For Quick Alerts
ALLOW NOTIFICATIONS  
For Daily Alerts

ಗಂಡ-ಹೆಂಡತಿ ಪ್ರತ್ಯೇಕವಾಗಿ ಮಲಗಬೇಕಂತೆ! ಸಂಬಂಧ ಇನ್ನಷ್ಟು ಅನ್ಯೋನ್ಯತೆಯಾಗಿ ಇರುತ್ತದೆಯಂತೆ!

|

ಪತಿ ಹಾಗೂ ಪತ್ನಿ ಇಬ್ಬರೂ ಪ್ರತ್ಯೇಕವಾಗಿ ಮಲಗುತ್ತಿದ್ದಾರೆ ಎಂದರೆ ಇಬ್ಬರ ನಡುವೆ ಏನೋ ಹೊಂದಾಣಿಕೆ ಇಲ್ಲ ಎಂದೆನಿಸುವುದು ಸಹಜ. ಆದರೆ ಎಲ್ಲ ಸರಿಯಿದ್ದೂ ಪತಿ ಹಾಗೂ ಪತ್ನಿ ರಾತ್ರಿ ಬೇರೆ ಬೇರೆ ಮಂಚಗಳಲ್ಲಿ ಮಲಗುತ್ತಾರೆ ಎಂದರೆ ಅದಕ್ಕೇನರ್ಥ?

Relationship Benefits of Sleeping in Separate Beds!

ಸಂಗಾತಿಗಳಿಬ್ಬರೂ ಪ್ರತ್ಯೇಕವಾಗಿ ಮಲಗಿದರೂ ಸಿಕ್ಕಾಪಟ್ಟೆ ಅನ್ಯೋನ್ಯತೆಯಿಂದಲೇ ಇರಬಹುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇದೇನು ವಿಷಯ ಎಂದು ತಿಳಿದುಕೊಳ್ಳೋಣ ಬನ್ನಿ.

ಸಂಗಾತಿಗಳು ಪ್ರತ್ಯೇಕವಾಗಿ ಮಲಗುವುದು ಎಷ್ಟು ಸರಿ?

ಸಂಗಾತಿಗಳು ಪ್ರತ್ಯೇಕವಾಗಿ ಮಲಗುವುದು ಎಷ್ಟು ಸರಿ?

ಒಂದೇ ಬೆಡ್‌ನಲ್ಲಿ ಪತಿ ಹಾಗೂ ಪತ್ನಿ ಮಲಗಿದ್ದಾರೆ ಎಂದರೆ ಅಲ್ಲೊಂದಿಷ್ಟು ಪ್ರೀತಿ, ಅಪ್ಪಿಕೊಳ್ಳುವಿಕೆ, ಶೃಂಗಾರ ಎಲ್ಲ ಮುಗಿದು ಸುಖನಿದ್ರೆ ಮಾಡುತ್ತಾರೆ ಎಂಬುದು ಸಹಜವಾದ ನಂಬಿಕೆ. ಆದರೆ ಇದಿಷ್ಟೇ ವಾಸ್ತವವಲ್ಲ. ಪ್ರತ್ಯೇಕವಾಗಿ ಮಲಗುವ ಸಂಗಾತಿಗಳ ವೈವಾಹಿಕ ಜೀವನ ಹೆಚ್ಚು ಸುಖಮಯವಾಗಿರುತ್ತದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಹೀಗಾಗಿ ಇತ್ತೀಚೆಗೆ ಪ್ರತ್ಯೇಕವಾಗಿ ಮಲಗುವ ಟ್ರೆಂಡ್ ಜಾಸ್ತಿಯಾಗುತ್ತಿದೆ.

ಅಧ್ಯಯನ ಹೇಳುವುದೇನು?

ಅಧ್ಯಯನ ಹೇಳುವುದೇನು?

ಟೊರೊಂಟೊದ ರಾಯರ್ಸನ್ ಯುನಿವರ್ಸಿಟಿ ನಡೆಸಿದ ಅಧ್ಯಯನವೊಂದರಲ್ಲಿ- ಶೇ.30 ರಿಂದ 40 ರಷ್ಟು ಸಂಗಾತಿಗಳು ರಾತ್ರಿ ಪ್ರತ್ಯೇಕವಾಗಿ ಮಲಗುತ್ತಾರೆ ಹಾಗೂ ಇದು ಅವರ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂಬ ಅಚ್ಚರಿಯ ವಿಷಯ ಬಹಿರಂಗವಾಗಿದೆ.

Most Read: ಹಿಂದೂ ಧರ್ಮದಲ್ಲಿ ಮದುವೆಯ ಮುಂಚೆ ನಡೆಯುವ ಶಾಸ್ತ್ರ ಸಂಪ್ರದಾಯಗಳೇನು?

ಪ್ರತ್ಯೇಕವಾಗಿ ಮಲಗುವುದು ಒಳ್ಳೆಯದಂತೆ

ಪ್ರತ್ಯೇಕವಾಗಿ ಮಲಗುವುದು ಒಳ್ಳೆಯದಂತೆ

ರಾತ್ರಿ ಸಮಯದಲ್ಲಿ ನಿದ್ರೆ ಸರಿಯಾಗದಿದ್ದರೆ ಬೆಳಗ್ಗೆ ಅರ್ಧಂಬರ್ಧ ಮಂಪರು ಇಟ್ಟುಕೊಂಡೇ ಏಳಬೇಕಾಗುತ್ತದೆ. ಇದರಿಂದ ದಿನವಿಡೀ ಒಂದು ರೀತಿಯ ಕಿರಿಕಿರಿಯ ಭಾವನೆ ಆವರಿಸುತ್ತದೆ ಹಾಗೂ ಮತ್ತೆ ಯಾವಾಗ ಮಲಗುವುದೋ ಎಂದು ಕಾಯುವಂತಾಗುತ್ತದೆ. ಇದು ಸಂಗಾತಿಗಳಿಗೂ ಅನ್ವಯಿಸುತ್ತದೆ. ಸಂಗಾತಿಗಳಿಬ್ಬರೂ ರಾತ್ರಿ ಸುಖವಾದ ನಿದ್ರೆ ಮಾಡಿದ್ದಲ್ಲಿ ಇಬ್ಬರ ಮೂಡ್ ದಿನವಿಡೀ ಚೆನ್ನಾಗಿರುತ್ತದೆ ಹಾಗೂ ಇದು ಸಂಬಂಧದಲ್ಲಿ ಮತ್ತಷ್ಟು ಅನ್ಯೋನ್ಯತೆ ತರುತ್ತದೆ.

ತನಗಾಗಿ ಸಮಯ ಬೇಕು

ತನಗಾಗಿ ಸಮಯ ಬೇಕು

ಪ್ರತ್ಯೇಕವಾಗಿ ಮಲಗುವುದರಿಂದ ಒಬ್ಬ ಸಂಗಾತಿಗೆ ಬೇಕಾದ ಖಾಸಗಿ ಕ್ಷಣಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ. ರಾತ್ರಿ ಮಲಗುವ ಮುನ್ನ ಪುಸ್ತಕ ಓದುವುದಿರಬಹುದು, ಸ್ನೇಹಿತನೊಂದಿಗೆ ಕೆಲ ಹೊತ್ತು ಚಾಟ್ ಮಾಡುವುದು ಅಥವಾ ಇನ್ನಾವುದೋ ವರದಿ ಬರೆಯುವುದು ಹೀಗೆ ತನಗಿಷ್ಟವಾಗಿದ್ದನ್ನು ಸಂಗಾತಿಗೆ ತೊಂದರೆ ಮಾಡದಂತೆ ನಿರ್ವಹಿಸಲು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇಬ್ಬರೂ ಬೆಳಗ್ಗೆ ತಾಜಾ ಮೂಡ್‌ನಲ್ಲಿ ಎದ್ದೇಳಬಹುದು.

ಸಂಗಾತಿ ಗೊರಕೆ ಹೊಡೆಯುತ್ತಿದ್ದರೆ?

ಸಂಗಾತಿ ಗೊರಕೆ ಹೊಡೆಯುತ್ತಿದ್ದರೆ?

ಒಂದು ವೇಳೆ ಇಬ್ಬರಲ್ಲಿ ಒಬ್ಬ ಸಂಗಾತಿಗೆ ಗೊರಕೆ ಹೊಡೆಯುವ ಅಥವಾ ನಿದ್ರೆಯಲ್ಲಿ ಮಾತನಾಡುವ ಅಭ್ಯಾಸವಿದ್ದಲ್ಲಿ ಪ್ರತ್ಯೇಕವಾಗಿ ಮಲಗುವುದು ಕ್ಷೇಮ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಮತ್ತೊಂದು ಅಧ್ಯಯನ ಹೀಗೆ ಹೇಳುತ್ತದೆ

ಮತ್ತೊಂದು ಅಧ್ಯಯನ ಹೀಗೆ ಹೇಳುತ್ತದೆ

ಓಹಿಯೊ ಸ್ಟೇಟ್ ಯುನಿವರ್ಸಿಟಿಯ ವರ್ತನೆಶಾಸ್ತ್ರ ಔಷಧಿ ಹಾಗೂ ಸಂಶೋಧನಾ ವಿಭಾಗ ನಡೆಸಿದ ಮತ್ತೊಂದು ಅಧ್ಯಯನದ ಪ್ರಕಾರ, ರಾತ್ರಿ ಸರಿಯಾಗಿ ನಿದ್ರೆ ಮಾಡದ ಸಂಗಾತಿಗಳು ದಿನದಲ್ಲಿ ಜಗಳವಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಹಾಗೂ ಇದರಿಂದ ಜೀವನದಲ್ಲಿ ಒತ್ತಡ ನಿರ್ಮಾಣವಾಗುತ್ತದೆ ಎಂದು ತಿಳಿದು ಬಂದಿದೆ.

Most Read: ದಪ್ಪ ಹೆಣ್ಣನ್ನು ಮದುವೆಯಾದರೆ ಅವರ ಜೀವನದಲ್ಲಿ ಖುಷಿ ಜಾಸ್ತಿ ಅಂತೆ!

ನಿದ್ರೆ ಕಡಿಮೆಯಾದಷ್ಟೂ ಜಗಳ ಜಾಸ್ತಿ

ನಿದ್ರೆ ಕಡಿಮೆಯಾದಷ್ಟೂ ಜಗಳ ಜಾಸ್ತಿ

ಹಿಂದಿನ ಎರಡು ರಾತ್ರಿಗಳಲ್ಲಿ ಸಂಗಾತಿಗಳಿಬ್ಬರೂ ಏಳು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದ್ದಲ್ಲಿ ಇಬ್ಬರೂ ಜಗಳವಾಡುವ ಸಾಧ್ಯತೆಗಳು ಹೆಚ್ಚು ಹಾಗೂ ಅದರಿಂದ ಸಂಬಂಧದಲ್ಲಿ ಬಿರುಕು ಉಂಟಾಗುವ ಸಾಧ್ಯತೆಯೂ ಇದೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ.

ಆರೋಗ್ಯದ ಮೇಲೆ ಪರಿಣಾಮ

ಆರೋಗ್ಯದ ಮೇಲೆ ಪರಿಣಾಮ

ಕಡಿಮೆ ನಿದ್ರೆಯಿಂದ ಇಬ್ಬರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳುಂಟಾಗುತ್ತವೆ. ಡಯಾಬಿಟೀಸ್, ಹೃದಯ ಸಂಬಂಧಿ ಕಾಯಿಲೆ, ಅಲ್ಜೈಮರ್ ಮತ್ತು ಸಂಧಿವಾತ ರೋಗಗಳು ಬರಬಹುದು ಎನ್ನಲಾಗಿದೆ.

ತಜ್ಞರ ಅಭಿಪ್ರಾಯವೇನು?

ತಜ್ಞರ ಅಭಿಪ್ರಾಯವೇನು?

ಇಬ್ಬರ ನಡುವೆ ಸಾಮರಸ್ಯವಿದ್ದಲ್ಲಿ ಸಂಗಾತಿಗಳು ಬೇರೆ ಬೇರೆಯಾಗಿ ಮಲಗುವುದರಲ್ಲಿ ತಪ್ಪೇನೂ ಇಲ್ಲ. ವಾಸ್ತವದಲ್ಲಿ ಇಂಥ ಒಂದು ವ್ಯವಸ್ಥೆಯಿಂದ ಇಬ್ಬರಿಗೂ ಖಾಸಗಿ ಸಮಯ ದೊರಕುತ್ತದೆ ಹಾಗೂ ಸಂಗಾತಿಗಳ ಮಧ್ಯದ ಅನ್ಯೋನ್ಯತೆ ಮತ್ತಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು.

Most Read: ಸಂಸಾರದಲ್ಲಿ ಈಗೆಲ್ಲಾ ಇದ್ದರೆ, ಇಂತಹ ಸಂಬಂಧದಿಂದ ಆದಷ್ಟು ಬೇಗ ಹೊರಬನ್ನಿ!

ಕೊನೆ ಮಾತು

ಕೊನೆ ಮಾತು

ಸಂಗಾತಿಗಳು ಬೇರೆ ಬೇರೆಯಾಗಿ ಮಲಗುವುದು ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂದರ್ಥವಲ್ಲ. ವಾಸ್ತವದಲ್ಲಿ ಹೀಗೆ ಮಾಡುವುದು ಸಂಗಾತಿಗಳು ಹೆಚ್ಚು ಅನ್ಯೋನ್ಯವಾಗಿದ್ದಾರೆ ಎಂದರ್ಥ. ಎಂಥ ಪರಿಸ್ಥಿತಿಯಲ್ಲೂ ಜೊತೆಯಾಗಿರುವ, ಯಾವಾಗಲೂ ಪ್ರೀತಿ ವಿಶ್ವಾಸದಿಂದ ಬಾಳುವಾಗ ಕೇವಲ ಪ್ರತ್ಯೇಕವಾಗಿ ಮಲಗುವುದರಿಂದ ಸಂಬಂಧ ಹಾಳಾಗಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.

English summary

Relationship Benefits of Sleeping in Separate Beds!

When we think about a couple sleeping together in the same bed, we paint a rosy picture of hugging, cuddling and then, having a deep, sound sleep. But the reality might a little different. It seems sleeping in separate beds can make your relationship healthier and now, this notion is even science-backed.
X
Desktop Bottom Promotion