈಹಿಕ ಪ್ರಯೋಜನಗಳ ಬಗ್ಗೆ ತಿಳಿಸುತ್ತವೆ.

ನಿಯಮಿತವಾದ ಕುಟುಂಬದೊಡಗಿನ ಸಹಭೋಜನವನ್ನು ಸವಿಯುವ ಶೈಕ್ಷಣಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ, ಉತ್ತಮ ಭಾಷಾ ಕೌಶಲ್ಯವನ್ನು ಹೊಂದಿರುತ್ತಾರೆ, ಪೋಷಕರೊಂದಿಗೆ ನಿಕಟ ಸಂಬಂಧವನ್ನು ಪಡೆದಿರುತ್ತಾರೆ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುತ್ತಾರೆ, ತೂಕದ ಸಮಸ್ಯೆಗಳನ್ನು ವಿರಳವಾಗಿ ಹೊಂದಿರುತ್ತಾರೆ, ಕಡಿಮೆ ಧೂಮಪಾನ ಮಾಡುತ್ತಾರೆ ಮತ್ತು ವ್ಯಸನಕಾರಿ ಔಷಧಿ ಮತ್ತು ಮದ್ಯಸಾರವನ್ನು ಬಳಸುವ ಸಾಧ್ಯತೆ ಅತಿ ಕಡಿಮೆ ಎಂದು ಕಂಡುಕೊಂಡಿವೆ.

ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೇ ಕುಳಿತು ಸಮಯ ಕಳೆಯಬಹುದಾದ ಅತಿ ಸೂಕ್ತ ಸಂದರ್ಭವೆಂದರೆ ರಾತ್ರಿಯ ಊಟ. ಈ ಸಮಯದಲ್ಲಿ ಎಲ್ಲರೂ ಆರಾಮವಾಗಿ ಹರಟುತ್ತಾ, ಆಹಾರವನ್ನು ಹಂಚಿಕೊಳ್ಳುವ ಮೂಲಕ ಆಹಾರದ ಸ್ವಾದವನ್ನು ಇನ್ನಷ್ಟು ಹೆಚ್ಚಿಸಬಹುದು. ಇಂದಿನ ದಿನದಲ್ಲಿ ಮಹತ್ವದ ಘಟನೆಗಳೇನಾದವು ಎಂದು ಪ್ರತಿಯೊಬ್ಬರೂ ತಮ್ಮ ಅನುಭವವನ್ನು ಹಂಚಿಕೊಂಡು ಸಂಭ್ರಮವನ್ನು ಹೆಚ್ಚಿಸುವ ಸಂದರ್ಭವೂ ಆಗಿದೆ.

ಈ ಸಂದರ್ಭವನ್ನು ಇನ್ನಷ್ಟು ರಂಜನೀಯವಾಗಿಸಿ ಕುಟುಂಬದ ಒಗ್ಗಟ್ಟನ್ನು ಹೆಚ್ಚಿಸಲು ಕೆಲವು ಸಲಹೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:

ಮಕ್ಕಳೂ ಜೊತೆಯಲ್ಲಿಯೇ ಊಟ ಮಾಡಲಿ

ಮಕ್ಕಳೂ ಜೊತೆಯಲ್ಲಿಯೇ ಊಟ ಮಾಡಲಿ

ಊಟಕ್ಕೆ ಬಳಸುವ ತಟ್ಟೆ ಮತ್ತು ಇತರ ಪಾತ್ರೆಗಳು ಸುಂದರ ಮತ್ತು ದುಬಾರಿಯಾಗಿದ್ದಷ್ಟೂ ಬಿದ್ದರೆ ಒಡೆಯುವ ಸಾಧ್ಯತೆ ಇರುತ್ತದೆ. ಮಕ್ಕಳು ಬೀಳಿಸಿ ಒಡೆಯಬಹುದೆಂಬ ಕಾರಣದಿಂದ ಹಲವು ಕುಟುಂಬಗಳಲ್ಲಿ ಮಕ್ಕಳಿಗೆ ಮೊದಲೇ ಊಟ ಹಾಕಿಸಿ ಹಿರಿಯರ ಊಟದ ಸಮಯದಲ್ಲಿ ಬೇರೆ ಕೋಣೆಗೆ ಸಾಗ ಹಾಕಿ ಬಿಡುತ್ತಾರೆ. ಆದರೆ ಮಕ್ಕಳೂ ಜೊತೆಯಲ್ಲಿಯೇ ಊಟ ಮಾಡಬೇಕೆಂದು ತಜ್ಞರು ವಿವರಿಸುತ್ತಾರೆ. ಆದರೆ ದುಬಾರಿ ಸಿರಾಮಿಕ್ ತಟ್ಟೆ ಲೋಟಗಳು? ಇದಕ್ಕೊಂದು ಉಪಾಯವಿದೆ.

ಮಕ್ಕಳಿಗೆ ಬಳಸುವಂತಹ ಬಣ್ಣಬಣ್ಣದ ತಟ್ಟೆ ಲೋಟಗಳನ್ನೇ ಎಲ್ಲರೂ ಬಳಸುವುದು ಮತ್ತು ದುಬಾರಿ ಸಿರಾಮಿಕ್ ಪಾತ್ರೆಗಳನ್ನು ವಿಶೇಷ ಸಂದರ್ಭಗಳಿಗೆ ಮಾತ್ರ ಉಪಯೋಗಿಸುವುದು. ಪ್ರಖರ ಬಣ್ಣಗಳ ತಟ್ಟೆ ಲೋಟಗಳಲ್ಲಿ ಊಟ ಮಾಡುವುದು ಮೊದಲಿಗೆ ಕೊಂಚ ಆಭಾಸ ಎನಿಸಿದರೂ ಮಕ್ಕಳೊಂದಿಗೆ ಹಿರಿಯರೂ ಊಟ ಮಾಡಿದಾಗ ಲಭಿಸುವ ಸಂತೋಷ ಮತ್ತು ಧನ್ಯತಾಭಾವದ ಮುಂದೆ ಸಿರಾಮಿಕ್ ತಟ್ಟೆಗಳನ್ನು ತ್ಯಜಿಸಿದ್ದು ಏನೇನೂ ಅಲ್ಲ!

ಮೇಜಿನ ಮೇಲೆ ಚೆಲ್ಲಾಪಿಲ್ಲಿಗೆ ಅನುಮತಿ ಇರಲಿ

ಮೇಜಿನ ಮೇಲೆ ಚೆಲ್ಲಾಪಿಲ್ಲಿಗೆ ಅನುಮತಿ ಇರಲಿ

ಗೋಡೆಯ ಮೇಲೆ ಪೆನ್ಸಿಲ್ ನಲ್ಲಿ ಗೆರೆ ಎಳೆದ ಮನೆ ಇದ್ದರೆ ಇಲ್ಲೊಂದು ಮಗು ಇದೆ ಎಂದೇ ಅರ್ಥವಲ್ಲವೇ? ಯಾರಾದರೂ ಇದಕ್ಕೆ ಚಕಾರವೆತ್ತುತ್ತಾರೆಯೇ? ಅಂತೆಯೇ ಊಟದ ಮೇಜಿನ ಮೇಲಿನ ಚಿಲ್ಲಾಪಿಲ್ಲಿಯೂ ಹೌದು. ಮಕ್ಕಳು ಎಲ್ಲಿ ಆಡುತ್ತಾರೆಯೋ ಅಲ್ಲೆಲ್ಲಾ ಅವರ ಆಟಿಕೆಗಳೂ ಇತರ ವಸ್ತುಗಳೂ ಚಿಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಒಂದು ವೇಳೆ ಊಟದ ಮೇಜಿನ ಬಳಿ ಈ ವಸ್ತುಗಳು ಚಿಲ್ಲಾಪಿಲ್ಲಿಯಾಗಿದ್ದರೆ ಇದನ್ನು ಸರಿಪಡಿಸದೇ ಮಕ್ಕಳು ಇದನ್ನು ಸಂತೋಷಪಡಲು ಬಿಡಿ. ಆಗ ಮಕ್ಕಳೂ ಬಹಳ ಸಂತೋಷದಿಂದಲೇ ಊಟಕ್ಕೆ ಬರುತ್ತಾರೆ.

ವಿಶೇಷ ಸಂದರ್ಭಗಳಿಗೊಂದು ವಿನ್ಯಾಸ ರಚಿಸಿ.

ವಿಶೇಷ ಸಂದರ್ಭಗಳಿಗೊಂದು ವಿನ್ಯಾಸ ರಚಿಸಿ.

ಸಾಮಾನ್ಯವಾಗಿ ಮದುವೆ ಮತ್ತು ಇತರ ಪ್ರಮುಖ ಕಾರ್ಯಕ್ರಮಗಳಿಗೆ ಕುಟುಂಬ ಸದಸ್ಯರೆಲ್ಲರೂ ಒಂದೇ ಬಗೆಯ ಉಡುಗೆ ಧರಿಸಿ ತಮ್ಮದೇ ವಿಶಿಷ್ಟ ವಿನ್ಯಾಸ ರೂಪಿಸುವುದಿಲ್ಲವೇ? ಈ ಪರಿ ಊಟಕ್ಕೂ ಏಕಾಗಬಾರದು? ಮಕ್ಕಳಿಗೆ ರಾತ್ರಿಯೂಟದ ಸಂದರ್ಭದಲ್ಲಿ ಏನಾದರೊಂದು ವಿಶಿಷ್ಟತೆಯನ್ನು ಸಮಾನವಾಗಿ ಆರಿಸಿಕೊಳ್ಳುವಂತೆ ತಿಳಿಸಿ. ವಿದೂಷಕನ ಟೋಪಿ ಧರಿಸುವುದು, ಒಂದು ವಿಶಿಷ್ಟ ಬಣ್ಣದ ಟೀ ಶರ್ಟ್ ಧರಿಸಿ ಬರುವುದು, ಒಟ್ಟಾರೆ ಎಲ್ಲರಿಗೂ ಸಾಧ್ಯವಾಗುವಂತಹ ಏನೋ ಒಂದು. ಒಂದು ಬಾರಿ ಅನುಸರಿಸಿ ನೋಡಿ, ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರಿಗೂ ಈ ಪರಿ ಅಪಾರವಾಗಿ ಇಷ್ಟವಾಗುತ್ತದೆ.

ಕೆಲವೊಂದನ್ನು ತಿರುಗಾ ಮುರುಗಾಗಿಸಿ

ಕೆಲವೊಂದನ್ನು ತಿರುಗಾ ಮುರುಗಾಗಿಸಿ

ಹಿಂದೆಲ್ಲಾ ಮಸಾಲೆ ದೋಸೆ ಎಂದರೆ ಕೇವಲ ಬೆಳಗ್ಗಿನ ಹೊತ್ತು ಮಾತ್ರವೇ ಸಿಗುತ್ತಿತ್ತು. ಯಾರೋ ಕೆಲವರು ಸುಮ್ಮನೇ ಪ್ರಯೋಗಕ್ಕಾಗಿ ಸಂಜೆಯ ವೇಳೆಯಲ್ಲಿಯೂ ಮಸಾಲೆ ದೋಸೆ ಸಿಗುತ್ತದೆ ಎಂದು ಹೋಟೆಲಿನ ಹೊರಗೆ ಬೋರ್ಡ್ ಹಾಕಿದ್ದೇ ತಡ, ಜನರು ಈ ಬದಲಾವಣೆಯನ್ನು ಭರ್ಜರಿಯಾಗಿ ಸ್ವೀಕರಿಸಿ ಭಾರೀ ಸಂಖ್ಯೆಯಲ್ಲಿ ಧಾವಿಸಿದ್ದರು. ಪರಿಣಾಮ, ಇಂದು ದೋಸೆ, ಇಡ್ಲಿ ಮೊದಲಾದ ಉಪಾಹಾರಗಳು ಯಾವುದೇ ಊರಿನಲ್ಲಿ ಸಂಜೆಯವೇಳೆಯಲ್ಲಿಯೂ ತಡರಾತ್ರಿಯವರೆಗೂ ಸಿಗುತ್ತದೆ.

ಇದೇ ಕ್ರಮವನ್ನು ಕೊಂಚ ಭಿನ್ನವಾಗಿ ನೀವೇಕೆ ಅನುಸರಿಸಬಾರದು? ಸಾಂಪ್ರಾದಾಯಿಕ ಒಂದೇ ಬಗೆಯ ಅಡುಗೆಗಿಂತ ಕೊಂಚ ಭಿನ್ನತೆ ಇರುವ ಆಹಾರಗಳು, ಅಥವಾ ಮುಂಜಾನೆಯ ಉಪಾಹರದ ಆಹಾರಗಳನ್ನು ರಾತ್ರಿಯೂಟಕ್ಕೆ ಬಡಿಸುವುದು, ಹಿಂದಿನವರು ಮಾಡುತ್ತಿದ್ದ ಈಗ ಮರೆತೇ ಹೋಗಿರುವ ಸಾಂಪ್ರಾದಾಯಿಕ ತಿಂಡಿಗಳನ್ನು ತಯಾರಿಸಿ ಸೇವಿಸುವುದು ಮೊದಲಾದವು ರಾತ್ರಿಯೂಟದ ಸೊಬಗನ್ನು ಹೆಚ್ಚಿಸುತ್ತವೆ.

ರಾತ್ರಿಯೂಟದ ಮೇಜನ್ನು ಬೇರೆಡೆ ಇಡಿ

ರಾತ್ರಿಯೂಟದ ಮೇಜನ್ನು ಬೇರೆಡೆ ಇಡಿ

ಪ್ರತಿದಿನ ಊಟ ಮಾಡುವ ಸ್ಥಳವನ್ನು ಆಗಾಗ ಬೇರೆಡೆ ಏಕೆ ಸ್ಥಾಪಿಸಬಾರದು? ಉದಾಹರಣೆಗೆ ಊಟದ ಮೇಜನ್ನು ಹಿತ್ತಲಿನಲ್ಲಿ ತೆರೆದ ಆಕಾಶದ ಕೆಳಗೆ ಮೋಂಬತ್ತಿಯ ಬೆಳಕಿನಲ್ಲಿ ಏಕೆ ಮಾಡಬಾರದು? ಅಷ್ಟೇ ಅಲ್ಲ, ಮೇಜೇ ಬೇಡ, ಇದರ ಬದಲಿಗೆ ಬೇರೆ ವಸ್ತುಗಳನ್ನು ಬಳಸಿ ಮೇಜಿನಂತೆ ಏಕೆ ಬಳಸಬಾರದು, ಬದಲಾವಣೆಗಾಗಿ ಎಲ್ಲರೂ ನೆಲದ ಮೇಲೇಕೆ ಕುಳಿತು ಊಟ ಮಾಡಬಾರದು? ಈ ಬಗ್ಗೆ ಸಲಹೆಗಳನ್ನು ಆಹ್ವಾನಿಸಿ, ನಿಮಗೆ ಅಚ್ಚರಿಯಾಗುವಂತೆ ನಿಮ್ಮ ಗಮನಕ್ಕೆ ಬಾರದ ಆಯ್ಕೆಯನ್ನು ಮಕ್ಕಳೇ ಸೂಚಿಸಬಹುದು! ಆಯ್ಕೆ ಯಾವುದೇ ಇರಲಿ, ಎಲ್ಲರೂ ಒಟ್ಟಾಗಿ ಕುಳಿತು ಊಟವನ್ನು ಸವಿಯುವ ಮೂಲಕ ಕುಟುಂಬದ ಸಾಮರಸ್ಯವನ್ನು ಕಾಪಾಡಿಕೊಂಡರೆ ಅಷ್ಟೇ ಸಾಕು.

English summary

Tips for Making Family Dinners Meaningful

Here we are discussing about How To ake Family Dinner Great. Regular sit-down family dinners can make all the difference in a child’s life. Studies like this one tout the emotional and physical benefits for children who eat dinner with their parents. Read more.
X