Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ದಪ್ಪ ಹೆಣ್ಣನ್ನು ಮದುವೆಯಾದರೆ ಅವರ ಜೀವನದಲ್ಲಿ ಖುಷಿ ಜಾಸ್ತಿ ಅಂತೆ!
ಹುಡುಗಿ ಸ್ವಲ್ಪ ದಪ್ಪ, ನಮ್ಮ ಹುಡುಗ ಸಣ್ಣಗಿದಾನೆ.. ಸರಿ ಹೋಗಲ್ಲ ಎಂಬ ಮಾತುಗಳನ್ನು ಹೆಣ್ಣು ಗಂಡಿನ ಮದುವೆ ವಿಷಯ ಸಂದರ್ಭಗಳಲ್ಲಿ ಕೇಳಿರುತ್ತೇವೆ. ಮದುವೆಯಾಗುವ ಹೆಣ್ಣು ತೆಳ್ಳಗೆ, ಬೆಳ್ಳಗೆ ಇರಬೇಕು ಎಂಬುದು ಬಹುತೇಕ ಹುಡುಗರ ಆಸೆಯೂ ಹೌದು.

ಆದರೆ ದಪ್ಪಗಿರುವ ಹುಡುಗಿಯನ್ನು ಮದುವೆಯಾದ ಪುರುಷರು ತೆಳ್ಳಗಿನ ಹುಡುಗಿಯನ್ನು ಮದುವೆಯಾದ ಪುರುಷರಿಗಿಂತ ಜೀವನದಲ್ಲಿ 10 ಪಟ್ಟು ಜಾಸ್ತಿ ಖುಷಿಯಾಗಿರುತ್ತಾರಂತೆ.. ಹೀಗಂತ ಅಧ್ಯಯನವೊಂದರಲ್ಲಿ ಸಾಬೀತಾಗಿದೆ.

ದುಂಡಗೆ, ದಪ್ಪಗಿರುವ ಪತ್ನಿಯೇ ವಾಸಿ
ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ತಿಳಿದು ಬಂದಿರುವ ವಿಷಯಗಳು ಪ್ರೀತಿ ಹಾಗೂ ಸಂಬಂಧಗಳ ಬಗ್ಗೆ ಹೊಸ ತಿರುವನ್ನೇ ನೀಡಿವೆ. ಈ ಅಧ್ಯಯನದ ವರದಿ ಹೊಸದೊಂದು ಚರ್ಚೆಯನ್ನೇ ಹುಟ್ಟು ಹಾಕಿವೆ. ಇದರ ಪ್ರಕಾರ ವಾಸ್ತವದಲ್ಲಿ ದುಂಡಗೆ, ದಪ್ಪಗೆ ಮೈ ಕೈ ತುಂಬಿಕೊಂಡಿರುವ ಹುಡುಗಿಯನ್ನೇ ಮದುವೆ ಆಗುವುದು ಪುರುಷರ ಸುಖ ಜೀವನಕ್ಕೆ ರಹದಾರಿ ಎನ್ನಲಾಗಿದೆ. ದಪ್ಪ ಹೆಂಡತಿ ಇದ್ದಲ್ಲಿ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಈ ವಾದಕ್ಕೆ ವೈಜ್ಞಾನಿಕವಾಗಿಯೂ ಪುಷ್ಟಿ ದೊರಕಿದೆ ಎಂದರೆ ನೀವು ನಂಬಲೇಬೇಕು.

ಅಧ್ಯಯನದ ಮಾದರಿ
ಮೆಕ್ಸಿಕೋದ ನ್ಯಾಷನಲ್ ಅಟೊನಾಮಸ್ ಯುನಿವರ್ಸಿಟಿಯ ಸಂಶೋಧಕರು ನೂರಾರು ಗಂಡು ಹಾಗೂ ಹೆಣ್ಣಿನ ಜೋಡಿಗಳನ್ನು ಸಂದರ್ಶಿಸಿ ಈ ಅಧ್ಯಯನವನ್ನು ನಡೆಸಿದ್ದಾರೆ. ಮದುವೆಯಾಗುವ ಹೆಣ್ಣಿನ ಮೈಮಾಟಕ್ಕೂ ಹಾಗೂ ಆಕೆಯ ಸಂಗಾತಿಯ ಸುಖ ಜೀವನಕ್ಕೂ ನಂಟಿದೆ ಎಂಬ ಕುತೂಹಲಕಾರಿ ವಿಷಯ ಈ ಅಧ್ಯಯನದಿಂದ ತಿಳಿದು ಬಂದಿದೆ. ತೆಳ್ಳಗಿನ ಹುಡುಗಿಯನ್ನು ಮದುವೆಯಾಗುವ ಪುರುಷರಿಗಿಂತಲೂ ದಪ್ಪಗಿರುವ ಹುಡುಗಿಯನ್ನು ಸಂಗಾತಿಯಾಗಿ ಪಡೆಯುವ ಹುಡುಗರು 10 ಪಟ್ಟು ಹೆಚ್ಚು ಖುಷಿಯಾಗಿರುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇನ್ನಷ್ಟು ಖುಷಿಯ ವಿಚಾರಗಳಿವೆ
ತೆಳ್ಳನೆಯ ಹೆಂಡತಿಯ ಪತಿಯಂದಿರಿಗಿಂತ ದಪ್ಪ ಹೆಂಡತಿಯ ಪತಿಯಂದಿರು ಹೆಚ್ಚು ನಗುತ್ತಿರುತ್ತಾರೆ. ಅಲ್ಲದೆ ದಪ್ಪಗಿರುವ ಹೆಣ್ಣು ಮಕ್ಕಳು ವೈವಾಹಿಕ ಸಂಬಂಧಗಳನ್ನು ತುಂಬಾ ಚೆನ್ನಾಗಿ ನಿಭಾಯಿಸಬಲ್ಲರು ಎಂಬುದು ಸಹ ಸಂಶೋಧನೆಗಳಿಂದ ಸಾಬೀತಾಗಿದೆ.

ತೆಳ್ಳಗಿನ ಹೆಣ್ಣು ಮಕ್ಕಳ ಸ್ವಭಾವ ಹೀಗಿರುತ್ತದಂತೆ!
ಸಂಶೋಧಕರು ತಮ್ಮ ಅಧ್ಯಯನದಲ್ಲಿ ತೆಳ್ಳಗಿರುವ ಹಾಗೂ ದಪ್ಪಗಿರುವ ಎರಡೂ ರೀತಿಯ ಹೆಣ್ಣು ಮಕ್ಕಳನ್ನು ಅಧ್ಯಯನ ಮಾಡಿದ್ದಾರೆ. ಇದರ ಪ್ರಕಾರ ತೆಳ್ಳಗಿರುವ ಹೆಣ್ಣು ಮಕ್ಕಳು ತಮ್ಮ ಪಾಡಿಗೆ ತಾವಿರುವವರು ಹಾಗೂ ಸ್ನೇಹಿಯಲ್ಲದ ಗುಣಗಳನ್ನು ಹೊಂದಿರುತ್ತಾರಂತೆ. ಮನದಲ್ಲಿನ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಲು ಸಹ ಇವರು ಹಿಂಜರಿಯುವುದರಿಂದ ಉತ್ತಮ ಬಾಂಧವ್ಯ ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ಆರೋಗ್ಯವೇ ಸುಖ ಜೀವನಕ್ಕೆ ದಾರಿ
ದೈಹಿಕವಾಗಿ ನಾವೆಲ್ಲ ಹೇಗಿದ್ದರೂ ನಮ್ಮ ಆರೋಗ್ಯವೇ ಜೀವನದ ಎಲ್ಲ ಸುಖಗಳನ್ನು ಪಡೆಯುವ ಮಾರ್ಗವಾಗಿದೆ. ಆರೋಗ್ಯ ಒಂದಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಹೀಗಾಗಿ ಆರೋಗ್ಯವಂತರಾಗಿದ್ದು ತಮ್ಮ ಜೀವನದಲ್ಲಿ ಸರಿಯಾದ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಸಂಗಾತಿಯು ಒಳ್ಳೆಯ ವೈವಾಹಿಕ ಜೀವನ ನಡೆಸಲು ಸಹಕಾರಿ ಎಂಬುದು ಸಹಜವೇ ಆಗಿದೆ. ಹೆಣ್ಣೊಬ್ಬಳು ಆರೋಗ್ಯವಂತಳಾಗಿದ್ದು, ತನ್ನ ಬಗ್ಗೆ ತಾನು ತೃಪ್ತಿ ಹೊಂದಿದ್ದರೆ ಮಾತ್ರ ತನ್ನ ಸಂಗಾತಿಯನ್ನು ಖುಷಿ ಪಡಿಸಬಲ್ಲಳು ಎಂಬುದು ಈ ಸಂಶೋಧನೆಯ ಸಾರವಾಗಿದೆ.



Click it and Unblock the Notifications
