ನಾವು ಮೇಕಪ್ ಮಾಡುವ ಹುಡುಗಿಯರ ಹಿಂದೆ ಹೋಗುವವರಲ್ಲ!

By: Deepu
Subscribe to Boldsky

ಇತ್ತೀಚಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕುವುದು ದೊಡ್ಡ ಫ್ಯಾಷನ್ ಆಗಿ ಹೋಗಿದೆ. ಕೆಲವರು ಸಾಕಷ್ಟು ಮೇಕಪ್ ಮಾಡಿಕೊಂಡು ಫೋಟೋ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೆ. ಇದನ್ನು ನೋಡಿ ಹಲವಾರು ಹುಡುಗರು ಮೋಸ ಹೋಗುವುದರಲ್ಲಿ ಸಂಶಯವೇ ಇಲ್ಲ. ಯಾಕೆಂದರೆ ಮೇಕಪ್ ನಲ್ಲಿ ಹುಡುಗಿಯನ್ನು ನೋಡಿ ಪ್ರೀತಿಯಲ್ಲಿ ಮುಳುಗಿರುತ್ತಾರೆ.   ಪುರುಷರು ಇರುವುದೇ ಹೀಗೆ!! ಇವರೇ ಬೇರೆ, ಇವರ ಸ್ಟೈಲೇ ಬೇರೆ!

ಮೇಕಪ್ ತೆಗೆದ ಬಳಿಕ ಆ ಹುಡುಗಿ ಯಾವ ರೀತಿ ಕಾಣಿಸಿಕೊಳ್ಳುತ್ತಾಳೆ ಎಂದು ತಿಳಿದಿರುವುದಿಲ್ಲ. ಮೇಕಪ್‌ನಿಂದ ಹೊರಬರಲು ಹೆಚ್ಚಿನ ಹುಡುಗಿಯರಿಗೆ ಇಷ್ಟವೇ ಇರುವುದಿಲ್ಲ. ಆದರೆ ಮೇಕಪ್ ಇಲ್ಲದೆ ಇರುವ ಹುಡುಗಿಯರನ್ನು ಹುಡುಗರು ಹೆಚ್ಚು ಇಷ್ಟಪಡುತ್ತಾರೆ ಎಂದು ತಿಳಿದಿಲ್ಲ.  ಗಂಡಸರಲ್ಲಿ ಇಂತಹ ಗುಣಗಳೆಲ್ಲಾ ಸ್ವಾಭಾವಿಕ! ಆದರೆ....

ಯಾಕೆಂದರೆ ಸಮಯ ಬದಲಾದಂತೆ ಮನೋಭಾವವೂ ಬದಲಾಗುತ್ತಾ ಹೋಗುತ್ತದೆ. ಹಿಂದೆ ಮೇಕಪ್ ಸಾಧನಗಳು ಇರಲಿಲ್ಲ. ಆದರೆ ಇಂದು ಮೇಕಪ್ ಸಾಮಾನ್ಯವಾಗಿದೆ. ಈ ಕಾರಣದಿಂದ ಹುಡುಗರು ನೈಸರ್ಗಿಕ ಸೌಂದರ್ಯವನ್ನು ಹುಡುಕುತ್ತಾ ಇರುತ್ತಾರೆ. ಇದು ಅವರನ್ನು ಬಹುಬೇಗನೆ ಆಕರ್ಷಿಸುತ್ತದೆ. ಅದು ಹೇಗೆಂದು ತಿಳಿಯಿರಿ....  

1ನೇ ಸುಳ್ಳು-ಪುರುಷರಿಗೆ ಸೆಕ್ಸಿ ಡ್ರೆಸ್‌ ಹುಡುಗಿಯರು ಇಷ್ಟ!

1ನೇ ಸುಳ್ಳು-ಪುರುಷರಿಗೆ ಸೆಕ್ಸಿ ಡ್ರೆಸ್‌ ಹುಡುಗಿಯರು ಇಷ್ಟ!

ಸತ್ಯ: ದೇಹಸೌಂದರ್ಯವನ್ನು ತೋರಿಸುವಂತಹ ಬಟ್ಟೆಗಳನ್ನು ಧರಿಸಿರುವ ಮಹಿಳೆಯರತ್ತ ಪುರುಷರು ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಆದರೆ ತಮ್ಮ ಸಂಗಾತಿಯ ಆಯ್ಕೆಯಲ್ಲಿ ಸೌಂದರ್ಯವೇ ಮುಖ್ಯವೆನ್ನುತ್ತಾರೆ ಪುರುಷರು.

2ನೇ ಸುಳ್ಳು

2ನೇ ಸುಳ್ಳು

ಎಲ್ಲಾ ಹುಡುಗರು ರೂಪದರ್ಶಿಯಂತೆ ಕಾಣುವ ಪ್ರಿಯತಮೆಯನ್ನು ಇಷ್ಟಪಡುತ್ತಾರೆ

ಸತ್ಯ: ಇದನ್ನು ಓದಿಕೊಂಡು ನೀವು ಆಹಾರ ಸೇವನೆ ಕಡಿಮೆ ಮಾಡಿಕೊಂಡು ದೇಹವನ್ನು ದಂಡಿಸಬೇಕಿಲ್ಲ. ಯಾಕೆಂದರೆ ನೈಸರ್ಗಿಕ ಸೌಂದರ್ಯದಲ್ಲೇ ಹುಡುಗಿಯರು ಸುಂದರವಾಗಿ ಕಾಣುತ್ತಾರೆಂದು ಹುಡುಗರು ಹಲವಾರು ಅಧ್ಯಯನಗಳಲ್ಲಿ ಹೇಳಿದ್ದಾರೆ.

3ನೇ ಸುಳ್ಳು

3ನೇ ಸುಳ್ಳು

ಹಾಸಿಗೆಯಲ್ಲಿ ಜಡವಾಗಿರುವ ಮಹಿಳೆ ಬೇಕು!

ಸತ್ಯ: ಹಾಸಿಗೆಯಲ್ಲಿ ಪ್ರತಿಯೊಂದನ್ನು ಪುರುಷರೇ ಮಾಡಬೇಕೆನ್ನುವ ಸಮಯ ಇತಿಹಾಸವನ್ನು ಸೇರಿಕೊಂಡಿದೆ. ಹಾಸಿಗೆಯಲ್ಲಿ ಮಹಿಳೆ ಕೂಡ ಸಕ್ರಿಯವಾಗಿ ಭಾಗವಹಿಸಿ ತನ್ನ ಆಸೆಯನ್ನು ಹೇಳಿಕೊಳ್ಳಬೇಕೆಂದು ಪುರುಷರು ಬಯಸುತ್ತಾರೆ.

4ನೇ ಸುಳ್ಳು

4ನೇ ಸುಳ್ಳು

ಮಕ್ಕಳಾಟಿಕೆ ತೋರಿಸುವುದು

ಸತ್ಯ: ಸಂಬಂಧದ ಬಗ್ಗೆ ಗಂಭೀರವಾಗಿರುವಂತಹ ಹುಡುಗರು ಜಾಣ್ಮೆಯ ಹುಡುಗಿಯರನ್ನು ಇಷ್ಟಪಡುತ್ತಾರೆ. ಯಾಕೆಂದರೆ ಅವರು ತಮ್ಮ ಇಷ್ಟಗಳನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕೆನ್ನುವುದು ಹುಡುಗರ ಆಸೆಯಾಗಿರುತ್ತದೆ. ಸಣ್ಣ ಹುಡುಗಿಯಂತೆ ವರ್ತಿಸಿದರೆ ಇದು ಹುಡುಗರಿಗೆ ಹಿಡಿಸದು.

5ನೇ ಸುಳ್ಳು

5ನೇ ಸುಳ್ಳು

ಮೇಕಪ್‌ ಮಾಡುವ ಹುಡುಗಿಯರೆಂದರೆ ಇವರಿಗೆ ಇಷ್ಟ!

ಸತ್ಯ: ಕಡಿಮೆ ಮೇಕಪ್ ಅನ್ನು ಹೆಚ್ಚಿನ ಪುರುಷರು ಇಷ್ಟಪಡುತ್ತಾರೆ. ಅತಿಯಾದ ಮೇಕಪ್, ದಪ್ಪಗಿನ ಲಿಪ್ ಸ್ಟಿಕ್ ಬಳಕೆ ಮತ್ತು ವಿಚಿತ್ರವಾಗಿರುವ ಕೂದಲಿನ ವಿನ್ಯಾಸವು ಸಂಬಂಧದ ಬಗ್ಗೆ ಗಂಭೀರವಾಗಿರುವ ಪುರುಷರಿಗೆ ಖಂಡಿತವಾಗಿಯೂ ಹಿಡಿಸದು.

English summary

Myths About Men's Preferences

With changing times, many things change. The same applies to men's dating preferences too. Women think that certain things work when it comes to attracting men. They are right most of the time. But in some cases, they might be wrong. Here is a good example. When your boyfriend suddenly knocks your door and when you are in your night dress with unruly hair and without any make up, you might think you made a bad impression.
Subscribe Newsletter