ಪುರುಷರು ಇರುವುದೇ ಹೀಗೆ!! ಇವರೇ ಬೇರೆ, ಇವರ ಸ್ಟೈಲೇ ಬೇರೆ!

By: Deepu
Subscribe to Boldsky

ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರಿಯುವುದು ಭಗವಂತನಿಗೂ ಸಾಧ್ಯವಿಲ್ಲ ಎಂಬ ಮಾತಿದೆ. ಅಂದರೆ ಪುರುಷನ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವುದು ಸುಲಭ ಎಂದು ಇದರ ಅರ್ಥವೇ? ಅಲ್ಲ, ಆದರೆ ಪುರುಷರು ತಮ್ಮ ಯೋಚನೆಗಳನ್ನು ಕಾರ್ಯಗತಗೊಳಿಸುವಲ್ಲಿ ವಿಚಲಿತರಾಗುವುದು ವಿರಳ. ಆದರೂ ಕೆಲವು ವಿಷಯಗಳಲ್ಲಿ ಪುರುಷರ ಬಗ್ಗೆ ತಪ್ಪು ಕಲ್ಪನೆಯನ್ನೇ ಉಳಿದವರು ಹೊಂದಿರುತ್ತಾರೆ.  ಗಂಡಸರೆಲ್ಲಾ ಹೀಗೇ! ಹುಟ್ಟು ಗುಣ ಸುಟ್ಟರೂ ಹೋಗೋದಿಲ್ಲ!!

ಈ ವಿಷಯ ಅಚ್ಚರಿ ಮೂಡಿಸಿತೇ? ಸಾಮಾನ್ಯವಾಗಿ ಮಹಿಳೆಯರ ದೃಷ್ಟಿಯಲ್ಲಿ ಪುರುಷರು ತಮ್ಮ ಮಾತಿಗೆ ಬದ್ಧರಾಗುವುದಿಲ್ಲ. ಆದರೆ ವಾಸ್ತವವಾಗಿ ಹೆಚ್ಚಿನ ಪುರುಷರು ತಮ್ಮ ಮಾತಿಗೆ ಬದ್ದತೆಯನ್ನು ವ್ಯಕ್ತಪಡಿಸುತ್ತಾರೆ. ಮಹಿಳೆಯರು ತಿಳಿದಿರುವ ಪ್ರಕಾರ ಪುರುಷರು ಮಹಿಳೆಯರ ಕೇವಲ ಅಂಗಸೌಷ್ಟವವನ್ನೇ ಮೆಚ್ಚುತ್ತಾರೆ.   ಕಾಲ ಬದಲಾಗಿದೆ, ಪುರುಷರ ಆಲೋಚನೆಗಳೂ ಬದಲಾಗಿವೆ!

ಆದರೆ ವಾಸ್ತವವಾಗಿ ಮಹಿಳೆಯರ ಸೌಂದರ್ಯ ಕೇವಲ ಆಸ್ವಾದನೆಗಷ್ಟೇ ಹೊರತು ಇವರು ಗೃಹಿಣಿಯರನ್ನು ಹೆಚ್ಚು ಇಷ್ಟಪಡುತ್ತಾರೆ. ಇದೇ ರೀತಿ ಎಷ್ಟೋ ವಿಷಯಗಳಲ್ಲಿ ಪುರುಷರ ಬಗ್ಗೆ ತಪ್ಪು ಅಭಿಪ್ರಾಯಗಳನ್ನೇ ಹೆಚ್ಚಿನವರು ಹೊಂದಿದ್ದಾರೆ. ಬನ್ನಿ, ಪುರುಷರ ಬಗ್ಗೆ ಕೆಲವು ಸತ್ಯಸಂಗತಿಗಳನ್ನು ನೋಡೋಣ...    

ವಾಸ್ತವಾಂಶ #1

ವಾಸ್ತವಾಂಶ #1

ಯಾವಾಗ ಮಹಿಳೆಯೊಬ್ಬರು ಪುರುಷನಲ್ಲಿ ಆಸಕ್ತಿ ತೋರಿದಳೋ, ಆಗ ಯಾವುದೇ ಪುರುಷನಾದರೂ ಆಕೆಗೆ ಸಹಾಯ ಮಾಡುವುದರಲ್ಲಿ ಹಿಂದೆ ನೋಡುವುದಿಲ್ಲ. ಒಂದು ವೇಳೆ ಓರ್ವ ಮಹಿಳೆ ಪುರುಷನೊಬ್ಬನನ್ನು ಇಷ್ಟ ಪಡುತ್ತಿದ್ದರೆ ಮತ್ತು ಈ ವಿಷಯವನ್ನು ಹೇಳಲು ಅಂಜಿಕೊಳ್ಳುತ್ತಿದ್ದರೆ ಅಳುಕಿಲ್ಲದೇ ಹೇಳಿಬಿಡುವುದು ಉತ್ತಮ.

ವಾಸ್ತವಾಂಶ #2

ವಾಸ್ತವಾಂಶ #2

ಸಾಮಾನ್ಯವಾಗಿ ಪುರುಷರು ಎರಡು ವಿಧದ ಮಹಿಳೆಯರನ್ನು ಇಷ್ಟಪಡುತ್ತಾರೆ. ಮಹಿಳೆಯರಿಗೆ ಈ ಪರಿ ಇಷ್ಟವಾಗುತ್ತದೋ ಇಲ್ಲವೋ, ಪುರುಷರಿಗೆ ಒಂದೇ ಅತ್ಯಾಕರ್ಷಕವಾಗಿ ಕಾಣಬೇಕು ಅಥವಾ ಮನೆಯನ್ನು ಬೆಳಗುವ ಗೃಹಿಣಿಯಾಗಿರಬೇಕು.

ವಾಸ್ತವಾಂಶ #3

ವಾಸ್ತವಾಂಶ #3

ಸಾಮಾನ್ಯವಾಗಿ ಬಾಹ್ಯ ಆಕರ್ಷಣೆಗೆ ತಾತ್ಕಾಲಿಕವಾಗಿ ಆಕರ್ಷಿತರಾದರೂ ಪುರುಷರು ಅಂತಿಮವಾಗಿ ಮನೆಯನ್ನು ಬೆಳಗುವ ಗೃಹಿಣಿಯರ ಕಡೆಗೇ ವಾಲುತ್ತಾರೆ. ಇವರು ತಮ್ಮನ್ನು ಪ್ರೀತಿಸುವ, ತಮ್ಮ ಬಗ್ಗೆ ಕಾಳಜಿ ತೋರುವ ಮಹಿಳೆಯರನ್ನೇ ಹೆಚ್ಚು ಇಷ್ಟಪಡುತ್ತಾರೆ.

ವಾಸ್ತವಾಂಶ #4

ವಾಸ್ತವಾಂಶ #4

ಮಹಿಳೆಯರ ಅಂಗಸೌಷ್ಟವವನ್ನು ಪುರುಷರು ಹೆಚ್ಚಾಗಿ ಇಷ್ಟಪಡುತ್ತಾರಾದರೂ ಜೀವನಸಂಗಾತಿಯಾಗಿ ಆಯ್ಕೆಮಾಡಲು ಇದನ್ನು ಮಾನದಂಡವಾಗಿ ಬಳಸುವುದಿಲ್ಲ. ಜೀವನಸಂಗಾತಿಯಲ್ಲಿ ಇವರು ಜೀವನವನ್ನು ಎದುರಿಸುವ ಗುಣಗಳನ್ನೇ ಬಯಸುತ್ತಾರೆ.

 ವಾಸ್ತವಾಂಶ #5

ವಾಸ್ತವಾಂಶ #5

ಹೌದು, ವಾಸ್ತವದಲ್ಲಿ ಹೆಚ್ಚಿನ ಪುರುಷರು ತಮ್ಮ ಮಾತಿಗೆ ಬದ್ಧರಾಗಿರುತ್ತಾರೆ. ಸಮಯ ಬಂದಾಗ ಈ ಬದ್ಧತೆಯನ್ನು ಸಾಬೀತು ಸಹಾ ಪಡಿಸುತ್ತಾರೆ. ಪುರುಷರ ರಕ್ತದಲ್ಲಿ ಸೇರುವ ಕೆಲವು ಹರ್ಮೋನುಗಳು ಮತ್ತು ಕೆಲವು ಭಾವನಾತ್ಮಕ ಸ್ಥಿತಿಗಳು ಪುರುಷರನ್ನು ನಿಷ್ಠಾವಂತ ಹಾಗೂ ಬದ್ಧತೆಯುಳ್ಳವರನ್ನಾಗಿಸುತ್ತದೆ.

 
Read more about: relationship
English summary

Some Truths About Men!!

Well, women think men can't commit. False. Men can commit. Women think men run after only physical beauty. False. Men value homely women more. This way, there are so many areas in which men get misunderstood. Read on to know about some truths about men...
Subscribe Newsletter