ಆಕೆಗಿಂತ ಒಳ್ಳೆಯ ಹುಡುಗಿ, ನಿಮಗೆ ಸಿಕ್ಕೇ ಸಿಗುತ್ತಾಳೆ...!!

By: manu
Subscribe to Boldsky

ಯೌವನದಲ್ಲಿ ಒಂದು ಸಂಬಂಧದಲ್ಲಿ ಸಿಲುಕಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಯಾಕೆಂದರೆ ಈ ಸಮಯದಲ್ಲಿ ಯಾರಾದರೊಬ್ಬರು ತನ್ನ ಜತೆಗಿರಬೇಕು ಮತ್ತು ಭಾವನೆಗಳನ್ನು ಹಂಚಿಕೊಳ್ಳಬೇಕೆಂದು ಅನಿಸುವುದು ಸಹಜ. ಇಂತಹ ಸಮಯದಲ್ಲಿ ಪ್ರೀತಿ ಮೂಡುತ್ತದೆ. ಈ ಪ್ರೀತಿಯನ್ನು ಉಳಿಸಿಕೊಳ್ಳಲು ನಮಗೆ ಏನೆಲ್ಲಾ ಸಾಧ್ಯವೋ ಅದನ್ನು ಮಾಡುತ್ತೇವೆ. 

 Signs She Lost Interest In You!
 

ಯಾಕೆಂದರೆ ಇದು ಮೊದಲ ಪ್ರೀತಿ. ಮೊದಲ ಪ್ರೇಮವು ಕೊನೆಯ ತನಕ ಉಳಿದುಕೊಳ್ಳಬೇಕೆಂಬುವುದೇ ಇಚ್ಛೆಯಾಗಿರುತ್ತದೆ. ಆದರೆ ಕೆಲವೊಂದು ಸಲ ನಿಮ್ಮ ಸಂಗಾತಿಗೆ ಈ ಸಂಬಂಧವು ಬೇಸರ ಮೂಡಿಸಿರುತ್ತದೆ. ಇದರಿಂದ ಹೊರಗೆ ಹೋಗಬೇಕು ಎಂದು ಅನಿಸುವುದಿದೆ. ತುಂಬಾ ಸಮಯ ಈ ಸಂಬಂಧದಲ್ಲಿ ಮುಂದುವರಿಯುವ ಬದಲು ಒಂದು ನಿರ್ಧಾರಕ್ಕೆ ಬರುವುದು ಮುಖ್ಯ ಎಂದು ಆಕೆಗೆ ಅನಿಸಿರಬಹುದು.      ಹುಡುಗಿಯರನ್ನು ಹೆಚ್ಚು ನಂಬಬೇಡಿ, ಮೋಸ ಮಾಡಿ ಬಿಡುತ್ತಾರೆ!  

 

 Signs She Lost Interest In You!

ಗೆಳತಿಯು ನಿಮ್ಮ ಮೇಲೆ ಆಸಕ್ತಿ ಕಳೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆಕೆ ಒಳ್ಳೆಯವಳು ಅಥವಾ ಕೆಟ್ಟವಳು ಎಂದು ಇದರಿಂದ ನೀವು ಪರಿಗಣಿಸುವಂತಿಲ್ಲ. ನಿಮ್ಮಲ್ಲಿ ಆಕೆಗೆ ಆಸಕ್ತಿಯಿಲ್ಲವೆನ್ನುವುದಕ್ಕೆ ಕೆಲವು ಸುಳಿವುಗಳು ಇಲ್ಲಿವೆ.

ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಆಕೆ ನಿಮ್ಮ ಸನಿಹಕ್ಕೆ ಬರುತ್ತಿದ್ದಳು. ನಿಮ್ಮನ್ನು ತಬ್ಬಿಕೊಂಡು ನಿಮ್ಮ ಸ್ಪರ್ಶವೇ ಆಕೆಗೆ ಬೇಕೆನ್ನುವಂತೆ ಮಾಡುತ್ತಲಿದ್ದಳು. ಆದರೆ ಇತ್ತೀಚಿನ ದಿನಗಳಲ್ಲಿ ಆಕೆ ಖಾಸಗಿಯಾಗಿಯೂ ಕೈ ಹಿಡಿಯಲು ಬಿಡುತ್ತಿಲ್ಲ, ಸರಿಯೇ? ಆಕೆಗೆ ನಿಮ್ಮ ಮೇಲಿನ ಆಸಕ್ತಿ ಕಡಿಮೆಯಾಗುತ್ತಾ ಇದೆ. 

 Signs She Lost Interest In You!
 

ಹೌದು, ಆಕೆ ಆಸಕ್ತಿ ಕಳೆದುಕೊಳ್ಳುತ್ತಾ ಇದ್ದಾಳೆ. ಇದಕ್ಕೆ ಆಕೆಯನ್ನು ದೂರಬಾರದು. ಯಾಕೆಂದರೆ ನೀವು ಏನಾದರೂ ತಪ್ಪು ಮಾಡಿರಬಹುದು. ಈಗ ಅದನ್ನು ತಿದ್ದಿಕೊಳ್ಳುವ ಸಮಯ ಬಂದಿದೆ. ಹಿಂದೆಲ್ಲಾ ನೀವು ಹೇಳಿದ್ದಕ್ಕೆಲ್ಲಾ ತಲೆಯಾಡಿಸುತ್ತಾ ಇದ್ದಳು. ಆದರೆ ಹೀಗೀಗ ನಿಮ್ಮ ಪ್ರತಿಯೊಂದು ಮಾತಿಗೆ ಎದುರು ಉತ್ತರ ನೀಡುತ್ತಾಳೆ. ಆಕೆಗೆ ಏನಾಗಿದೆ? ಆಕೆಯ ಆಸಕ್ತಿ ಕಡಿಮೆಯಾಗುತ್ತಿದೆ.  ಹೆಣ್ಣಿನ ಮನಸ್ಸು, ಗಾಳಿಯಲ್ಲಿ ತೇಲುತ್ತಿರುವ ಗಾಳಿಪಟದಂತೆ!  

 Signs She Lost Interest In You!
 

ಪ್ರೀತಿ ಮೂಡಿದ ಆರಂಭದಲ್ಲಿ ಆಕೆಗೆ ಭೂಮಿ ಮೇಲೆ ನಿಮಗಿಂತ ಸುಂದರವಾದ ವ್ಯಕ್ತಿ ಬೇರೆ ಯಾರೂ ಇರಲಿಲ್ಲ. ಆದರೆ ಈಗ ಕಚೇರಿಗೆ ಸೇರಿದ ಹೊಸ ಸುಂದರ ಹುಡುಗನ ಬಗ್ಗೆ ಆಕೆ ಮಾತನಾಡುತ್ತಿರುತ್ತಾಳೆ. ಆತ ಎಷ್ಟು ಬುದ್ಧಿವಂತ ಎನ್ನುವ ಬಗ್ಗೆ ಮಾತು ಬರುತ್ತದೆ.

ಆದರೆ ಆಕೆ ನಿಜವಾಗಿಯೂ ಆತನ ಸೌಂದರ್ಯದ ಬಗ್ಗೆ ಮಾತನಾಡುತ್ತಿರುತ್ತಾಳೆ. ಆಕೆಗೆ ನಿಮ್ಮ ಮೇಲಿನ ಆಸಕ್ತಿ ಕಡಿಮೆಯಾಗುತ್ತಾ ಇದೆ. ಇದು ಆಕೆಯ ತಪ್ಪಲ್ಲ. ಯಾಕೆಂದರೆ ಮಹಿಳೆಯರಿಗೆ ಪ್ರೀತಿ ಬೇಕಿರುತ್ತದೆ. ಪುರುಷರು ಇದನ್ನು ನೀಡಲು ವಿಫಲರಾದಾಗ ಹೀಗೆ ಆಗುತ್ತದೆ. ಏನೇ ಹೇಳಿ, ಹೆಣ್ಣಿನ ಮನಸ್ಸು ಮೀನಿನ ಹೆಜ್ಜೆಗೂ ಮೀರಿದ್ದು!  

 Signs She Lost Interest In You!
 

ಭವಿಷ್ಯ ಹಾಗೂ ಮುಂದೆ ಹೋಗಬಹುದಾದ ಪ್ರವಾಸಿ ತಾಣಗಳ ಬಗ್ಗೆ ಮಾತನಾಡುವಾಗ ಅದರಲ್ಲಿ ಆಕೆ ನಿಮ್ಮನ್ನು ಕೂಡ ಸೇರಿಸಿಕೊಳ್ಳುತ್ತಾ ಇದ್ದಳು. ಆದರೆ ಹೀಗೀಗ ಆಕೆ ಕೇವಲ ಒಬ್ಬಳೇ ಇದರಲ್ಲಿರುತ್ತಾಳೆ. ಆಕೆ ಸಂಬಂಧದಿಂದ ಒಂದು ವಿರಾಮ ಬೇಕೆಂದು ಅನಿಸಿದಾಗ ಆಕೆ ಒಬ್ಬಳೇ ಪ್ರವಾಸ ಮಾಡಬಹುದು.

ನಿಮ್ಮನ್ನು ಬಿಟ್ಟು ಒಂದು ಕ್ಷಣವೂ ಇರಲಾರೆ ಎನ್ನುವಂತೆ ಇದ್ದ ನಿಮ್ಮ ಗೆಳತಿ ಹಠಾತ್ ಆಗಿ ಕಚೇರಿಯ ಸಹೋದ್ಯೋಗಿಗಳೊಂದಿಗೆ ಅಥವಾ ಗೆಳತಿಯರೊಂದಿಗೆ ಸಮಯ ಕಳೆಯುತ್ತಾಳೆ. ಇದರರ್ಥ ಆಕೆಗೆ ನಿಮ್ಮ ಮೇಲೆ ಆಸಕ್ತಿ ಇಲ್ಲ ಎನ್ನುವುದು. 

 Signs She Lost Interest In You!
 

ಹಿಂದೆ ನೀವು ಏನೇ ಮಾಡಿದರೂ ಆಕೆಗೆ ನಿಮ್ಮನ್ನು ಹೀರೋ ರೀತಿ ಬಣ್ಣಿಸುತ್ತಾ ಇದ್ದಳು. ಆದರೆ ಇತ್ತೀಚಿನ ದಿನಗಳಲ್ಲಿ ಆಕೆ ಟೀಕಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾಳೆ. ಮಾತನಾಡುವುದನ್ನು ಕಡಿಮೆ ಮಾಡುತ್ತಾಳೆ. ನಿಮ್ಮಿಬ್ಬರ ಸಂಬಂಧದ ಸೌಂದರ್ಯವು ಕಡಿಮೆಯಾಗಿದೆ ಎನ್ನುವುದು ಇದರರ್ಥ. ನಿಮ್ಮ ಬಗ್ಗೆ ಅರಿತುಕೊಂಡು ಎಲ್ಲಿ ತಪ್ಪಾಗಿದ ಎಂದು ಅರ್ಥ ಮಾಡಿಕೊಳ್ಳಿ. 

 Signs She Lost Interest In You!
 

ಬೇರೆಯವರನ್ನು ದೂಷಿಸಿ ಪ್ರಯೋಜನವಿಲ್ಲ. ಆಕೆಯ ಇಚ್ಛೆಯಂತೆ ಬದುಕಲು ಬಿಡಿ ಮತ್ತು ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ. ನಿಮ್ಮ ತಪ್ಪು ಇಲ್ಲದೆ ಇದ್ದರೆ ಆಕೆಗಿಂತ ಒಳ್ಳೆಯ ಹುಡುಗಿ ನಿಮ್ಮ ಜೀವನದಲ್ಲಿ ಬರಲಿದ್ದಾಳೆ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳಿ. ಆಕೆಯ ಮೇಲೆ ಒತ್ತಡ ಹೇರಿ ಸಂಬಂಧದಲ್ಲಿ ಉಳಿಸಿಕೊಳ್ಳುವುದು ಸರಿಯಲ್ಲ.

English summary

Signs She Lost Interest In You!

Anything can happen. We can't simply take relationships for granted. Your girlfriend may find you boring, she might feel like moving on or she might even feel like cheating you. You need to be aware of such situations so that you will be able to analyse the situation on time instead of living in darkness for long.
Please Wait while comments are loading...
Subscribe Newsletter