Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಯ್ಯೋ ದೇವರೆ ನನಗೆ ಎಂತಹ ಗಂಡ ಸಿಕ್ಕಿ ಬಿಟ್ಟ!
ಕೆಲವೊಮ್ಮೆ ಗಂಡನ ಸಣ್ಣ ಪುಟ್ಟ ಹವ್ಯಾಸಗಳು ಹೆಂಡತಿಯ ಮನಸ್ಸಿನ ನೆಮ್ಮದಿಯನ್ನು ಕೆಡಿಸಿಬಿಡಬಹುದು. ಅಂತಹ ಹಲವು ಹವ್ಯಾಸಗಳು ನೀನೆಷ್ಟು ಒಳ್ಳೆಯವನು ಎಂಬುದನ್ನು 'ಅಬ್ಬಾ ನನಗೆಂತ ಗಂಡ ಸಿಕ್ಕಿಬಿಟ್ಟ' ಎನ್ನುವಂತೆ ಮಾಡಿಬಿಡಬಹುದು.
ನಿಮ್ಮ ಪತಿದೇವ ಈ ರೀತಿ ಇಲ್ಲದಿದ್ದಲ್ಲಿ ನೀವು ಅದೃಷ್ಟವಂತರೇ ಸರಿ. ಇಲ್ಲದಿದ್ದರೆ ಸಾಕಷ್ಟು ಭಾರತೀಯ ಸ್ತ್ರೀಯರಂತೆ ನೀವು ಕೂಡ ಕಿರಿಕಿರಿ ಅನುಭವಿಸಿರುತ್ತೀರಿ ಅಲ್ಲವೇ..? ಬನ್ನಿ ಹಂಡತಿಗೆ ಕಿರಿಕಿರಿ ಆಗುವ ಪತಿರಾಯನ ಕೆಲವೊಂದು ದುರಭ್ಯಾಸಗಳು ಇಲ್ಲಿ ನೀಡಲಾಗಿದೆ ಮುಂದೆ ಓದಿ

ನಿದ್ದೆ ಮಾಡುತ್ತಾ ಕಾಲ ಕಳೆಯುತ್ತಾರೆ
ವೀಕೆಂಡ್ ಪ್ರಾರಂಭವಾಗುತ್ತಿದಂತೆ ಗಂಡಂದಿರಿಗೆ ಹಾಸಿಗೆಯ ಮೇಲೆ ಇನ್ನಿಲ್ಲದ ಪ್ರೀತಿ ಉಕ್ಕಿ ನಿದ್ರಾದೇವಿಗೆ ಶರಣಾಗಿ ಬಿಡುತ್ತಾರೆ. ಹಾಸಿಗೆಯಲ್ಲಿಯೇ ಕುಳಿತು ಊಟ,ಟೀ ಎಲ್ಲವೂ ಮಾಡುತ್ತಾರೆ.ಜೊತೆಗೆ ಟಿವಿಯಲ್ಲಿ ಅವರ ಇಷ್ಟದ ನ್ಯೂಸ್ ಅಥವಾ ಕ್ರಿಕೆಟ್ ನೋಡುತ್ತಾ ಕಾಲ ಕಳೆಯುತ್ತಾರೆ. ಒಂದು ವೇಳೆ ಸ್ನಾನ ಮಾಡಲು ಹೇಳಿದರೆ ನೀವು ಅವರ ವೀಕೆಂಡ್ ಹಾಳು ಮಾಡುತ್ತಿದ್ದೀರಿ ಎಂದು ರೇಗುತ್ತಾರೆ.

ಊಟದ ಸಮಯದಲ್ಲಿ ಉದಾಸೀನ
ಬಹುಶಃ ನಿಮ್ಮ ಅಡುಗೆ ಎಂದರೆ ನಿಮ್ಮ ಗಂಡನಿಗೆ ಇಷ್ಟವಿರಬಹುದು ಆದರೆ ಮದುವೆಯಾದ ಸ್ವಲ್ಪ ಸಮಯದ ನಂತರ ಅದೂ ಕೂಡ ಇಷ್ಟವಾಗದೆ ಹೋಗಬಹುದು. ಊಟಕ್ಕೆ ಕರೆದ ನಂತರ ಟಿವಿ ನೋಡುವುದು ಅಥವಾ ಇಮೇಲ್ ಚೆಕ್ ಮಾಡುವುದು ಅವರ ದಿನನಿತ್ಯದ ರೂಡಿ ಆಗಿಬಿಟ್ಟಿರುತ್ತದೆ, ಹಾಕಿದ ಊಟ ತಣಿದರೂ ಕೂಡ ಅವರು ಬರುವುದೇ ಇಲ್ಲ.

ವೀಕೆಂಡ್ ಎಂಬ ಕಾರಣಕ್ಕೆ ಶೇವ್ ಮಾಡದಿರುವುದು
ಬಹುಶಃ ನೀವು ಮದುವೆಯಾಗುವಾಗ ಪ್ರತಿದಿನ ಶೇವ್ ಮಾಡಿದ ಸುಂದರ ಹುಡುಗನಿಗೆ ಮನಸೋತಿರುತ್ತೀರಿ ಆದರೆ ಆ ನಂತರವೇ ನಿಮಗೆ ತಿಳಿಯುವುದು ನಿಮ್ಮ ಪತಿ ವೀಕೆಂಡ್ ಬಂತೆಂದರೆ ಶೇವ್ ಮಾಡುವುದೇ ಇಲ್ಲ. ಪತಿಯೇ ಹಾಗೆ, ಹೇಗಿದ್ದರೂ ಮನೆಯಲ್ಲಿ ಹೆಂಡತಿ ಇರುವುದರಿಂದ ಇನ್ನಾರನ್ನೂ ಆಕರ್ಷಿಸುವ ಅವಶ್ಯಕತೆ ಇಲ್ಲ ಎಂದು ಶೇವ್ ಮಾಡುವುದನ್ನು ಬಿಟ್ಟುಬಿಡುತ್ತಾರೆ.

ಅವರದ್ದೇ ಆದ ವಸ್ತುಗಳು ಕೂಡ ಅವರಿಗೆ ಸಿಗುವುದೇ ಇಲ್ಲ
ಹೆಚ್ಚಿನ ಭಾರತೀಯ ಗಂಡಂದಿರು ವಸ್ತುಗಳನ್ನು ಒಪ್ಪವಾಗಿ ಸೇರಿಸಿ ಇಡುವುದೇ ಇಲ್ಲ. ಆದರೆ ಅದು ನೀಟಾಗಿ ಬೇಕಾದಾಗ ಸಿಗುವ ಹಾಗೆ ಇರಬೇಕು ಎಂಬುದು ಅವರ ಬಯಕೆ.ಆಫೀಸ್ ಗೆ ಹೊರಟಾಗ ಬೆಳಗ್ಗೆ ಅವರಿಗೆ ಬೇಕಾಗಿದ್ದಾವುದೂ ಸಿಗುವುದೇ ಇಲ್ಲ.ಬ್ರಷ್,ಶೂ,ಸಾಕ್ಸ್,ಬಟ್ಟೆ ಎಲ್ಲವೂ ಅವರ ಕೈಗೆ ಹಿಡಿಸಬೇಕು.ನೀವು ಎಲ್ಲವನ್ನೂ ಸರಿಯಾದ ಸ್ಥಳದಲ್ಲಿ ಇಟ್ಟರೂ ಕೂಡ ಅವರು ಅದನ್ನು ಹುಡುಕುವ ಪ್ರಯತ್ನ ಮಾಡುವುದೇ ಇಲ್ಲ.

ಟಾಯ್ಲೆಟ್ ನಲ್ಲಿ ಸಿಗರೇಟ್ ಸೇದುವುದು ಅಥವಾ ಪೇಪರ್ ಓದುವುದು
ಭಾರತೀಯ ಪುರುಷರು ಬೆಳಗ್ಗೆ ಮಾಡುವ ಕೆಲಸವೆಂದರೆ ನ್ಯೂಸ್ ಪೇಪರ್ ಓದುವುದು ಮತ್ತು ಸಿಗರೇಟ್ ಸೇದುವುದು. ಆದರೆ ಇದನ್ನು ಮಾಡಲು ಅವರಿಗೆ ಇಷ್ಟವಾಗುವ ಸ್ಥಳ ಟಾಯ್ಲೆಟ್.ಬಾತ್ ರೂಂ ನಲ್ಲಿ ಕುಳಿತು ಪೇಪರ್ ಓದುತ್ತಾ ಕಾಲ ಕಳೆಯುವ ಇಂತವರನ್ನು ಕಂಡರೆ ಭಾರತೀಯ ಸ್ತ್ರೀಯರಿಗೆ ಇಷ್ಟವಾಗುವುದಿಲ್ಲ.

ರಾತ್ರಿಯಿಡೀ ಗೊರಕೆ
ರಾತ್ರಿಯಿಡೀ ಗಂಡನ ಗೊರಕೆಯಿಂದಾಗಿ ಹೆಂಡತಿ ನಿದ್ದೆ ಇಲ್ಲದೇ ಒದ್ದಾಡಿರಬಹುದು ಆದರೆ ಬೆಳಗ್ಗೆ ಎದ್ದು ಪತಿಯೇ ಬಂದು'ನನಗೆ ನಿದ್ದೆ ಸರಿಯಾಗಲೇ ಇಲ್ಲ,ಜಾಗ ಸಾಲಲಿಲ್ಲ ಎಂಬ ಕಾರಣಗಳನ್ನು ನೀಡುವುದು.

ಹಾಸಿಗೆಯಲ್ಲಿಯೇ ಎಲ್ಲವನ್ನೂ ತಿನ್ನುವುದು
ನಿಮ್ಮ ಪತಿಗೆ ಮನೆ ಅಡುಗೆ ಇಷ್ಟವಾಗದೇ ಇರಬಹುದು ಆದರೆ ಹೊರಗಿನಿಂದ ತಂದು ಟಿವಿ ನೋಡುತ್ತಾ ಅಥವಾ ಆಫೀಸಿನ ಕೆಲಸ ಮಾಡುತ್ತಾ ತಿನ್ನುವುದೆಂದರೆ ಎಲ್ಲಿಲ್ಲದ ಸಂತೋಷ.ತಿನ್ನುವ ಭರದಲ್ಲಿ ಅಲ್ಲೇ ಎಲ್ಲವನ್ನು ಬಿಸಾಡುತ್ತಾರೆ. ಹೆಂಡತಿ ಬಂದು ಸ್ವಚ್ಚಗೊಳಿಸದಿದ್ದರೆ ಅದರಲ್ಲೇ ಮಲಗಲೂ ಕೂಡ ಬೇಸರಿಸಿಕೊಳ್ಳುವುದಿಲ್ಲ.



Click it and Unblock the Notifications
