For Quick Alerts
ALLOW NOTIFICATIONS  
For Daily Alerts

ಮನೆ ಜವಾಬ್ದಾರಿ, ಪತಿ-ಪತ್ನಿ ಇಬ್ಬರೂ ಸಮನಾಗಿ ಹಂಚಿಕೊಳ್ಳಿ

ಕೇವಲ ಪತ್ನಿ ಮಾತ್ರ ಮನೆಯ ಜವಾಬ್ದಾರಿ ವಹಿಸಿದರೆ ಸಾಲದು.ಪತಿ ಕೂಡ ಇದರಲ್ಲಿ ಭಾಗಿಯಾಗಬೇಕು. ಇಂದಿನ ದಿನಗಳಲ್ಲಿ ಇಬ್ಬರೂ ಕೆಲಸಕ್ಕೆ ಹೋಗುವ ಕಾರಣದಿಂದ ಮನೆಯ ಕೆಲಸಕಾರ್ಯಗಳಲ್ಲಿ ಇಬ್ಬರೂ ಸಮಾನವಾಗಿ ಭಾಗಿಯಾದರೆ ಯಾವುದೇ ಭಿನ್ನಭಿಪ್ರಾಯ ಉಂಟಾಗದು

By Hemanth
|

ಪ್ರೀತಿಸುವುದು ಮತ್ತು ಮದುವೆಯಾಗುವುದು ಸಂಪೂರ್ಣವಾಗಿ ಭಿನ್ನ. ಪ್ರೀತಿಸುವ ಸಮಯದಲ್ಲಿ ಪರಸ್ಪರರಿಗಾಗಿ ಏನು ಬೇಕಾದರೂ ಮಾಡಲು ತಯಾರಾಗಿರುತ್ತೇವೆ. ಹೊಂದಾಣಿಕೆಯೂ ಮಾಡಿಕೊಳ್ಳುತ್ತೇವೆ. ಆದರೆ ಮದುವೆಯಾದ ಮೇಲೆ ಜವಾಬ್ದಾರಿಗಳು, ನಿರೀಕ್ಷೆಗಳು, ಬಂಧನಗಳು ನಮ್ಮನ್ನು ಕಟ್ಟಿಹಾಕುತ್ತದೆ. ಮದುವೆಯಾದ ಬಳಿಕ ಇಬ್ಬರೂ ಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಅಯ್ಯೋ ದೇವರೆ ನನಗೆ ಎಂತಹ ಗಂಡ ಸಿಕ್ಕಿ ಬಿಟ್ಟ!

ಕೇವಲ ಪತ್ನಿ ಮಾತ್ರ ಮನೆಯ ಜವಾಬ್ದಾರಿ ವಹಿಸಿದರೆ ಸಾಲದು. ಪತಿ ಕೂಡ ಇದರಲ್ಲಿ ಭಾಗಿಯಾಗಬೇಕು. ಇಂದಿನ ದಿನಗಳಲ್ಲಿ ಇಬ್ಬರೂ ಕೆಲಸಕ್ಕೆ ಹೋಗುವ ಕಾರಣದಿಂದ ಮನೆಯ ಕೆಲಸಕಾರ್ಯಗಳಲ್ಲಿ ಇಬ್ಬರೂ ಸಮಾನವಾಗಿ ಭಾಗಿಯಾದರೆ ಅದರಿಂದ ಯಾವುದೇ ಭಿನ್ನಭಿಪ್ರಾಯ ಉಂಟಾಗದು. ಕೊನೆಪಕ್ಷ ಮಲಗುವ ಮುನ್ನವಾದರೂ ನೆಮ್ಮದಿಯಾಗಿ ಮಲಗಿ!

ಪತಿಯು ಪ್ರೀತಿಯಿಂದ ಮನೆಯ ಕೆಲಸಗಳಲ್ಲಿ ಭಾಗಿಯಾದರೆ ಅದಕ್ಕಿಂತ ಉತ್ತಮ ವಿಚಾರ ಮತ್ತೊಂದಿಲ್ಲ. ಆದರೆ ಎಲ್ಲವನ್ನು ನೀವೇ ಮಾಡುತ್ತಾ ಹೋದರೆ ಪತಿಯು ಆಲಸಿಯಾಗುವುದರಲ್ಲಿ ಸಂಶಯವೇ ಇಲ್ಲ. ಕೆಲವೊಂದು ಉದಾಹರಣೆಗಳು ಇಲ್ಲಿವೆ ನೋಡಿ ಮುಂದೆ ಓದಿ....

ಪತಿಗೂ ಸ್ವಲ್ಪ ಕೆಲಸ ಕೊಡಿ!

ಪತಿಗೂ ಸ್ವಲ್ಪ ಕೆಲಸ ಕೊಡಿ!

ಮನೆಯ ಕೆಲಸದಲ್ಲಿ ನೀವು ತುಂಬಾ ವ್ಯಸ್ತರಾಗಿರುತ್ತೀರಿ ಮತ್ತು ಪತಿಗೆ ಏನು ಮಾಡಲು ಬಿಡುವುದಿಲ್ಲ. ನೀವು ಅನಾರೋಗ್ಯದಿಂದ ಇದ್ದಾಗಲೂ ಮನೆಕೆಲಸವನ್ನು ನೀವೇ ಮಾಡುತ್ತೀರಿ ಮತ್ತು ಪತಿಗೆ ಆರಾಮ ಮಾಡಲು ಬಿಡುತ್ತೀರಿ. ಪತಿಯನ್ನು ಪ್ರೀತಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಎಲ್ಲಾ ಕೆಲಸವನ್ನು ನೀವೇ ಮಾಡುತ್ತಾ ಹೋಗಿ ಆತನಿಗೆ ಮನೆಯಲ್ಲಿ ಯಾವುದೇ ಕೆಲಸವನ್ನು ಮುಟ್ಟಲು ಬಿಡದೇ ಇದ್ದರೆ ಆಗ ಕೆಟ್ಟ ಸಂದೇಶ ಕಳುಹಿಸಿದಂತಾಗುತ್ತದೆ.

ಅದು ಮಾಡು, ಇದು ಮಾಡು ಎಂದು ಒತ್ತಾಯ ಮಾಡಬೇಡಿ

ಅದು ಮಾಡು, ಇದು ಮಾಡು ಎಂದು ಒತ್ತಾಯ ಮಾಡಬೇಡಿ

ಆತನಿಂದ ಯಾವುದೇ ನಿರೀಕ್ಷೆಯನ್ನು ನೀವು ಇಟ್ಟುಕೊಂಡಿಲ್ಲ ಎನ್ನುವ ಅರ್ಥ ಬರುತ್ತದೆ. ಅದು ಮಾಡು, ಇದು ಮಾಡು ಎಂದು ಒತ್ತಾಯ ಮಾಡಬೇಡಿ. ಆದರೆ ನಿಮಗೆ ಬೆಂಬಲ ಬೇಕಾದಾಗ ಪ್ರೀತಿಯಿಂದ ಮಾಡಿಸಿಕೊಳ್ಳಿ.

ಮನೆ ಕೆಲಸದಲ್ಲಿ ಭಾಗಿಯಾಗಲು ಹೇಳಿ

ಮನೆ ಕೆಲಸದಲ್ಲಿ ಭಾಗಿಯಾಗಲು ಹೇಳಿ

ಯಾವುದೇ ಸಂಬಂಧದಲ್ಲಿಯೇ ಆಗಲಿ ಒಬ್ಬ ತುಂಬಾ ಶ್ರಮದಿಂದ ಕೆಲಸ ಮಾಡಿದರೆ ಮತ್ತೊಬ್ಬರು ಆಲಸಿಯಾಗುತ್ತಾರೆ. ಪತಿಯಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೀರಿ ಎನ್ನುವ ಬಗ್ಗೆ ಮಾತನಾಡಿ. ಆತನಿಂದ ಮನೆ ಗುಡಿಸುವ ಅಥವಾ ಒರೆಸುವ ಕೆಲಸ ಮಾಡುವ ಬಗ್ಗೆ ಒತ್ತಡ ಹಾಕಬೇಡಿ. ಆದರೆ ಮನೆ ಕೆಲಸಗಳಲ್ಲಿ ನಿಮ್ಮ ಜತೆ ಭಾಗಿಯಾಗಲು ಹೇಳಿ.

ಇಲ್ಲಿ ಜಗಳಕ್ಕೆ ಮಾತ್ರ ಆಸ್ಪದ ನೀಡಬೇಡಿ

ಇಲ್ಲಿ ಜಗಳಕ್ಕೆ ಮಾತ್ರ ಆಸ್ಪದ ನೀಡಬೇಡಿ

ಸಣ್ಣಪುಟ್ಟ ಜಗಳಗಳಾದಾಗ ಆತ ನಿಮ್ಮ ಹಿಂದಿನ ತಪ್ಪುಗಳ ಬಗ್ಗೆ ಹೇಳುತ್ತಾ ಇರುತ್ತಾನೆಯಾ? ನೀವು ಸುಮ್ಮನೆ ಅಳುತ್ತಾ ಇರುತ್ತೀರಾ? ಹಾಗಿದ್ದರೆ ನೀವು ಆತನಿಗಾಗಿ ಎಲ್ಲವನ್ನೂ ಮಾಡಿದ್ದೀರಿ ಎಂದರ್ಥ. ನೀವಿಬ್ಬರು ಒಂದು ಒಪ್ಪಂದ ಮಾಡಿಕೊಂಡು ಹಿಂದಿನ ಎಲ್ಲಾ ತಪ್ಪುಗಳನ್ನು ಮರೆತುಬಿಡಬೇಕು. ಪರಸ್ಪರರ ಹಿಂದಿನ ತಪ್ಪುಗಳನ್ನು ಹೇಳುತ್ತಾ ಹೋಗುವುದು ಜಗಳವನ್ನು ಮತ್ತಷ್ಟು ಹೆಚ್ಚು ಮಾಡುವುದು.

ಆತನ ಪಾಸ್ ವರ್ಡ್ ಕೂಡ ಕೇಳಿ!

ಆತನ ಪಾಸ್ ವರ್ಡ್ ಕೂಡ ಕೇಳಿ!

ಆತ್ಮೀಯತೆಯೆಂಬ ಕಾರಣ ನೀಡಿ ಆತ ಪಾಸ್ ವರ್ಡ್ (ಫೇಸ್ ಬುಕ್,ವಾಟ್ಸಪ್, ಬ್ಯಾಂಕ್ ಖಾತೆಯ) ಪಡೆಯುತ್ತಾ ಇದ್ದಾನೆಯಾ? ನಿಮ್ಮ ಪಾಸ್ ವರ್ಡ್ ನೀಡುತ್ತಾ ಇದ್ದರೆ ಆತನ ಪಾಸ್ ವರ್ಡ್ ಕೂಡ ಕೇಳಿ. ಇದರಲ್ಲಿ ಯಾವುದೇ ತಪ್ಪಿಲ್ಲ.

ಸಂಸಾರದ ಜವಾಬ್ದಾರಿ ಅವನಿಗೂ ತಿಳಿದಿರಲಿ....

ಸಂಸಾರದ ಜವಾಬ್ದಾರಿ ಅವನಿಗೂ ತಿಳಿದಿರಲಿ....

ಮಗುವನ್ನು ಯಾವಾಗಲೂ ನೀವೇ ನೋಡಿಕೊಳ್ಳುತ್ತಾ ಇದ್ದರೆ ಆತನಿಗೆ ಕೂಡ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಇಬ್ಬರು ಕೂಡ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಪ್ರೀತಿಯಿಂದ ಹೇಳಿಬಿಡಿ. ಇದರಿಂದ ಆತನಿಗೆ ತನ್ನ ಜವಾಬ್ದಾರಿಯ ಅರಿವಾಗುತ್ತದೆ.....

English summary

Signs You're Doing Too Much For Your Husband

In fact, that would be more fun, right? When you and your husband play your roles with excitement and love, life would be more beautiful, right? That's exactly what you need to do. Otherwise, you might end up doing too much for him and he might turn lazy. Here are some examples.
X
Desktop Bottom Promotion