Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಗಂಡಸರೆಲ್ಲಾ ಹೀಗೇ! ಹುಟ್ಟು ಗುಣ ಸುಟ್ಟರೂ ಹೋಗೋದಿಲ್ಲ!!
ಬಹುತೇಕ ವಿವಾಹಿತ ಮಹಿಳೆಯರು ತಮ್ಮ ಪತಿಯರ ಬಗ್ಗೆ ಹೊಂದಿರುವ ಒಂದು ಸಮಾನ ಅಭಿಪ್ರಾಯವೆಂದರೆ "ಈ ಗಂಡಸರೆಲ್ಲಾ ಹೀಗೇ!" ಈ ಅಭಿಪ್ರಾಯ ಕೇವಲ ಒಂದೆರಡು ಪ್ರಕರಣಗಳಿಂದಲ್ಲ, ಹಲವಾರು ವರ್ಷಗಳಿಂದ ಪುರುಷರು ತೋರುತ್ತಾ ಬಂದಿರುವ, ಪದೇ ಪದೇ ಪ್ರಮಾಣಿಕರಿಸಿದ ಅನುಭವ. ಉದಾಹರಣೆಗೆ ಬೆಳಿಗ್ಗೆ ಎದ್ದಾಗ ಹೊದಿಕೆ ಮಡಚದೇ ಇರುವುದು, ತಮ್ಮ ವಸ್ತುಗಳನ್ನೆಲ್ಲಾ ಎಲ್ಲೆಲ್ಲೋ ಎಸೆದಿರುವುದು ಇತ್ಯಾದಿ. ಆದರೆ ಇವೆಲ್ಲಾ ಮನೆಯೊಳಗಿನ ಡೊಂಕುಗಳಾದರೆ ಮನೆಯ ಹೊರಗೆ ಪುರುಷರು ತೋರುವ ಡೊಂಕು ಇನ್ನೊಂದಿದೆ. ಅದೇ ಪರಸ್ತ್ರೀಯರತ್ತ ನೋಡುವ ನೋಟ!
ಈ ಡೊಂಕು ನಾಯಿಬಾಲವನ್ನು ನೆಟ್ಟಗೆ ಮಾಡಲು ಇದುವರೆಗೆ ಸಾಧ್ಯವಾಗಿಲ್ಲ, ಸಾಧ್ಯವಾಗುವುದೂ ಇಲ್ಲ. ಏಕೆಂದರೆ ಇದು ಪ್ರತಿ ಪುರುಷರ ವಂಶವಾಹಿನಿಯಲ್ಲಿಯೇ ಅಡಗಿದೆ! ಇಂದಿನ ಲೇಖನದಲ್ಲಿ ಇಂತಹ ಕೆಲವು ಕ್ಷಣಗಳನ್ನು ಸೆರೆಹಿಡಿದಿದ್ದು ಈ ಡೊಂಕುಬಾಲದ ಪ್ರತಿಕೃತಿಯಂತಿವೆ. ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಚಿತ್ರಗಳು ಮತ್ತು ಮಾಹಿತಿಗಳು ಕೇವಲ ವಿನೋದಕ್ಕಾಗಿಯೇ ಹೊರತು ಯಾರನ್ನೂ ಕುರಿತದ್ದಲ್ಲ ಅಥವಾ ಯಾರ ಮನಸ್ಸಿಗೂ ನೋವುಂಟುಮಾಡುವ ಉದ್ದೇಶದಿಂದಲೂ ಅಲ್ಲ.
ಈ ಚಿತ್ರಗಳನ್ನು ಛಾಯಾಗ್ರಾಹಕರು ಎಷ್ಟು ಸಮಯೋಚಿತವಾಗಿ ಮತ್ತು ಪುರುಷರ ಡೊಂಕುಬಾಲವನ್ನು ತೋರುವಂತೆ ತೆಗೆದಿದ್ದಾರೆ ಎಂದರೆ ಈ ಚಿತ್ರಗಳನ್ನು ನೋಡಿ ನಗದಿರಲು ನಿಮಗೆ ಸಾಧ್ಯವೇ ಇಲ್ಲ. ಈ ಚಿತ್ರಗಳನ್ನು ನೋಡಿದ ಮಹಿಳೆಯರೂ ಮತ್ತೊಮ್ಮೆ ಹೀಗೆ ಹೇಳಬಹುದು "ಈ ಗಂಡಸರೇ ಹೀಗೆ"..!!

ಶ್ರೀ ಬೆಖಾಂ ರವರೇ ನಿಮ್ಮ ಚಿತ್ತ ಎತ್ತ?
ಎಲ್ಲರೂ ಕ್ರೀಡೆಯನ್ನು ಗಮನಿಸುತ್ತಿದ್ದಾಗ ಈ ಖ್ಯಾತ ಕ್ರೀಡಾಪಟು ಕ್ರೀಡೆಯ ನಯನಾಜೂಕನ್ನು ಗಮನಿಸುವ ಬದಲು ಪಕ್ಕದಲ್ಲಿದ್ದ ಚಿಯರ್ ಗರ್ಲ್ ಒಬ್ಬರ ಸೌಷ್ಟವವನ್ನು ಗಮನಿಸುತ್ತಿದ್ದಿರಬಹುದೇ? ಚಿತ್ರದಲ್ಲಂತೂ ಹಾಗೇ ತೋರುತ್ತಿದೆ.
Image courtesy

ಈ ಪುರುಷರ ತಪ್ಪೇನೂ ಇಲ್ಲ ಬಿಡಿ
ಎಂತೆಂಥದ್ದೋ ಉಡುಪುಗಳನ್ನು ತೊಟ್ಟು ನೋಡಬೇಡಿ ಎಂದರೆ ಹೇಗೆ? ಪಾಪ, ಆತನಿಗೆ ಈ ಆಸ್ತಿಯನ್ನು ನೋಡುವುದರಿಂದ ಹೇಗೆ ತಪ್ಪಿಸಲಿಕ್ಕಾಗುತ್ತದೆ ಹೇಳಿ? Image courtesy

ಜಸ್ಟಿನ್ ಚಾಟ್ವಿನ್ ರು ನೋಡುತ್ತಿರುವುದು ಮೆಚ್ಚುಗೆಯ ನೋಟ ಮಾರಾಯ್ರೇ
ನಟಿ ಇವಾ ಅಮ್ಯೂರಿಯವರು ತೊಟ್ಟ ಈ ಉಡುಪಿನ ಮೂಲಕ ಹೇಗೆ ಕಾಣುತ್ತಿದ್ದಾರೆ ಎಂದು ಜಸ್ಟಿನ್ ಚಾಟ್ವಿನ್ ರವರು ಮೆಚ್ಚುಗೆಯ ನೋಟ ನೋಡುತ್ತಿದ್ದಾರೆಯೇ ಹೊರತು ಒಡಕು ನೋಡುತ್ತಿಲ್ಲ ಮಾರಾಯ್ರೇ, ಗೊತ್ತಾಯ್ತೇ? Image courtesy

ಇವರು ಪಾನಮತ್ತರಾಗಿದ್ದಾರೆ, ಇವರದ್ದೇನೂ ತಪ್ಪಿಲ್ಲ ಬಿಡಿ
ಪಾನಮತ್ತ ಜನರು ಏನು ಮಾಡುತ್ತಿದ್ದಾರೆ ಎಂದು ಅವರಿಗೆ ಗೊತ್ತಿರುವುದಿಲ್ಲ ಬಿಡಿ. ಪಕ್ಕದಲ್ಲಿರುವವರನ್ನು ಹೀಗೆ ನೋಡುತ್ತಿರುವುದೂ ಅವರ ಅರಿವಿಗೇ ಬಂದಿರಲಿಕ್ಕಿಲ್ಲ. ಇದು ನಮಗೆ ಅರ್ಥವಾಗುತ್ತದೆ. Image courtesy

ಜೆಸ್ಸಿಕಾರವರು ನೆಕ್ಲೇಸ್ ಹಾಕಿದ್ದು ಕಾಣುತ್ತಿಲ್ಲವಲ್ಲ
ನಟ ಸೀನ್ ಕಾಂಬ್ ರವರು ವೇದಿಕೆಯ ಮೇಲೆ ಬಂದ ಬಳಿಕ ಅವರೊಂದಿಗಿದ್ದ ನಟಿ ಜೆಸ್ಸಿಕಾ ಬೈಲ್ ರವರು ನೆಕ್ಲೇಸ್ ಧರಿಸಲಿಲ್ಲ ಎಂದು ನೋಡುತ್ತಿದ್ದಾರೆಯೇ ಹೊರತು ಮತ್ತೇನಿಲ್ಲ ಬಿಡಿ. ಸುಮ್ಮಸುಮ್ಮನೇ ಇವರ ಮೇಲೆ ಗೂಬೆ ಕೂರಿಸಬೇಡಿ. Image courtesy

ಬೆಳೆಯುವ ಕುಡಿ ಮೊಳೆಯಲ್ಲಿ
ಹದಿಹರೆಯದಲ್ಲಿಯೇ ಗಂಡುಮಕ್ಕಳು ಹೆಣ್ಣು ಮಕ್ಕಳ ಕುರಿತಾದ ಬಹಳಷ್ಟು ವಿಷಯಗಳನ್ನು ಕಂಡುಕೊಂಡಿರುತ್ತಾರಂತೆ. ಮುಂದೆ ದೊಡ್ಡವರಾಗಿ ಮಾಡಬೇಕಾದ ಬಿಯರ್ ಸೇವನೆ ಮತ್ತು 'ಇತರ' ಚಟುವಟಿಕೆಗಳನ್ನು ಇಂದೇ ಮಾಡಿ ನಾಳಿನ ಕೆಲಸವನ್ನು ಈ ಬಾಲಕ ಇಂದೇ ಮುಗಿಸುವ ಹುನ್ನಾರದಲ್ಲಿರುವ ಹಾಗಿದೆ. Image courtesy

ಛೇ, ಈ ವಯಸ್ಸಿನಲ್ಲಿ ಇದು ಬೇಡವಿತ್ತು
ತುಂಟತನಕ್ಕೆ ಮುಪ್ಪಿಲ್ಲವಂತೆ. ಇದನ್ನೇ ಈ ಹಿರಿಯರು ಪ್ರಮಾಣೀಕರಿಸುತ್ತಿರಬಹುದು.
Image courtesy

ಅಧ್ಯಕ್ಷರೇ ಹೀಗೆ ಮಾಡಿದರೆ ಉಳಿದವರ ಪಾಡೇನು?
ಯಥಾ ರಾಜಾ ತಥಾ ಪ್ರಜಾ ಎಂಬ ಮಾತೊಂದಿದೆ. ಅಮೇರಿಕಾದ ಅಧ್ಯಕ್ಷರಾದ ಬರಾಕ್ ಒಬಾಮಾ ಮತ್ತು ಫ್ರಾನ್ಸ್ ನ ಅಧ್ಯಕ್ಷ ನಿಕೋಲಸ್ ಸರ್ಕೋಜಿಯವರೂ ತರುಣಿಯೊಬ್ಬಳ ಹಿಂಭಾಗವನ್ನು ಪ್ರಶಂಸಿಸುತ್ತಿರುವುದನ್ನು ಕ್ಲಿಕ್ ಮಾಡಿದ ಈ ಛಾಯಾಗ್ರಾಹಕರ ಜಾಣ್ಮೆಯನ್ನು ಮೆಚ್ಚಲೇ ಬೇಕು. ಹದಿನಾರರ ಈ ತರುಣಿ ತನ್ನ ಜೀವನಪರ್ಯಂತ ಈ ಚಿತ್ರವನ್ನು ಜನತದಿಂದ ಕಾಪಾಡಿಕೊಳ್ಳುತ್ತಾಳೆಯೇ? Image courtesy



Click it and Unblock the Notifications
