ಗಂಡಸರಲ್ಲಿ ಇಂತಹ ಗುಣಗಳೆಲ್ಲಾ ಸ್ವಾಭಾವಿಕ! ಆದರೆ....

By: Arshad
Subscribe to Boldsky

ಕಾಮನೆಗಳು ಪ್ರತಿಯೊಬ್ಬರಲ್ಲಿಯೂ ಬೇರೆ ಬೇರೆಯ ತರಹವಾಗಿದ್ದು ಈ ಜಗತ್ತಿನ ವ್ಯಾಪಾರವೆಲ್ಲವೂ ಈ ಕಾಮನೆಯನ್ನು ಆಧರಿಸಿದೆ. ವಿಶೇಷವಾಗಿ ಪುರುಷರಲ್ಲಿ ಕಾಮನೆಗಳು ದೈಹಿಕ ಮತ್ತು ಮಾನಸಿಕ ರೂಪದಲ್ಲಿದ್ದು ವಯಸ್ಸಿಗನುಗುಣವಾಗಿ ಬದಲಾಗುತ್ತಾ ಇರುತ್ತವೆ.

ಒಂದು ಸಂಶೋಧನೆಯ ಪ್ರಕಾರ ಹದಿಹರೆಯದ ಕಡೆಯ ವರ್ಷಗಳಿಂದ ಸುಮಾರು ಇಪ್ಪತ್ತೈದು ವರ್ಷಗಳವರೆಗೆ ಈ ಕಾಮನೆಗಳಲ್ಲಿ ಕಾಮರೂಪದವು ಹೆಚ್ಚಿನ ಪ್ರಾಮುಖ್ಯತೆ ಪಡೆದಿರುತ್ತವೆ. ಆದರೆ ಪುರುಷರಲ್ಲಿ ಈ ಕಾಮನೆಗಳು ಇತರ ವರ್ಷಗಳಲ್ಲಿ ಕಡಿಮೆಯಾಗುತ್ತವೆಯೇ ಹೊರತು ಇಲ್ಲವಾಗುವುದಿಲ್ಲ. ಮದುವೆ ಮುಂಚೆ, ಇವೆಲ್ಲಾ ಸಂಗತಿ ನಿಮಗೆ ತಿಳಿದಿರಲಿ

ಈ ಅಗತ್ಯತೆಯನ್ನು ಕಂಡುಕೊಂಡೇ ಜಾಹೀರಾತು ಜಗತ್ತಿನಲ್ಲಿ ಪುರುಷರ ಬಳಕೆಯ ವಸ್ತುಗಳಿಗೆ ಮಹಿಳೆಯನ್ನೇ ರೂಪದರ್ಶಿಯಾಗಿ ಬಳಸಲಾಗುತ್ತದೆ. ವಾಸ್ತವವಾಗಿ ಪುರುಷರಿಗೆ ದೈಹಿಕ ಕಾಮನೆ ಮೂಡಲು ಮೊದಲು ಮೆದುಳಿನಲ್ಲಿ ಮಹಿಳೆಯ ಬಗ್ಗೆ ಕಲ್ಪನೆ ಮೂಡಬೇಕು. ಬಳಿಕವೇ ನಿಸರ್ಗದ ಶಕ್ತಿ ದೇಹದ ಇತರ ಭಾಗಗಳಲ್ಲಿಯೂ ಪಸರಿಸಿ ಭಾವನೆಯ ಉತ್ಕಟತೆಗೆ ತಲುಪಲು ಸಾಧ್ಯ. ಗರ್ಲ್ ಫ್ರೆಂಡ್‍ ಹತ್ತಿರ ಹೀಗೆಲ್ಲಾ ಹೇಳಬೇಡಿ, ಆಕೆಗೆ ಆಗ್ಬರಲ್ಲ!

ಈ ಬಗ್ಗೆ ಹೆಚ್ಚಿನವರು ತಪ್ಪು ತಿಳಿದುಕೊಂಡಿದ್ದು ಹೆಣ್ಣನ್ನು ನೋಡಿದಾಕ್ಷಣ ಸೊಂಟದ ಭಾಗದಲ್ಲಿ ಬಿಗು ಬರುವುದು ಕಾಮುಕತನದ ಪ್ರತೀಕ ಎಂದು ನಂಬಿದ್ದಾರೆ. ಬನ್ನಿ, ಈ ತಪ್ಪು ಕಲ್ಪನೆಗಳ ಬಗ್ಗೆ ಕೆಲವು ಮಾಹಿತಿಗಳನ್ನು ನೋಡೋಣ...

ಮಾಹಿತಿ #1

ಮಾಹಿತಿ #1

ಹೆಚ್ಚಿನ ಮಹಿಳೆಯರು ಪುರುಷರ ಬಗ್ಗೆ ಹೊಂದಿರುವ ಸಮಾನ ಅಭಿಪ್ರಾಯವೆಂದರೆ ಪುರುಷರೆಲ್ಲರೂ ಸದಾ ಕಾಲ ಕಾಮದ ಬಗ್ಗೆಯೇ ಯೋಚಿಸುತ್ತಿರುತ್ತಾರೆ ಎಂಬುದು. ವಾಸ್ತವವಾಗಿ 18-24 ರ ವಯಸ್ಸಿನಲ್ಲಿರುವ ಕೆಲವು ತರುಣರಲ್ಲಿ ಮಾತ್ರ ಈ ಪರಿ ಹೆಚ್ಚಾಗಿ ಕಂಡುಬರುತ್ತದೆ. ಯಾವಾಗ ಈ ವ್ಯಕ್ತಿಗಳು ದಾಂಪತ್ಯದ ಸವಿ ಸವಿಯುತ್ತಾರೋ ಬಳಿಕ ಜೀವನದಲ್ಲಿ ಹೆಚ್ಚಿನದನ್ನು ಸಾಧಿಸುವತ್ತ ಗಮನ ಹರಿಸುತ್ತಾರೆ.

ಮಾಹಿತಿ #1

ಮಾಹಿತಿ #1

ಆದರೆ ಹೆಚ್ಚಿನ ಪುರುಷರು ಎದುರಿನ ಮಹಿಳೆಯರತ್ತ ಗೌರವಯುಕ್ತ ನೋಟ ಬೀರಿದರೂ ಹೆಚ್ಚಿನ ಮಹಿಳೆಯರಿಗೆ ಇದು 'ಸದಾಶಿವನಿಗೆ ಸದಾ ಅದೇ ಧ್ಯಾನ' ಎಂದೇ ಅನ್ನಿಸುತ್ತದೆ.

ಮಾಹಿತಿ #2

ಮಾಹಿತಿ #2

ಹೌದು, ತಮ್ಮಿಂದ ತಮ್ಮ ಪತ್ನಿಗೆ ನಿಜವಾಗಿಯೂ ಸಂತೃಪ್ತಿ ಸಿಕ್ಕಿದೆ ಎಂದು ಅನ್ನಿಸಿದಾಗ ಪ್ರತಿ ಪುರುಷರೂ ಸಾರ್ಥಕತೆಯ ಸಂತೋಷ ಅನುಭವಿಸುತ್ತಾರೆ. ನಿಜಜೀವನದಲ್ಲಿ ಇತರ ವಿಷಯದಲ್ಲಿ ಎರಡನೆಯ ಸ್ಥಾನ ಪಡೆದರೂ ವಿಚಲಿತರಾಗದ ಪುರುಷರು ಸಂಸರ್ಗದಲ್ಲಿ ಮಾತ್ರ ಸೋಲನ್ನು ಅನುಭವಿಸುವುದನ್ನು ಸುತಾರಾಂ ಒಪ್ಪುವುದಿಲ್ಲ. ಪುರುಷರ ಆತ್ಮಾಭಿಮಾನಕ್ಕೂ ಆತನ ಪೌರುಷಕ್ಕೂ ನಿಕಟ ಸಂಬಂಧವಿರುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ.

ಮಾಹಿತಿ #3

ಮಾಹಿತಿ #3

ಪ್ರತಿ ಪುರುಷನೂ ತನ್ನ ಜೀವಮಾನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಸುಂದರ (ಆತನಿಗೆ ಸುಂದರವಾಗಿ ಕಂಡ) ಮಹಿಳೆಯಿಂದ ಮೆಚ್ಚುಗೆಯನ್ನು ಪಡೆಯಲು ಉತ್ಸುಕನಾಗಿರುತ್ತಾನೆ. ಇದು ಪ್ರತಿಯೊಬ್ಬರಲ್ಲಿಯೂ ಅವ್ಯಕ್ತವಾಗಿ ಅಡಗಿರುತ್ತದೆ.

ಮಾಹಿತಿ #3

ಮಾಹಿತಿ #3

ಇದನ್ನು ಪಡೆಯಲು ಹೆಚ್ಚಿನ ಪುರುಷರು ಅನುಸರಿಸುವ ವಿಧಾನಗಳೆಂದರೆ ದೇಹದ ಮಾಂಸಖಂಡಗಳನ್ನು ಹುರುಗಟ್ಟಿಸುವುದು, ಯಾವುದಾದರೊಂದು ವಿಷಯದಲ್ಲಿ ನೈಪುಣ್ಯತೆ ಸಾಧಿಸುವುದು, ಸುಂದರನಾಗಿ ಕಾಣುವುದು ಒಟ್ಟಾರೆ ಮಹಿಳಾಮಣಿಗಳು ಮೆಚ್ಚಿದರೆ ಸಾಕು...!

ಮಾಹಿತಿ #4

ಮಾಹಿತಿ #4

ಹೆಚ್ಚಿನ ಪುರುಷರು ಮಹತ್ವಾಕಾಂಕ್ಷಿಗಳಾಗಿದ್ದು ತಮ್ಮ ಜೀವನದಲ್ಲಿ ಸಾಧಿಸಬೇಕಾದ ಗುರಿಯತ್ತ ತಲುಪಲು ತಮ್ಮೆಲ್ಲಾ ಶಕ್ತಿಯನ್ನು ವಿನಿಯೋಗಿಸುತ್ತಾರೆ. ಆದರೆ ಯಾವಾಗ ತಮ್ಮ ಸಂಗಾತಿಯನ್ನು ಮೆಚ್ಚಿಸಲು ಅಥವಾ ಸಂತೃಪ್ತಿಪಡಿಸಲು ವಿಫಲರಾಗುತ್ತಾರೋ ಆಗ ಜೀವನದ ಎಲ್ಲಾ ಗುರಿಗಳೂ ನಿಕೃಷ್ಟವೆಂಬ ನಿರ್ಧಾರಕ್ಕೆ ಬರುತ್ತಾರೆ.

 
English summary

Secrets About Men's Physical Needs

Even men get frustrated when they come across myths and misconceptions about their desires. Of course, most of such myths are nothing but attempts to generalise all men and their libido. Though many people think that a man's drive is totally in his pants, the fact is that his drive and desire come from his brain. In fact, a man can even experience orgasm by thinking about a beautiful woman. Now, here are some more facts that can explain more about a man's needs and desire.
Story first published: Thursday, December 15, 2016, 23:45 [IST]
Please Wait while comments are loading...
Subscribe Newsletter