For Quick Alerts
ALLOW NOTIFICATIONS  
For Daily Alerts

ಹೆಂಡತಿಯು ತನ್ನ ಗಂಡನಲ್ಲಿ ಎಂದೂ ಹಂಚಿಕೊಳ್ಳದ ಕೆಲವೊಂದು ಗುಟ್ಟುಗಳು

|

ಓರ್ವ ಪುರುಷನಲ್ಲಿ ಅನುರಕ್ತಳಾದ ಮಹಿಳೆ ತನ್ನ ಬಗ್ಗೆ ಸಾವಿರಾರು ವಿಷಯಗಳನ್ನು ಆತನೊಂದಿಗೆ ಹಂಚಿಕೊಳ್ಳಬಹುದು. ಆದರೆ ಕೆಲವು ಸಂಗತಿಗಳು ಇವರೆಂದೂ ತಮ್ಮ ಇನಿಯ ಅಥವಾ ಪತಿಯೊಡನೆ ಹಂಚಿಕೊಳ್ಳುವುದಿಲ್ಲ. ಓರ್ವಳ ಖಾಸಗಿ ದಿನಚರಿ ಪುಸ್ತಕದಲ್ಲಿ ಬರೆದಿರುವ ಅತ್ಯಂತ ಗೋಪ್ಯ ವಿವರಗಳು ಆಕೆಯ ನಿಜಜೀವನಕ್ಕೂ ಬದಲಾಗಿ ಬೇರೊಂದು ಗುಪ್ತ ಜೀವನದ ಬಗ್ಗೆಯೇ ಸುತ್ತುವರೆದಿರುತ್ತವೆ. ಆಕೆಯ ಮನದಲ್ಲಿ ಏನು ನಡೆಯುತ್ತಿರುತ್ತದೆ ಎಂಬುದನ್ನು ಅರಿತುಕೊಳ್ಳಲು ಸಾಧ್ಯವಾಗದೇ ಹೋಗುತ್ತದೆ.

ಮೀನಿನ ಹೆಜ್ಜೆಯನ್ನಾದರೂ ಹುಡುಕಬಹುದು ಆದರೆ ಹೆಣ್ಣಿನ ಮನಸ್ಸನ್ನು ಅರಿಯುವುದು ಅಸಾಧ್ಯ ಎಂಬ ಕನ್ನಡ ನಾಣ್ಣುಡಿ ಸತ್ಯ ಎಂದು ಮನವರಿಕೆಯಾಗುತ್ತದೆ. ಈ ಗುಪ್ತ ವಿಷಯಗಳನ್ನು ಆಕೆ ಯಾರೊಂದಿಗೂ ಹಂಚಿಕೊಳ್ಳದೇ ಇರಲು ಆಕೆಗೆ ಇದರ ಬಗ್ಗೆ ಇರುವ ಭಯಕ್ಕಿಂತಲೂ ಈ ವಿಷಯಗಳನ್ನು ಆಕೆ ತನ್ನ ಖಾಸಗಿ ಲೋಕದಲ್ಲಿಯೇ ಇರಿಸಿಕೊಳ್ಳುವುದನ್ನೇ ಹೆಚ್ಚು ಇಷ್ಟಪಡುತ್ತಾಳೆ.

ಸಾಮಾಜಿಕ ತಾಣದಲ್ಲಿ ಈ ವಿಷಯದ ಬಗ್ಗೆ ಕೆಲವು ಪ್ರಶ್ನೆಗಳನ್ನು ವಿವಿಧ ಮಹಿಳೆಯರಿಗೆ ಆನಮಿಕರಾಗಿ ಉತ್ತರಿಸುವಂತೆ ಕೇಳಲಾಯ್ತು ಹಾಗೂ ಸಂಬಂಧಲ್ಲಿರುವ ಅಥವಾ ಸಂಬಂಧಕ್ಕೆ ಇನ್ನೂ ಒಳಗೊಂಡಿರದ ಒಂಟಿ ಮಹಿಳೆಯರನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಪ್ರಶ್ನೆ ಸರಳವಾಗಿತ್ತು "ನಿಮ್ಮ ಪ್ರಿಯಕರನಿಂದ / ಪತಿಯಿಂದ ನೀವು ಯಾವ ವಿಷಯವನ್ನು ಗೋಪ್ಯವಾಗಿಟ್ಟೀದ್ದೀರಿ?" ಮೊದಮೊದಲಿಗೆ ಇದಕ್ಕೆ ಬಂದ ಪ್ರತಿಕ್ರಿಯೆ ನೀರಸವಾಗಿತ್ತು. ಆದರೆ ಕಾಲಕ್ರಮೇಣ ಒಬ್ಬರಿಂದೊಬ್ಬರು ಪ್ರೇರಣೆ ಪಡೆದು ನಿಧಾನವಾಗಿ ತಮ್ಮ ಮನದಾಳದ ಭಾವನೆಗಳನ್ನು ಹೊರಹಾಕತೊಡಗಿದರು. ಹಲವು ಮಹಿಳೆಯರು ನಿರ್ಬಿಡೆಯಿಂದ ತಮ್ಮ ಮನದಾಳದ ಗೋಪ್ಯ ವಿಷಯಗಳನ್ನು ಬಹಿರಂಗಗೊಳಿಸಿದರು. ಇವುಗಳಲ್ಲಿ ಅತಿ ಸಾಮಾನ್ಯವಾದ ಐದು ಉತ್ತರಗಳು ಇಂತಿವೆ..

ಆಪ್ತ ಸ್ನೇಹಿತೆಯರು ಪರಸ್ಪರರಲ್ಲಿ ಮಾತನಾಡುವ ವಿಷಯಗಳು

ಆಪ್ತ ಸ್ನೇಹಿತೆಯರು ಪರಸ್ಪರರಲ್ಲಿ ಮಾತನಾಡುವ ವಿಷಯಗಳು

ಮಹಿಳೆಯರು ತಮ್ಮ ಆಪ್ತ ಸ್ನೇಹಿತೆಯರಲ್ಲಿ ಮಾತ್ರವೇ ಕೆಲವು ವಿಷಯಗಳನ್ನು ಹಂಚಿಕೊಳ್ಳುತ್ತಾರೆ ಹಾಗೂ ಇವುಗಳಲ್ಲಿ ಪುರುಷರ ಬಗ್ಗೆ ಕೆಲವು ಪೋಲಿಮಾತುಗಳೂ ಇರುತ್ತವೆ. ಕೆಲವರಂತೂ ಈ ಪೋಲಿ ಅಥವಾ ಪುರುಷರು ನೋಡಬಾರದ/ ಕೇಳಿಸಿಕೊಳ್ಳಬಾರದ ವಿಷಯಗಳನ್ನು ರೇಖಾಚಿತ್ರಗಳ ಮೂಲಕವೂ ದಾಖಲಿಸಿ ಕೊಂಡಿರುತ್ತಾರೆ. ಆದರೆ ಈ ವಲಯದಲ್ಲಿ ಪುರುಷರಿಗೆಂಗೂ ಪ್ರವೇಶವಿಲ್ಲ! ಕೇವಲ ಆಕೆಯ ಆಪ್ತ ಸ್ನೇಹಿತೆಯರಿಗೆ ಮಾತ್ರವೇ ಅವಕಾಶ ಹಾಗೂ ಈ ವಿಷಯಗಳನ್ನು ಕೆದಕುವುದರಿಂದ ಇವರಿಗೆ ಲಭಿಸುವ ಸಂತೋಷಕ್ಕೆ ಸಾಟಿಯಿಲ್ಲ! ಕ್ಷಮಿಸಿ ಪುರುಷರೇ! ನಿಮ್ಮ ಪ್ರಿಯತಮೆಯ ಈ ಖಾಸಗಿ ಲೋಕದಲ್ಲಿ ನಿಮಗೂ ಪ್ರವೇಶವಿಲ್ಲ!

ಮೇಕಪ್ ಪ್ರಸಾಧನಾ ಪೆಟ್ಟಿಗೆ

ಮೇಕಪ್ ಪ್ರಸಾಧನಾ ಪೆಟ್ಟಿಗೆ

ಪ್ರತಿ ಮಹಿಳೆಯೂ ಶೃಂಗಾರಪ್ರಿಯಳಾಗಿದ್ದು ನಾಲ್ಕು ಜನರ ನಡುವೆ ತಾನು ಆಕರ್ಷಕಳಾಗಿ ಕಾಣಿಸಿಕೊಳ್ಳಬೇಕೆಂದು ಇಚ್ಛಿಸುತ್ತಾಳೆ. ಈಕೆಯ ಬಟ್ಟೆಗಳ ಭಂಡಾರ, ಮೇಕಪ್ ಪ್ರಸಾದನಾ ಪೆಟ್ಟಿಗೆ, ಆಭರಣಗಳ ಸಂಗ್ರಹ ಮೊದಲಾದವನ್ನು ಇವರ ಇನಿಯರಿಗೆ ಹೊರಗಿನಿಂದ ನೋಡಲಿಕ್ಕೆ ಅವಕಾಶವಿದೆಯೇ ಹೊರತು ಇದರೊಳಗೆ ಇಣುಕಲು ಅವಕಾಶವಿಲ್ಲ. ವಿಶೇಷವಾಗಿ ಮೇಕಪ್ ಪ್ರಸಾದನಾ ಪೆಟ್ಟಿಗೆ, ತಾನು ಶೃಂಗರಿಸಿಕೊಂಡ ಬಳಿಕ ತನ್ನ ಇನಿಯ ತನ್ನನ್ನು ನೋಡಿ ಮೆಚ್ಚಿಕೊಳ್ಳಬೇಕೆಂದು ಆಕೆ ಇಚ್ಛಿಸುತ್ತಾಳೆಯೇ ವಿನಃ ಇದಕ್ಕಾಗಿ ತಾನು ಯಾವ ಪ್ರಸಾದನವನ್ನು ಬಳಸಿದೆ ಎಂಬುದನ್ನು ಹೇಳಲು ಆಕೆ ಖಂಡಿತವಾಗಿಯೂ ಗೋಪ್ಯವಾಗಿರಿಸಿ ಕೊಳ್ಳುತ್ತಾಳೆ.

Most Read: ಗಂಡ-ಹೆಂಡತಿ ಪ್ರತ್ಯೇಕವಾಗಿ ಮಲಗಬೇಕಂತೆ! ಸಂಬಂಧ ಇನ್ನಷ್ಟು ಅನ್ಯೋನ್ಯತೆಯಾಗಿ ಇರುತ್ತದೆಯಂತೆ!

ಹಿಂದಿನ ಸಂಬಂಧದ ಬಗ್ಗೆ ಹೆಣೆದಿರುವ ಕಥೆಗಳು

ಹಿಂದಿನ ಸಂಬಂಧದ ಬಗ್ಗೆ ಹೆಣೆದಿರುವ ಕಥೆಗಳು

ಸಾಮಾನ್ಯವಾಗಿ ಪ್ರತಿ ಯುವತಿಯ ಮನದಲ್ಲಿಯೂ ಕನಸಿನ ರಾಜಕುಮಾರನೊಬ್ಬನಿರುತ್ತಾನೆ ಹಾಗೂ ಈ ರಾಜಕುಮಾರನನ್ನು ತಮ್ಮ ಹದಿಹರೆಯದಲ್ಲಿ ತಮ್ಮ ಸುತ್ತಮುತ್ತಲಿರುವ ಆಕರ್ಷಕ ಪುರುಷರಲ್ಲಿ ಕಾಣುತ್ತಾರೆ. ಈ ಪುರುಷನ ಬಗ್ಗೆ ಹೆಚ್ಚು ಹೆಚ್ಚು ವಿವರಗಳು ತಿಳಿದುಬರುತ್ತಿದ್ದಂತೆಯೇ ಈತನೇ ತನ್ನ ಕನಸಿನ ರಾಜಕುಮಾರನೆಂದು ಮೋಹಿಸತೊಡಗುತ್ತಾರೆ. ಈ ಮನಃಸ್ಥಿತಿಗೆ ವಾಸ್ತವ ಸಂಗತಿಗಳು ಅಪಾರವಾದ ಪ್ರತಿರೋಧವೊಡ್ದಬಹುದು. ಹಲವರು ಈ ಪ್ರೇಮವನ್ನು ಆ ಪುರುಷನೊಂದಿಗೆ ನಿವೇದಿಸಿಕೊಂಡು ಮುಂದುವರೆದೂ ಇರುತ್ತಾರೆ. ಆದರೆ ಕೆಲವರು ಮಾತ್ರವೇ ಈ ಸಂಬಂಧವನ್ನು ಗಟ್ಟಿಗೊಳಿಸಿರುತ್ತಾರೆ. ಆದರೆ ಹೆಚ್ಚಿನವರು ಹದಿಹರೆಯ ಕಳೆದ ಬಳಿಕ ಹೆಚ್ಚು ಪ್ರಬುದ್ಧರಾಗಿ ತಮ್ಮ ಜೀವನಸಂಗಾತಿಯರನ್ನು ಸೂಕ್ತವಾಗಿ ಆಯ್ಕೆಮಾಡಿಕೊಂಡು ಸುಖಜೀವನಕ್ಕೆ ಮುಂದುವರೆದಿರುತ್ತಾರೆ.

ಹಿಂದಿನ ಸಂಬಂಧದ ಬಗ್ಗೆ ಹೆಣೆದಿರುವ ಕಥೆಗಳು

ಹಿಂದಿನ ಸಂಬಂಧದ ಬಗ್ಗೆ ಹೆಣೆದಿರುವ ಕಥೆಗಳು

ಆದರೆ ಹಿಂದಿನ ಸಂಬಂಧದಲ್ಲಿ ಇವರು ಕಳೆದಿದ್ದ ಕ್ಷಣಗಳ ಬಗ್ಗೆ ಇರುವ ಪ್ರಸಂಗಗಳನ್ನೆಂದೂ ಇವರು ತಮ್ಮ ಈಗಿನ ಪತಿ/ಪ್ರಿಯತಮರೊಂದಿಗೆ ಹಂಚಿಕೊಳ್ಳಲು ಇಚ್ಛಿಸುವುದಿಲ್ಲ. ಆದರೆ ಕೆಲವು ದಿಟ್ಟ ಮಹಿಳೆಯರು ಮಾತ್ರವೇ ತಮ್ಮ ಹಿಂದಿನ ಸಂಬಂಧದ ಬಗ್ಗೆ ಕೆಲವು ವಾಸ್ತವಗಳನ್ನು ಇಂದಿನ ಪತಿ/ಪ್ರಿಯತಮರೊಂದಿಗೆ ವಿವರಿಸಿ ಮೂರನೆಯ ವ್ಯಕ್ತಿಯ ಮೂಲಕ ಈ ವಿವರಗಳನ್ನು ತಿಳಿದುಕೊಳ್ಳುವ ಬದಲು ತಾವೇ ಸ್ಪಷ್ಟಪಡಿಸಿ ಇದರಿಂದ ತಮ್ಮ ಇಂದಿನ ಜೀವನಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Most Read: ದಪ್ಪ ಹೆಣ್ಣನ್ನು ಮದುವೆಯಾದರೆ ಅವರ ಜೀವನದಲ್ಲಿ ಖುಷಿ ಜಾಸ್ತಿ ಅಂತೆ!

ತಮ್ಮ ಅತ್ಯಂತ ಆತ್ಮೀಯ ವ್ಯಕ್ತಿಯ ಬಗ್ಗೆ ಇರುವ ಭಾವನೆಗಳು

ತಮ್ಮ ಅತ್ಯಂತ ಆತ್ಮೀಯ ವ್ಯಕ್ತಿಯ ಬಗ್ಗೆ ಇರುವ ಭಾವನೆಗಳು

ಪ್ರತಿ ಮಹಿಳೆಗೂ ಓರ್ವ ಆತ್ಮೀಯ ವ್ಯಕ್ತಿಯೊಬ್ಬರಿರುತ್ತಾರೆ. ಬಹುತೇಕರಲ್ಲಿ ಇದು ಅವರ ತಾಯಿಯೇ ಆಗಿರುತ್ತಾರೆ. ಉಳಿದವರಲ್ಲಿ ಸಹೋದರಿ, ಸಹೋದರ, ಅಪ್ಪ, ಸ್ನೇಹಿತೆ, ಮೊದಲಾದವರು ಇರುತ್ತಾರೆ. ಈ ವ್ಯಕ್ತಿಗಳ ಬಗ್ಗೆ ಇವರಿಗೆ ಅಪಾರ ಅಭಿಮಾನವಿದ್ದು ಇವರ ವಿರುದ್ದ ಯಾವುದೇ ವಿಷಯವನ್ನು ಸಹಿಸಿಕೊಳ್ಳಲು ಇವರು ಸಿದ್ಧರಿರುವುದಿಲ್ಲ. ಆದರೆ ಓರ್ವ ಪುರುಷನೊಡನೆ ಸಂಬಂಧಕ್ಕೆ ಒಳಪಟ್ಟ ಬಳಿಕ ಆ ವ್ಯಕ್ತಿಯ ಬಗ್ಗೆ ಆಕೆ ಆತನಲ್ಲಿ ಹಲವಾರು ಸಂದರ್ಭಗಳಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು ಹಾಗೂ ಪುರುಷರಿಗೆ ಆಕೆಯ ಈ ಭಾವನೆಗಳು ಬೇರೆಯೇ ರೀತಿಯ ಪ್ರಚೋದನೆ ಒದಗಿಸಬಹುದು.

ತಮ್ಮ ಅತ್ಯಂತ ಆತ್ಮೀಯ ವ್ಯಕ್ತಿಯ ಬಗ್ಗೆ ಇರುವ ಭಾವನೆಗಳು

ತಮ್ಮ ಅತ್ಯಂತ ಆತ್ಮೀಯ ವ್ಯಕ್ತಿಯ ಬಗ್ಗೆ ಇರುವ ಭಾವನೆಗಳು

ಆತ ಈ ಬಗ್ಗೆ ತಪ್ಪಾಗಿಯೂ ಅರ್ಥೈಸಿಕೊಳ್ಳಬಹುದು ಎಂದು ಆಕೆ ಸದಾ ಹೆದರಿಕೆಯಲ್ಲಿಯೇ ಇರುತ್ತಾಳೆ ಹಾಗೂ ಈ ಬಗ್ಗೆ ತನ್ನಿಂದ ಅಕಸ್ಮಾತ್ತಾಗಿಯಾದರೂ ಸರಿ, ಯಾವುದೇ ಸಂಗತಿ ಹೊರಬರಬಾರದು ಎಂದು ಇಚ್ಛಿಸುತ್ತಾರೆ. ಇದೇ ಕಾರಣಕ್ಕೆ ವಿವಾಹವಾಗಿ ಪತಿಯ ಮನೆಗೆ ಹೋದ ಸೊಸೆ ಪ್ರಾರಂಭದಲ್ಲಿ ತನ್ನ ತವರುಮನೆಯವರ ಬಗ್ಗೆ ಹೋಲಿಕೆಯ ಮಾತನ್ನಾಡಬಯಸಿದರೂ, ಇದರಿಂದ ತಮ್ಮ ಈಗಿನ ಸಂಬಂಧಕ್ಕೆ ಕುತ್ತು ಬರಬಹುದು ಎಂಬ ಭಯ/ಆತಂಕದಿಂದ ಈ ವಿಷಯಗಳನ್ನೆಂದೂ ತಮ್ಮ ಪತಿಯರಲ್ಲಿ/ಇನಿಯರಲ್ಲಿ ಪ್ರಸ್ತಾಪಿಸುವುದಿಲ್ಲ.

English summary

Things Wives Will ALWAYS Hide From Their Husbands

If you really love your woman you must also know what things hide from men. Here is a guide to the things you should actually hide from men.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more