For Quick Alerts
ALLOW NOTIFICATIONS  
For Daily Alerts

ಕಿರಿಕಿರಿ ಸಂಬಂಧಿಗಳನ್ನು ಫಂಕ್ಷನ್‌ನಿಂದ ದೂರವಿಡುವುದು ಹೇಗೆ?

|

ಹುಟ್ಟುಹಬ್ಬದ ಪಾರ್ಟಿ, ನಾಮಕರಣ, ಗೃಹ ಪ್ರವೇಶ ಅಥವಾ ಇತ್ಯಾದಿ ಯಾವುದೋ ಮನೆಯಲ್ಲಿನ ಫಂಕ್ಷನ್ ಅಂದರೆ ಅದರಲ್ಲಿ ಖುಷಿ ಇರಬೇಕು. ಸಂತೋಷ, ಸಂಭ್ರಮವಿರಬೇಕು, ಕಿರಿಕಿರಿ ಇರಬಾರದು. ಆದರೆ ಕೆಲವು ಅತಿಥಿಗಳು ನಿಮ್ಮ ಸಂತೋಷಕ್ಕೆ ತೊಂದರೆ ಮಾಡಬಹುದು. ಅನುಚಿತವಾಗಿ ವರ್ತಿಸುವ ಮೂಲಕ ನಿಮ್ಮ ಮನೆಯ ಸಂಭ್ರಮದ ವಾತಾವರಣವನ್ನು ಕದಡಬಹುದು. ಅವರ ನಾಟಕೀಯ ವರ್ತನೆಯು ನಿಮ್ಮ ಮನೆಗೆ ಬಂದಿರುವ ಇತರ ಅತಿಥಿಗಳಿಗೆ ಮುಜುಗರವನ್ನುಂಟು ಮಾಡಬಹುದು. ಇಂತಹ ಸಂಬಂಧಿಗಳ ಬಗ್ಗೆ ನೀವು ಚಿಂತಿತರಾಗಿದ್ದಲ್ಲಿ ಅವರಿಗೆ ಆಮಂತ್ರಣ ನೀಡುವುದರಲ್ಲಿ ಜಾಗೃತೆ ವಹಿಸಬಹುದು.

ಕಿರಿಕಿರಿ ಉಂಟು ಮಾಡುವ ಸಂಬಂಧಿಗಳ ಬಗ್ಗೆ ಮತ್ತು ಅವರು ನಿಮ್ಮ ಕಾರ್ಯಕ್ರಮದಲ್ಲಿ ವಿಚಿತ್ರವಾಗಿ ಆಡಬಹುದು ಎಂಬ ಬಗ್ಗೆ ನಿಮಗೆ ಮೊದಲೇ ಊಹೆ ಇದ್ದಲ್ಲಿ ಅವರಿಗೆ ಆಮಂತ್ರಿಸದೇ ಇರುವುದು ಹೇಗೆ ಎಂಬುದಕ್ಕೆ ನಾವೊಂದಿಷ್ಟು ಸಲಹೆಗಳನ್ನು ನಿಮಗೆ ನೀಡುತ್ತಿದ್ದೇವೆ. ಅಷ್ಟೇ ಅಲ್ಲ ಅವರ ಜೊತೆಗೆ ಪ್ರಾಮಾಣಿಕವಾಗಿ ಮಾತುಕತೆಗಳನ್ನು ನಡೆಸುವುದು ಬಹಳ ಮುಖ್ಯ. ನಾವು ಇಲ್ಲಿ ನಿಮಗೆ ತಿಳಿಸುತ್ತಿರುವ ವಿಚಾರಗಳು ಇಂತಹ ಕಿರಿಕಿರಿ ಉಂಟು ಮಾಡುವ ಸಂಬಂಧಿಗಳ ಜೊತೆಗೆ ಉದ್ಭವವಾಗಬಹುದಾದ ಸಾಮಾನ್ಯ ಸನ್ನಿವೇಶಗಳನ್ನು ಮತ್ತು ಅದನ್ನು ನಿಭಾಯಿಸುವ ಪರಿಯನ್ನು ವಿವರಿಸುತ್ತಿದ್ದೇವೆ.

How To Avoid Irritate Relationship

ವಿಧಾನ 1

ಅವಲೋಕಿಸಿ

1. ಕೆಟ್ಟ ವ್ಯಕ್ತಿ ಎಂಬ ದೂಷಣೆಗೆ ಗುರಿ

1. ಕೆಟ್ಟ ವ್ಯಕ್ತಿ ಎಂಬ ದೂಷಣೆಗೆ ಗುರಿ

ನೀವು "ಕೆಟ್ಟ ವ್ಯಕ್ತಿ" ಎಂಬ ದೂಷಣೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ನೀವು ಈಗಾಗಲೇ ಕಳುಹಿಸಿದ ಆಮಂತ್ರಣವನ್ನು ಹಿಂಪಡೆಯುವುದರಿಂದಾಗಿ ನಿಮ್ಮ ಸಂಬಂಧಿಯಿಂದ ಅಥವಾ ಇತರೆ ಅತಿಥಿಗಳಿಂದ ನಿಮಗೆ ಯಾವುದೇ ರೀತಿಯ ಸಹಾಯ ಗಳಿಸುವುದಕ್ಕೆ ಸಾಧ್ಯವಾಗದೇ ಇರಬಹುದು. ನಿಜಕ್ಕೂ ಹೇಳಬೇಕು ಎಂದರೆ ಒಮ್ಮೆ ಆಮಂತ್ರಣ ಕಳಿಸಿದ ನಂತರ ಅದನ್ನು ಹಿಂಪಡೆಯುವುದು ಒಂದು ರೀತಿಯಲ್ಲಿ ಕೆಟ್ಟದಾದ ಶಿಷ್ಟಾಚಾರ.

• ನಿಮ್ಮ ನಿರ್ಧಾರದ ಬಗ್ಗೆ ಅವರಿಗೆ ಬೇಸರವಾಗಬಹುದು. ಇದು ಅವರೊಂದಿಗೆ ನಿಮ್ಮ ಸಂಬಂಧವನ್ನು ಹದಗೆಡಿಸಬಹುದು.

2. ಒಳ್ಳೇದು ಮತ್ತು ಕೆಟ್ಟದ್ದಕ್ಕಾಗಿ ಕಾಯಿರಿ

2. ಒಳ್ಳೇದು ಮತ್ತು ಕೆಟ್ಟದ್ದಕ್ಕಾಗಿ ಕಾಯಿರಿ

ನಿಮ್ಮ ಕುಟುಂಬದ ಸಂಬಂಧಿಯೊಂದಿಗೆ ಹೀಗೆ ಆಮಂತ್ರಣವನ್ನು ವಾಪಾಸ್ ಪಡೆಯುವ ಸಂದರ್ಭದಲ್ಲಿ ಅದಕ್ಕಾಗಿ ನೀವು ನೀಡುವ ಕಾರಣವನ್ನು ಬಹಳ ಜಾಗರೂಕತೆಯಿಂದ ಆರಿಸಿಕೊಳ್ಳಬೇಕು. ಇನ್ನು ಮುಂದೆ ಅವರನ್ನು ಆಮಂತ್ರಿಸದೇ ಇರುವುದಕ್ಕೆ ಆ ವ್ಯಕ್ತಿ ಏನು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿರಬೇಕು.

• ಇತ್ತೀಚೆಗಷ್ಟೇ ಆ ವ್ಯಕ್ತಿಯೊಂದಿಗೆ ನಿಮ್ಮದು ಯಾವುದಾದರೂ ಭಿನ್ನಾಭಿಪ್ರಾಯವಾಗಿತ್ತಾ ಅಥವಾ ಯಾವುದೋ ಭಾವನಾತ್ಮಕ ಕಾರಣಗಳಿಂದಾಗಿ ಅವರಿಗೆ ಆಮಂತ್ರಿಸದೇ ಇರುವುದಕ್ಕೆ ನಿರ್ಧಾರ ಮಾಡಿದ್ದೀರಾ? ಅವರು ನಿಮ್ಮ ಮನೆಯ ಕಾರ್ಯಕ್ರಮದಲ್ಲಿ ಅನುಚಿತವಾಗಿ ವರ್ತಿಸುತ್ತಾರೆ ಎಂಬ ಬಗ್ಗೆ ಯಾವುದಾದರೂ ಘಟನೆ ನಡೆದಿದ್ದು ನಿಮಗೆ ಅನುಮಾನ ಬಂದಿದ್ಯಾ?

• ನಿಮ್ಮ ಕಾರ್ಯಕ್ರಮದಲ್ಲಿ ಅವರು ಉಪಸ್ಥಿತಿ ಇಲ್ಲದೇ ಇರುವುದರಿಂದ ಆಗುವ ಒಳ್ಳೇದು ಮತ್ತು ಕೆಟ್ಟದ್ದರ ಬಗ್ಗೆ ಒಂದು ಪಟ್ಟಿ ಮಾಡಿಕೊಳ್ಳಿ. ಉದಾಹರಣೆಗೆ ಅತಿಯಾಗಿ ಡ್ರಿಂಕ್ಸ್ ಮಾಡುವುದರಿಂದ ಅವರು ವಿಚಿತ್ರವಾಗಿ ವರ್ತಿಸುವುದನ್ನು ತಡೆಯುವುದು ಒಳ್ಳೆಯ ವಿಚಾರ. ಆಮಂತ್ರಣ ವಾಪಾಸ್ ಪಡೆಯುವುದರಿಂದ ಅವರು ನಿಮಗೆ ಗಡಿಬಿಡಿಗೊಳಿಸುವುದು ಕೆಟ್ಟ ವಿಚಾರವಾಗಿರಬಹುದು. ನೀವು ತಯಾರಿಸಿದ ಪಟ್ಟಿಯನ್ನು ಒಮ್ಮೆ ವಿಮರ್ಶಿಸಿಕೊಳ್ಳಿ. ಆಮಂತ್ರಣ ಹಿಂಪಡೆಯುವುದು ಎಷ್ಟು ಒಳ್ಳೆಯ ಕ್ರಿಯೆ ಎಂಬ ಬಗ್ಗೆ ನಿರ್ಧಾರ ಮಾಡಿಕೊಳ್ಳಿ.

• ಯಾವಾಗಲೂ ಕೂಡ ಆಮಂತ್ರಣವನ್ನು ವಾಪಾಸ್ ಪಡೆಯುವುದಕ್ಕೆ ಸಾಧ್ಯವಿಲ್ಲ ಎಂಬ ಅಂಶವೂ ಕೂಡ ನಿಮ್ಮ ಮನಸ್ಸಿನಲ್ಲಿರಲಿ ಮತ್ತು ಕೆಲವು ಸಂದರ್ಭಗಳಲ್ಲಿ ಆಮಂತ್ರಣ ಹಿಂಪಡೆಯುವಿಕೆ ಒಳ್ಳೆಯ ಹೆಜ್ಜೆ ಅಲ್ಲ ಎಂಬುದು ಕೂಡ ನಿಮಗೆ ತಿಳಿದಿರಲಿ.

3. ಸಲಹೆ ಪಡೆಯಿರಿ

3. ಸಲಹೆ ಪಡೆಯಿರಿ

ಸಂಬಂಧಿಗಳಲ್ಲಿ ಯಾರನ್ನು ಆಮಂತ್ರಿಸಬಾರದು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಯಾರನ್ನೂ ಹಗುರವಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ನೀವು ನಂಬಿಕೆ ಇಡುವ ಆಪ್ತ ಸಂಬಂಧಿಗಳ ಜೊತೆಗೆ ಈ ಬಗ್ಗೆ ಚರ್ಚೆ ಮಾಡಿ. ನಿಮ್ಮ ನಿರ್ಧಾರದ ಬಗ್ಗೆ ಅವರ ಅಭಿಪ್ರಾಯವೇನು ಎಂದು ತಿಳಿದುಕೊಳ್ಳಿ.

• ಉದಾಹರಣೆಗೆ- ಇಂತಹ ವ್ಯಕ್ತಿಯೊಬ್ಬರು ಕಳೆದ ಕೆಲವು ಕಾರ್ಯಕ್ರಮಗಳಲ್ಲಿ ಅನುಚಿತವಾಗಿ ವರ್ತಿಸಿರುವುದನ್ನು ನಾನು ಕೇಳಿದ್ದೇನೆ. ಹಾಗಾಗಿ ನಮ್ಮ ಮನೆಯ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಬಾರದು ಎಂದು ನಿರ್ಧರಿಸಿದ್ದೇನೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ನೀವು ನಿಮ್ಮ ನಂಬಿಕೆಯ ವ್ಯಕ್ತಿಯ ಬಳಿ ಕೇಳಿಕೊಳ್ಳಬಹುದು. ಅವರು ಹೇಳುವ ಉತ್ತರವು ನಿಮಗೆ ನಿರ್ಧಾರ ಕೈಗೊಳ್ಳುವುದಕ್ಕೆ ನೆರವು ನೀಡಬಹುದು.

4. ಪರ್ಯಾಯ ಮಾರ್ಗ ಯಾವುದಾದರೂ ಉತ್ತಮವಾಗಲಿದೆಯೇ ಎಂಬುದನ್ನು ನಿರ್ಧರಿಸಿ

4. ಪರ್ಯಾಯ ಮಾರ್ಗ ಯಾವುದಾದರೂ ಉತ್ತಮವಾಗಲಿದೆಯೇ ಎಂಬುದನ್ನು ನಿರ್ಧರಿಸಿ

ಸಂಪೂರ್ಣ ಒಬ್ಬ ವ್ಯಕ್ತಿಯನ್ನು ನಿಮ್ಮ ಕಾರ್ಯಕ್ರಮಕ್ಕೆ ಬರದಂತೆ ಅಹ್ವಾನಿಸದೇ ಇರುವ ಬದಲು, ಅವರು ನಿಮ್ಮ ಕಾರ್ಯಕ್ರಮದಲ್ಲಿ ಕೆಟ್ಟದಾಗಿ ವರ್ತಿಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಪರ್ಯಾಯವಾದ ಬೇರೆ ಯಾವುದಾದರೂ ಮಾರ್ಗವಿದೆಯೇ ಎಂಬ ಬಗ್ಗೆ ಯೋಚಿಸಿ. ಅವರು ನಿಮ್ಮ ಕಾರ್ಯಕ್ರಮದಲ್ಲಿ ಉಪಸ್ಥಿತಿಯಾದರೂ ಕೂಡ ಯಾವುದೇ ಕೆಟ್ಟ ವರ್ತನೆ ಅವರಿಂದ ನಡೆಯದಂತೆ ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಯೋಚಿಸಿ.

• ಉದಾಹರಣೆಗೆ ಯಾವುದೇ ನಿಮ್ಮ ಸಂಬಂಧಿಯೊಬ್ಬ ಕುಡಿದು ದಾಂಧಲೆ ಮಾಡುತ್ತಾರೆ ಫಂಕ್ಷನ್ ನಲ್ಲಿ ಎಂದು ನಿಮಗೆ ತಿಳಿದಿದ್ದರೆ ನಿಮ್ಮ ಕಾರ್ಯಕ್ರಮದಲ್ಲಿ ಅವರು ಅತಿಯಾಗಿ ಆಲ್ಕೋಹಾಲ್ ಕುಡಿಯದಂತೆ ನೋಡಿಕೊಳ್ಳುವುದು ಅಥವಾ ನಿಮ್ಮ ಅತಿಥಿಗಳ ಮೆನುವಿನಲ್ಲಿ ಆಲ್ಕೋಹಾಲ್ ಇಲ್ಲದಂತೆ ಮಾಡುವುದು. ಆ ಮೂಲಕ ಕಾರ್ಯಕ್ರಮವನ್ನು ಚೆಂದಗಾಣಿಸಿಕೊಳ್ಳುವುದು.

• ಒಂದು ವೇಳೆ ಇಬ್ಬರೂ ಸಂಬಂಧಿಗಳು ಮುಖಾಮುಖಿಯಾದರೆ ಗಲಾಟೆ ಮಾಡಿಕೊಳ್ಳುತ್ತಾರೆ ಎಂಬುದು ನಿಮಗೆ ಮೊದಲೇ ತಿಳಿದಿದ್ದರೆ, ಇಬ್ಬರನ್ನೂ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದರೂ ಕೂಡ ಅವರಿಬ್ಬರ ನಡುವೆ ಜಗಳವಾಗದಂತೆ ಕಾಯುವುದು. ಅವರನ್ನು ಬೇರೆಬೇರೆ ಜಾಗದಲ್ಲಿ ಕುಳಿತುಕೊಳ್ಳುವಂತೆ ಮಾಡುವುದು ಮತ್ತು ಅವರಿಬ್ಬರ ನಡುವೆ ಯಾವುದೇ ಸಂಭಾಷಣೆ ನಡೆಯದಂತೆ ನೋಡಿಕೊಳ್ಳುವುದಕ್ಕೆ ನಿಮ್ಮವರೊಬ್ಬರನ್ನು ನೇಮಿಸುವುದು ಇತ್ಯಾದಿ ರೀತಿಯ ಯಾವುದಾದರೂ ರೀತಿಯ ಮಾರ್ಗವನ್ನು ಅನುಸರಿಸುವುದು.

• ಒಂದು ವೇಳೆ ನಿಮ್ಮ ಸಂಬಂಧಿಗಳಲ್ಲಿ ಯಾರಾದರೂ ಕೆಟ್ಟ ಹಾಸ್ಯ ಮಾಡುವವರಿದ್ದು, ಅವರ ಹಾಸ್ಯ ಇಷ್ಟವಾಗದ ವ್ಯಕ್ತಿಗಳು ಕೂಡ ನಿಮ್ಮ ಕಾರ್ಯಕ್ರಮಕ್ಕೆ ಬರುತ್ತಿದ್ದಾರಾದರೆ ನೀವು ನಿಮ್ಮ ಸಂಬಂಧಿಯ ಬಳಿ ಮನವಿ ಮಾಡಿಕೊಳ್ಳಬಹುದು. ಉದಾಹರಣೆಗೆ " ಈ ಕಾರ್ಯಕ್ರಮದಲ್ಲಿ ನನ್ನ ಇಂತಹ ಸ್ನೇಹಿತರು ಬರುತ್ತಿದ್ದಾರೆ. ಅವರಿಗೆ ಕೆಟ್ಟ ಹಾಸ್ಯಗಳು ಇಷ್ಟವಾಗುವುದಿಲ್ಲ. ಹಾಗಾಗಿ ನಿಮ್ಮ ಭಾಷೆ ಮತ್ತು ಹಾಸ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ" ಎಂದು ನೀವು ನಿಮ್ಮ ಸಂಬಂಧಿಯ ಬಳಿ ಮನವಿ ಮಾಡಿಕೊಳ್ಳಬಹುದು.

ವಿಧಾನ 2

ವೈಯಕ್ತಿಕ ಭೇಟಿಗೆ ಆದ್ಯತೆ ನೀಡಿ

1. ಸಾಧ್ಯವಾದರೆ ಮುಖಾಮುಖಿ ಸಂಭಾಷಣೆ ನಡೆಸಿ

1. ಸಾಧ್ಯವಾದರೆ ಮುಖಾಮುಖಿ ಸಂಭಾಷಣೆ ನಡೆಸಿ

ಒಂದು ವೇಳೆ ಯಾವುದೇ ವ್ಯಕ್ತಿಗೆ ಆಮಂತ್ರಣ ನೀಡದೇ ಇರುವುದೇ ಸರಿ ಎಂಬ ನಿರ್ಧಾರಕ್ಕೆ ನೀವು ಬಂದಿದ್ದೇ ಆದಲ್ಲಿ ಬಹಳ ಚಾತುರ್ಯದಿಂದ ಈ ಕೆಲಸವನ್ನು ಮಾಡಬೇಕಾಗುತ್ತದೆ. ಇದನ್ನು ಮಾಡುವುದಕ್ಕಾಗಿ ಸಾಕಷ್ಟು ವಿನಯಶೀಲವಾಗಿರುವ ವ್ಯಕ್ತಿತ್ವದ ಅಗತ್ಯವಿದೆ. ಸಾಧ್ಯವಾದರೆ ವೈಯಕ್ತಿಕವಾಗಿ ಆ ವ್ಯಕ್ತಿಯನ್ನು ಭೇಟಿಯಾಗಲು ಪ್ರಯತ್ನಿಸಿ.

• ನೀವು ಅವರನ್ನು ಕಾಫಿಗೋ ಅಥವಾ ಊಟಕ್ಕೋ ಹೊರಗಡೆ ಆಹ್ವಾನಿಸಿಕೊಳ್ಳಬಹುದು. ಉದಾಹರಣೆ, "ಚಿಕ್ಕಪ್ಪ ಮಂಗಳವಾರ ಹೊರಗಡೆ ಹೋಗಿ ಕಾಫಿ ಕುಡಿದು ಬರೋಣವಾ. ನಾನು ನಿಮ್ಮ ಸ್ವಲ್ಪ ಮಾತನಾಡಬೇಕಿತ್ತು" ಎಂದು ಆಹ್ವಾನಿಸಿ ವಿಚಾರ ತಿಳಿಸುವುದು. ನಿಮ್ಮ ಸಂಬಂಧಿ ಕಿರಿಕಿರಿ ಮಾಡದಂತೆ ಅಥವಾ ಯಾವುದೇ ಸೀನ್ ಕ್ರಿಯೇಟ್ ಮಾಡದಂತೆ ನೋಡಿಕೊಳ್ಳುವುದಕ್ಕಾಗಿ ಇಂತಹ ಭೇಟಿ ಯಾವುದಾದರೂ ಸಾರ್ವಜನಿಕ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

• ಒಂದು ವೇಳೆ ನಿಮ್ಮ ಸಂಬಂಧಿ ದೂರದ ಊರಿನಲ್ಲಿ ವಾಸಿಸುವವರಾಗಿದ್ದಲ್ಲಿ ಅವರಿಗಾಗಿ ಟೆಲಿಫೋನಿನಲ್ಲಿ ಮಾತನಾಡುವುದಕ್ಕೆ ಪ್ಲಾನ್ ಮಾಡಿ. ಸಾಮಾಜಿಕ ಜಾಲತಾಣದ ಮೂಲಕ ಅತಿಥಿಗಳನ್ನು ಆಹ್ವಾನಿಸುವುದನ್ನು ತಪ್ಪಿಸಿ. ಒಂದು ವೇಳೆ ಇದು ಕಷ್ಟವಾಗಿದ್ದಲ್ಲಿ ಸಮಸ್ಯೆಯನ್ನು ಪ್ರಬುದ್ಧ ರೀತಿಯಲ್ಲಿ ನಿರ್ವಹಿಸುವುದಕ್ಕೆ ನಿಮ್ಮ ಕೈಲಾದ ಪ್ರಯತ್ನ ಮಾಡಿ. ಹೀಗೆ ಮಾಡುವುದರಿಂದ ಆ ವ್ಯಕ್ತಿಯೊಂದಿಗೆ ಭವಿಷ್ಯದಲ್ಲಿ ಉತ್ತಮ ಸಂಬಂಧ ಹೊಂದಿರುವುದಕ್ಕೆ ಸಾಧ್ಯವಾಗುತ್ತದೆ.

2. ನಿಮ್ಮ ಕಾರಣದ ಬಗ್ಗೆ ನೀವು ಸತ್ಯದಿಂದಿರಿ

2. ನಿಮ್ಮ ಕಾರಣದ ಬಗ್ಗೆ ನೀವು ಸತ್ಯದಿಂದಿರಿ

ಚರ್ಚೆ ಮಾಡುವ ಮೊದಲೇ ತಯಾರಿ ನಡೆಸಿ. ಸಾಧಕ-ಬಾಧಕಗಳ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ. ಅವರನ್ನು ಭೇಟಿ ಮಾಡುವ ಮುನ್ನ ಹೇಗೆ ಮಾತನಾಡಬೇಕು ಎಂಬ ಬಗ್ಗೆ ಮನಸ್ಸಿನಲ್ಲೇ ಒಂದು ಸ್ಕ್ರಿಪ್ಟ್ ರೆಡಿ ಮಾಡಿಕೊಳ್ಳಿ ಮತ್ತು ಅದನ್ನು ಭೇಟಿ ಮಾಡಿದಾಗ ಹೇಗೆ ಹೇಳಬೇಕು ಎಂಬ ಬಗ್ಗೆ ಭೇಟಿಯ ಮೊದಲೇ ಪೂರ್ವಾಭ್ಯಾಸ ಮಾಡಿಕೊಳ್ಳಿ. ಸಂಭಾಷಣೆ ನಡೆಸುವಾಗ ಆದಷ್ಟು ತಾಳ್ಮೆಯಿಂದ ಇರಿ. ಕೆಟ್ಟ ಭಾಷೆಗಳನ್ನು ಬಳಸಬೇಡಿ. ನೇರವಾದ ಭಾಷೆಯಲ್ಲಿ ಮತ್ತು ತಾರ್ಕಿಕ ವಿಚಾರವನ್ನು ಸಂಕ್ಷಿಪ್ತವಾಗಿ ವಿವರಿಸಿ.

• ಉದಾಹರಣೆಗೆ "ಚಿಕ್ಕಪ್ಪ ನಿಮ್ಮನ್ನ ಭೇಟಿ ಮಾಡುವುದಕ್ಕೆ ನನಗೆ ಖುಷಿ ಆದೆ. ಆದರೆ ಖಂಡಿತ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರುವುದು ನನಗೂ ಕಷ್ಟದ ನಿರ್ಧಾರ. ಆದರೆ ನೀವು ಮತ್ತು ತಂದೆಯ ನಡುವಿನ ಸಾಮರಸ್ಯ ಸರಿ ಇಲ್ಲದ ಕಾರಣ ನಾನು ಹೀಗೆ ಮಾಡಲೇಬೇಕಾಗುತ್ತಿದೆ. ಹಾಗಾಗಿ ಮದುವೆ ಕಾರ್ಯಕ್ರಮಕ್ಕೆ ನೀವು ಬರದೇ ಇರುವುದೇ ಒಳ್ಳೆಯದು. ನಾನು ಮತ್ತು ನನ್ನ ಸಂಗಾತಿ ನಮ್ಮ ಕಾರ್ಯಕ್ರಮ ಶಾಂತವಾಗಿರಬೇಕು ಎಂದು ಬಯಸುತ್ತೇವೆ. ಆದರೆ ನೀವಿಬ್ಬರೂ ಯಾವುದೇ ಚರ್ಚೆ ಮಾಡದೇ ಒಂದು ಪ್ರದೇಶದಲ್ಲಿ ಇರುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ನಿಮಗೂ ತಿಳಿದಿದೆ. ಹಾಗಾಗಿ ಇದನ್ನು ಅರ್ಥ ಮಾಡಿಕೊಂಡು ನೀವು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಭಾವಿಸುತ್ತೇನೆ" ಹೀಗೆ ಹೇಳುವ ಮೂಲಕ ಆಮಂತ್ರಣವನ್ನು ತಪ್ಪಿಸಬಹುದು.

• ಈ ವ್ಯಕ್ತಿಯು ಒಂದು ವೇಳೆ ಇಂತಹ ಸನ್ನಿವೇಶವನ್ನು ಈ ಹಿಂದೆ ಯಾವುದಾದರೂ ಕಾರ್ಯಕ್ರಮದಲ್ಲಿ ಅನುಭವಿಸಿದ್ದರೆ ಅಥವಾ ಅದರಿಂದ ಸಮಸ್ಯೆ ಆಗಿದ್ದರೆ ಖಂಡಿತ ನಿಮ್ಮ ನಿರ್ಧಾರವನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ನಿಮ್ಮ ಕಾರ್ಯಕ್ರಮಕ್ಕೆ ಅವರು ಬರುವುದಿಲ್ಲ.

3. ಕ್ಷಮೆ ಕೇಳಬೇಡಿ

3. ಕ್ಷಮೆ ಕೇಳಬೇಡಿ

ನನ್ನನ್ನು ಕ್ಷಮಿಸಿ ಎಂದು ಕೇಳುವುದು ಅವರ ಕೆಟ್ಟ ವರ್ತನೆಯ ಮಾಲೀಕತ್ವವನ್ನು ನೀವು ಪಡೆಯುತ್ತಿರುವಂತೆ ಭಾಸವಾಗುತ್ತದೆ. ಯಾವುದೇ ವ್ಯಕ್ತಿಯನ್ನು ಒಂದು ವೇಳೆ ಅವರ ಕೆಟ್ಟ ವರ್ತನೆಯ ಉದ್ದೇಶದಿಂದ ನೀವು ಆಹ್ವಾನಿಸುತ್ತಿಲ್ಲವಾದರೆ ಅದಕ್ಕಾಗಿ ಖಂಡಿತ ಬೇಸರಿಸಿಕೊಳ್ಳಬೇಡಿ. ಅವರ ಕೆಟ್ಟ ವರ್ತನೆಗೆ ಖಂಡಿತ ನೀವು ಜವಾಬ್ದಾರರಲ್ಲ ಆದರೆ ನಿಮ್ಮ ಕಾರ್ಯಕ್ರಮದಲ್ಲಿ ಇತರ ಅತಿಥಿಗಳಿಗೆ ತೃಪ್ತಿದಾಯಕ ವಾತಾವರಣದ ನಿರ್ಮಾಣ ಮಾಡುವಿಕೆಯು ಖಂಡಿತ ನಿಮ್ಮ ಜವಾಬ್ದಾರಿಯೇ ಆಗಿರುತ್ತದೆ. ಯಾವುದೇ ವ್ಯಕ್ತಿಯೊಬ್ಬ ಕಾರ್ಯಕ್ರಮದಲ್ಲಿ ಸಂಬಂಧವನ್ನು ಹಾಳು ಮಾಡುತ್ತಾರೆ ಎಂಬುದು ನಿಮಗೆ ತಿಳಿದಿದ್ದು ಅವರನ್ನು ಆಹ್ವಾನಿಸದೇ ಇದ್ದಲ್ಲಿ ಅದಕ್ಕಾಗಿ ನಿಮ್ಮನ್ನು ನೀವು ದೂಷಿಸಿಕೊಳ್ಳಬೇಡಿ.

• ನನ್ನನ್ನು ಕ್ಷಮಿಸಿ ಎಂದು ಹೇಳುವ ಬದಲಾಗಿ ನನಗೆ ನಿಮ್ಮ ಭಾವನೆಗಳಿಗೆ ಬೇಸರ ಮಾಡುವ ಉದ್ದೇಶವಿಲ್ಲ ಎಂದು ಹೇಳಿ. ನಿಮ್ಮ ಆಯ್ಕೆಯು ಉತ್ತಮ ಉದ್ದೇಶದಿಂದ ಮಾಡಲ್ಪಟ್ಟಿದೆ ಮತ್ತು ಆ ನಿರ್ಧಾರದ ಹಿಂದೆ ನೀವು ನಿಂತಿದ್ದೀರಿ ಎಂಬುದನ್ನು ಇದು ತೋರಿಸುತ್ತದೆ.

4. ಋಣಾತ್ಮಕ ಪ್ರತಿಕ್ರಿಯೆ ಬಂದಲ್ಲಿ ತಾಳ್ಮೆ ವಹಿಸಿ

4. ಋಣಾತ್ಮಕ ಪ್ರತಿಕ್ರಿಯೆ ಬಂದಲ್ಲಿ ತಾಳ್ಮೆ ವಹಿಸಿ

ಈ ಪರಿಸ್ಥಿತಿಗೆ ನಿಮ್ಮ ಪ್ರೀತಿಪಾತ್ರರು ಋಣಾತ್ಮಕವಾಗಿ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇರುತ್ತದೆ. ಯಾವುದೇ ಸಂಬಂಧಿಯನ್ನು ಆಹ್ವಾನಿಸದೇ ಇರುವುದು ಅವರಿಗೆ ಅವಮಾನದಂತಾಗಬಹುದು. ಹಾಗಾಗಿ ಅದನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ಅವರು ವೈಯಕ್ತಿಕವಾಗಿ ಏನನ್ನಾದರೂ ಹೇಳಿದರೆ ಅದನ್ನು ಪರಿಗಣಿಸಿಕೊಳ್ಳಬೇಡಿ. ಆದಷ್ಟು ತಾಳ್ಮೆಯಿಂದ ಇರಿ ಮತ್ತು ಅವರು ಹೇಳಿದ್ದಕ್ಕೆ ನಿಮ್ಮ ಬೆಂಬಲವಿದೆ ಎಂಬಂತೆ ವರ್ತಿಸಿ.

• ನಾನು ನಿಮಗೆ ಬೇಸರವಾಗಿದ್ದನ್ನು ಗಮನಿಸುತ್ತಿದ್ದೇನೆ. ಆದರೆ ನಿಮಗೆ ಬೇಸರ ಮಾಡುವ ಉದ್ದೇಶ ನನ್ನದಲ್ಲ. ಆದರೆ ಇದುವೆ ಅತ್ಯುತ್ತಮ ಆಯ್ಕೆ ಎಂದು ನನಗೆ ಅನ್ನಿಸುತ್ತಿದೆ ಎಂದು ಹೇಳಿ ಅವರಿಗೆ ಮನವರಿಕೆ ಮಾಡಲು ನೀವು ಪ್ರಯತ್ನಿಸಬಹುದು.

ವಿಧಾನ 3

ಸಾಮಾನ್ಯ ಸಮಸ್ಯೆಗಳನ್ನು ನಿಭಾಯಿಸಿವುದು

1. ಅತಿಥಿಗಳ ಪಟ್ಟಿ ಸಣ್ಣದಿದೆ ಎಂಬುದನ್ನು ವಿವರಿಸಿ

1. ಅತಿಥಿಗಳ ಪಟ್ಟಿ ಸಣ್ಣದಿದೆ ಎಂಬುದನ್ನು ವಿವರಿಸಿ

ಕೆಲವು ಸಂದರ್ಭಗಳಲ್ಲಿ ಕೆಲವು ಸಂಬಂಧಿಗಳನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿರಬಹುದು. ಬಹುಶಃ ನೀವು ಅವರ ಹೆಸರನ್ನು ಆಕಸ್ಮಿಕವಾಗಿ ಫೇಸ್ ಬುಕ್ ನಲ್ಲಿ ಇವೆಂಟ್ ಅನ್ನು ಹೊಂದಿಸುವಾಗ ಆಯ್ಕೆ ಮಾಡಿ ಬಿಟ್ಟಿರಬಹುದು ಅಥವಾ ಅವರ ಎದುರಿಗೆ ನೀವು ಕಾರ್ಯಕ್ರಮದ ಬಗ್ಗೆ ಮಾತನಾಡಿರಬಹುದು ಮತ್ತು ಅದನ್ನೇ ಅವರು ಆಮಂತ್ರಣ ಎಂದು ಭಾವಿಸಿರಬಹುದು. ಯಾವುದೇ ಕೇಸ್ ಆಗಿದ್ದರೂ ಕೂಡ ಅವರಿಗೆ ಅದನ್ನು ಮನದಟ್ಟು ಮಾಡಿ ಆಮಂತ್ರಣ ಹಿಂಪಡೆಯಬಹುದು.

• ಉದಾಹರಣೆಗೆ "ಸಮಂತಾ ಅವರ ಮಗುವಿನ ಕಾರ್ಯಕ್ರಮದ ಪೇಜ್ ಸೆಟ್ ಮಾಡುವಾಗ ಆಕಸ್ಮಿಕವಾಗಿ ನಿಮ್ಮ ಹೆಸರು ಕ್ಲಿಕ್ ಆಗಿ ಬಿಟ್ಟಿದೆ. ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ತುಂಬಾ ಖುಷಿಯಾಗುತ್ತದೆ ನಿಜ. ಆದರೆ ನಾವು ಈ ಕಾರ್ಯಕ್ರಮವನ್ನು ಸಣ್ಣದಾಗಿ ಮಾಡುತ್ತಿದ್ದು ಕೇವಲ 15 ಜನರಿಗೆ ಮಾತ್ರವೇ ಆಹ್ವಾನಿಸುತ್ತಿದ್ದೇವೆ. ದಯವಿಟ್ಟು ಈ ರೀತಿ ಆಗಿದ್ದಕ್ಕೆ ಕ್ಷಮಿಸಿ" ಎಂದು ಕೇಳಿಕೊಳ್ಳಿ.

2. ನಿಮ್ಮ ಪರವಾಗಿ ಮಾತನಾಡಿದವರ ಬಗ್ಗೆ ಕ್ಷಮೆ ಕೇಳಿ

2. ನಿಮ್ಮ ಪರವಾಗಿ ಮಾತನಾಡಿದವರ ಬಗ್ಗೆ ಕ್ಷಮೆ ಕೇಳಿ

ಒಂದು ವೇಳೆ ನಿಮ್ಮ ಅನುಮತಿ ಇಲ್ಲದೆ ಆಮಂತ್ರಣವನ್ನು ವಿಸ್ತರಿಸಿದ್ದಲ್ಲಿ ತಪ್ಪಾಗಿ ಸಂವಹನ ನಡೆದಿರುವುದಕ್ಕಾಗಿ ಕ್ಷಮೆ ಕೇಳಿ.ಉದಾಹರಣೆಗೆ " ಹಾಯ್ ರೋಶನ್, ಕಾರ್ತಿಕ್ ಪಾರ್ಟಿಗಾಗಿ ನಿನ್ನನ್ನ ಆಹ್ವಾನಿಸಿದ್ದಾನೆ. ಆದರೆ ಅವನು ಹೀಗೆ ಮಾಡಬಾರದಿತ್ತು. ನಮ್ಮ ಅತಿಥಿಗಳ ಪಟ್ಟಿ ಬೇರೆಯೇ ಇದೆ. ಈ ರೀತಿ ಮಿಕ್ಸ್ ಅಪ್ ಆಗಿರುವುದಕ್ಕೆ ಕ್ಷಮಿಸು. ಇದು ರೋಶನ್ ಮಾಡಿದ ಯಡವಟ್ಟಿನಿಂದ ಬಂದಿರುವ ಆಹ್ವಾನ. ಹಾಗಾಗಿ ದಯವಿಟ್ಟು ಅವನ ಆಮಂತ್ರಣವನ್ನು ಗಣನೆಗೆ ತೆಗೆದುಕೊಳ್ಳಬೇಡ" ಎಂದು ತಿಳಿಸಬಹುದು.

• ಇನ್ನೂ ಉತ್ತಮ ಆಯ್ಕೆ ಏನೆಂದರೆ ತಪ್ಪು ಮಾಡಿದ ವ್ಯಕ್ತಿಯ ಬಳಿಯೇ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಹೇಳುವುದು. ಉದಾಹರಣೆಗೆ "ಕಾರ್ತೀಕ್ ನನ್ನು ಪಾರ್ಟಿಗೆ ಕರೆಯುವುದು ಬೇಡ ಇತ್ತು ಮಾರಾಯ. ಅವನು ಹಿಂದಿನ ಪಾರ್ಟಿಯಲ್ಲಿ ಕುಡಿದು ಸೀನ್ ಕ್ರಿಯೇಟ್ ಮಾಡಿ ಎಲ್ಲರಿಗೂ ಸಮಸ್ಯೆ ಮಾಡಿದ್ದ. ಹಾಗಾಗಿ ನೀನು ಹೇಗಾದರೂ ಮಾಡಿ ಅವನು ಪಾರ್ಟಿಗೆ ಬರದೇ ಇರುವಂತೆ ನೋಡಿಕೊಳ್ಳುತ್ತೀಯಾ?" ಎಂದು ರೋಶನ್ ಬಳಿಯೇ ಕೇಳುವುದು.

3. ತಮ್ಮನ್ನ ತಾವೇ ಆಮಂತ್ರಿಸಿಕೊಂಡಿರುವ ಅತಿಥಿಗಳು

3. ತಮ್ಮನ್ನ ತಾವೇ ಆಮಂತ್ರಿಸಿಕೊಂಡಿರುವ ಅತಿಥಿಗಳು

ಕೆಲವು ಕುಟುಂಬದ ಸದಸ್ಯರು ಹೇಗೆ ಎಂದರೆ ನೀವು ಮಾಡಲು ನಿರ್ಧರಿಸಿದ ಎಲ್ಲಾ ಕಾರ್ಯಕ್ರಮದಲ್ಲೂ ಅವರು ಉಪಸ್ಥಿತರಾಗಬೇಕು ಎಂದು ಸ್ವಯಂ ನಿರ್ಧರಿಸಿ ಬಿಡುತ್ತಾರೆ. ಬಹುಶ್ಯಃ ಅವರಿಗೆ ಅಧಿಕೃತ ಆಮಂತ್ರಣ ತಲುಪಿರುವುದೇ ಇಲ್ಲ ಆದರೂ ಅವರು ಉಪಸ್ಥಿತರಾಗಲು ನಿರ್ಧರಿಸಿರುತ್ತಾರೆ. ಅಂತಹವನ್ನು ನಿಧಾನವಾಗಿ ನಿಭಾಯಿಸಿ

• ಉದಾಹರಣೆಗೆ ನಿಮ್ಮ ಸೋದರ ಸಂಬಂಧಿಯೊಬ್ಬಳು ನಿಮ್ಮ ಮದುವೆ ಹಿಂದಿನ ದಿನದ ಪಾರ್ಟಿಯೊಂದರಲ್ಲಿ ಯಾವ ಬಟ್ಟೆ ಧರಿಸಲಿ ಎಂದು ಕೇಳುತ್ತಾಳೆ ಎಂದಿಟ್ಟುಕೊಳ್ಳಿ. ಆ ಕಾರ್ಯಕ್ರಮಕ್ಕೆ ಆಕೆ ಬರುವುದು ನಿಮಗೆ ಇಷ್ಟವಿಲ್ಲ. ಆಗ ಅವಳ ಬಳಿ " ಮುಂದಿನ ವಾರ ನಡೆಯುವ ಕಾರ್ಯಕ್ರಮ ಕೇವಲ ನನ್ನ ಸಹೋದ್ಯೋಗಿಗಳಿಗೆ ಮಾತ್ರ. ನಾವೆಲ್ಲಾ ಇನ್ನೊಂದಿನ ಒಟ್ಟಿಗೆ ಸೇರೋಣ ಎಂದು ಹೇಳಿ ಆಕೆಯನ್ನು ಬರದಂತೆ ತಡೆಯಬಹುದು."

4. ಯಾರನ್ನೋ ಕರೆಯದೇ ಇದ್ದದ್ದಕ್ಕೆ ಮತ್ತೊಂದಿಷ್ಟು ಅತಿಥಿಗಳು ಬರದೇ ಇರುವುದು

4. ಯಾರನ್ನೋ ಕರೆಯದೇ ಇದ್ದದ್ದಕ್ಕೆ ಮತ್ತೊಂದಿಷ್ಟು ಅತಿಥಿಗಳು ಬರದೇ ಇರುವುದು

ಕೆಟ್ಟ ಸನ್ನಿವೇಶ ಯಾವುದೆಂದರೆ ಯಾವುದೋ ಒಬ್ಬ ಸಂಬಂಧಿಯನ್ನು ಅಥವಾ ವ್ಯಕ್ತಿಯನ್ನು ಕರೆಯಲಿಲ್ಲ ಎಂಬ ಉದ್ದೇಶಕ್ಕೆ ಮತ್ತೊಂದಿಷ್ಟು ಸಂಬಂಧಿಗಳೋ ಇಲ್ಲ ವ್ಯಕ್ತಿಗಳೋ ನಿಮ್ಮ ಕಾರ್ಯಕ್ರಮವನ್ನು ಬಹಿಷ್ಕರಿಸುವುದು. ಇಂತಹ ಸಂದರ್ಬದಲ್ಲಿ ಅಗತ್ಯವಿರುವ ವ್ಯಕ್ತಿಗಳ ಉಪಸ್ಥಿತಿ ನಿಮಗೆ ಎಷ್ಟು ಮುಖ್ಯ ಮತ್ತು ಆಹ್ವಾನ ನೀಡದ ವ್ಯಕ್ತಿಯು ಅಮುಖ್ಯ ಯಾಕೆ ಎಂಬುದನ್ನು ಅರ್ಥ ಮಾಡಿಸಬೇಕಾಗುತ್ತದೆ. ಹಾಗಂತ ಕಿರಿಕಿರಿಗೊಳಪಡಿಸುವ ವ್ಯಕ್ತಿಯನ್ನು ಆಹ್ವಾನಿಸಲೇ ಬೇಕು ಎಂಬ ಒತ್ತಡಕ್ಕೆ ಈ ಬಹಿಷ್ಕಾರದಿಂದ ನಿರ್ಧರಿಸಬೇಕಾಗಿಲ್ಲ.

• ಒಂದು ವೇಳೆ ನಿಮ್ಮ ನಿರ್ಧಾರದ ಪ್ರಶ್ನೆ ಕೆಲವು ಮಂದಿ ತೃಪ್ತರಾಗಿಲ್ಲದೇ ಇದ್ದ

English summary

How To Avoid Irritate Relationship

Weddings, birthday parties, retirements, graduations, holidays and other special occasions should bring you joy, not dread. An annoying guest can threaten the enjoyment of an event by acting inappropriately or starting drama.
X
Desktop Bottom Promotion