Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಹೆಣ್ಣಿನ ಮನಸ್ಸು, ಗಾಳಿಯಲ್ಲಿ ತೇಲುತ್ತಿರುವ ಗಾಳಿಪಟದಂತೆ!
ನೀರಿನಲ್ಲಿ ಮೀನಿನ ದಾರಿ ಮತ್ತು ಮಹಿಳೆಯ ಮನಸ್ಸನ್ನು ತಿಳಿಯಲು ಸಾಧ್ಯವಿಲ್ಲ ಎನ್ನುವ ಮಾತಿದೆ. ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಅದು ಗಾಳಿಯಲ್ಲಿ ತೇಲುತ್ತಿರುವ ಗಾಳಿಪಟದಂತೆ! ದಾರ ಮಾತ್ರ ಗಾಳಿಪಟ ಬಿಡುವವನ ಕೈಯಲ್ಲಿ ಇದ್ದರೂ ಅದು ಗಾಳಿಯಲ್ಲಿ ತನಗೆ ಬೇಕಾದಂತೆ ತೇಲುತ್ತಾ ಇರುತ್ತದೆ. ಪುರುಷರಿಗೆ ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ತಪಸ್ಸನ್ನೇ ಮಾಡಬೇಕು. ಏನೇ ಹೇಳಿ, ಹೆಣ್ಣಿನ ಮನಸ್ಸು ಮೀನಿನ ಹೆಜ್ಜೆಗೂ ಮೀರಿದ್ದು!
ಯಾಕೆಂದರೆ ಮಹಿಳೆಗೆ ತನಗೆ ಏನು ಬೇಕೆಂದು ಆಕೆಗೆ ತಿಳಿದಿರುವುದಿಲ್ಲ. ಕೆಲವೊಂದು ಸಲ ಇತರ ಪುರುಷರು ತಮ್ಮ ಸಂಗಾತಿಗೆ ಏನು ಮಾಡುತ್ತಾರೆಂದು ನೀವು ನೋಡುತ್ತಿರಬಹುದು. ಆದರೆ ಇದರ ಬಗ್ಗೆ ನೀವು ಗಂಭೀರವಾಗಿ ಗಮನಹರಿಸಿರಲಿಕ್ಕಿಲ್ಲ. ಈ ಲೇಖನದಲ್ಲಿ ಮಹಿಳೆಯರು ನಿಜವಾಗಿಯೂ ಸಂಬಂಧದಲ್ಲಿ ಬದ್ಧತೆಯನ್ನು ಪ್ರದರ್ಶಿಸಿದ ಬಳಿಕ ಏನು ಬಯಸುತ್ತಾರೆ ಎನ್ನುವುದನ್ನು ಹೇಳಲಿದ್ದೇವೆ. ಇದನ್ನು ತಿಳಿದುಕೊಳ್ಳಲು ಮುಂದಕ್ಕೆ ಓದಿ...

ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಆಕೆ ಮೊದಲ ಸ್ಥಾನದಲ್ಲಿರಬೇಕು
ಇದು ಅತಿಯಾಯಿತೆಂದು ನಿಮಗೆ ಅನಿಸಬಹುದು. ಆದರೆ ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಆಕೆಗೆ ಮೊದಲ ಸ್ಥಾನವಿರಬೇಕು. ದಿನದ 24 ಗಂಟೆಯೂ ಆಕೆಗೆ ಗಮನ ನೀಡುತ್ತಿರಬೇಕೆಂದು ಬಯಸುತ್ತಾಳೆ. ಸಂಬಂಧಕ್ಕೆ ನೀವು ಹೆಚ್ಚಿನ ಪ್ರಾತಿನಿಧ್ಯತೆ ನೀಡುತ್ತಿಲ್ಲವೆಂಬ ಭಾವನೆಯೂ ಆಕೆಯಲ್ಲಿ ಮೂಡಿದರೆ ನೀವು ಆಕೆಯನ್ನು ಕಳೆದುಕೊಳ್ಳಲಿದ್ದೀರಿ.

ಆಕೆಯ ಮಾತನ್ನು ಕೇಳಬೇಕು
ಹೆಚ್ಚಿನ ಪುರುಷರು ಅತಿಯಾಗಿ ದ್ವೇಷಿಸುವ ವಿಷಯವೆಂದರೆ ಇದು. ಆಕೆಯ ಮಾತನ್ನು ಯಾವಾಗಲೂ ಕೇಳುತ್ತಿರಬೇಕೆಂದು ಮಹಿಳೆ ಬಯಸುತ್ತಾ ಇರುತ್ತಾಳೆ. ಸಂಬಂಧವು ಉಳಿಯಬೇಕೆಂದರೆ ನಿಮಗೆ ಎಷ್ಟೇ ಆಯಾಸವಾಗಿದ್ದರೂ ಆಕೆಯ ಮಾತನ್ನು ಕೇಳಲೇಬೇಕು.

ಆಕೆಗೆ ಸುರಕ್ಷಿತ ಭಾವನೆಯಾಗಬೇಕು
ಪುರುಷರ ತೋಳಿನಲ್ಲಿ ಮಹಿಳೆಯರು ಯಾವಾಗಲೂ ತುಂಬಾ ಸುರಕ್ಷಿತ ಭಾವನೆಯಲ್ಲಿರುತ್ತಾರೆ. ಹಠಾತ್ ಆಗಿ ನಿಮ್ಮನ್ನು ತಬ್ಬಿಕೊಂಡರೆ ಆಗ ಬೆಚ್ಚಿಬೀಳಬೇಡಿ. ಯಾಕೆಂದರೆ ಈ ರೀತಿಯಲ್ಲಿ ಆಕೆ ಸಂಬಂಧದಲ್ಲಿ ತುಂಬಾ ಸುರಕ್ಷಿತವಾಗಿದ್ದೇನೆಂದು ಭಾವಿಸುತ್ತಾಳೆ.

ಆಕೆಗೆ ಮೌಲ್ಯ ನೀಡಬೇಕು ಮತ್ತು ಪ್ರಶಂಸೆ ಮಾಡಬೇಕು
ನಿಮಗೆ ಇಷ್ಟವಾಗಿರುವಂತಹ ಅಡುಗೆ ಮಾಡಲು ಹೆಚ್ಚಿನ ಶ್ರಮ ಮತ್ತು ನೀವು ಮಾಡುವಂತಹ ಯಾವುದೇ ಕೆಲಸದಲ್ಲಿ ಆಕೆ ಕೈಜೋಡಿಸಲು ಮುಂದೆ ಬರುವುದು ತನ್ನ ಸಂಗಾತಿಯು ಪ್ರಶಂಸೆ ಮಾಡಲೆಂದು. ಇದರಿಂದ ಆಕೆಗೆ ವಿಶೇಷ ಮತ್ತು ಮೌಲ್ಯಯುತವಾಗಿದ್ದೇನೆಂಬ ಭಾವನೆಯಾಗುತ್ತದೆ.

ರೋಮ್ಯಾನ್ಸ್ ಬೇಕಾಗಿದೆ
ಇದನ್ನು ಪ್ರತಿಯೊಬ್ಬ ಮಹಿಳೆಯರು ಬಯಸುತ್ತಾ ಇರುತ್ತಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತಾರೆ ಮತ್ತು ಎಲ್ಲಾ ಸಮಯದಲ್ಲೂ ಇದನ್ನು ಬಯಸುತ್ತಾರೆ. ಸಂಗಾತಿಗೆ ತುಂಬಾ ವಿಶೇಷ ಮತ್ತು ಪ್ರೀತಿಯನ್ನು ತೋರಿಸುವುದು ಅದು ನಿಮ್ಮಿಂದಲೇ ಬರಬೇಕಾಗಿದೆ.



Click it and Unblock the Notifications
