Latest Updates
-
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್!
ಹುಡುಗಿಯರನ್ನು ಹೆಚ್ಚು ನಂಬಬೇಡಿ, ಮೋಸ ಮಾಡಿ ಬಿಡುತ್ತಾರೆ!
ಪ್ರೀತಿ ಮಾಯೆ ಹುಷಾರು ಎನ್ನುವ ಹಾಡನ್ನು ನೀವು ಕೇಳಿರಬಹುದು. ಪ್ರೀತಿ ಎನ್ನುವುದು ನಿಜವಾಗಿಯೂ ಮಾಯೆ! ಅದರ ನಂಟನ್ನು ಬಿಡಿಸಲು ಹೋದಷ್ಟು ಅದು ಕಗ್ಗಂಟಾಗುತ್ತಾ ಹೋಗುತ್ತದೆ. ಇದರ ಬಗ್ಗೆ ಆಲೋಚಿಸಿ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಆದರೆ ಉತ್ತರ ಮಾತ್ರ ಸಿಗುವುದು ಕಷ್ಟ. ಇಂತಹ ಸಂದರ್ಭದಲ್ಲಿ ನೀವು ತುಂಬಾ ತಾಳ್ಮೆ ವಹಿಸಿ ಅದರ ಬಗ್ಗೆ ಚಿಂತಿಸಬೇಕಾಗಿದೆ.
ನಿಮ್ಮ ಪ್ರೀತಿ ದೂರವಾದಾಗ ನೋವಾಗುವುದು ಸಹಜ. ಆದರೆ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗುವುದು ಸರಿಯಲ್ಲ. ಪ್ರೀತಿ ದೂರವಾಗಲು ನೀವು ಕಾರಣವಾಗಿರಲಿಕ್ಕಿಲ್ಲ. ಆದರೂ ನೀವು ಸಂಬಂಧವನ್ನು ಉಳಿಸಲು ಪ್ರಯತ್ನಿಸುತ್ತಿದ್ದರೆ ಈ ಲೇಖನವನ್ನು ಓದಲೇಬೇಕು. ಯಾಕೆಂದರೆ ನೀವು ಪ್ರೀತಿಸುವ ಹುಡುಗಿ ದೂರವಾಗಲು ಕಾರಣಗಳೇನು ಎಂದು ತಿಳಿದುಕೊಳ್ಳಬಹುದು. ಇದರಿಂದ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಲು ನಿಮಗೆ ಸಾಧ್ಯವಾಗುತ್ತದೆ.
ಹುಡುಗರಿಗೆ ಹುಡುಗಿಯರು ಯಾಕೆ ಮೋಸ ಮಾಡುತ್ತಾರೆ ಎಂದು ತಿಳಿಯಲು ಮುಂದಕ್ಕೆ ಓದಿ. ಇದರಲ್ಲಿನ ಕೆಲವೊಂದು ಸತ್ಯಗಳನ್ನು ನೀವು ಒಪ್ಪಿಕೊಳ್ಳಬಹುದು. ಆದರೆ ಕೆಲವು ಸಲ ಸಂಬಂಧ ಕೊನೆಗೊಳ್ಳಲು ಯಾವುದೇ ಕಾರಣಗಳು ಇರುವುದಿಲ್ಲ. ಈ ಲೇಖನದಲ್ಲಿ ಯಾರ ಭಾವನೆಗಳಿಗೂ ಧಕ್ಕೆ ಉಂಟುಮಾಡುವ ಉದ್ದೇಶವಿಲ್ಲ ಮತ್ತು ಹುಡುಗಿಯರನ್ನು ಬೆಂಬಲಿಸುವುದಿಲ್ಲ. ಹುಡುಗಿಯರು ಯಾಕೆ ಮೋಸ ಮಾಡುತ್ತಾರೆ ಎನ್ನುವುದನ್ನು ತಿಳಿಯಲಷ್ಟೇ ಈ ಲೇಖನವನ್ನು ನಿಮ್ಮ ಮುಂದಿಡಲಾಗಿದೆ.

ಹುಡುಗಿಯರು ಬೇಗನೆ ಹತ್ತಿರವಾಗುತ್ತಾರೆ
ಹುಡುಗರನ್ನು ಅರ್ಥ ಮಾಡಿಕೊಂಡ ಬಳಿಕ ತಮ್ಮ ಯಾವುದೇ ರಹಸ್ಯವನ್ನು ಹೇಳಿಕೊಳ್ಳಲು ಹುಡುಗಿಯರಿಗೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಹುಡುಗಿಯರ ಈ ಗುಣವೇ ಪುರುಷರನ್ನು ಬೇಗನೆ ಮೋಸ ಮಾಡಲು ಕಾರಣ.

ಭಾವನಾತ್ಮಕ ಬೆಂಬಲ
ಭಾವನಾತ್ಮಕ ವಿಷಯಕ್ಕೆ ಬಂದಾಗ ಹುಡುಗಿಯರು ತುಂಬಾ ಆಸೆಬುರುಕರು ಎನ್ನಬಹುದು. ಸಂಬಂಧದಲ್ಲಿ ತಮ್ಮ ಮೇಲೆ ಹೆಚ್ಚಿನ ಗಮನಹರಿಸಬೇಕೆಂದು ಅವರು ಬಯಸುತ್ತಾರೆ. ಭಾವನಾತ್ಮಕ ಬೆಂಬಲ ಸಿಗದಿದ್ದರೆ ಆಗ ಹುಡುಗಿಯರು ಆ ಸಂಬಂಧದಲ್ಲಿ ಉಳಿದುಕೊಳ್ಳುವುದಿಲ್ಲ.

ಗಮನ ಹರಿಸುವುದರಿಂದ ಸಮಸ್ಯೆ
ಹುಡುಗಿಯರ ಬಗ್ಗೆ ಯಾವಾಗಲೂ ಗಮನಹರಿಸುತ್ತಲೇ ಇದ್ದರೆ ಆಗ ಇದರಿಂದ ಆಕೆಗೆ ತುಂಬಾ ಕಿರಿಕಿರಿಯಾಗಬಹುದು. ಸಂಬಂಧದಲ್ಲಿ ಪುರುಷರು ಹೊಂದಿಕೊಳ್ಳಲು ಆರಂಭಿಸಿದಾಗ ಮಹಿಳೆಯರು ಹೊಂದಾಣಿಕೆಯಲ್ಲಿ ಒದ್ದಾಡುತ್ತಾರೆ.

ಭಾವನೆಗಳ ಬಗ್ಗೆ ಗೊಂದಲ
ಬೇರೆ ವ್ಯಕ್ತಿ ಗಮನಹರಿಸುವುದು ಮತ್ತು ಆರೈಕೆ ಮಾಡಲು ಆರಂಭಿಸಿದಾಗ ಹುಡುಗಿಯರಿಗೆ ತಮ್ಮ ಭಾವನೆಗಳ ಬಗ್ಗೆ ಗೊಂದಲ ಉಂಟಾಗುತ್ತದೆ. ಕೆಲವೊಮ್ಮೆ ಅವರು ತಮ್ಮ ಪುರುಷನ ಬಗ್ಗೆ ಸಂತೋಷದಿಂದ ಇರಬಹುದು. ಆದರೆ ಸಂಶಯ ಪಡುವುದನ್ನು ಮತ್ತು ಮೋಸ ಮಾಡಲು ಹಿಂಜರಿಯುವುದಿಲ್ಲ.

ಪ್ರಶಂಸೆಗೆ ಹಾತೊರೆಯುವುದು
ಹುಡುಗಿಯರು ಹೆಚ್ಚಾಗಿ ಪ್ರಶಂಸೆ ಮತ್ತು ಕದ್ದುಮುಚ್ಚಿ ಮಾಡುವ ಸ್ಪರ್ಶಕ್ಕೆ ಮಾರು ಹೋಗುತ್ತಾರೆ. ಇದು ಅವರಿಗೆ ಇತರ ವ್ಯಕ್ತಿಯಿಂದ ಸಿಗಬಹುದು. ಬೇರೆ ವ್ಯಕ್ತಿಯೊಂದಿಗೆ ಆಕೆ ಗಂಭೀರವಾಗಿಲ್ಲದೆ ಕೇವಲ ಆಟವಾಡುತ್ತಿರಬಹುದು. ಆದರೆ ಇದೇ ಮುಂದೆ ಸಂಬಂಧದಲ್ಲಿರುವ ವ್ಯಕ್ತಿಗೆ ಮೋಸ ಮಾಡುವಂತೆ ಆಗಬಹುದು.

ನಡತೆ ಬಗ್ಗೆ ಸಂಶಯಿಸಿದಾಗ
ತಮ್ಮ ಪುರುಷ ಏನೋ ತಪ್ಪು ಮಾಡುತ್ತಿದ್ದಾನೆಂದು ಆಕೆಗೆ ಅನಿಸಿದಾಗ ಸಂಬಂಧದಿಂದ ದೂರವಾಗುವುದು ಹುಡುಗಿಯರಿಗೆ ಸಿಗುವ ಮೊದಲ ಕಾರಣ. ಆಕೆಗೆ ಮೋಸ ಮಾಡುತ್ತಿದ್ದೀರೆಂದು ಸ್ವಲ್ಪ ಸಂಶಯ ಬಂದರೂ ಆಕೆ ತಪ್ಪು ಹಾದಿಯನ್ನು ತುಳಿಯಬಹುದು.



Click it and Unblock the Notifications











