Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಟ್ಟರೂ ಹೋಗದ ಪುರುಷರ ಹುಟ್ಟುಗುಣ
ಹೆಣ್ಣಿನ ಮನಸ್ಸನ್ನು ಅರಿಯುವುದು ಎಷ್ಟು ಕಷ್ಟವೋ ಅಂತೆಯೇ ಗಂಡಸರ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳುವುದೂ ಅಷ್ಟೇ ಕಷ್ಟವಂತೆ. ಎಷ್ಟೇ ಕಷ್ಟವಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೇ ಮನಸ್ಸಿನೊಳಗೆ ಇಟ್ಟುಕೊಂಡು ನಗುನಗುತ್ತಾ ಇರುವವರು ಒಬ್ಬರಾದರೆ, ಎಲ್ಲಾ ಕಷ್ಟಗಳು ತಮ್ಮ ಮೇಲೆಯೇ ಬಂದೆರಗಿದೆ ಎಂಬಂತೆ ನಡೆದುಕೊಳ್ಳುವವರು ಮತ್ತೊಬ್ಬರು. ಹೀಗಾಗಿ ಗಂಡಸರು ಯಾವಾಗ ಹೇಗಿರುತ್ತಾರೆ ಯಾವ ಮೂಡ್‌ನಲ್ಲಿರುತ್ತಾರೆ ಎಂಬುದನ್ನು ಅರಿಯುವುದೇ ಕಷ್ಟ.
ತಮ್ಮ ಪ್ರಿಯಪಟ್ಟವರಿಗೆ ಕರೆಮಾಡುತ್ತೇವೆ ಎಂದು ಹೇಳಿ ಮರೆತುಬಿಡುವುದು, ಹೇಳಿದ ಸಮಯಕ್ಕೆ ಬರದೇ ಅವರನ್ನು ಸತಾಯಿಸುವುದು ನಂತರ ಕ್ಷಮಾಪಣೆ ಕೇಳುವುದು ಹೀಗೆ ಮಾಡಿದ ತಪ್ಪನ್ನೇ ಪುನಃ ಪುನಃ ಮಾಡಿ ಬೈಸಿಕೊಂಡು, ಕಾಡಿಸಿಕೊಂಡು, ಪೀಡಿಸಿಕೊಂಡು ಇಷ್ಟವಾಗುವವರೂ ಇದ್ದಾರೆ. ಗಂಡಸರು ಯಾವಾಗೂ ಗಂಡಸರೇ ಎಂಬಂತೆ ತಮ್ಮ ತಮಾಷೆಯ ಬುದ್ಧಿಯನ್ನು ಅವರೆಂದಿಗೂ ಬಿಡುವುದಿಲ್ಲ. ಚುಡಾಯಿಸುವ ಪ್ರವೃತ್ತಿಯನ್ನು ಮರೆಯುವುದಿಲ್ಲ. ಹೀಗೆ ಮೋಜು ಮೋಜಾಗಿ ತಮಾಷೆಯಾಗಿ ಅವರು ಕಳೆಯುವಂತಹ ಕೆಲವು ಸನ್ನಿವೇಶಗಳನ್ನು ನಾವಿಲ್ಲಿ ಪಟ್ಟಿಮಾಡುತ್ತಿದ್ದೇವೆ ಅದೇನು ಎಂಬುದನ್ನು ತಿಳಿದುಕೊಳ್ಳಿ. ಗಂಡನ ಲೇಟ್ ನೈಟ್ ಡ್ಯೂಟಿಯ ವಿಚಾರದಲ್ಲಿ ಎಚ್ಚರ ತಪ್ಪದಿರಿ

ಅಯ್ಯೋ, ನಾನು ಮರೆತೆ
ನೀವು ಸಾವಿರ ಸಲ ಹೇಳಿದರು, ಆತ ಅದನ್ನು ಮರೆತು ಬಿಡುತ್ತಾನೆ. ಆಮೇಲೆ ಅಯ್ಯೋ, ನಾನು ಮರೆತು ಹೋದೆ ಎಂದು ಕ್ಷಮೆಯನ್ನು ಕೇಳುತ್ತಾನೆ. ಇದು ಅವನ ನಿಷ್ಕಪಟತನಗಳಲ್ಲಿ ಒಂದು. ಹಾಗೆಂದು ಮರೆತವರೆಲ್ಲರು ಒಳ್ಳೆಯವರಲ್ಲ, ಕೆಲವರಿಗೆ ಜಾಣ ಮರೆವು ಇರುತ್ತದೆ. ಆದರೆ ನಮ್ಮ ನಿಷ್ಕಪಟ ಗಂಡಸರು ಪಾಪ ಬೇಡ ಬೇಡವೆಂಡರು ಮರೆತು ಹೋಗುತ್ತಾರೆ. ಹೆಂಗಸರಿಗೆ ಕೆಲವೊಮ್ಮೆ ಈ ಮರೆವುಗಳು ಸಹ ಇಷ್ಟವಾಗುತ್ತವೆ. ತಮ್ಮವರ ಪೆದ್ದುತನ ಒಮ್ಮೊಮ್ಮೆ ಇಷ್ಟವಾಗುತ್ತದೆ ಬಿಡಿ.
ನಾನು ಸಿಕ್ಕಾಪಟ್ಟೆ ಬ್ಯುಸಿ
ಪ್ರಪಂಚದಲ್ಲಿ ಯಾರೂ ಸಿಕ್ಕಾಪಟ್ಟೆ ಬ್ಯುಸಿಯಿರುವುದಿಲ್ಲ. ಆದರೆ ಕೆಲವರು ಮಾತ್ರ ತಾವೇ ತಾವಾಗಿ ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಮಾಡುತ್ತಾರೆ. ಏನೇ ಮಾಡಿದರು ಸ್ವಲ್ಪ ಸಮಯ ಪ್ರತಿಯೊಬ್ಬರ ವೈಯಕ್ತಿಕ ಕೆಲಸಕ್ಕೆ ಇದ್ದೇ ಇರುತ್ತದೆ. ನಾನು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದೆ, ಮತ್ತು ಪುರುಸೊತ್ತೆ ಇರಲಿಲ್ಲ ಎಂದು ಮೊದಲು ಹೇಳಿ, ನಂತರ ಸಾರಿ...ಎಂದು ರಾಗ ಎಳೆಯುವುದು ಗಂಡಸರು ಮಾಡುವ ತಪ್ಪುಗಳಲ್ಲಿ ಒಂದು.
ಅಯ್ಯೋ, ಲೈನ್ ಸಿಗಲಿಲ್ಲ
ಬಹುತೇಕ ಗಂಡಸರು ತಮ್ಮ ಹುಡುಗಿ/ಹೆಂಡತಿ ಫೋನ್ ಮಾಡಿದ ನಂತರ ಮತ್ತೆ ಮರಳಿ ಅವರಿಗೆ ಕರೆ ಮಾಡಲು ಮರೆಯುತ್ತಾರೆ. ಆಮೇಲೆ ಅಯ್ಯೋ, ಲೈನ್ ಸಿಗಲಿಲ್ಲ ಎಂದು ಕ್ಷಮೆಯನ್ನು ಕೇಳುತ್ತಾರೆ. ಅದನ್ನು ಸಹ ಮರೆತು ಹೋಗುತ್ತಾರೆ ಎಂಬುದು ಹೆಂಗಸರಿಗೆ ಚೆನ್ನಾಗಿ ಗೊತ್ತಿರುತ್ತದೆ. ಅಷ್ಟೇ ಬಿಡಿ.
ನನಗೆ ನಿದ್ದೆ ಬರುತ್ತಿದೆ ನಾವು ಮಲಗೋಣವೇ?
ಗಂಡಸರಿಗೆ ಜಗಳ ಮಾಡುವುದು ಇಷ್ಟವಾಗುವುದಿಲ್ಲ. ಬೆಳಗ್ಗೆವರೆಗೆ ಮಾತನಾಡಿ ಎಂದರೆ ಅದಕ್ಕೆ ಅವರು ಸಿದ್ಧವೇ ಹೊರತು, ಜಗಳಕ್ಕಲ್ಲ. ಒಮ್ಮೆ ಏನಾದರು ಜಗಳ ಶುರುವಾದಲ್ಲಿ ಗಂಡಸರು ನಾನು ಸುಸ್ತಾಗಿದ್ದೀನಿ, ನಿದ್ದೆ ಬರುತ್ತಿದೆ ಎಂದು ಹೋಗಿ ಮಲಗುತ್ತಾರೆ. ಇದು ಎಲ್ಲಾ ಗಂಡಸರ ಬಳಿ ಇರುವ ಪಲಾಯನ ಸೂತ್ರ.



Click it and Unblock the Notifications

