ಕಾಲ ಬದಲಾಗಿದೆ, ಪುರುಷರ ಆಲೋಚನೆಗಳೂ ಬದಲಾಗಿವೆ!

By: Arshad
Subscribe to Boldsky

ಈ ಜಗತ್ತಿನಲ್ಲಿ ಪ್ರತಿ ವ್ಯಕ್ತಿಯೂ ಬೇರೆ ಬೇರಿ ರೀತಿಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅದರಲ್ಲೂ ಪುರುಷರು ಅತಿ ಹೆಚ್ಚಿನ ವೈವಿಧ್ಯತೆಯನ್ನು ಹೊಂದಿರುತ್ತಾರೆ. ಆದ್ದರಿಂದ 'ಪುರುಷರೆಲ್ಲಾ ಹೀಗೇ' ಎಂದು ಮಹಿಳೆಯರು ಮೂದಲಿಸುವಂತೇನೂ ಇಲ್ಲ. ಆದರೂ, ಪುರುಷರು ತಮ್ಮ ಕೆಲವು ವಿಷಯಗಳನ್ನು ಮಹಿಳೆಯರು ತಾವಾಗಿಯೇ ತಿಳಿದುಕೊಂಡಿರಬೇಕು ಎಂದು ಭಾವಿಸುತ್ತಾರೆ. ಗಂಡಸರೆಲ್ಲಾ ಹೀಗೇ! ಹುಟ್ಟು ಗುಣ ಸುಟ್ಟರೂ ಹೋಗೋದಿಲ್ಲ!!

ಉದಾಹರಣೆಗೆ, ಮಹಿಳೆಯರು ತಮಗೇನು ಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳದೇ, ಪುರುಷರೇ ಅರ್ಥ ಮಾಡಿಕೊಳ್ಳಬೇಕು ಎಂಬ ವಿಷಯ ಪುರುಷರಿಗೆ ಅಚ್ಚರಿ ತರುತ್ತದೆ. ವಾಸ್ತವದಲ್ಲಿ ಮಹಿಳೆಯರು ತಮಗೇನು ಬೇಕು, ಬೇಡ, ಇಷ್ಟವಿದೆ, ಇಷ್ಟವಿಲ್ಲ ಎಂಬುದನ್ನು ನೇರವಾಗಿ ಹೇಳುವುದನ್ನು ಪುರುಷರು ಇಷ್ಟಪಡುತ್ತಾರೆ.  ಸುಟ್ಟರೂ ಹೋಗದ ಪುರುಷರ ಹುಟ್ಟುಗುಣ

ಇಂದಿನ ದಿನಗಳಲ್ಲಿ ಬಹುತೇಕ ಪುರುಷರು ತಾವಾಗಿ ಕೇಳದೇ ಮಹಿಳೆಯರೇ ತಮ್ಮ ಬಯಕೆಗಳನ್ನು ಸ್ಪಷ್ಟಪಡಿಸಬೇಕೆಂದು ಬಯಸುತ್ತಾರೆ. ಹಿಂದಿನ ದಿನಗಳಂತೆ ಮಹಿಳೆಯರು ನಾಚಿಕೆಯಿಂದ ಮುದ್ದೆಯಾಗಿ ಕುಳಿತು ಸ್ಪಷ್ಟವಾಗಿ ಹೇಳದೇ ಪುರುಷರೇ ಅವರಿಗೇನು ಬೇಕೆಂಬುದನ್ನು ತೆಗೆಸಿ ಕೊಡುವ ಕಾಲ ಈಗ ಇಲ್ಲ. ಬನ್ನಿ, ಈ ಬಗ್ಗೆ ಕೊಂಚ ಹೆಚ್ಚಿನ ಮಾಹಿತಿಯನ್ನು ಅರಿಯೋಣ..... 

#1

#1

ಕೆಲವೊಮ್ಮೆ, ಮಹಿಳೆಯರೇ ಯಾವುದಾದರೊಂದು ವಿಷಯದಲ್ಲಿ ಪ್ರಾರಂಭ ಮಾಡುವುದನ್ನು ಪುರುಷರು ಇಷ್ಟಪಡುತ್ತಾರೆ. ಹಿಂದೆಲ್ಲಾ ಪ್ರತಿ ವಿಷಯವನ್ನು ಪುರುಷರೇ ಪ್ರಾರಂಭಿಸಬೇಕಿತ್ತು. ಇಂದು ಮಹಿಳೆಯರೂ ಹಲವು ವಿಷಯಗಳನ್ನು ಪ್ರಾರಂಭಿಸಬಹುದು.

#2

#2

ಹಿಂದಿನ ಕಾಲದಲ್ಲಿ ಮಹಿಳೆಯೊಬ್ಬಳು ಪುರುಷನ ಕಡೆಗೆ ನೋಡಿ ನಕ್ಕರೂ ಸಾಕಿತ್ತು, ಆ ಪುರುಷ ಮನದಲ್ಲಿಯೇ ಮಂಡಿಗೆ ತಿನ್ನುತ್ತಾ ತನ್ನ ಮತ್ತು ಆಕೆಯ ಬಗ್ಗೆ ಕಪೋಲ ಕಲ್ಪಿತ ಘಟನೆಗಳನ್ನು ಕಲ್ಪಿಸಿಕೊಂಡು ಮದುವೆಯಾಗುವರೆಗೂ ಮನದಲ್ಲಿನ ಮಂಡಿಗೆ ತಿಂದು ಮುಗಿಸುತ್ತಿದ್ದ

#3

#3

ಒಂದು ವೇಳೆ ಓರ್ವ ಪುರುಷ ಇತರ ಮಹಿಳೆಯರತ್ತ ನೋಡಿದ ಎಂದ ಮಾತ್ರಕ್ಕೇ ಆತ ನಿಮ್ಮಲ್ಲಿ ಆಸಕ್ತನಿಲ್ಲ ಎಂದು ಭಾವಿಸಲು ಯಾವುದೇ ಕಾರಣವಿಲ್ಲ. ಅಲ್ಲದೇ ನೀವು ಸುಂದರಿ ಅಲ್ಲವೆಂದಂತೂ ಖಂಡಿತಾ ಅಲ್ಲ.

#4

#4

ಒಂದು ವೇಳೆ ನಿಮ್ಮ ಪುರುಷ ಹೇಳದೇ ಇದ್ದರೂ ಆತ ಸದಾ ನಿಮ್ಮ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ತಮ್ಮ ಮನಸ್ಸಿನ ಭಾವನೆಗಳನ್ನು ಸ್ಪಷ್ಟವಾಗಿ ಹೇಳಲು ಎಲ್ಲಾ ಪುರುಷರಿಗೆ ಸಾಧ್ಯವಿಲ್ಲ. ಇದನ್ನೇ ನಪವಾಗಿಸಿಕೊಂಡು ಮಹಿಳೆಯರು ತಮ್ಮ ಪುರುಷನಿಗೆ ತಮ್ಮಲ್ಲಿ ಆಸಕ್ತಿಯೇ ಇಲ್ಲ, ಆತನಿಗೆ ಭಾವನೆಗಳೇ ಇಲ್ಲ ಎಂದು ಹೇಳಲು ಖಂಡಿತಾ ಸಾಧ್ಯವಿಲ್ಲ.

#5

#5

ಆತ ನಿಮ್ಮ ದೇಹವನ್ನೇ ಹೆಚ್ಚು ಮೆಚ್ಚುತ್ತಾನೆ ಎಂದ ಮಾತ್ರಕ್ಕೆ ಆತನ ಪ್ರೀತಿ ಕೇವಲ ದೈಹಿಕವಲ್ಲ. ಸಾಮಾನ್ಯವಾಗಿ ಪುರುಷರೆಲ್ಲರಿಗೂ ಮಹಿಳೆಯರ ದೈಹಿಕ ಚೆಂದಗಳು ಪ್ರಮುಖವಾಗಿ ಆಕರ್ಷಿಸಿದರೂ, ಜೀವನಸಂಗಾತಿಯಾಗಿ ಪಡೆಯಲು ಮಾತ್ರ ಈ ಗುಣಗಳಿಗಿಂತಲೂ ಮಹಿಳೆಯಲ್ಲಿರುವ ಜಾಣ್ಮೆ, ಮಮತೆ, ವಿವೇಕ, ಲೋಕಜ್ಞಾನ, ವ್ಯವಹಾರ ಚಾತುರ್ಯ ಅಥವಾ ಬೇರಾವುದೋ ಗುಣವನ್ನೇ ಕಾಣಬಯಸುತ್ತಾನೆ.

#6

#6

ಒಂದು ವೇಳೆ ಮಹಿಳೆಯರು ಪುರುಷನನ್ನು ತಮ್ಮ ಆಕರ್ಷಣೆಗೆ ಒಳಗಾಗುವಂತೆ ಮಾಡಿ ಬಳಿಕ ಆತನ ಪ್ರತಿ ನಿರ್ಲಕ್ಷ್ಯ ವಹಿಸಿದರೆ ಇದನ್ನು ಯಾವುದೇ ಪುರುಷ ಸಹಿಸುವುದಿಲ್ಲ.

 
English summary

Things Men Want Women To Know

Most of today's men would like a woman who doesn't wait till a man comes and asks her out. Gone are the days when men expected women to be shy and passive. Now, here are some more things he wants you to know...
Please Wait while comments are loading...
Subscribe Newsletter